Festival Calendar 2024: ಜನವರಿಯಿಂದ ಡಿಸೆಂಬರ್ವರೆಗಿನ ಎಲ್ಲಾ ಹಬ್ಬಗಳ ಸಂಪೂರ್ಣ ಮಾಹಿತಿ ಇಲ್ಲಿದೆ
ಹಬ್ಬಗಳು ಜನವರಿ 15, 2024 ರಂದು ಮಕರ ಸಂಕ್ರಾಂತಿಯೊಂದಿಗೆ ಪ್ರಾರಂಭವಾಗುತ್ತವೆ, ನಂತರ ಮಾರ್ಚ್ ನಲ್ಲಿ ಶಿವರಾತ್ರಿ ಮತ್ತು ಹೋಳಿಯ ಹಬ್ಬ, ಹೀಗೆ ಡಿಸೆಂಬರ್ ವರೆಗೂ ಅನೇಕಾನೇಕ ಹಬ್ಬಗಳು ಸಾಲುಗಟ್ಟಿ ಬರಲಿದೆ. ಅದೆಲ್ಲದರ ಸಮಗ್ರ ವೇಳಾಪಟ್ಟಿ ಇಲ್ಲಿದೆ. ಹಬ್ಬಕ್ಕೆ ಬೇರೆ ಬೇರೆ ಊರುಗಳಿಗೆ ಹೋಗುವವರು ಕೂಡ ಈಗಿನಿಂದಲೇ ತಮ್ಮ ಪ್ರವಾಸಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ ಹಾಗಾಗಿ ನಿಮ್ಮ ಯೋಜನೆ ಮತ್ತು ನಿರೀಕ್ಷೆಗೆ ಪೂರಕವಾಗಲು ಈ ಮಾಹಿತಿಯನ್ನು ನೀಡಲಾಗಿದೆ.
ಇನ್ನೇನು 2023 ಮುಗಿಯುತ್ತಿದೆ. ಈ ವರ್ಷ ಹಲವು ರೀತಿಯ ಹಬ್ಬಗಳನ್ನು ಸಂಭ್ರಮದಿಂದ ಆಚರಣೆ ಮಾಡುವ ಮೂಲಕ ವರ್ಷದ ಕೊನೆಯ ಹಂತಕ್ಕೆ ಬಂದು ತಲುಪಿದ್ದೇವೆ. ಹಾಗೆಯೇ ನಾವು 2024ರ ಆಗಮನಕ್ಕಾಗಿ ಕಾಯುತ್ತಿದ್ದೇವೆ. ವಿಶೇಷವಾಗಿ ಬಹುನಿರೀಕ್ಷಿತ ಹಬ್ಬಗಳು, ಅದನ್ನು ಯಾವಾಗ ಆಚರಿಸಲಾಗುತ್ತದೆ? ಎಂಬ ಕುತೂಹಲ ವಿರುವುದು ಸಹಜ. ಇನ್ನು ಹಬ್ಬಕ್ಕೆ ಬೇರೆ ಬೇರೆ ಊರುಗಳಿಗೆ ಹೋಗುವವರು ಕೂಡ ಈಗಿನಿಂದಲೇ ತಮ್ಮ ಪ್ರವಾಸಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ ಹಾಗಾಗಿ ನಿಮ್ಮ ಯೋಜನೆ ಮತ್ತು ನಿರೀಕ್ಷೆಗೆ ಪೂರಕವಾಗಲು ಇಲ್ಲಿ 2024ರ ಜನವರಿಯಿಂದ ಡಿಸೆಂಬರ್ ವರೆಗಿನ ಎಲ್ಲಾ ಹಬ್ಬಗಳ ಪಟ್ಟಿಯನ್ನು ನೀಡಲಾಗಿದೆ. ಮುಖ್ಯವಾಗಿ ಹಬ್ಬಗಳು ಜನವರಿ 15, 2024 ರಂದು ಮಕರ ಸಂಕ್ರಾಂತಿಯೊಂದಿಗೆ ಪ್ರಾರಂಭವಾಗುತ್ತವೆ, ನಂತರ ಮಾರ್ಚ್ ನಲ್ಲಿ ಶಿವರಾತ್ರಿ ಮತ್ತು ಹೋಳಿಯ ಹಬ್ಬದ ಹೀಗೆ ಡಿಸೆಂಬರ್ ವರೆಗೂ ಅನೇಕಾನೇಕ ಹಬ್ಬಗಳು ಸಾಲುಗಟ್ಟಿ ಬರಲಿದೆ ಅದೆಲ್ಲದರ ಸಮಗ್ರ ವೇಳಾಪಟ್ಟಿ ಇಲ್ಲಿದೆ.
