ಆಗಸ್ಟ್ ತಿಂಗಳಿನಲ್ಲಿ ಶಿವನಿಗೆ ಸಮರ್ಪಿತವಾದ ಪವಿತ್ರ ಶ್ರಾವಣ ಮಾಸ (ತಿಂಗಳು) ಆರಂಭವಾಗುವುದರಿಂದ ಇದು ಹಿಂದೂಗಳಿಗೆ ಬಹಳ ವಿಶೇಷವಾಗಿದೆ. ಈ ಅವಧಿಯಲ್ಲಿ ಉಪವಾಸ ಮತ್ತು ವಿವಿಧ ಆಚರಣೆಗಳನ್ನು ಮಾಡುವುದು ಪವಿತ್ರವೆಂದು ಪರಿಗಣಿಸಲಾಗುತ್ತದೆ . ಜೊತೆಗೆ ನಾಗರಪಂಚಮಿ ಹಿಂದೂ ಹಬ್ಬಗಳ ಪ್ರಾರಂಭದ ಸೂಚಕವಾಗಿರುವುದರಿಂದ ಆಗಸ್ಟ್ ತಿಂಗಳು ಹಬ್ಬಗಳ ಹೂರಣ ಎಂದರೆ ತಪ್ಪಾಗಲಾರದು. ಹಾಗಾಗಿ ಈ ತಿಂಗಳಲ್ಲಿ ಬರುವ ಹಬ್ಬಗಳ ಪ್ರಾಮುಖ್ಯತೆ ಮತ್ತು ಅವುಗಳಿಗೆ ಸಂಬಂಧಿಸಿದ ಆಚರಣೆಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಶ್ರಾವಣ ಮಾಸ ಹಿಂದೂ ಸಂಸ್ಕೃತಿಯಲ್ಲಿ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಈ ತಿಂಗಲಿನಲ್ಲಿ ಪೂಜೆ, ಉಪವಾಸ ಮತ್ತು ವಿವಿಧ ಆಚರಣೆಗಳನ್ನು ಮಾಡಲು ಅನುಕೂಲಕರವೆಂದು ನಂಬಲಾಗಿದೆ. ಹಾಗಾಗಿ ಈ ಅವಧಿಯಲ್ಲಿ ಭಕ್ತರು ಶಿವನ ಆಶೀರ್ವಾದವನ್ನು ಪಡೆಯುತ್ತಾರೆ .
ಈ ತಿಂಗಳು, ಅಧಿಕ ಪೂರ್ಣಿಮೆ ಅಥವಾ ಹುಣ್ಣಿಮೆಯ ವ್ರತ ಮತ್ತು ಮಂಗಳ ಗೌರಿ ವ್ರತದ ಆಚರಣೆಯೊಂದಿಗೆ ಪ್ರಾರಂಭವಾಗುತ್ತದೆ. ಭಕ್ತರು ಈ ಆಚರಣೆಗಳನ್ನು ಬಹಳ ಶ್ರದ್ದೆ ಯಿಂದ ಮಾಡುತ್ತಾರೆ. ಈ ವ್ರತಾಚರಣೆಯಿಂದ ಸಮೃದ್ಧಿ, ಆರೋಗ್ಯ, ದೇವರ ಆಶೀರ್ವಾದ ದೊರೆಯುತ್ತದೆ ಎಂಬ ಪ್ರತೀತಿ ಇದೆ.
ಪಂಚಕ ಐದು ದಿನಗಳ ಅವಧಿಯಾಗಿದ್ದು, ಈ ಅವಧಿಯಲ್ಲಿ ಹೊಸ ಉದ್ಯಮ ಅಥವಾ ಪ್ರಮುಖ ಕಾರ್ಯಕ್ರಮ ಪ್ರಾರಂಭಿಸುವುದು ಅಶುಭವೆಂದು ಹೇಳಲಾಗುತ್ತದೆ. ಈ ದಿನಗಳಲ್ಲಿ ಜಾಗರೂಕರಾಗಿರುವುದು ಮತ್ತು ಪ್ರಮುಖ ಚಟುವಟಿಕೆಗಳನ್ನು ಆರಂಭಿಸುವುದನ್ನು ತಪ್ಪಿಸುವುದು ಅತ್ಯಗತ್ಯ.
