Vastu Tips: ಮನೆಯಲ್ಲಿ ನೆಮ್ಮದಿ-ಅಭಿವೃದ್ಧಿ ನೆಲೆಸಲು ಆಂಜನೇಯ ಸ್ವಾಮಿಯ ಫೋಟೋ ಎಲ್ಲಿಡಬೇಕು, ತಿಳಿದುಕೊಳ್ಳೀ

| Updated By: ಆಯೇಷಾ ಬಾನು

Updated on: Sep 29, 2021 | 7:31 AM

hanuman: ಮನೆಯಲ್ಲಿ ಕುಟುಂಬಸ್ಥರ ಮಧ್ಯೆ ಪ್ರೀತಿ ಪ್ರೇಮ ಪರಸ್ಪರ ಗೌರವ ಪ್ರವಹಿಸಬೇಕು ಅಂದರೆ ವಾಸ್ತು ಶಾಸ್ತ್ರದಲ್ಲಿ ಅನೇಕ ಮಹತ್ವದ ವಿಷಯಗಳನ್ನು ತಿಳಿಸಲಾಗಿದೆ. ಮನೆಯ ಹಾಲ್​ನಲ್ಲಿ ಶ್ರೀರಾಮಚಂದ್ರನ ಪಾದತಳದಲ್ಲಿ ಆಂಜನೇಯ ಕುಳಿತಿರುವ ಫೋಟೋ ಹಾಕಬೇಕು.

Vastu Tips: ಮನೆಯಲ್ಲಿ ನೆಮ್ಮದಿ-ಅಭಿವೃದ್ಧಿ ನೆಲೆಸಲು ಆಂಜನೇಯ ಸ್ವಾಮಿಯ ಫೋಟೋ ಎಲ್ಲಿಡಬೇಕು, ತಿಳಿದುಕೊಳ್ಳೀ
ಮನೆಯಲ್ಲಿ ನೆಮ್ಮದಿ-ಅಭಿವೃದ್ಧಿ ನೆಲೆಸಲು ಆಂಜನೇಯ ಸ್ವಾಮಿಯ ಫೋಟೋ ಎಲ್ಲಿಡಬೇಕು, ತಿಳಿದುಕೊಳ್ಳೀ
Follow us on

ವಾಸ್ತು ನಿಯಮಗಳ ಪ್ರಕಾರ ಮನೆಯಲ್ಲಿ ನೆಮ್ಮದಿ ಮತ್ತು ಅಭಿವೃದ್ಧಿ ನೆಲಸಲು ವಾಯುಪುತ್ರ ಆಂಜನೇಯ ಸ್ವಾಮಿಯ ಫೋಟೋ ಎಲ್ಲಿಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನೀ. ಮನೆಯಲ್ಲಿ ದೇವ-ದೇವತೆಯ ಪ್ರತಿಮೆಗಳು, ವಿಗ್ರಹಗಳು, ಫೋಟೋಗಳನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಆ ಕುಟುಂಬದಲ್ಲಿ ಶಾಂತಿ, ಸುಖ, ಸಮೃದ್ಧಿ ನೆಲೆಸುತ್ತದೆ ಎಂಬುದನ್ನು ವಾಸ್ತು ಶಾಸ್ತ್ರದಲ್ಲಿ ತಿಳಿಯಹೇಳಲಾಗಿದೆ.

ಹನುಮಂತ ಅಂದರೆ ಬುದ್ಧಿವಂತ ಮತ್ತು ಬಲಶಾಲಿ ಎಂಬುದು ಜನಜನಿತ. ಭಕ್ತರು ಶ್ರದ್ಧೆಯಿಂದ ಮನದಲ್ಲಿ ವಾಯುಪುತ್ರನನ್ನು ನೆನೆದು, ಆರಾಧಿಸತೊಡಗಿದರೆ ಯಾವುದೇ ಸಂಕಷ್ಟವಿರಲಿ ದೂರವಾಗುತ್ತದೆ. ಎಲ್ಲ ಭಕ್ತರ ಕಷ್ಟಕಾರ್ಪಣ್ಯಗಳನ್ನು ಸಂಕಟ ನಿವಾರಕ ಆಂಜನೇಯ ಸ್ವಾಮಿ ನಿವಾರಣೆ ಮಾಡುತ್ತಾನೆ. ನಿಗೆ ಮನೆ ವಾಸ್ತುಶಾಸ್ತ್ರದ ಬಗ್ಗೆ ತಿಳಿವಳಿಕೆ ಇದೆಯೆಂದಾದರೆ ಮನೆ ಗೋಡೆಗೆ ಬಣ್ಣ ಹಾಕುವುದರಿಂದ ಹಿಡಿದು ಪ್ರತಿಯೊದು ವಾಸ್ತುಬದ್ಧವಾಗಿ ಇರುತ್ತದೆ ಎಂಬುದು ಗಮನಾರ್ಹ.