ಜನವರಿ:
ಜನವರಿ 11, (ಗುರುವಾರ) – ಎಳ್ಳ ಅಮವಾಸ್ಯೆ
ಜನವರಿ 15, (ಸೋಮವಾರ) – ಮಕರ ಸಂಕ್ರಾಂತಿ
ಜನವರಿ 17, (ಮಂಗಳವಾರ) – ಗುರು ಗೋವಿಂದ ಸಿಂಹ ಜಯಂತಿ
ಜನವರಿ 21, (ಭಾನುವಾರ) – ಪುತ್ರದಾ ಏಕಾದಶಿ
ಜನವರಿ 25, (ಗುರುವಾರ) – ಶಾಕಂಭರಿ ಹುಣ್ಣಿಮೆ
ಜನವರಿ 29, (ಸೋಮವಾರ) – ಸಂಕಷ್ಟ ಚತುರ್ಥಿ
ಫೆಬ್ರುವರಿ:
ಫೆಬ್ರುವರಿ 9, (ಶುಕ್ರವಾರ) -ದರ್ಶ ಅಮವಾಸ್ಯೆ
ಫೆಬ್ರುವರಿ 13, (ಮಂಗಳವಾರ) – ಶ್ರೀ ಗಣೇಶ ಜಯಂತಿ
ಫೆಬ್ರವರಿ 14, (ಬುಧವಾರ) – ವಸಂತ ಪಂಚಮಿ, ಸರಸ್ವತಿ ಪೂಜೆ
ಫೆಬ್ರುವರಿ 16, (ಶುಕ್ರವಾರ) – ರಥ ಸಪ್ತಮಿ
ಫೆಬ್ರುವರಿ 24, (ಶನಿವಾರ) – ಭಾರತ ಹುಣ್ಣಿಮೆ
ಫೆಬ್ರುವರಿ 28, (ಬುಧವಾರ) ಸಂಕಷ್ಟ ಚತುರ್ಥಿ
ಮಾರ್ಚ್:
ಮಾರ್ಚ್ 5, (ಮಂಗಳವಾರ) – ಶ್ರೀ ರಾಮದಾಸ ನವಮಿ
ಮಾರ್ಚ್ 8, (ಶುಕ್ರವಾರ) – ಮಹಾಶಿವರಾತ್ರಿ
ಮಾರ್ಚ್ 24, (ಭಾನುವಾರ) – ಹೋಲಿಕಾ ದಹನ, ಫಾಲ್ಗುಣ ಪೂರ್ಣಿಮಾ ವ್ರತ
ಮಾರ್ಚ್ 25, (ಸೋಮವಾರ) – ಓಕಳಿ ಹಬ್ಬ
ಮಾರ್ಚ್ 28, (ಗುರುವಾರ) – ಸಂಕಷ್ಟ ಚತುರ್ಥಿ
ಮಾರ್ಚ್ 29, (ಶುಕ್ರವಾರ) – ಗುಡ್ ಫ್ರೈಡೇ
ಮಾರ್ಚ್ 31, (ಭಾನುವಾರ) – ಈಸ್ಟರ್ ಸಂಡೇ
ಎಪ್ರಿಲ್:
ಎಪ್ರಿಲ್ 5, (ಶುಕ್ರವಾರ) – ಪಾಪಮೋಚಿನಿ ಏಕಾದಶಿ
ಎಪ್ರಿಲ್ 8, (ಸೋಮವಾರ) – ಯುಗಾದಿ ಅಮವಾಸ್ಯೆ
ಎಪ್ರಿಲ್ 9, (ಮಂಗಳವಾರ) – ಯುಗಾದಿ ಪಾಡ್ಯ
ಎಪ್ರಿಲ್ 11, (ಬುಧವಾರ) – ಈದ್- ಅಲ್- ಫಿತರ್, ರಂಜಾನ್ ಈದ್