ಸಂಕಷ್ಟ ಚತುರ್ಥಿ ಗಣೇಶನಿಗೆ ಅರ್ಪಿತವಾದ ದಿನ. ಈ ದಿನದಂದು ಗಣೇಶ ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಕೆಲವರು ಶ್ರೀ ಗಣೇಶನ ಆಶೀರ್ವಾದ ಪಡೆಯಲು ಉಪವಾಸ ಮಾಡುತ್ತಾರೆ.
ಅಧಿಕ ಶ್ರಾವಣ ಮಾಸದ ಸೋಮವಾರ ಶಿವನಿಗೆ ಅರ್ಪಿತವಾಗಿರುವುದರಿಂದ ವಿಶೇಷ ಮಹತ್ವವನ್ನು ಹೊಂದಿದೆ. ಭಕ್ತರು ಈ ದಿನ ಉಪವಾಸ ಮಾಡುತ್ತಾರೆ ಮತ್ತು ತಮ್ಮ ತಮ್ಮ ಆಸೆಗಳನ್ನು ಈಡೇರಿಸುವಂತೆ ಆಶೀರ್ವಾದ ಕೋರಿ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತರೆ.
ವಿವಾಹಿತ ಮಹಿಳೆಯರು ತಮ್ಮ ಗಂಡಂದಿರ ಯೋಗಕ್ಷೇಮಕ್ಕಾಗಿ ಮಂಗಳ ಗೌರಿ ವ್ರತವನ್ನು ಆಚರಿಸಿಸುತ್ತಾರೆ. ಇನ್ನು ಕಾಲಾಷ್ಟಮಿಯನ್ನು ಶಿವನ ಅವತಾರವಾದ ಭೈರವನಿಗೆ ಅರ್ಪಿಸಲಾಗಿದೆ. ಹಾಗಾಗಿ ಆ ದಿನದಂದು ಶಿವನ ಆರಾಧನೆ ಮಾಡಿ ಪ್ರಸಾದ ಸ್ವೀಕರಿಸಲಾಗುತ್ತದೆ.
ಇದನ್ನೂ ಓದಿ: ಜುಲೈ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳು, ವ್ರತಗಳು
ಏಕಾದಶಿ ವಿಷ್ಣುವಿಗೆ ಅರ್ಪಿತವಾದ ಶುಭ ದಿನ. ಭಕ್ತರು ಒಂದು ದಿನದ ಉಪವಾಸವನ್ನು ಆಚರಿಸುತ್ತಾರೆ. ಮತ್ತು ದೇವಾಲಯಗಳಿಗೆ ಭೇಟಿ ನೀಡಿ, ಪ್ರಸಾದ ಸ್ವೀಕರಿಸುತ್ತಾರೆ.
ಪ್ರದೋಷ ವ್ರತವು ಪ್ರತಿ ಚಾಂದ್ರಮಾನ ಪಾಕ್ಷಿಕದ ಹದಿಮೂರನೇ ದಿನದಂದು ಆಚರಣೆ ಮಾಡಲಾಗುತ್ತದೆ ಮತ್ತು ಶಿವ ಪೂಜೆಯಲ್ಲಿ ಮಹತ್ವವನ್ನು ಹೊಂದಿದೆ. ಸಮೃದ್ಧಿ ಮತ್ತು ಶಾಂತಿಗಾಗಿ ಭಕ್ತರು ಈ ದಿನದಂದು ಶಿವನ ಆಶೀರ್ವಾದವನ್ನು ಕೋರುತ್ತಾರೆ.
ಅಧಿಕ ಶ್ರಾವಣದ ಎರಡನೇ ಶಿವರಾತ್ರಿ ಆಗಸ್ಟ್ 14 ರಂದು ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ಶಿವನ ಆರಾಧನೆಗೆ ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಭಕ್ತರು ಉಪವಾಸ ಆಚರಿಸಿ ರಾತ್ರಿಯಿಡೀ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಈ ದಿನವು ಮಂಗಳ ಗೌರಿ ವ್ರತದ ಆಚರಣೆ ಮಾಡಲಾಗುತ್ತದೆ, ವಿವಾಹಿತ ಮಹಿಳೆಯರು ಸಾಮರಸ್ಯ ಮತ್ತು ಆನಂದದಾಯಕ ವೈವಾಹಿಕ ಜೀವನಕ್ಕಾಗಿ ಪಾರ್ವತಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ.
