Ganga Saptami 2024: ಗಂಗಾ ಸಪ್ತಮಿಯ ದಿನ ಏನು ಮಾಡಬೇಕು, ಮಾಡಬಾರದು ಎಂಬುದನ್ನು ತಿಳಿಯಿರಿ

ಗಂಗಾ ಸಪ್ತಮಿಯ ದಿನ ಗಂಗಾ ನದಿಯಲ್ಲಿ ಸ್ನಾನ ಮಾಡುವುದಕ್ಕೆ, ದಾನ- ಧರ್ಮ ಮಾಡುವುದಕ್ಕೆ ಮತ್ತು ಗಂಗಾ ಮಾತೆಯನ್ನು ಪೂಜಿಸುವುದು ಇತ್ಯಾದಿ ಕಾರ್ಯಗಳಿಗೆ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಉದಯ ತಿಥಿಯನ್ನು ಪರಿಗಣಿಸಿ, ಈ ವರ್ಷ ಗಂಗಾ ಸಪ್ತಮಿಯನ್ನು ಮೇ 14 ರಂದು ಆಚರಿಸಲಾಗುತ್ತದೆ.

Ganga Saptami 2024: ಗಂಗಾ ಸಪ್ತಮಿಯ ದಿನ ಏನು ಮಾಡಬೇಕು, ಮಾಡಬಾರದು ಎಂಬುದನ್ನು ತಿಳಿಯಿರಿ
ಗಂಗಾ ಸಪ್ತಮಿImage Credit source: TV9 Bharatvarsh
Follow us
ಪ್ರೀತಿ ಭಟ್​, ಗುಣವಂತೆ
| Updated By: ನಯನಾ ರಾಜೀವ್

Updated on:May 13, 2024 | 2:42 PM

ಗಂಗಾ ಸಪ್ತಮಿ(Ganga Saptami) ಹಿಂದೂ ಧರ್ಮ(Hindu Religion)ದ ಪ್ರಮುಖ ಹಬ್ಬವಾಗಿದ್ದು, ಇದನ್ನು ಪ್ರತಿವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಆಚರಿಸಲಾಗುತ್ತದೆ. ಈ ದಿನ ಗಂಗೆ ಭೂಮಿಗೆ ಬಂದಳು ಎಂಬ ಧಾರ್ಮಿಕ ನಂಬಿಕೆ ಇದೆ. ಗಂಗಾ ಸಪ್ತಮಿಯ ದಿನ ಗಂಗಾ ನದಿ(Ganga River)ಯಲ್ಲಿ ಸ್ನಾನ ಮಾಡುವುದಕ್ಕೆ, ದಾನ- ಧರ್ಮ ಮಾಡುವುದಕ್ಕೆ ಮತ್ತು ಗಂಗಾ ಮಾತೆಯನ್ನು ಪೂಜಿಸುವುದು ಇತ್ಯಾದಿ ಕಾರ್ಯಗಳಿಗೆ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಉದಯ ತಿಥಿಯನ್ನು ಪರಿಗಣಿಸಿ, ಈ ವರ್ಷ ಗಂಗಾ ಸಪ್ತಮಿಯನ್ನು ಮೇ 14 ರಂದು ಆಚರಿಸಲಾಗುತ್ತದೆ.

ಗಂಗಾ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲದಾಗ ಮನೆಯಲ್ಲಿ ಇರುವ ಗಂಗಾ ಜಲವನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ ಮಾಡಬಹುದು. ಧರ್ಮಗ್ರಂಥಗಳ ಪ್ರಕಾರ, ಗಂಗಾ ಸಪ್ತಮಿಯ ದಿನದಂದು ಸೂರ್ಯ ದೇವರನ್ನು ಪೂಜಿಸುವುದು ಕೂಡ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ದಿನ ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು, ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ ಬಳಿಕ ಪೂಜೆ ಮಾಡಿ. ಇದಲ್ಲದೆ, ಈ ದಿನ ಗಂಗಾ ಮಾತೆಯನ್ನು ಸಹ ಪೂಜಿಸಿ. ಆ ಸಮಯದಲ್ಲಿ ದೇವರಿಗೆ ಹೂವು, ಅಕ್ಷತೆ, ಹಾಲು, ಮೊಸರು, ತುಪ್ಪ, ಜೇನುತುಪ್ಪ ಇತ್ಯಾದಿಗಳನ್ನು ಅರ್ಪಿಸಿ. ಗಂಗಾ ಮಾತೆಗೆ ಆರತಿ ಮಾಡುತ್ತಾ ಮಂತ್ರಗಳನ್ನು ಪಠಿಸಿ.

