ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮಹಿಳೆಯರು ಹೂವನ್ನು ಮುಡಿಯುವುದಿಲ್ಲ! ಏಕೆ ಗೊತ್ತಾ?
No Flowers for Women in Tirupati: ತಿರುಮಲವೆಂದರೆ ಹೂವಿನ ಮಂಟಪ... ಬ್ರಹ್ಮೋತ್ಸವದ ಸಂದರ್ಭದಲ್ಲಿ ಗೋವಿಂದ ನೂರಾರು ಅಲಂಕಾರಗಳಲ್ಲಿ ಭಕ್ತರನ್ನು ಪುಳಕಿತಗೊಳಿಸುತ್ತಾನೆ. ತಿರುಮಲದಲ್ಲಿ ಅರಳುವ ಪ್ರತಿಯೊಂದು ಹೂವು ಶ್ರೀ ಮನ್ನಾರಾಯಣನಿಗೆ ಸಮರ್ಪಿತವಾಗಿದೆ ಎಂದು ಜನರು ಮತ್ತು ಭಕ್ತರು ನಂಬುತ್ತಾರೆ. ಹಾಗಾಗಿ ಭಕ್ತರು ಹೂವನ್ನು ಮುಟ್ಟುವುದಕ್ಕೂ ಅವಕಾಶವಿಲ್ಲ!
ಭಕ್ತರು ಸಾಮಾನ್ಯವಾಗಿ ದೇವಾಲಯಗಳಿಗೆ ಭೇಟಿ ನೀಡಿದಾಗ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುತ್ತಾರೆ. ಅದರಲ್ಲೂ ಮಹಿಳೆಯರು ಈ ವಿಷಯದಲ್ಲಿ ಮುಂಚೂಣಿಯಲ್ಲಿರುತ್ತಾರೆ. ಹಣೆಗೆ ಕುಂಕುಮ, ತಲೆಗೆ ಹೂವು ಇಡುವುದನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಆದರೆ ಶ್ರೀ ವೆಂಕಟೇಶ್ವರ ಸ್ವಾಮಿಯ ಪುಣ್ಯಕ್ಷೇತ್ರ ತಿರುಮಲದಲ್ಲಿ ಮಹಿಳೆಯರು ಹೂ ಮುಡಿಯಬಾರದು ಎಂಬ ನಿಯಮವಿದೆ ಗೊತ್ತಾ? ಪ್ರತಿ ವರ್ಷ ಕೋಟ್ಯಂತರ ಭಕ್ತರು ಭೂವೈಕುಂಠ ತಿರುಮಲಕ್ಕೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ನಿತ್ಯ ಸಾವಿರಾರು ಭಕ್ತರು ಏಳು ಬೆಟ್ಟಗಳ ಒಡೆಯ ವೆಂಕಣ್ಣನ ದರ್ಶನಕ್ಕೆ ಆಗಮಿಸುತ್ತಾರೆ (No Flowers for Women in Tirupati). ತಿರುಮಲಕ್ಕೆ ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಭಕ್ತರು ಬರುತ್ತಾರೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದಿನಗಟ್ಟಲೆ ಗೋವಿಂದಾ.. ಲಕ್ಷ್ಮೀ ವಲ್ಲಭ ಎಂದು ಸ್ತುತಿಸುತ್ತಾರೆ (Spiritual ).
ತಿರುಮಲದಲ್ಲಿ ಪ್ರತಿದಿನ ಶ್ರೀವೆಂಕಟೇಶ್ವರನಿಗೆ ವಿಶೇಷ ಪೂಜೆಗಳು, ಅರ್ಚನೆಗಳು ಮತ್ತು ಅಭಿಷೇಕಗಳನ್ನು ಮಾಡಲಾಗುತ್ತದೆ. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ವಿವಿಧ ಅಲಂಕಾರಗಳಲ್ಲಿ ಭಕ್ತರಿಗೆ ಕಾಣಿಸಿಕೊಳ್ಳುತ್ತಾನೆ. ಆದ್ದರಿಂದಲೇ ಮಹಾವಿಷ್ಣುನನ್ನು ಬಹು ಅಲಂಕಾರ ಪ್ರಿಯ ಎಂದು ಕರೆಯುತ್ತಾರೆ. ಶ್ರೀಹರಿಯನ್ನು ಹೂವಿನ ಪ್ರೇಮಿ ಎಂದೂ ಕರೆಯುವುದುಂಟು.
ತಿರುಮಲವೆಂದರೆ ಹೂವಿನ ಮಂಟಪ… ಹಾಗಾಗಿ ಭಕ್ತರು ಹೂವನ್ನು ಮುಟ್ಟುವುದಕ್ಕೂ ಅವಕಾಶವಿಲ್ಲ!
ಪುರಾಣಗಳಲ್ಲಿ ತಿರುಮಲವನ್ನು ಹೂವಿನ ಮಂಟಪ ಎಂದೇ ಹೆಸರಿಸಲಾಗಿದೆ. ತಿರುಮಲ ಹೂವಿನ ಮಂಟಪವಾಗಿರುವುದರಿಂದ ಶ್ರೀಹರಿಯು ಹೂವಿನ ಅಲಂಕಾರ ಪ್ರಿಯನಾಗಿರುವುದರಿಂದ ನಿತ್ಯವೂ ಭಗವಂತನಿಗೆ ಟನ್ ಗಟ್ಟಲೆ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ. ಬ್ರಹ್ಮೋತ್ಸವದ ಸಂದರ್ಭದಲ್ಲಿ ಗೋವಿಂದ ನೂರಾರು ಅಲಂಕಾರಗಳಲ್ಲಿ ಭಕ್ತರನ್ನು ಪುಳಕಿತಗೊಳಿಸುತ್ತಾನೆ. ತಿರುಮಲದಲ್ಲಿ ಅರಳುವ ಪ್ರತಿಯೊಂದು ಹೂವು ಶ್ರೀ ಮನ್ನಾರಾಯಣನಿಗೆ ಸಮರ್ಪಿತವಾಗಿದೆ ಎಂದು ಜನರು ಮತ್ತು ಭಕ್ತರು ನಂಬುತ್ತಾರೆ.
ಅದಕ್ಕಾಗಿಯೇ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಭಗವಂತನ ದರ್ಶನಕ್ಕೆ ಬರುವ ಯಾವುದೇ ಭಕ್ತರಾಗಲಿ ಹೂವುಗಳನ್ನು ಮುಟ್ಟಬಾರದು ಎಂಬ ನಿಯಮ ಆಚರಣೆಯಲ್ಲಿದೆ. ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ Tirumala Tirupati Devasthanam -TTD) ಆಡಳಿತ ಮಂಡಲಿಯು ಇದನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ. ಈ ಕಾರಣದಿಂದಲೇ ಸ್ವಾಮಿಯ ದರ್ಶನಕ್ಕೆ ಬರುವ ಮಹಿಳೆಯರು ತಲೆಯಲ್ಲಿ ಹೂ ಮುಡಿಯುವುದಿಲ್ಲ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)
Published On - 4:34 am, Tue, 9 July 24