Vasthu Shastra: ಮನೆಯಲ್ಲಿ ಗಣೇಶನ ವಿಗ್ರಹ ಅಥವಾ ಫೋಟೋ ಇಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

ಮನೆಯ ವಾಸ್ತು ದೋಷ ನಿವಾರಣೆಗೆ ಗಣೇಶ ಮೂರ್ತಿ ಸ್ಥಾಪನೆಯು ಒಂದು ಉತ್ತಮ ಪರಿಹಾರವಾಗಿದೆ. ಮನೆಯ ಮುಖ್ಯ ದ್ವಾರದಲ್ಲಿ ಗಣೇಶನನ್ನು ಹೇಗೆ ಇಡಬೇಕು, ಯಾವ ದಿಕ್ಕಿನಲ್ಲಿ ಇಡಬೇಕು, ಮತ್ತು ಎಷ್ಟು ಗಾತ್ರದ ವಿಗ್ರಹ ಇಡಬೇಕು ಎಂಬುದರ ಕುರಿತು ಮಾಹಿತಿ ಈ ಲೇಖನದಲ್ಲಿದೆ. ಮುರಿದ ಅಥವಾ ಹರಿದ ಗಣೇಶನ ಚಿತ್ರಗಳನ್ನು ಇಡಬಾರದು ಎಂಬುದನ್ನು ಸಹ ತಿಳಿಸಲಾಗಿದೆ. ಗಣೇಶ ಯಂತ್ರದ ಪ್ರಯೋಜನಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.

Vasthu Shastra: ಮನೆಯಲ್ಲಿ ಗಣೇಶನ ವಿಗ್ರಹ ಅಥವಾ ಫೋಟೋ ಇಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ
Ganesh Murti Placement
Image Credit source: livspace

Updated on: May 14, 2025 | 1:26 PM

ಪ್ರಥಮ ಪೂಜಿತ ಗಣೇಶನಿಗೆ ಸಿದ್ಧಿ ವಿನಾಯಕ, ಮಂಗಳಮೂರ್ತಿ, ವಿಘ್ನೇಶ್ವರ ಸೇರಿದಂತೆ ಹಲವು ನಾಮಗಳಿದ್ದು ಗಣೇಶನ ಮಹಿಮೆ ಅಪಾರ. ಹೀಗಾಗಿ ಪ್ರತಿ ಸಮಸ್ಯೆಗಳಿಗೂ ಗಣೇಶನನ್ನು ಭಕ್ತಿಯಿಂದ ಪೂಜಿಸುವುದರಿಂದ ಪರಿಹಾರ ಪಡೆಯಬಹುದು. ಗಣೇಶ ಇರುವಲ್ಲಿ ಯಾವುದೇ ದುಷ್ಟಶಕ್ತಿ ಇರುವುದಿಲ್ಲ ಎಂದು ನಂಬಲಾಗಿದೆ. ಆದ್ದರಿಂದ ಮನೆಯ ವಾಸ್ತು ದೋಷ ನಿವಾರಿಸಲು ಗಣೇಶನ ಮೂರ್ತಿ ಕೆಲವು ಪರಿಹಾರಗಳನ್ನು ಕಂಡುಕೊಳ್ಳಬಹುದು. ಅವು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಮುಖ್ಯ ದ್ವಾರದಲ್ಲಿ ವಾಸ್ತು ದೋಷ:

ಮನೆಯ ಪ್ರವೇಶದ್ವಾರದಲ್ಲಿ ಯಾವುದೇ ವಾಸ್ತು ದೋಷ ಅಥವಾ ಯಾವುದೇ ರೀತಿಯ ಅಡಚಣೆ ಇದ್ದರೆ, ಆ ದೋಷವನ್ನು ತೆಗೆದುಹಾಕಲು, ಮನೆಯ ಮುಖ್ಯ ದ್ವಾರದಲ್ಲಿ ಕುಳಿತ ಭಂಗಿಯಲ್ಲಿರುವ ಗಣೇಶನ ಮೂರ್ತಿಯನ್ನು ಇಡಬೇಕು ಅಥವಾ ಗಣೇಶನ ಮೂರ್ತಿಯನ್ನು ಎರಡೂ ಬದಿಗಳಲ್ಲಿ, ಅಂದರೆ ಮನೆಯ ಬಾಗಿಲಿನ ಚೌಕಟ್ಟಿನ ಮುಂದೆ ಮತ್ತು ಹಿಂದೆ ಇಡಬಹುದು.

