AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eat breakfast like a king: ಬೆಳಗ್ಗೆ ಉಪಹಾರ ವಿಳಂಬ ಮಾಡಿದಷ್ಟೂ ಮಧುಮೇಹ ಬೇಗ ಬೇಗ ಬರುವ ಸಾಧ್ಯತೆ ಹೆಚ್ಚು!

ವಿಜ್ಞಾನಿಗಳಿಗೆ ಉಪವಾಸ ಆಚರಿಸುತ್ತಿದ್ದರೂ ಇಲ್ಲದಿದ್ದರೂ ಸರಿ, ಬೆಳಗ್ಗಿನ ಉಪಾಹಾರ ಆದಷ್ಟೂ ಬೇಗನೇ ಸೇವಿಸುವುದರಿಂದ ಬೇರೆಯೇ ಪ್ರಯೋಜನಗಳು ಲಭಿಸುತ್ತವೆ ಎಂದು ತಿಳಿದುಬಂದಿದೆ. ಯಾರು ಬೆಳಗಿನ ಉಪಾಹಾರವನ್ನು ಎಂಟೂವರೆಗೂ ಮುನ್ನ ಸೇವಿಸುತ್ತಾರೋ ಅಂತಹವರಲ್ಲಿ ಇನ್ಸುಲಿನ್ ಸಹಿಷ್ಣುತೆ ಅತಿ ಕಡಿಮೆಯಾಗುತ್ತಾ ಸಾಗುವುದನ್ನು ಗಮನಿಸಲಾಗಿದೆ. ಇನ್ಸುಲಿನ್ ಸಹಿಷ್ಣುತೆ ಹೆಚ್ಚಾದಷ್ಟೂ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ.

Eat breakfast like a king: ಬೆಳಗ್ಗೆ ಉಪಹಾರ ವಿಳಂಬ ಮಾಡಿದಷ್ಟೂ ಮಧುಮೇಹ ಬೇಗ ಬೇಗ ಬರುವ ಸಾಧ್ಯತೆ ಹೆಚ್ಚು!
ಬೆಳಗ್ಗೆ ಉಪಹಾರ ವಿಳಂಬ ಮಾಡಿದಷ್ಟೂ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚು, ಎಚ್ಚರಾ!
TV9 Web
| Updated By: ಸಾಧು ಶ್ರೀನಾಥ್​|

Updated on: Jan 11, 2022 | 6:06 AM

Share

ರಾಜನಂತೆ ಬೆಳಗ್ಗೆ ತಿಂಡಿ ತಿನ್ನಿ – ರಾಜಕುಮಾರನಂತೆ ಮಧ್ಯಾಹ್ನದ ಊಟ ಮಾಡಿ. ಬಡವನಂತೆ ರಾತ್ರಿ ಊಟ ಮಾಡಿ. ಇದನ್ನು ಆಂಗ್ಲ ಭಾಷೆಯಲ್ಲಿ ಹೀಗೆ ಹೇಳಲಾಗಿದೆ – Eat breakfast like a king, lunch like a prince, and dinner like a pauper. Another version of the titular proverb goes: Eat your breakfast, share your lunch with a friend, and give your dinner to your enemy. Whichever you prefer, the conclusion to be drawn is the same – breakfast is the most important meal of the day. ನಮ್ಮ ದಿನದ ಎಲ್ಲಾ ಆಹಾರಗಳ ಪೈಕಿ ಬೆಳಗ್ಗಿನ ಉಪಾಹಾರಕ್ಕೆ ಹೆಚ್ಚಿನ ಮಹತ್ವವಿದೆ. ಇದನ್ನು ಬಿಡಲೂಬಾರದು ಮತ್ತು ವಿಳಂಬವಾಗಿಯೂ ತಿನ್ನಬಾರದು. ಆಯುರ್ವೇದ ಹೇಳಿದ ಈ ಮಾತನ್ನು ಈಗ ಅಧ್ಯಯನವೊಂದು ಬೆಳಗ್ಗೆ ಎಂಟೂವರೆಯ ಬಳಿಕ ಮಾಡುವ ಉಪಾಹಾರದಿಂದ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚು ಎಂದು ಅನುಮೋದಿಸುತ್ತಿದೆ. ಬೆಳಿಗ್ಗೆ 8.30ಕ್ಕಿಂತಲೂ ಮೊದಲು ಟಿಫಿನ್ (Tiffin) ತಿನ್ನಬೇಕು. ಬೇಗನೆ ಉಪಹಾರ ಸೇವಿಸಿದರೆ ಇನ್ಸುಲಿನ್ ಸಹಿಷ್ಣುತೆ ಕಡಿಮೆಗೊಳ್ಳುತ್ತದೆ. ಉಪಹಾರ ಆರೋಗ್ಯಕರವಾಗಿದ್ದರೆ ಆರೋಗ್ಯವೂ ಉತ್ತಮವಾಗಿಯೇ ಇರುತ್ತದೆ.

