Dhanu Sankranti 2023: ಆರೋಗ್ಯ ವೃದ್ಥಿಗಾಗಿ ಧನು ಸಂಕ್ರಾಂತಿಯ ದಿನ ಏನು ಮಾಡಬೇಕು?

ಹಿಂದೂ ಧರ್ಮದಲ್ಲಿನ ಎಲ್ಲಾ ಸಂಕ್ರಾಂತಿಗಳಲ್ಲಿ, ಮಕರ ಮತ್ತು ಧನು ರಾಶಿ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ.ಧನು ಸಂಕ್ರಾಂತಿಯ ದಿನದಂದು ಶಾಸ್ತ್ರಗಳು ಸೂಚಿಸಿರುವ ಕೆಲವು ವಿಶೇಷ ಕ್ರಮಗಳನ್ನು ಮಾಡುವುದರಿಂದ ಆರೋಗ್ಯ ವೃದ್ಥಿ ಮತ್ತು ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.

Dhanu Sankranti 2023: ಆರೋಗ್ಯ ವೃದ್ಥಿಗಾಗಿ ಧನು ಸಂಕ್ರಾಂತಿಯ ದಿನ ಏನು ಮಾಡಬೇಕು?
Dhanu Sankranti
Follow us
ಅಕ್ಷತಾ ವರ್ಕಾಡಿ
|

Updated on: Dec 09, 2023 | 4:39 PM

ಹಿಂದೂ ಧರ್ಮದಲ್ಲಿ, ವರ್ಷದ ಕೊನೆಯ ಸಂಕ್ರಾಂತಿಯಂದು, ಸೂರ್ಯ ದೇವರು ವೃಶ್ಚಿಕ ರಾಶಿಯಿಂದ ಹೊರಬಂದು ತನ್ನ ಗುರು ಗ್ರಹವಾದ ಧನು ರಾಶಿಯನ್ನು ತಲುಪುತ್ತಾರೆ. ಈ ದಿನವನ್ನು ಧನು ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಇದು ಸಂಭವಿಸುವ ಮಾಸವನ್ನು ಧನುರ್ಮಾಸ ಎಂದು ಕರೆಯಲಾಗುತ್ತದೆ. ಧನು ಸಂಕ್ರಾಂತಿಯ ದಿನದಂದು ಸೂರ್ಯ ದೇವರನ್ನು ಪೂಜಿಸಲಾಗುತ್ತದೆ ಮತ್ತು ಪೂರ್ವಜರಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಹೀಗೆ ಮಾಡುವುದರಿಂದ ಪಿತೃ ದೋಷ ಕಡಿಮೆಯಾಗಿ, ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ . ಈ ವರ್ಷ ಧನು ಸಂಕ್ರಾಂತಿ ಡಿಸೆಂಬರ್ 16 ರಂದು ಆಚರಿಸಲಾಗುತ್ತಿದೆ.

ಧನು ಸಂಕ್ರಾಂತಿಯ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳಿಂದ ಮುಕ್ತಿ ಸಿಗುತ್ತದೆ. ಈ ದಿನ, ಬೆಳಿಗ್ಗೆ ಬೇಗ ಎದ್ದು ಸೂರ್ಯ ದೇವನಿಗೆ ನೀರು, ಹೂವು ಮತ್ತು ಧೂಪದಿಂದ ಪೂಜಿಸಬೇಕು. ಈ ದಿನದಂದು ಜಗನ್ನಾಥನಿಗೆ ಅಕ್ಕಿ ಪಾಯಸ ಅರ್ಪಿಸಲಾಗುತ್ತದೆ ಮತ್ತು ಅದನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ.

ಇದನ್ನೂ ಓದಿ: ವಾಸ್ತು ಪ್ರಕಾರ ಕಾರಿನಲ್ಲಿ ಯಾವ ವಸ್ತು ಇಡುವುದು ಶುಭ? ಯಾವುದು ಅಶುಭ?

ಧನು ಸಂಕ್ರಾಂತಿಯ ವಿಶೇಷ ಪರಿಹಾರಗಳು:

  • ಜೀವನದ ಎಲ್ಲಾ ತೊಂದರೆಗಳನ್ನು ನಿವಾರಿಸಲು, ಈ ದಿನ ಶಿವನನ್ನು ಆರಾಧಿಸಿ ಮತ್ತು ಗಂಗಾಜಲವನ್ನು ಅರ್ಪಿಸಿ.
  • ಧನು ಸಂಕ್ರಾಂತಿಯ ದಿನದಂದು ಪೂರ್ವಜರ ಆತ್ಮ ಶಾಂತಿಗಾಗಿ ಗಾಯತ್ರಿ ಮಂತ್ರವನ್ನು ಪಠಿಸಬೇಕು.ಇದನ್ನು ಮಾಡುವುದರಿಂದ ಸೂರ್ಯದೇವನು ಪ್ರಸನ್ನನಾಗುತ್ತಾನೆ ಮತ್ತು ನಿಮ್ಮ ಎಲ್ಲಾ ತೊಂದರೆಗಳನ್ನು ನಿವಾರಣೆಯಾಗುತ್ತದೆ.
  • ಈ ದಿನ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಬೆಳಗ್ಗಿನ ಜಾವ ಬೇಗ ಎಂದು ನಿಮ್ಮ ನಿತ್ಯಕರ್ಮವನ್ನು ಮುಗಿಸಿ ಲಕ್ಷ್ಮಿ ದೇವಿಯನ್ನು ಪೂಜಿಸಿ.
  • ಈ ದಿನ ಬಡವರಿಗೆ ಆಹಾರವನ್ನು ನೀಡಿ. ಹಾಗೆಯೇ ಬೆಚ್ಚನೆಯ ಬಟ್ಟೆ, ಗೋಧಿ, ಧಾನ್ಯ ಇತ್ಯಾದಿಗಳನ್ನು ದಾನ ಮಾಡಬೇಕು.
  • ಧನು ಸಂಕ್ರಾಂತಿಯ ದಿನದಂದು ಉಪ್ಪಿಲ್ಲದ ಆಹಾರವನ್ನು ಸೇವಿಸುವುದರಿಂದ ಪೂರ್ವಜರ ಆಶೀರ್ವಾದ ದೊರೆಯುತ್ತದೆ. ನಿಮ್ಮ ಪೂರ್ವಜರ ಶಾಂತಿಗಾಗಿ ಈ ದಿನ ಗಾಯತ್ರಿ ಮಂತ್ರ ಪಠಿಸಿ ಮತ್ತು ತರ್ಪಣವನ್ನು ಅರ್ಪಿಸಿ.
  • ಈ ದಿನ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಸೂರ್ಯದೇವನು ಪ್ರಸನ್ನನಾಗುತ್ತಾನೆ. ಇದಲ್ಲದೇ ಗಾಯತ್ರಿ ಮಂತ್ರದ ಪಠಣೆ 24 ಸಾವಿರ ಮಂತ್ರಗಳ ಪಠಣೆಗೆ ಸಮವಾದುದು ಎಂಬ ನಂಬಿಕೆ ಇದೆ.

ಮತ್ತಷ್ಟು ಆಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