ವಾಸ್ತು ನಿಯಮಗಳು ಆಂಜನೇಯ ಸ್ವಾಮಿ ಫೋಟೋ ಎಲ್ಲೆಲ್ಲಿ ಇಡಬೇಕು, ಅದರ ಮಹತ್ವವೇನು? ಹಾಗೆ ಮಾಡುವುದುರಿಂದ ಮನೆಯಲ್ಲಿನ ನಕಾರಾತ್ಮಕತೆಯನ್ನು ಹೇಗೆ ಹೋಗಲಾಡಿಸಬಹುದು? ಬನ್ನಿ ಹಾಗಾದರೆ ಈಮಹತ್ವದ ಸಂಗತಿಗಳ ಬಗ್ಗೆ ತಿಳಿದುಕೊಳ್ಳೋಣ:

1. ವಾಸ್ತು ನಿಯಮಗಳ ಪ್ರಕಾರ ಮನೆಯಲ್ಲಿ ಆಂಜನೇಯ ಸ್ವಾಮಿಯ ಪಂಚಮುಖಿ ಫೋಟೋ ಅಥವಾ ವಿಗ್ರಹವನ್ನು ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿಎಲ್ಲ ರೀತಿಯ ನಕಾರಾತ್ಮಕತೆ ದೂರವಾಗುವುದು. ಯಾರ ಮನೆಯಲ್ಲಿ ಪಂಚಮುಖಿ ಆಂಜನೇಯ ಸ್ವಾಮಿಯ ಫೋಟೋ ಇರುತ್ತದೋ ಅವರ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸಿರುತ್ತದೆ.

2. ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೆ ವಿಶೇಷ ಮಹತ್ವದ ಸ್ಥಾನ ನೀಡಲಾಗಿದೆ. ಮನೆಯಲ್ಲಿನ ವಾಸ್ತು ದೋಷ ನಿವಾರಣೆ ಮಾಡಿ, ನಕಾರಾತ್ಮಕತೆಯನ್ನು ದೂರಗೊಳಿಸಲು ದಕ್ಷಿಣ ದಿಕ್ಕಿನಲ್ಲಿ ಆಂಜನೇಯ ಸ್ವಾಮಿ ಮುಖ ಮಾಡಿರುವ ಫೋಟೋ ಹಾಕಬೇಕು. ಇದರಿಂದ ಮನೆಯಲ್ಲಿ ಸಕಾರಾತ್ಮಕತೆ ಪ್ರವಹಿಸುತ್ತಿರುತ್ತದೆ.

3. ಮನೆಯಲ್ಲಿ ಕುಟುಂಬಸ್ಥರ ಮಧ್ಯೆ ಪ್ರೀತಿ ಪ್ರೇಮ ಪರಸ್ಪರ ಗೌರವ ಪ್ರವಹಿಸಬೇಕು ಅಂದರೆ ವಾಸ್ತು ಶಾಸ್ತ್ರದಲ್ಲಿ ಅನೇಕ ಮಹತ್ವದ ವಿಷಯಗಳನ್ನು ತಿಳಿಸಲಾಗಿದೆ. ಮನೆಯ ಹಾಲ್​ನಲ್ಲಿ ಶ್ರೀರಾಮಚಂದ್ರನ ಪಾದತಳದಲ್ಲಿ ಆಂಜನೇಯ ಕುಳಿತಿರುವ ಫೋಟೋ ಹಾಕಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕತೆ ಹರಿಯುತ್ತಿರುತ್ತದೆ. ಭಕ್ತಿ ಭಾವಗಳೂ ತುಂಬಿ ಹರಿಯುತ್ತಿರುತ್ತದೆ.

(follow the vastu tips as which direction should keep hanuman image to get happy prosperous life)