Festival Calendar 2022: 2022 ರ ಧಾರ್ಮಿಕ ಹಬ್ಬಗಳ ಪಟ್ಟಿ

| Updated By: ಆಯೇಷಾ ಬಾನು

Updated on: Dec 29, 2021 | 7:15 AM

ತಿ ವರ್ಷವೂ ಬರುವ ಹಬ್ಬಗಳು ಮತ್ತು ಇತರ ಶುಭ ಸಂದರ್ಭಗಳು ನಿಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಒಟ್ಟಿಗೆ ಸೇರಿವಂತೆ ಮಾಡಿ ಸಂತೋಷವನ್ನು ಹಂಚುತ್ತವೆ. ಆದ್ರೆ ನಮ್ಮ ಒತ್ತಡದ ಜೀವನಶೈಲಿ, ಕೆಲಸಗಳಿಂದಾಗಿ ಹಬ್ಬಗಳಿಗೆ ರಜೆ ಸಿಗದೆ ನಮ್ಮ ಕುಟುಂಬದೊಂದಿಗೆ ಸಂತೋಷವಾಗಿ ಹಬ್ಬ ಆಚರಿಸಲು ಸಮಸ್ಯೆಗಳಾಗುತ್ತವೆ.

Festival Calendar 2022: 2022 ರ ಧಾರ್ಮಿಕ ಹಬ್ಬಗಳ ಪಟ್ಟಿ
Follow us on

ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಶುರುವಾಗಲಿದೆ. ಮತ್ತೆ ಎಲ್ಲವೂ ಆರಂಭವಾಗಲಿದೆ. 2021ಕ್ಕೆ ಗುಡ್ ಬೈ ಹೇಳಿ 2022ಕ್ಕೆ ವೆಲ್ ಕಮ್ ಮಾಡಲು ಇಡೀ ವಿಶ್ವ ಕಾಯುತ್ತಿದೆ. ಹಳೆ ನನಪುಗಳ ಜೊತೆ ನಾವೆಲ್ಲರೂ ಒಟ್ಟಾಗಿ ಸೇರಿ ಆನಂದದಿಂದ ಹೊಸ ಭರವಸೆ ತುಂಬಿದ ಹೊಸ ವರ್ಷವನ್ನು ಸ್ವಾಗತಿಸಲು ಕೌಂಟ್ ಡೌನ್ ಶುರುವಾಗಿದೆ. ಪ್ರತಿ ವರ್ಷವೂ ಬರುವ ಹಬ್ಬಗಳು ಮತ್ತು ಇತರ ಶುಭ ಸಂದರ್ಭಗಳು ನಿಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಒಟ್ಟಿಗೆ ಸೇರಿವಂತೆ ಮಾಡಿ ಸಂತೋಷವನ್ನು ಹಂಚುತ್ತವೆ. ಆದ್ರೆ ನಮ್ಮ ಒತ್ತಡದ ಜೀವನಶೈಲಿ, ಕೆಲಸಗಳಿಂದಾಗಿ ಹಬ್ಬಗಳಿಗೆ ರಜೆ ಸಿಗದೆ ನಮ್ಮ ಕುಟುಂಬದೊಂದಿಗೆ ಸಂತೋಷವಾಗಿ ಹಬ್ಬ ಆಚರಿಸಲು ಸಮಸ್ಯೆಗಳಾಗುತ್ತವೆ. ಹೀಗಾಗಿ ನಾವು 2022 ರ ಧಾರ್ಮಿಕ ರಜಾದಿನಗಳ ಪಟ್ಟಿಯನ್ನು ಮಾಡಿದ್ದೇವೆ ಇದರಿಂದ ನೀವು ಮುಂಚಿತವಾಗಿ ಯೋಜನೆಯನ್ನು ಮಾಡಬಹುದು.

2022 ರ ಧಾರ್ಮಿಕ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಜನವರಿ 13 ಲೋಹ್ರಿ  (ಪಂಜಾಬಿ ಹಬ್ಬ)
ಜನವರಿ 14 ಪೊಂಗಲ್/ಸಂಕ್ರಾಂತಿ
ಫೆಬ್ರವರಿ 05 ವಸಂತ ಪಂಚಮಿ
ಮಾರ್ಚ್ 01 ಮಹಾ ಶಿವರಾತ್ರಿ
ಮಾರ್ಚ್ 18 ಹೋಳಿ
ಏಪ್ರಿಲ್ 2 ರಂಜಾನ್ ಉಪವಾಸ ಆರಂಭ
ಏಪ್ರಿಲ್ 2 ಯುಗಾದಿ
ಏಪ್ರಿಲ್ 10 ರಾಮ ನವಮಿ
ಏಪ್ರಿಲ್ 16 ಹನುಮ ಜಯಂತಿ
ಏಪ್ರಿಲ್ 14  ಬೈಸಾಖಿ (ಸಿಖ್ಖರ ಹಬ್ಬ)
ಏಪ್ರಿಲ್ 15 ಬಿಹು (ಅಸ್ಸಾಂನ ಸುಗ್ಗಿ ಹಬ್ಬ)
ಮೇ 3 ಅಕ್ಷಯ ತೃತೀಯ
ಮೇ 30 ಸಾವಿತ್ರಿ ಪೂಜೆ
ಜುಲೈ 09 ಬಕ್ರಿದ್
ಜುಲೈ 13 ಗುರು ಪೂರ್ಣಿಮೆ
ಆಗಸ್ಟ್ 02 ನಾಗ ಪಂಚಮಿ
ಆಗಸ್ಟ್ 11 ರಕ್ಷಾ ಬಂಧನ
ಆಗಸ್ಟ್ 12 ವರಲಕ್ಷ್ಮಿ ವ್ರತ
ಆಗಸ್ಟ್ 19 ಕೃಷ್ಣ ಜನ್ಮಾಷ್ಟಮಿ
ಆಗಸ್ಟ್ 31 ಗಣೇಶ ಚತುರ್ಥಿ
ಸೆಪ್ಟೆಂಬರ್ 08 ಓಣಂ
ಸೆಪ್ಟೆಂಬರ್ 25 ಮಹಾಲಯ ಅಮವಾಸ್ಯೆ
ಸೆಪ್ಟೆಂಬರ್ 26 ನವರಾತ್ರಿ
ಅಕ್ಟೋಬರ್ 04 ಮಹಾ ನವಮಿ
ಅಕ್ಟೋಬರ್ 05 ದಸರಾ
ಅಕ್ಟೋಬರ್ 09 ಶರದ್ ಪೂರ್ಣಿಮಾ
ಅಕ್ಟೋಬರ್ 13 ಕರ್ವಾ ಚೌತ್
ಅಕ್ಟೋಬರ್ 22 ಧನ್ ತೇರಸ್
ಅಕ್ಟೋಬರ್ 24 ದೀಪಾವಳಿ
ಅಕ್ಟೋಬರ್ 26 ಭಾಯಿ ದೂಜ್ (ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸುವ ಹಬ್ಬ)
ನವೆಂಬರ್ 8 ಕಾರ್ತಿಕ ಪೂರ್ಣಿಮಾ
ಡಿಸೆಂಬರ್ 25 ಕ್ರಿಸ್​ಮಸ್