ಆಂಜನೇಯ ಸ್ವಾಮಿಗೆ ಅಷ್ಟ ಸಿದ್ದಿಗಳನ್ನು ಉಡುಗೊರೆಯಾಗಿ ನೀಡಿದವರು ಯಾರು? ಅಷ್ಟ ಸಿದ್ದಿ ಅಂದರೆ ಏನು?

|

Updated on: Jul 11, 2024 | 6:06 AM

God Hanuman and Ashta Siddhi: ಹನುಮಾನ್ ಚಾಲೀಸವನ್ನು ನಿತ್ಯ ಪಠಿಸುವವರಿಗೆ ಜೀವನದಲ್ಲಿ ಭಯವಿಲ್ಲ.. ಸಂಕಟ/ ಸಂಕಷ್ಟ ದೂರವಾಗುತ್ತದೆ ಎಂಬ ನಂಬಿಕೆ ಇದೆ. ಇದನ್ನು ಗೋಸ್ವಾಮಿ ತುಳಸಿದಾಸರು ಹನುಮಾನ್ ಚಾಲೀಸಾದಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟಸಿದ್ಧಿ ನವ ನಿಧಿಯ ದಾತಾ । ಅಸ ವರ ದೀನ್ಹ ಜಾನಕಿ ಮಾತಾ । ಎಂಬ ದ್ವಿಪದಿಯಲ್ಲಿ ಉಲ್ಲೇಖಿಸಲಾದ ಎಂಟು ಸಿದ್ಧಿಗಳನ್ನು ಆಂಜನೇಯ ಸ್ವಾಮಿಗೆ ವರವಾಗಿ ನೀಡಲಾಗಿದೆ.

ಆಂಜನೇಯ ಸ್ವಾಮಿಗೆ ಅಷ್ಟ ಸಿದ್ದಿಗಳನ್ನು ಉಡುಗೊರೆಯಾಗಿ ನೀಡಿದವರು ಯಾರು? ಅಷ್ಟ ಸಿದ್ದಿ ಅಂದರೆ ಏನು?
ಆಂಜನೇಯ ಸ್ವಾಮಿಗೆ ಅಷ್ಟ ಸಿದ್ಧಗಳನ್ನು ಉಡುಗೊರೆಯಾಗಿ ನೀಡಿದವರು ಯಾರು?
Follow us on

ಹಿಂದೂಗಳು ಪೂಜಿಸುವ ದೇವರುಗಳಲ್ಲಿ ಹನುಮಂತನಿಗೆ ಮಾತ್ರ ಅಷ್ಟ ಸಿದ್ಧಿ ಯೋಗಗಳಿವೆ. ಸ್ವಾಮಿಯನ್ನು ನವ ನಿಧಿ ದಾತ ಎಂದು ಕರೆಯಲಾಗುತ್ತದೆ. ಅಂದರೆ ಹನುಮಂತನಿಗೆ ಅಷ್ಟ ಸಿದ್ಧಿ ಮತ್ತು ನವ ನಿಧಿ ಪ್ರಾಪ್ತಿಯಾಗಿತ್ತು. ಪ್ರಾಚೀನ ಕಾಲದಿಂದಲೂ ಹಿಂದೂ ಧರ್ಮದಲ್ಲಿ ಸಿದ್ಧಿಗಳು ಮತ್ತು ದೈವಿಕ ಜ್ಞಾನಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಸಿದ್ಧಿ ಎಂಬ ಪದದ ಅರ್ಥ ಪರಿಪೂರ್ಣತೆಯನ್ನು ಸಾಧಿಸುವುದು. ಆದರೆ ಹನುಮಂತನಿಗೆ ಈ ಅಷ್ಟ ಸಿದ್ಧಿಗಳನ್ನು ವರವಾಗಿ ಯಾರಿಂದ ಬಂತು ಗೊತ್ತಾ?

ಇದರ ವಿವರಣೆ ಹನುಮಾನ್ ಚಾಲೀಸಾದಲ್ಲಿದೆ
ಹನುಮಾನ್ ಚಾಲೀಸವನ್ನು ನಿತ್ಯ ಪಠಿಸುವವರಿಗೆ ಜೀವನದಲ್ಲಿ ಭಯವಿಲ್ಲ.. ಸಂಕಟ/ ಸಂಕಷ್ಟ ದೂರವಾಗುತ್ತದೆ ಎಂಬ ನಂಬಿಕೆ ಇದೆ. ಇದನ್ನು ಗೋಸ್ವಾಮಿ ತುಳಸಿದಾಸರು ಹನುಮಾನ್ ಚಾಲೀಸಾದಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟಸಿದ್ಧಿ ನವ ನಿಧಿಯ ದಾತಾ । ಅಸ ವರ ದೀನ್ಹ ಜಾನಕಿ ಮಾತಾ । ಎಂಬ ದ್ವಿಪದಿಯಲ್ಲಿ ಉಲ್ಲೇಖಿಸಲಾದ ಸಿದ್ಧಿಗಳು. ಈ ಎಂಟು ಸಿದ್ಧಿಗಳನ್ನು ಆಂಜನೇಯ ಸ್ವಾಮಿಗೆ ವರವಾಗಿ ನೀಡಲಾಗಿದೆ.