ಗಂಗಾ ಸಪ್ತಮಿಯಂದು ಈ ಕೆಲಸವನ್ನು ಮಾಡಿ -ಗಂಗಾ ಸಪ್ತಮಿಯ ದಿನ ಉಪವಾಸ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ಹಾಗಾಗಿ ನಿಮ್ಮ ಇಚ್ಛೆಯಂತೆ ಉಪವಾಸ ಆಚರಿಸಬಹುದು. -ಈ ದಿನ ಮನೆಯಲ್ಲಿಯೇ ಕುಳಿತು ಗೀತೆ, ರಾಮಾಯಣ ಅಥವಾ ಇತರ ಧಾರ್ಮಿಕ ಗ್ರಂಥಗಳ ಪಠಣ ಮಾಡಬಹುದು.

ಮತ್ತಷ್ಟು ಓದಿ: Ganga Saptami 2024: ಪದೇ ಪದೇ ಮದುವೆ ವಿಳಂಬ ಆಗುತ್ತಿದ್ಯಾ; ಗಂಗಾ ಸಪ್ತಮಿಯ ದಿನ ಈ ಕ್ರಮ ಅನುಸರಿಸಿ

ಗಂಗಾ ಸಪ್ತಮಿಯಂದು ಏನು ಮಾಡಬಾರದು? -ಈ ದಿನ ಮಾಂಸ ಮತ್ತು ಮದ್ಯ ಸೇವನೆ ಮಾಡುವುದನ್ನು ತಪ್ಪಿಸಿ. -ಈ ದಿನ ಯಾರೊಂದಿಗೂ ಜಗಳವಾಡಬೇಡಿ ಅಥವಾ ಮತ್ತೊಬ್ಬರ ಮನಸ್ಸನ್ನು ನೋಯಿಸಬೇಡಿ. ನೀವು ಶಾಂತವಾಗಿರುವುದು ಉತ್ತಮ. -ಗಂಗಾ ಸಪ್ತಮಿಯ ದಿನದಂದು, ಕಳ್ಳತನ ಅಥವಾ ಜೂಜಾಟವಾಡಬೇಡಿ.

ಗಂಗಾ ಸಪ್ತಮಿಯ ಧಾರ್ಮಿಕ ಮಹತ್ವ ಗಂಗಾ ಸಪ್ತಮಿಯ ದಿನ ಗಂಗಾ ಸ್ನಾನ ಮಾಡುವುದರಿಂದ, ಎಲ್ಲಾ ರೀತಿಯ ಪಾಪಗಳಿಂದ ಪರಿಹಾರ ಸಿಗುತ್ತದೆ. ಗಂಗಾ ದೇವಿಯನ್ನು ಪೂಜಿಸುವುದರಿಂದ ಮತ್ತು ಅಗತ್ಯವಿರುವವರಿಗೆ ದಾನ ಮಾಡುವುದರಿಂದ ಗ್ರಹ ದೋಷಗಳಿಂದ ಪರಿಹಾರ ಸಿಗುತ್ತದೆ ಮತ್ತು ಈ ದಿನದಂದು ಮಾಡಿದ ದಾನವು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಗಂಗಾ ಮಾತೆಯನ್ನು ಪೂಜಿಸುವುದರಿಂದ ಅದೃಷ್ಟ ಮತ್ತು ಸಮೃದ್ಧಿ ಸಿಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:36 pm, Mon, 13 May 24

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