ದಿನದ ಕೆಲಸಗಳನ್ನು ಆದಷ್ಟೂ ಬೇಗನೇ ಪ್ರಾರಂಭಗೊಳಿಸಿದರೆ ಎಲ್ಲವೂ ಸುಸೂತ್ರವಾಗಿ ಸಾಗುವುದು, ಪ್ರಧಾನವಾಗಿ ಸಮಯದ ಅಭಾವ/ ಧಾವಂತಕ್ಕೆ ಒಳಗಾಗದೇ ಸು‘ಸೂತ್ರ’ವಾಗಿ ನೆರವೇರುತ್ತದೆ. ಜೊತೆಗೆ, ಬೆಳಗಿನ ಉಪಾಹಾರ ಬೇಗನೇ ಸೇವಿಸಿದರೆ ರಕ್ತದಲ್ಲಿ ಸಕ್ಕರೆಯ ಮಟ್ಟಗಳೂ ಉತ್ತಮ ಮಟ್ಟದಲ್ಲಿಯೇ ಇರುತ್ತದೆ ಎಂದೂ ಅಧ್ಯಯನ ವರದಿ ಮಾಡಿದೆ.

ಎಂಡೋಕ್ರೈನ್ ಸೊಸೈಟಿ ಎಂಬ ಸಂಸ್ಥೆ ಪ್ರಕಟಿಸಿರುವ ವರದಿಯಲ್ಲಿ (ENDO 2021) ಬೆಳಗ್ಗಿನ ಉಪಾಹಾರವನ್ನು ಆದಷ್ಟೂ ಬೇಗನೇ ಸೇವಿಸಿದರೆ ದೇಹದ ಇನ್ಸುಲಿನ್ ಸಹಿಷ್ಣುತೆ ಕಡಿಮೆಗೊಳ್ಳುವ ಮೂಲಕ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚುತ್ತದೆ ಎಂದು ತಿಳಿಸಲಾಗಿದೆ.

ಈ ವರದಿಗಳು ವಾಸ್ತವದಲ್ಲಿ, ಉಪವಾಸದ ಮೂಲಕ (autophagy) ದೇಹ ಪಡೆಯುವ ಪ್ರಯೋಜನಗಳ ಕುರಿತಾದ ವರದಿಯ ಒಂದು ಭಾಗವಾಗಿದೆ. ಆದರೆ ವಿಜ್ಞಾನಿಗಳಿಗೆ ಉಪವಾಸ ಆಚರಿಸುತ್ತಿದ್ದರೂ, ಇಲ್ಲದಿದ್ದರೂ… ಬೆಳಗಿನ ಉಪಾಹಾರವನ್ನು ಆದಷ್ಟೂ ಬೇಗ ಸೇವಿಸುವುದರಿಂದ ಬೇರೆಯೇ ಪ್ರಯೋಜನಗಳು ಲಭಿಸುತ್ತವೆ ಎಂದು ತಿಳಿದುಬಂದಿದೆ. ಇನ್ನು, ಆಹಾರವನ್ನು ಸುಮಾರು 10 ಗಂಟೆಗಳಿಗೂ ಹಿಂದೆ ಸೇವಿಸಿದ್ದರೂ (ದೀರ್ಘ ಹಂತಗಳಲ್ಲಿ ಆಹಾರ ಸೇವಿಸುವ ಮೂಲಕ ಉಪವಾಸ ಆಚರಿಸುವ ಕ್ರಮ) ಸೇವಿಸಿರದೇ ಇದ್ದರೂ, ಈ ವ್ಯಕ್ತಿಗಳ ರಕ್ತದಲ್ಲಿ ಸಕ್ಕರೆಯ ಮಟ್ಟಗಳು ತಗ್ಗಿರುವುದು ಹಾಗೂ ಇನ್ಸುಲಿನ್ ಸಹಿಷ್ಣುತೆ ಕಡಿಮೆಯಾಗುವುದು ಕಂಡುಬಂದಿದೆ.

ಅಮೆರಿಕಾದ ಒಂದು ನಗರದ 10,575 ವ್ಯಕ್ತಿಗಳ ಆರೋಗ್ಯ ಮತ್ತು ಪೋಷಕಾಂಶಗಳ ಮಾಹಿತಿಯನ್ನು ಸಂಗ್ರಹಿಸಿ ನಡೆಸಲಾದ ವಿಶ್ಲೇಷಣೆಯಲ್ಲಿ ಊಟದ ಸಮಯಕ್ಕೂ ರಕ್ತದಲ್ಲಿ ಸಕ್ಕರೆಯ ಮಟ್ಟ ಮತ್ತು ಇನ್ಸುಲಿನ್ ಪ್ರಮಾಣಕ್ಕೂ ನೇರವಾದ ಸಂಬಂಧ ಇರುವುದು ತಿಳಿದುಬಂದಿದೆ.

ತಡೆದಿಡುವ ಉಪವಾಸ (Intermittent fasting) ಅಥವಾ ಎರಡು ಊಟಗಳ ನಡುವಣ ಸಮಯವನ್ನು ಹೆಚ್ಚಿಸುವ ಕ್ರಮದ (ಅಂದರೆ ಎರಡು ಊಟಗಳ ನಡುವೆ ಹತ್ತು ಗಂಟೆಗಳ ಅಂತರ ಪಾಲಿಸುವುದು) ಅನುಸರಿಸುವ ವ್ಯಕ್ತಿಗಳು ಹಾಗೂ ಹತ್ತು ಗಂಟೆಗಳ ಅಂತರಕ್ಕೂ ಮೊದಲೇ ಊಟ ಮಾಡುವವರ ಆರೋಗ್ಯ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಅಂದರೆ, ಉಪವಾಸ ಆಚರಿಸಿದ ವ್ಯಕ್ತಿಗಳಲ್ಲಿ ಇನ್ಸುಲಿನ್ ಗೆ ಪ್ರತಿಕ್ರಿಯೆ ನೀಡುವ ಪ್ರಕ್ರಿಯೆ ಕಡಿಮೆ ಇದ್ದುದು ಕಂಡುಬಂದಿದೆ.

ಇನ್ಸುಲಿನ್ ರಕ್ತದ ಸಕ್ಕರೆಯ ಮಟ್ಟಗಳನ್ನು ನಿಯಂತ್ರಿಸುವ ಗುಣ ಹೊಂದಿದೆ. ಇನ್ಸುಲಿನ್ ಸಹಿಷ್ಣುತೆ ಹೆಚ್ಚಾದಷ್ಟೂ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಆದರೂ, ಈ ವ್ಯಕ್ತಿಗಳಲ್ಲಿ ಉಪವಾಸ ಆಚರಿಸುತ್ತಿದ್ದರೂ ಇಲ್ಲದಿದ್ದರೂ, ಯಾವ ವ್ಯಕ್ತಿಗಳು ಬೆಳಗಿನ ಉಪಾಹಾರವನ್ನು ಎಂಟೂವರೆಗೂ ಮುನ್ನ ಸೇವಿಸಿದ್ದರೋ ಆ ವ್ಯಕ್ತಿಗಳಲ್ಲಿ ಅತಿ ಕಡಿಮೆ ಇನ್ಸುಲಿನ್ ಸಹಿಷ್ಣುತೆಯನ್ನು ಗಮನಿಸಲಾಗಿದೆ.