ಯಾರಿಂದ ಆಂಜನೇಯ ಸ್ವಾಮಿ ಈ ಸಿದ್ಧಿಗಳನ್ನು ವರವಾಗಿ ಪಡೆದನು
ಶ್ರೀರಾಮನ ಭಕ್ತನಾದ ಹನುಮಂತನಿಗೆ ಜಾನಕಿ ದೇವಿಯು ಅಷ್ಟಸಿದ್ಧಿ ನವ ನಿಧಿಗಳನ್ನು ಉಡುಗೊರೆಯಾಗಿ ನೀಡಿದರು. ಹನುಮಂತನಿಗೆ ಮಾತ್ರ ಈ ಸಿದ್ಧಿಗಳನ್ನು ಮಾಡುವ ಶಕ್ತಿಯಿದೆ ಎಂದು ಹೇಳಲಾಗುತ್ತದೆ. ಅದು ವಿಶ್ವದ ಅತ್ಯಮೂಲ್ಯ ವಸ್ತುಗಳು… ಆ ಒಂಬತ್ತು ಸಂಪತ್ತುಗಳನ್ನು ಪಡೆದ ನಂತರ ಬೇರೆ ಯಾವುದೇ ಹಣ ಅಥವಾ ಆಸ್ತಿ ಅಗತ್ಯವಿಲ್ಲ ಎಂಬುದು ನಂಬಿಕೆ.

Also Read: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮಹಿಳೆಯರು ಹೂವನ್ನು ಮುಡಿಯುವುದಿಲ್ಲ! ಏಕೆ ಗೊತ್ತಾ?

ಹನುಮಂತನಿಗೆ ಎಂಟು ವಿಧದ ವಿಜಯಗಳಿವೆ ಎಂದರ್ಥ. ಇದ್ರ ಪ್ರಭಾವದ ಅಡಿಯಲ್ಲಿ ಸ್ವಾಮಿ ಯಾವುದೇ ವ್ಯಕ್ತಿಯ ರೂಪವನ್ನು ಪಡೆದುಕೊಳ್ಳಬಹುದು. ಅವನು ದೇಹವನ್ನು ತುಂಬಾ ಚಿಕ್ಕದಾಗಿಸಬಲ್ಲನು ಮತ್ತು ಅದೇ ಸಮಯದಲ್ಲಿ ಆತ ದೇಹವನ್ನು ಬೆಟ್ಟದಂತೆ ಬೃಹದಾಕಾರವಾಗಿ ಮಾಡಬಹುದು. ಅವನು ತನ್ನ ಮನಸ್ಸಿನ ಶಕ್ತಿಯಿಂದ ಕೇಲವೇ ಕ್ಷಣಗಳಲ್ಲಿ ಎಲ್ಲಿಗೆ ಬೇಕಾದರೂ ತಲುಪಬಹುದು. ಹಾಗಾಗಿ ಆತನನ್ನು ಅಷ್ಟ ಸಿದ್ಧರೆಂದು ಕರೆಯುತ್ತಾರೆ.

ಹನುಮಂತ ವರವಾಗಿ ಪಡೆದ ಅಷ್ಟ ಸಿದ್ಧಿಗಳಾಗಿ

ಅಣಿಮಾ: ಈ ಸಿದ್ಧಿಯ ಕಾರಣದಿಂದಾಗಿ, ಹನುಮಂತನು ತನ್ನ ದೇಹವನ್ನು ಯಾವುದೇ ಸಮಯದಲ್ಲಿ ಚಿಕ್ಕದಾದ ಅಂದರೆ ಅತ್ಯಂತ ಸೂಕ್ಷ್ಮ ರೂಪವನ್ನು ಪಡೆದುಕೊಳ್ಳಬಹುದು.

ಮಹಿಮಾ : ಈ ಸಿದ್ಧಿಯಿಂದ ಹನುಮಂತನು ತನ್ನ ದೇಹವನ್ನು ಎಷ್ಟು ಬೇಕಾದರೂ ಹಿಗ್ಗಿಸಬಲ್ಲನು. ಬೃಹತ್ ರೂಪವನ್ನು ಧರಿಸಬಹುದು.

