Deepawali 2021: ಮನೆ ಮುಖ್ಯದ್ವಾರದಲ್ಲಿ ಈ 3 ವಸ್ತು ತೂಗುಹಾಕಿ, ಲಕ್ಷ್ಮಿ ದೇವಿ ಸೀದಾ ಮನೆಯೊಳಕ್ಕೆ ಪ್ರವೇಶಿಸುವುದು ಖಚಿತ
ದೀಪಾವಳಿಯ ಸಂದರ್ಭದಲ್ಲಿ ಮಾತೆ ಲಕ್ಷ್ಮಿ ಭೂಮಿಯನ್ನು ಪ್ರದಕ್ಷಿಣೆ ಹಾಕುತ್ತಾಳೆ ಎಂಬ ಪ್ರತೀತಿಯಿದೆ. ಆ ಸಂದರ್ಭದಲ್ಲಿ ತನ್ನ ಭಕ್ತರ ನಿವಾಸದಲ್ಲಿ ತಂಗುತ್ತಾಳೆ ಎಂಬ ನಂಬಿಕೆಯಿದೆ. ಹಾಗಾಗಿ ಲಕ್ಷ್ಮಿಯನ್ನು ಸ್ವಾಗತಿಸಲು ಮುಖ್ಯ ದ್ವಾರಕ್ಕೆ ತಳಿರುತೋರಣ ಕಟ್ಟಿ. ದ್ವಾರದಲ್ಲಿ ಮಾವಿನ ಎಲೆಗಳ ಗೊಂಚಲು, ಬಾಳೆ ದಿಂಡು ಕಟ್ಟುವುದು ಮತ್ತು ಅದನ್ನು ಹೂವಿನ ಹಾರದಿಂದ ಅಲಂಕಾರ ಮಾಡಿದರೆ ತಾಯಿ ಲಕ್ಷ್ಮಿ ಹಚ್ಚು ಪ್ರಸನ್ನಗೊಂಡು ನಿಮ್ಮ ಮನೆಗೆ ಖಂಡಿತಾ ಬರುತ್ತಾಳೆ.

ಕಾರ್ತಿಕ ಮಾಸ ಎಂಬುದು ಅತ್ಯಂತ ಮಹತ್ವದ ತಿಂಗಳು. ಪೂಜೆ ಪುನಸ್ಕಾರಗಳಿಗೆ ಈ ತಿಂಗಳಲ್ಲಿ ಜಾಸ್ತಿಯಾಗಿರುತ್ತದೆ. ಹಾಗಾಗಿ ತಿಂಗಳ ಪೂರ್ತಿ ದಾನ ಧರ್ಮ ಮಾಡಿ. ಹಿಂದೂ ಪಂಚಾಂಗದಲ್ಲಿ 8ನೆಯ ತಿಂಗಳು ಕಾರ್ತಿಕ ಮಾಸವಾಗಿದೆ. ಈ ಮಾಸದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಹೆಚ್ಚಿನ ಮಹತ್ವವಿದೆ. ಕಾರ್ತಿಕ ಮಾಸದಲ್ಲಿ ವಿಷ್ಣು ಭಗವಾನ್ ತನ್ನ ನಾಲ್ಕು ತಿಂಗಳ ನಿದ್ರಾವಸ್ಥೆಯನ್ನು ಪೂರೈಸಿ, ಭೂಮಂಡಲದಲ್ಲಿ ಸಂಚಾರಕ್ಕೆ ಬರುತ್ತಾರೆ ಎಂಬ ಪ್ರತೀತಿ ಇದೆ. ಜೊತೆಗೆ ಲಕ್ಷ್ಮಿ ದೇವಿ ಸಹ ಶ್ರೀಮನ್ನಾರಾಯಣನ ಜೊತೆ ಭೂಲೋಕ ಸಂಚಾರವಾಸಿಗಳಾಗುತ್ತಾರೆ. ಹಾಗಾಗಿ ಈ ತಿಂಗಳಲ್ಲಿ ಧಾರ್ಮಿಕವಾಗಿ ನಡೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಧಾರ್ಮಿಕವಾಗಿ ಉತ್ತಮ ನಡತೆ ತೋರಬೇಕು.
ಈ ಬಾರಿ ದೀಪಾವಳಿ ಶುಭ ಸಂದರ್ಭದಲ್ಲಿ ಮನೆಯ ಮುಖ್ಯದ್ವಾರದಲ್ಲಿ ಈ ಮೂರು ವಸ್ತುಗಳನ್ನು ನೇತಾಡುವಂತೆ ಹಾಕಿ. ಇದರಿಂದ ಲಕ್ಷ್ಮಿ ದೇವಿ ಪ್ರಸನ್ನಗೊಂಡು ಮನೆಯಲ್ಲಿರು ಸುಖ ಸಮೃದ್ಧಿ ಶಾಂತಿ ನೆಲೆಸುತ್ತದೆ.