ಉಪವಾಸ ಆಚರಿಸಿದಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ಗಮನಾರ್ಹವಾಗಿ ಬದಲಾಗಿತೋ ಇಲ್ಲವೋ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಾಗದೇ ಇದ್ದರೂ, ಬೆಳಗಿನ ಉಪಾಹಾರವನ್ನು ಆದಷ್ಟೂ ಬೇಗನೇ ಸೇವಿಸಿದರವಲ್ಲಿ ಮಾತ್ರ ಖಚಿತವಾದ ಪರಿಣಾಮ ಬೀರಿದ್ದುದನ್ನು ಗಮನಿಸಲಾಯಿತು. ಅಂದರೆ, ಒಟ್ಟಾರೆಯಾಗಿ ದೇಹದ ಜೀವ ರಾಸಾಯನಿಕ ಕ್ರಿಯೆಗಳು ಉತ್ತಮಗೊಳ್ಳಬೇಕಾದರೆ ಬೆಳಗಿನ ಉಪಾಹಾರವನ್ನು ಆದಷ್ಟೂ ಬೇಗನೇ ಸೇವಿಸಬೇಕು ಹಾಗೂ ಗರಿಷ್ಟ ಎಂಟೂವರೆಯ ಒಳಗೇ ಸೇವಿಸಬೇಕು ಎಂಬುದನ್ನು ಕಂಡುಕೊಳ್ಳಲಾಗಿದೆ.

ಉಪಾಹಾರ ಆರೋಗ್ಯಕರವಾಗಿದ್ದರೆ ಆರೋಗ್ಯವೂ ಉತ್ತಮವಾಗಿಯೇ ಇರುತ್ತದೆ ಹಾಗೂ ತೂಕವನ್ನು ನಿರ್ವಹಿಸಲು ಹಾಗೂ ದಿನವಿಡೀ ಚೈತನ್ಯದಿಂದ ತುಂಬಿರಲು ಸಾಧ್ಯವಾಗುತ್ತದೆ. ತೂಕದ ಪ್ರಮಾಣದಲ್ಲಿ ಬೆಳಗಿನ ಉಪಾಹಾರ ಉಳಿದ ಎರಡು ಹೊತ್ತಿನ ಊಟಗಳಿಗೆ ಸಮಾನವಲ್ಲದೇ ಇರಬಹುದು, ಆದರೆ ದಿನವಿಡೀ ಚೈತನ್ಯದಿಂದಿರಲು ಉಪಾಹಾರ ಅಗತ್ಯವಾಗಿದೆ.

ಆದರೆ, ಸಿಕ್ಕಿದ ಏನನ್ನೂ ಉಪಾಹಾರದ ರೂಪದಲ್ಲಿ ಸೇವಿಸಬಾರದು, ನಮ್ಮ ಆಹಾರದಲ್ಲಿ ಸಾಕಷ್ಟು ಪ್ರೊಟೀನುಗಳು, ಆರೋಗ್ಯಕರ ಕೊಬ್ಬು, ನಾರಿನಾಂಶ, ಇಡಿ ಧಾನ್ಯಗಳು ಒಳಗೊಂಡಿರಬೇಕು. ಮೊಸರು, ಒಣ ಫಲಗಳು, ಹಸಿ ತರಕಾರಿಗಳು, ಇಡಿ ಗೋಧಿಯ ಹಿಟ್ಟಿನಿಂದ ತಯಾರಿಸಿದ ಟೋಸ್ಟ್ ಮೊದಲಾದವು ಉತ್ತಮ ಆಯ್ಕೆಗಳಾಗಿವೆ. ಮತ್ತೊಮ್ಮೆ ಹೇಳುವುದಾದರೆ Eat breakfast like a king…

ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಹುಲಿವೇಷದ ಕುರಿತ ‘ಮಾರ್ನಮಿ’ ಸಿನಿಮಾ ಬಗ್ಗೆ ಮನಸಾರೆ ಮಾತಾಡಿದ ಕಿಚ್ಚ ಸುದೀಪ್
ಹುಲಿವೇಷದ ಕುರಿತ ‘ಮಾರ್ನಮಿ’ ಸಿನಿಮಾ ಬಗ್ಗೆ ಮನಸಾರೆ ಮಾತಾಡಿದ ಕಿಚ್ಚ ಸುದೀಪ್
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಬೊಮ್ಮಾಯಿ ಹೇಳಿದ್ದಿಷ್ಟು
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಬೊಮ್ಮಾಯಿ ಹೇಳಿದ್ದಿಷ್ಟು