ಗರಿಮಾ: ಈ ಸಿದ್ಧಿಯಿಂದ ಹನುಮಂತನು ತನ್ನ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ತನ್ನನ್ನು ಯಾರೂ ಎತ್ತಲಾಗದಷ್ಟು ಬೃಹತ್ ಪರ್ವತದಂತೆ ಮಾರ್ಪಡಬಲ್ಲ.

ಲಘುಮಾ: ಈ ಸಿದ್ಧಿ ಶಕ್ತಿಯೊಂದಿಗೆ ಗರಿಮಾ ವಿರುದ್ಧವಾಗಿದೆ. ಹನುಮಂತನು ತನ್ನ ದೇಹದ ತೂಕವನ್ನು ಸಂಪೂರ್ಣವಾಗಿ ಕಡಿಮೆ ಮಾಡಬಹುದು. ಕ್ಷಣಮಾತ್ರದಲ್ಲಿ ಎಲ್ಲಿಗೇ ಬೇಕಾದರೂ ಹೋಗಬಹುದು.

Also Read: Political Crime Thriller – ಭಾರತದ ಚೊಚ್ಚಲ ಲೈಂಗಿಕ ಹಗರಣದಿಂದಾಗಿ ಆ ನಾಯಕನಿಗೆ ಪ್ರಧಾನಿ ಖುರ್ಚಿ ಜಸ್ಟ್​​ ಮಿಸ್​ ಆಗಿತ್ತು! ಸಂಜಯ್​ ಗಾಂಧಿ ‘ಕೈ’ವಾಡ ಏನಿತ್ತು?

ಪ್ರಾಪ್ತಿ: ಈ ಸಿದ್ಧಿಯ ಮೂಲಕ ಶೂನ್ಯದಿಂದ ಕೂಡ ಕ್ಷಣಗಳಲ್ಲಿ ತನಗೆ ಬೇಕಾದುದನ್ನು ಸೃಷ್ಟಿಸಬಹುದು.

ಪ್ರಾಕಾಮ್ಯ: ಈ ಸಿದ್ಧಿಯ ಸಹಾಯದಿಂದ ಹನುಮಂತನು ಭೂಮಿಯ ಆಳದಿಂದ ಭೂಗತ ಲೋಕಕ್ಕೆ ಹೋಗಬಹುದು. ಆತ ಆಕಾಶದಲ್ಲಿ ಹಾರಬಲ್ಲ.. ನೀರಿನಲ್ಲಿ ಎಷ್ಟು ದಿನ ಬೇಕಾದರೂ ಬದುಕಬಲ್ಲ.. ಎಷ್ಟು ದಿನ ಬೇಕಾದರೂ ಯೌವನಾವಸ್ಥೆಯಲ್ಲಿ ಇರಬಲ್ಲ. ಇದಲ್ಲದೆ, ಅನೇಕ ದೈವಿಕ ಶಕ್ತಿಗಳು (ದೂರ ದೃಷ್ಟಿ, ದೂರ ಶ್ರವಣ, ಆಕಾಶ ಚಲನೆ) ಹನುಮಂತನ ವಶದಲ್ಲಿವೆ.

ಈಶತ್ವಂ: ಈ ಸಿದ್ಧಿಯ ಸಹಾಯದಿಂದ ಇಂದ್ರಾದಿ ದಿಕ್ಪಾಲಕರನ್ನು ನಿಯಂತ್ರಿಸುವ ಶಕ್ತಿ ಹನುಮಂತನಿಗೆ ಇದೆ. ಈ ಸಿದ್ಧಿಯ ಸಹಾಯದಿಂದ ವಾನರ ಸೈನ್ಯವನ್ನು ಕೌಶಲ್ಯದಿಂದ ಮುನ್ನಡೆಸಿದನು.

ವಶಿತ್ವ: ಈ ಸಿದ್ಧಿಯಿಂದಲೇ ಹನುಮಂತನು ಜಿತೇಂದ್ರಿಯನಾಗಿದ್ದಾನೆ. ಅವನಿಗೆ ಮನಸ್ಸಿನ ಮೇಲೆ ಹಿಡಿತವಿದೆ. ಈ ಪ್ರಭಾವದಿಂದಾಗಿಯೇ ಹನುಮಂತನಿಗೆ ಸಕಲ ಜೀವರಾಶಿಗಳನ್ನು ತಾನು ಹೇಳಿದಂತೆ ಮಾಡುವ ಶಕ್ತಿಯಿದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)