ಎಪ್ರಿಲ್ 13, (ಶನಿವಾರ) – ಸೌರಯುಗಾದಿ
ಎಪ್ರಿಲ್ 17, (ಬುಧವಾರ) – ಶ್ರೀ ರಾಮ ನವಮಿ, ಸ್ವಾಮಿ ನಾರಾಯಣ ಜಯಂತಿ
ಎಪ್ರಿಲ್ 23, (ಮಂಗಳವಾರ) – ಹನುಮಾನ್ ಜಯಂತಿ, ಚೈತ್ರ ಪೂರ್ಣಿಮಾ ವ್ರತ
ಇದನ್ನೂ ಓದಿ: ಜನವರಿ ತಿಂಗಳಿನಲ್ಲಿ ಆಚರಿಸುವ ಪ್ರಮುಖ ಹಬ್ಬಗಳಾವುವು? ಇಲ್ಲಿದೆ ಸಮಗ್ರ ಪಟ್ಟಿ!
ಮೇ:
ಮೇ 4, (ಶನಿವಾರ) – ವರುಥಿನಿ ಏಕಾದಶಿ
ಮೇ 10, (ಶುಕ್ರವಾರ) – ಅಕ್ಷಯ ತೃತೀಯಾ
ಮೇ 21, (ಮಂಗಳವಾರ) – ಶ್ರೀ ನರಸಿಂಹ ಜಯಂತಿ
ಮೇ 23, (ಗುರುವಾರ) – ಬುದ್ಧ ಪೂರ್ಣಿಮೆ
ಮೇ 26, (ಭಾನುವಾರ) – ಸಂಕಷ್ಟ ಚತುರ್ಥಿ
ಜೂನ್:
ಜೂನ್ 17, (ಸೋಮವಾರ) – ಈದ್- ಅಲ್- ಅಧಾ, ಬಕ್ರೀದ್
ಜೂನ್ 25, (ಮಂಗಳವಾರ) – ಸಂಕಷ್ಟ ಚತುರ್ಥಿ
ಜುಲೈ:
ಜುಲೈ 8, (ಸೋಮವಾರ) – ಮೊಹರಂ, ಇಸ್ಲಾಮಿಕ್ ಹೊಸ ವರ್ಷ
ಜುಲೈ 17, (ಬುಧವಾರ) – ಚಾತುರ್ಮಾಸ ಪ್ರಾರಂಭ
ಜುಲೈ 21, (ಭಾನುವಾರ) – ಗುರು ಪೂರ್ಣಿಮಾ, ವ್ಯಾಸ ಪೂರ್ಣಿಮಾ
ಜುಲೈ 24, (ಬುಧವಾರ) – ಸಂಕಷ್ಟ ಚತುರ್ಥಿ
ಆಗಸ್ಟ್:
ಆಗಸ್ಟ್ 4, (ಭಾನುವಾರ) – ನಾಗರ ಅಮಾವಾಸ್ಯೆ
ಆಗಸ್ಟ್ 5, (ಸೋಮವಾರ) – ಶ್ರಾವಣ ಮಾಸಾರಂಭ
ಆಗಸ್ಟ್ 9, (ಶುಕ್ರವಾರ) – ನಾಗರಪಂಚಮಿ
ಆಗಸ್ಟ್ 16, (ಶುಕ್ರವಾರ) – ವರಮಹಾಲಕ್ಷ್ಮೀ ಹಬ್ಬ
ಆಗಸ್ಟ್ 19, (ಸೋಮವಾರ) – ರಕ್ಷಾ ಬಂಧನ, ಶ್ರಾವಣ ಪೂರ್ಣಿಮಾ ವ್ರತ,
ಆಗಸ್ಟ್ 22, (ಗುರುವಾರ) – ಸಂಕಷ್ಟ ಚತುರ್ಥಿ
ಆಗಸ್ಟ್ 26, (ಸೋಮವಾರ) – ಶ್ರೀ ಕೃಷ್ಣ ಜನ್ಮಾಷ್ಟಮಿ
