
ಇಂದಿನ ಆಧುನಿಕ ಜೀವನದಲ್ಲಿ ಹೋಮ್ ಲೋನ್, ವೈಯಕ್ತಿಕ ಸಾಲ (Personal Loan), ಮತ್ತು ಕ್ರೆಡಿಟ್ ಕಾರ್ಡ್ ಇಎಂಐಗಳ ಸುಳಿಗೆ ಸಿಲುಕದವರೇ ಇಲ್ಲ. ಈ ಸಾಲದ ಕಂತುಗಳು ಕೇವಲ ಜೇಬಿಗೆ ಕತ್ತರಿ ಹಾಕುವುದು ಮಾತ್ರವಲ್ಲದೆ, ತೀವ್ರ ಮಾನಸಿಕ ಅಶಾಂತಿ ಮತ್ತು ಕೌಟುಂಬಿಕ ಒತ್ತಡಕ್ಕೂ ಕಾರಣವಾಗುತ್ತವೆ. ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಕಠಿಣ ಪರಿಶ್ರಮದ ಜೊತೆಗೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪರಿಹಾರಗಳ ಮೊರೆ ಹೋಗುವವರಿಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದು ವಿಶೇಷ ಮಾರ್ಗವನ್ನು ಸೂಚಿಸಲಾಗಿದೆ. ಅದೇ ‘ಋಣ ವಿಮೋಚನ ಅಂಗಾರಕ ಸ್ತೋತ್ರ’.
ಸನಾತನ ಸಂಪ್ರದಾಯದಲ್ಲಿ ಮಂಗಳವಾರವನ್ನು ಸಂಕಟಹರ ಹನುಮಂತ ಮತ್ತು ಮಂಗಳ ಗ್ರಹದ (ಕುಜ) ಪೂಜೆಗೆ ಅತ್ಯಂತ ಶ್ರೇಷ್ಠ ದಿನವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹವು ಅಶುಭ ಸ್ಥಾನದಲ್ಲಿದ್ದರೆ ಅಥವಾ ದುರ್ಬಲನಾಗಿದ್ದರೆ, ಆ ವ್ಯಕ್ತಿ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ ಮತ್ತು ಆರ್ಥಿಕ ನಷ್ಟಗಳನ್ನು ಅನುಭವಿಸುತ್ತಾನೆ. ಅಂತಹ ಸಂದರ್ಭಗಳಲ್ಲಿ ಹನುಮಂತನನ್ನು ಹಾಗೂ ಮಂಗಳ ದೇವನನ್ನು ಆರಾಧಿಸುವುದರಿಂದ ಜಾತಕದಲ್ಲಿನ ಕುಜ ದೋಷದ ನಕಾರಾತ್ಮಕ ಪ್ರಭಾವಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.
‘ಋಣ ವಿಮೋಚನ ಅಂಗಾರಕ ಸ್ತೋತ್ರ’ ಅಥವಾ ‘ಋಣ ಮಂಗಳ ಮುಕ್ತಿ ಸ್ತೋತ್ರ’ವು ಆರ್ಥಿಕ ಸಂಕಷ್ಟಗಳನ್ನು ದೂರ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿ ಎಂದು ನಂಬಲಾಗಿದೆ. ಹನುಮಂತ ಮತ್ತು ಮಂಗಳ ಗ್ರಹಕ್ಕೆ ಸಮರ್ಪಿತವಾಗಿರುವ ಈ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವುದರಿಂದ ಸಾಲದ ಹೊರೆ ತ್ವರಿತವಾಗಿ ಕರಗುತ್ತದೆ, ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ ಎಂಬುದು ಭಕ್ತರ ದೃಢ ವಿಶ್ವಾಸವಾಗಿದೆ.
ಇದನ್ನೂ ಓದಿ: ಫ್ಯಾಶನ್ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