ಅಧಿಕ ಅಮಾವಾಸ್ಯೆಯಂದು ಪೂರ್ವಜರನ್ನು ನೆನೆಯಲು ಮತ್ತು ಅವರ ಆಶೀರ್ವಾದವನ್ನು ಪಡೆಯಲು ಅತ್ಯಂತ ಮಹತ್ವದ ದಿನವೆಂದು ಪರಿಗಣಿಸಲಾಗಿದೆ.
ಶ್ರಾವಣ ಮಾಸದ ಅಮಾವಾಸ್ಯೆಯ ಐದನೇ ದಿನವನ್ನು ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ. ಆ ದಿನದಂದು ಸರ್ಪ ದೇವತೆ, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಜೊತೆಗೆ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ದೇಶಾದ್ಯಂತ ಬಹಳ ಸಂತೋಷದಿಂದ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಅಲ್ಲದೆ ರೈತರು ಉತ್ತಮ ಫಸಲಿಗಾಗಿ ನಾಗ ದೇವನ ಆಶೀರ್ವಾದ ಪಡೆಯಲು ಈ ದಿನ ಪ್ರಾರ್ಥನೆ ಸಲ್ಲಿಸುತ್ತಾರೆ.
ಈ ಏಕಾದಶಿಯನ್ನು ಪೋಷಕರು, ತಮ್ಮ ಮಕ್ಕಳ ಆರೋಗ್ಯ ಮತ್ತು ಕುಟುಂಬಂದ ಸಂತೋಷಕ್ಕಾಗಿ ವಿಷ್ಣುವಿನ ಆಶೀರ್ವಾದವನ್ನು ಬಯಸುತ್ತಾರೆ.
ಆಗಸ್ಟ್ ತಿಂಗಳಲ್ಲಿ ಬರುವ ಪ್ರದೋಷ ವ್ರತವು ಶಿವನ ಆರಾಧನೆಗೆ ಮತ್ತೊಂದು ಶುಭ ಸಂದರ್ಭವಾಗಿದೆ. ಭಕ್ತರು ಉಪವಾಸವ ಮಾಡಿ ಆಶೀರ್ವಾದವನ್ನು ಪಡೆಯಲು ಒಳ್ಳೆಯ ದಿನವಾಗಿದೆ.
ರಕ್ಷಾ ಬಂಧನವು ಸಹೋದರ ಸಹೋದರಿಯರ ನಡುವಿನ ಬಂಧವನ್ನು ಹೆಚ್ಚಿಸುವ ಹಬ್ಬವಾಗಿದೆ. ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿಗೆ ರಾಖಿ ಕಟ್ಟುತ್ತಾರೆ, ಇದಕ್ಕೆ ಪ್ರತಿಯಾಗಿ ಸಹೋದರರು ತಮ್ಮ ಸಹೋದರಿಯರನ್ನು ರಕ್ಷಿಸುವ ಭರವಸೆ ನೀಡುತ್ತಾರೆ.
ಈ ತಿಂಗಳು ಶ್ರಾವಣ ಪೂರ್ಣಿಮೆಯ ವ್ರತದೊಂದಿಗೆ ಕೊನೆಗೊಳ್ಳುತ್ತದೆ, ಇದು ಶಿವನ ಭಕ್ತರಿಗೆ ಪುಣ್ಯ ದಿನ. ಉಪವಾಸ ಮತ್ತು ಆರಾಧನೆ ಮಾಡುವುದರಿಂದ ಶಿವನು ಆಶೀರ್ವಾದ ಮಾಡುತ್ತಾನೆ ಎಂದು ನಂಬಲಾಗಿದೆ.
ಆಗಸ್ಟ್ ತಿಂಗಳು ಹಿಂದೂ ಸಂಸ್ಕೃತಿಯಲ್ಲಿ ಅಪಾರ ಪ್ರಾಮುಖ್ಯತೆಯನ್ನು ಹೊಂದಿರುವ ಹಬ್ಬಗಳು ಮತ್ತು ಉಪವಾಸದ ದಿನಗಳನ್ನು ಹೊಂದಿದೆ. ಶಿವನಿಗೆ ಸಮರ್ಪಿತವಾದ ಶ್ರಾವಣ ತಿಂಗಳು, ಪೂಜೆ ಮತ್ತು ಆಚರಣೆಗಳ ಮೂಲಕ ಸಮೃದ್ಧಿ ಮತ್ತು ಆರೋಗ್ಯ ಪಡೆಯಲು ಒಂದು ಅನನ್ಯ ಅವಕಾಶವಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