ಗಣೇಶನ ಮೂರ್ತಿ ಇಡುವಾಗ ಈ ತಪ್ಪುಗಳನ್ನು ಮಾಡಬೇಡಿ:

ಮನೆಯಲ್ಲಿ ಸ್ಥಾಪಿಸುವ ಯಾವುದೇ ಗಣಪತಿ ವಿಗ್ರಹದ ಗಾತ್ರ 6 ಇಂಚು ಎತ್ತರ ಅಥವಾ 11 ಇಂಚು ಅಗಲಕ್ಕಿಂತ ದೊಡ್ಡದಾಗಿರಬಾರದು. ಗಣಪತಿ ವಿಗ್ರಹದ ಹಿಂಭಾಗವು ಬಡತನವನ್ನು ಪ್ರತಿನಿಧಿಸುತ್ತದೆ ಮತ್ತು ಹೊಟ್ಟೆಯು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ . ಆದ್ದರಿಂದ, ಗಣೇಶ ಮೂರ್ತಿಯನ್ನು ಹಿಂಭಾಗ ಕಾಣಿಸದ ರೀತಿಯಲ್ಲಿ ಇರಿಸಿ. ಮನೆಯ ಈಶಾನ್ಯ, ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಗಣೇಶ ಮೂರ್ತಿಯನ್ನು ಸ್ಥಾಪಿಸುವುದು ಶುಭ. ಗಣೇಶನನ್ನು ಪೂಜಿಸುವ ಈ ವಿಧಾನವು ಯಾವಾಗಲೂ ನಿಮಗೆ ಸಂತೋಷ ಮತ್ತು ಅದೃಷ್ಟವನ್ನು ತರುತ್ತದೆ. ಗಣೇಶ ಮೂರ್ತಿಯ ಮುಖ ಉತ್ತರ ದಿಕ್ಕಿಗೆ ಇರಬೇಕು.

ಇದನ್ನೂ ಓದಿ: ವಾಸ್ತುಶಾಸ್ತ್ರದ ಪ್ರಕಾರ ತಪ್ಪಿಯೂ ಈ ದಿಕ್ಕಿನಲ್ಲಿ ಫ್ರಿಡ್ಜ್ ಇಡಲೇಬಾರದು..!

ಇದಲ್ಲದೇಯಾವುದೇ ಮನೆಯಲ್ಲಿ ಹೆಚ್ಚು ಗಣೇಶ ಮೂರ್ತಿಗಳನ್ನು ಇಟ್ಟುಕೊಳ್ಳಬಾರದು. ಇದಲ್ಲದೆ, ಮನೆಯಲ್ಲಿ ಎಂದಿಗೂ ಮುರಿದ ವಿಗ್ರಹ ಅಥವಾ ಹರಿದ ಗಣೇಶನ ಫೋಟೋಗಳನ್ನು ಇಡಬಾರದು ಎಂದು ನಂಬಲಾಗಿದೆ. ಮನೆಗೆ ಸಂಪತ್ತು, ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರಲು ಗಣಪತಿ ವಿಗ್ರಹದಂತೆಯೇ ಗಣೇಶ ಯಂತ್ರವನ್ನು ಸ್ಥಾಪಿಸಬಹುದು. ಗಣಪತಿ ಯಂತ್ರವು ಮನೆಗೆ ದುಷ್ಟ ಶಕ್ತಿ ಬರದಂತೆ ತಡೆಯುತ್ತದೆ.

ಆಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