1. ಲಕ್ಷ್ಮಿ ದೇವಿಯ ಪಾದ:

ಲಕ್ಷ್ಮಿ ದೇವಿಯ ಪಾದ ಮತ್ತು ಸ್ವಸ್ತಿಕ್
ಲಕ್ಷ್ಮಿ ದೇವಿಯ ಪಾದದ ಚಿತ್ರ ಬಿಡಿಸಿರುವ ತಾಮ್ರದ ಪಾದ. ಮನೆಯ ಹೊರಗೆ ತಾಯಿ ಲಕ್ಷ್ಮಿಯ ಪಾದದ ಚಿತ್ರವಿರುವ ಪಾದವನ್ನು ತೂಗು ಹಾಕಬೇಕು. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ ಪಾದವು ಮನೆಯೊಳಗೆ ಬರುವ ಮನೆಗೆ ಅಭಿಮುಖವಾಗಿ ದ್ವಾರದ ಬಳಿ ನೇತುಹಾಕಿ. ಅಂದರೆ ಲಕ್ಷ್ಮಿ ದೇವಿ ಮನೆಯೊಳಗೆ ಬರುವಂತೆ ಮಾಡಿ. ಪೇಟೆಯಲ್ಲಿ ಲಕ್ಷ್ಮಿ ದೇವಿಯ ಪಾದದ ಚಿತ್ರ ಬಿಡಿಸಿರುವ ತಾಮ್ರದ ಹಾಳೆಗಳು ಖರೀದಿಗೆ ಹೆಚ್ಚಾಗಿ ಸಿಗುತ್ತದೆ. ಅದನ್ನು ಖರೀದಿಸಿ ತನ್ನಿ.
2. ಸ್ವಸ್ತಿಕ್: ಮನೆಯ ಮುಖ್ಯ ದ್ವಾರದಲ್ಲಿ ಬೆಳ್ಳಿಯ ಸ್ವಸ್ತಿಕ್ ಚಿತ್ರ ಬಿಡಿಸಿರುವ ಹಾಳೆಯನ್ನು ಈಗು ಹಾಕುವುದು ಶುಭದ ಸಂಕೇತ. ಮತ್ತು ಇದರಿಂದ ಅಭಿವೃದ್ಧಿಯನ್ನೂ ಕಾಣಬಹುದು. ಬೆಳ್ಳಿಯದು ದುಬಾರಿ ಎನಿಸಿದರೆ ಕೆಂಪು ರಗೋಲಿಯಿಂದ ನೆಲದ ಮೇಲೆ ಅಥವಾ ಗೋಡೆಯ ಮೇಲೆ ಚಿತ್ರ ಬಿಡಿಸಿ. ಇದರಿಂದ ಲಕ್ಷ್ಮಿ ದೇವಿ ಪ್ರಸನ್ನವದಳಾಗಿ ನಿಮ್ಮ ಮನೆಯೊಳಗೆ ಹೆಜ್ಜೆ ಹಾಕಬಹುದು.
3. ತೋರಣ: ದೀಪಾವಳಿಯ ಸಂದರ್ಭದಲ್ಲಿ ಮಾತೆ ಲಕ್ಷ್ಮಿ ಭೂಮಿಯನ್ನು ಪ್ರದಕ್ಷಿಣೆ ಹಾಕುತ್ತಾಳೆ ಎಂಬ ಪ್ರತೀತಿಯಿದೆ. ಆ ಸಂದರ್ಭದಲ್ಲಿ ತನ್ನ ಭಕ್ತರ ನಿವಾಸದಲ್ಲಿ ತಂಗುತ್ತಾಳೆ ಎಂಬ ನಂಬಿಕೆಯಿದೆ. ಹಾಗಾಗಿ ಲಕ್ಷ್ಮಿಯನ್ನು ಸ್ವಾಗತಿಸಲು ಮುಖ್ಯ ದ್ವಾರಕ್ಕೆ ತಳಿರು ತೋರಣ ಕಟ್ಟಿ. ದ್ವಾರದಲ್ಲಿ ಮಾವಿನ ಎಲೆಗಳ ಗೊಂಚಲು, ಬಾಳೆ ದಿಂಡು ಕಟ್ಟುವುದು ಮತ್ತು ಅದನ್ನು ಹೂವಿನ ಹಾರದಿಂದ ಅಲಂಕಾರ ಮಾಡಿದರೆ ತಾಯಿ ಲಕ್ಷ್ಮಿ ಹಚ್ಚು ಪ್ರಸನ್ನಗೊಂಡು ನಿಮ್ಮ ಮನೆಗೆ ಖಂಡಿತಾ ಬರುತ್ತಾಳೆ.
(diwali 2021 to gain prosperity and money hang these 3 things on main door of house)