ಸೆಪ್ಟೆಂಬರ್:
ಸೆಪ್ಟೆಂಬರ್ 7, (ಶನಿವಾರ) – ಗಣೇಶ ಚತುರ್ಥಿ
ಸೆಪ್ಟೆಂಬರ್ 15, (ಭಾನುವಾರ) – ಓಣಂ, ವಾಮನ ಜಯಂತಿ
ಸೆಪ್ಟೆಂಬರ್ 16, (ಸೋಮವಾರ) – ಈದ್- ಎ- ಮಿಲಾದ್
ಸೆಪ್ಟೆಂಬರ್ 17, (ಮಂಗಳವಾರ) – ಅನಂತ ಚತುರ್ದಶಿ, ಗಣೇಶ ವಿಸರ್ಜನೆ
ಸೆಪ್ಟೆಂಬರ್ 18, (ಬುಧವಾರ) – ಭಾದ್ರಪದ ಪೂರ್ಣಿಮಾ ವ್ರತ, ಪಿತೃ ಪಕ್ಷ ಪ್ರಾರಂಭ
ಸೆಪ್ಟೆಂಬರ್ 21, (ಶನಿವಾರ) – ಸಂಕಷ್ಟ ಚತುರ್ಥಿ
ಅಕ್ಟೋಬರ್:
ಅಕ್ಟೋಬರ್ 3, (ಗುರುವಾರ) – ಶಾರದೀಯ ನವರಾತ್ರಿ, ಘಟಸ್ಥಾಪನೆ
ಅಕ್ಟೋಬರ್ 10, (ಗುರುವಾರ) – ಸರಸ್ವತಿ ಪೂಜೆ
ಅಕ್ಟೋಬರ್ 11, (ಶುಕ್ರವಾರ) – ದುರ್ಗಾ ಮಹಾ ನವಮಿ ಪೂಜೆ, ದುರ್ಗಾ ಮಹಾ ಅಷ್ಟಮಿ ಪೂಜೆ
ಅಕ್ಟೋಬರ್ 12, (ಶನಿವಾರ) – ದಸರಾ, ವಿಜಯ ದಶಮಿ
ಅಕ್ಟೋಬರ್ 20, (ಭಾನುವಾರ) – ಸಂಕಷ್ಟ ಚತುರ್ಥಿ
ಅಕ್ಟೋಬರ್ 29, (ಮಂಗಳವಾರ) – ಧಂತೇರಸ್, ಧನ ತ್ರಯೋದಶಿ
ಅಕ್ಟೋಬರ್ 31,(ಗುರುವಾರ) – ನರಕ ಚತುರ್ದಶಿ
ನವೆಂಬರ್:
ನವೆಂಬರ್ 1, (ಶುಕ್ರವಾರ) – ದೀಪಾವಳಿ, ಕಾರ್ತಿಕ ಅಮಾವಾಸ್ಯೆ
ನವೆಂಬರ್ 2, (ಶನಿವಾರ) – ಗೋವರ್ಧನ ಪೂಜೆ, ದೀಪಾವಳಿ ಪಾಡ್ಯ
ನವೆಂಬರ್ 13, (ಬುಧವಾರ) – ತುಳಸಿ ವಿವಾಹ
ನವೆಂಬರ್ 18, (ಸೋಮವಾರ) – ಸಂಕಷ್ಟ ಚತುರ್ಥಿ
ಡಿಸೆಂಬರ್:
ಡಿಸೆಂಬರ್ 15, (ಭಾನುವಾರ) – ಹೊಸ್ತಿಲ ಹುಣ್ಣಿಮೆ
ಡಿಸೆಂಬರ್ 25, (ಬುಧವಾರ) – ಕ್ರಿಸ್ಮಸ್
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: