Garuda Purana: ಯಮಲೋಕಕ್ಕೆ 4 ಬಾಗಿಲು, ಒಂದೊಂದು ದ್ವಾರವೂ ವಿಶಿಷ್ಟ; ಯಾರಿಗೆ ಯಾವುದರಿಂದ ಪ್ರವೇಶ?

ನಂಬಿಕೆಗಳ ಪ್ರಕಾರ ಯಮಲೋಕ ಸುಮಾರು 1 ಲಕ್ಷ ಯೋಜನಗಳ ವಿಸ್ತೀರ್ಣ ಹೊಂದಿದೆ. ಅದನ್ನು ಪ್ರವೇಶಿಸಲು ನಾಲ್ಕು ದ್ವಾರಗಳಿದ್ದು, ಒಂದೊಂದು ದ್ವಾರವೂ ಒಂದೊಂದು ಬಗೆಯ ವೈಶಿಷ್ಟ್ಯತೆಗಳನ್ನು ಹೊಂದಿದೆ. ವ್ಯಕ್ತಿಯ ಕರ್ಮ ಫಲಕ್ಕೆ ಅನುಗುಣವಾಗಿ ಆತನ ಆತ್ಮವನ್ನು ಯಾವ ದ್ವಾರದ ಮೂಲಕ ಒಳಗೆ ಕಳುಹಿಸಬೇಕೆಂದು ನಿರ್ಧರಿಸಲಾಗುತ್ತದೆಯಂತೆ.

Garuda Purana: ಯಮಲೋಕಕ್ಕೆ 4 ಬಾಗಿಲು, ಒಂದೊಂದು ದ್ವಾರವೂ ವಿಶಿಷ್ಟ; ಯಾರಿಗೆ ಯಾವುದರಿಂದ ಪ್ರವೇಶ?
ಗರುಡ ಪುರಾಣ
Follow us
TV9 Web
| Updated By: Skanda

Updated on: Jul 03, 2021 | 1:58 PM

ಈ ಭೂಮಿಯಲ್ಲಿ ಹುಟ್ಟುವ ಯಾವ ಜೀವಿಯೂ ಶಾಶ್ವತವಲ್ಲ. ಹುಟ್ಟಿದ ಮೇಲೆ ಸಾಯಲೇಬೇಕು ಎನ್ನುವುದು ಕಟುವಾಸ್ತವ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹುಟ್ಟು, ಸಾವು ಕೂಡಾ ಧಾರ್ಮಿಕ ನಂಬಿಕೆಗಳೊಂದಿಗೆ ತಳುಕು ಹಾಕಿಕೊಂಡಿರುವುದರಿಂದ ನಮ್ಮ ಯೋಚನೆಗಳು ಬದುಕಿಗೆ ಮಾತ್ರ ಅಂದರೆ ಹುಟ್ಟು, ಸಾವಿನ ನಡುವೆ ಸೀಮಿತವಾಗಿರುವುದಿಲ್ಲ. ಮರುಜನ್ಮ, ಮುಕ್ತಿ, ನರಕ, ಸ್ವರ್ಗ ಹೀಗೆ ಬದುಕಿನ ನಂತರಕ್ಕೂ ಆಲೋಚನೆಗಳು ವಿಸ್ತರಿಸಿಕೊಳ್ಳುತ್ತವೆ. ಸತ್ತ ನಂತರ ಆ ವ್ಯಕ್ತಿಯ ಪಾಪ, ಪುಣ್ಯಗಳನ್ನು ಯಮಧರ್ಮರಾಯ ಲೆಕ್ಕ ಹಾಕುತ್ತಾನೆ. ಅದರ ಆಧಾರದ ಮೇಲೆ ಯಮಲೋಕದಲ್ಲಿ ನಮ್ಮನ್ನು ಸ್ವರ್ಗಕ್ಕೆ ಕಳುಹಿಸಬೇಕೋ, ನರಕಕ್ಕೆ ನೂಕಬೇಕೋ ಎನ್ನುವುದರ ನಿರ್ಧಾರವಾಗುತ್ತದೆ ಎನ್ನುವ ನಂಬಿಕೆ ಇಂದಿಗೂ ನೆಲೆಯೂರಿದೆ. ಈ ವಿಚಾರಗಳ ಬಗ್ಗೆ ತಿಳಿಸಲೆಂದೇ ಇರುವ ಗರುಡ ಪುರಾಣದಲ್ಲಿ ಸತ್ತ ನಂತರ ನಮ್ಮ ಆತ್ಮ ಯಾವೆಲ್ಲಾ ಹಂತಗಳನ್ನು ಎದುರಿಸುತ್ತದೆ ಎಂಬ ಬಗ್ಗೆಯೂ ವಿಶ್ಲೇಷಿಸಲಾಗಿದೆ.

ಅದರಲ್ಲೂ ಬದುಕಿನುದ್ದಕ್ಕೂ ಪಾಪಕೃತ್ಯಗಳನ್ನೇ ಮಾಡಿದವರಿಗೆ, ಉದ್ದೇಶಪೂರ್ವಕವಾಗಿ ಅನ್ಯಾಯ ಎಸಗಿದವರಿಗೆ ಸತ್ತ ಮೇಲೆ ಅಗ್ನಿಪರೀಕ್ಷೆಗಳ ಸರಮಾಲೆಯೇ ಎದುರಾಗುತ್ತದೆ. ವ್ಯಕ್ತಿಯ ಜೀವವನ್ನು ಯಮಲೋಕಕ್ಕೆ ತೆಗೆದುಕೊಂಡು ಹೋಗುವ ಯಮಧರ್ಮರಾಯನ ಧೂತ, ಆ ಆತ್ಮವನ್ನು ಯಾವ ಬಾಗಿಲಿನ ಮೂಲಕ ಒಳಗೆ ಕರೆದುಕೊಂಡು ಹೋಗುತ್ತಾನೆ ಎನ್ನುವುದೂ ಅಷ್ಟೇ ಮುಖ್ಯ.

ನಂಬಿಕೆಗಳ ಪ್ರಕಾರ ಯಮಲೋಕ ಸುಮಾರು 1 ಲಕ್ಷ ಯೋಜನಗಳ ವಿಸ್ತೀರ್ಣ ಹೊಂದಿದೆ. ಅದನ್ನು ಪ್ರವೇಶಿಸಲು ನಾಲ್ಕು ದ್ವಾರಗಳಿದ್ದು, ಒಂದೊಂದು ದ್ವಾರವೂ ಒಂದೊಂದು ಬಗೆಯ ವೈಶಿಷ್ಟ್ಯತೆಗಳನ್ನು ಹೊಂದಿದೆ. ವ್ಯಕ್ತಿಯ ಕರ್ಮ ಫಲಕ್ಕೆ ಅನುಗುಣವಾಗಿ ಆತನ ಆತ್ಮವನ್ನು ಯಾವ ದ್ವಾರದ ಮೂಲಕ ಒಳಗೆ ಕಳುಹಿಸಬೇಕೆಂದು ನಿರ್ಧರಿಸಲಾಗುತ್ತದೆಯಂತೆ. ಪುಣ್ಯವಂತರ ಮಾರ್ಗ ಹಾಗೂ ಪಾಪಾತ್ಮಗಳ ಮಾರ್ಗ ಬೇರೆ ಬೇರೆಯಾದ್ದರಿಂದ ಆ ಸುಂದರ ನಂಬಿಕೆಯ ಕುರಿತು ಇಲ್ಲಿ ವಿವರಿಸಲಾಗಿದೆ.

ಪೂರ್ವ ದ್ವಾರ: ಯಮಲೋಕದ ಪೂರ್ವ ದ್ವಾರ ಅತ್ಯಂತ ಆಕರ್ಷಣೀಯವಾಗಿದೆ ಎಂದು ಹೇಳಲಾಗುತ್ತದೆ. ಈ ದ್ವಾರದ ಮೂಲಕ ಒಳ ಪ್ರವೇಶಿಸುವಾಗ ಸ್ವರ್ಗದ ಅನುಭವ ಆಗುತ್ತದೆಯಂತೆ. ಮುತ್ತು, ರತ್ನ, ವಜ್ರ, ವೈಢೂರ್ಯಗಳಿಂದ ಅಲಂಕೃತವಾದ ಈ ದ್ವಾರದಲ್ಲಿ ಯೋಗಿಗಳು, ಋಷಿ ಮುನಿಗಳು, ಜ್ಞಾನವಂತರು, ಸಾಧ್ವಿಗಳು ಪ್ರವೇಶ ಪಡೆಯುತ್ತಾರೆ. ಹೀಗಾಗಿಯೇ ಈ ಪೂರ್ವ ದ್ವಾರವನ್ನು ಗರುಡ ಪುರಾಣದಲ್ಲಿ ಸ್ವರ್ಗದ ಬಾಗಿಲು ಎಂದು ಕರೆಯಲಾಗುತ್ತದೆ. ಇಲ್ಲಿ ಪ್ರವೇಶ ಪಡೆಯುವವರಿಗೆ ಸ್ವತಃ ಗಂಧರ್ವರು, ಅಪ್ಸರೆಯರು ಸ್ವಾಗತ ಕೋರುತ್ತಾರೆ ಎನ್ನುವ ನಂಬಿಕೆ ಚಾಲ್ತಿಯಲ್ಲಿದೆ.

ಪಶ್ಚಿಮ ದ್ವಾರ: ಪಶ್ಚಿಮ ದ್ವಾರವನ್ನು ವಿಶೇಷ ಹವಳಗಳಿಂದ ಸಿಂಗರಿಸಲಾಗಿರುತ್ತದೆ ಎಂಬ ನಂಬಿಕೆಯಿದೆ. ಯಾರು ಜೀವನದಲ್ಲಿ ಉತ್ತಮ ಕೆಲಸಗಳನ್ನು ಮಾಡಿರುತ್ತಾರೋ ಅವರಿಗೆ ಮಾತ್ರ ಇಲ್ಲಿ ಪ್ರವೇಶ ಸಿಗುತ್ತದೆ. ದಾನ, ಧರ್ಮಗಳನ್ನು ಪಾಲಿಸಿಕೊಂಡು ನೀತಿ, ನಿಯಮಗಳನ್ನು ಅಳವಡಿಸಿಕೊಂಡು ಬದುಕಿದವರಿಗೆ, ತೀರ್ಥಯಾತ್ರೆ ಸಂದರ್ಭದಲ್ಲಿ ಜೀವ ಕಳೆದುಕೊಂಡವರಿಗೆ ಈ ದ್ವಾರದ ಮೂಲಕವೇ ಪ್ರವೇಶ ಸಿಗುತ್ತದೆ ಎನ್ನುವ ಪ್ರತೀತಿ ಇದೆ.

ಉತ್ತರ ದ್ವಾರ: ಸತ್ಯ, ಅಹಿಂಸೆ, ಪರಹಿತ ಮಾರ್ಗದಲ್ಲಿ ನಡೆದವರಿಗೆ, ತಂದೆ, ತಾಯಿಯ ಸೇವೆಯನ್ನು ನಿಷ್ಠೆಯಿಂದ ಮಾಡಿದವರಿಗೆ ಯಮಲೋಕದ ಉತ್ತರ ದ್ವಾರದ ಬಾಗಿಲು ತೆರೆಯುತ್ತದೆ ಎಂದು ನಂಬಲಾಗಿದೆ. ಬಂಗಾರದ ಕಟ್ಟುಗಳೊಂದಿಗೆ ವಿಶೇಷ ರತ್ನಗಳನ್ನು ಸೇರಿಸಿ ಅಲಂಕಾರ ಮಾಡಲಾದ ಈ ಬಾಗಿಲಲ್ಲಿ ಸತ್ಯವಂತರನ್ನು ಸ್ವಾಗತಿಸಲಾಗುತ್ತದೆ.

ದಕ್ಷಿಣ ದ್ವಾರ: ಉಳಿದ ಮೂರು ದ್ವಾರಗಳಿಗೆ ಸಂಪೂರ್ಣ ತದ್ವಿರುದ್ಧವಾದ ಚಿತ್ರಣ ಈ ಪಶ್ಚಿಮ ದ್ವಾರದಲ್ಲಿ ಕಾಣ ಸಿಗುತ್ತದೆ. ದುರಾಸೆ, ಲಾಲಸೆ, ಹಿಂಸೆ ಇತ್ಯಾದಿಗಳನ್ನೇ ಮೈಗೂಡಿಸಿಕೊಂಡು ಬದುಕಿನುದ್ದಕ್ಕೂ ತಪ್ಪನ್ನೇ ಮಾಡುತ್ತಾ ಮೆರೆದವರನ್ನು ಈ ಬಾಗಿಲಿನ ಮೂಲಕ ಒಳಗೆ ತಳ್ಳಲಾಗುತ್ತದೆ. ಕತ್ತಲು, ಗವ್ವೆನ್ನುವ ವಾತಾವರಣ, ವಿಚಿತ್ರ ಶಬ್ದ ಈ ಬಾಗಿಲಿನ ಸುತ್ತಲೂ ಇರಲಿದ್ದು ಕ್ಷುದ್ರ ಶಕ್ತಿಗಳು ಇಲ್ಲಿ ಆವರಿಸಿರುತ್ತವೆ ಎಂಬ ನಂಬಿಕೆಯಿದೆ. ಹಾವು, ಚೇಳು, ವಿಷಜಂತು, ತೋಳ, ಸಿಂಹಗಳಂತಹ ಕ್ರೂರ ಮೃಗಗಳು ಈ ಬಾಗಿಲಿನಲ್ಲಿ ಇರಲಿದ್ದು, ಇದನ್ನು ಗರುಡ ಪುರಾಣದಲ್ಲಿ ನರಕದ ಬಾಗಿಲು ಎಂದೇ ಉಲ್ಲೇಖಿಸಲಾಗಿದೆ. ಇಲ್ಲಿಂದ ಒಳಗೆ ಹೋಗುವುದು ಅತ್ಯಂತ ಯಾತನಾಮಯವೂ, ತ್ರಾಸದಾಯಕವೂ ಆಗಿರಲಿದ್ದು ನೇಮ, ನಿಷ್ಠೆಗಳಿಗೆ ವಿರುದ್ಧವಾಗಿ ನಡೆದುಕೊಂಡವರು ಮರಣಾನಂತರ ಸುಮಾರು ನೂರು ವರ್ಷಗಳ ತನಕ ಇದೇ ಬಾಗಿಲಿನ ಸುತ್ತ ಇರಬೇಕಾಗುತ್ತದೆ ಎನ್ನುವ ನಂಬಿಕೆ ಚಾಲ್ತಿಯಲ್ಲಿದೆ.

(ಇಲ್ಲಿರುವ ಎಲ್ಲಾ ಮಾಹಿತಿಗಳು ನಂಬಿಕೆಯ ಆಧಾರದ ಮೇಲಿದ್ದು, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇರುವುದಿಲ್ಲ)

ಇದನ್ನೂ ಓದಿ: Garuda Purana: ಮರಣಾನಂತರ ಸುಮಾರು 12 ಲಕ್ಷ ಕಿ.ಮೀ ದೂರ ಕ್ರಮಿಸುತ್ತವೆ ಆತ್ಮ; ಎದುರಾಗುವ ಕಷ್ಟಗಳು ಎಂಥವು ಗೊತ್ತಾ? 

ಈ ಗುಣಗಳು ನಿಮ್ಮ ಯಶಸ್ಸನ್ನು ಕಸಿದುಕೊಳ್ಳಬಹುದು; ಗರುಡ ಪುರಾಣದಲ್ಲೂ ಉಲ್ಲೇಖಿಸಿರುವ ಅಂಶಗಳೇನು?

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