AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Garuda Purana: ಯಾರಾದರೂ ಸುಳ್ಳು ಹೇಳುವುದನ್ನು ನೈಜವಾಗಿ ಪತ್ತೆ ಹಚ್ಚುವುದು ಹೇಗೆ?

ಹೌದು, ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ವ್ಯಕ್ತಿ ನಿಜಕ್ಕೂ ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಅದಕ್ಕೆ ಸತ್ಯ-ಸುಳ್ಳುಗಳನ್ನು ಕಣ್ಣಿನಿಂದಲೇ ಪರಾಮರ್ಷಿಸಬಹುದು. ಕಣ್ಣೋಟ ಬದಲಿಸುವುದು, ಬೇರೆಲ್ಲೋ ಕಣ್ಣು ಹಾಯಿಸವುದು, ಕಣ್ಮುಚ್ಚಿಕೊಳ್ಳುವುದು ಸುಳ್ಳು ಹೇಳುವವರು ಅಂಗಿಕ ಭಾಷೆಯಾದೀತು. ಅಲ್ಲಿ ಇಲ್ಲಿ ಎಲ್ಲೆಲ್ಲೋ ನೋಡುತ್ತಾ ಮಾತನಾಡುತ್ತಿದ್ದಾರೆ ಎಂದರೆ ಸುಳ್ಳು ಹೇಳುತ್ತಿದ್ದಾರೆ ಎಂದು ಅಂದಾಜಿಸಬಹುದು.

Garuda Purana: ಯಾರಾದರೂ ಸುಳ್ಳು ಹೇಳುವುದನ್ನು ನೈಜವಾಗಿ ಪತ್ತೆ ಹಚ್ಚುವುದು ಹೇಗೆ?
Garuda Purana: ಯಾರಾದರೂ ಸುಳ್ಳು ಹೇಳುತ್ತಿರುವುದನ್ನು ನೈಜವಾಗಿ ತಿಳಿಯುವುದು ಹೇಗೆ?
TV9 Web
| Updated By: preethi shettigar|

Updated on: Oct 23, 2021 | 9:01 AM

Share

ಯಾರಾದರೂ ಸುಳ್ಳು ಹೇಳುತ್ತಿದ್ದಾರಾ, ಇಲ್ಲವಾ ಎಂಬುದನ್ನು ಅವರ ಭಾವ ಭಂಗಿಗಳಿಂದ ನೈಜವಾಗಿ ತಿಳಿಯುವುದು ಹೇಗೆ? ಯಾವುದೇ ವ್ಯಕ್ತಿಯ ಅಂಗಿಕ ಭಾಷೆಯ ಮೂಲಕ ಅವರ ಮಾತುಗಳನ್ನು ಅರ್ಥೈಸುವುದು ಹೇಗೆ? ಎಂಬುದನ್ನು ಇಂದು ತಿಳಿಯೋಣ. ಗರುಡ ಪುರಾಣದಲ್ಲಿ ವ್ಯಾವಹಾರಿಕ ಜೀವನಕ್ಕೆ ಅಗತ್ಯವಿರುವ ಮತ್ತು ಪಾರಮಾರ್ಥಿಕ ಜೀವನಕ್ಕೆ ಅಗತ್ಯವಿರುವ ಅನೇಕ ಮಾರ್ಗದರ್ಶಿ ವಿಷಯಗಳನ್ನು ತಿಳಿಯಹೇಳಲಾಗಿದೆ. ಇದನ್ನು ಅನುಸರಿಸಿದರೆ ಎಲ್ಲ ಕಷ್ಟಗಳೂ ನಿವಾರಣೆಯಾಗುತ್ತವೆ. ಯಾವುದೇ ವ್ಯಕ್ತಿಯ ಭಾವ ಭಂಗಿಗಳನ್ನು ಗಮನಿಸಿ ಆ ವ್ಯಕ್ತಿ ಸುಳ್ಳು ಹೇಳುತ್ತಿದ್ದಾರಾ? ಅಥವಾ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿದ್ದಾರಾ ಎಂಬುದನ್ನು ಖಚಿತವಾಗಿ ತಿಳಿಯಬಹುದು.

ಪಕ್ಷಿರಾಜ ಗರುಡ ಭಗವಂತ ವಿಷ್ಣುವಿನ ವಾಹನವಾಗಿದೆ. ಅದೊಮ್ಮೆ ಗರುಡ ಪಕ್ಷಿಯು ವಿಷ್ಣು ಭಗವಾನ್ ಬಳಿ ಜೀವನ ಮತ್ತು ಮರಣಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ನಿರಂತರವಾಗಿ ಕೇಳಿತು. ಅದಕ್ಕೆ ಭಗವಂತ ನಾರಾಯಣ ಸವಿಸ್ತಾರ ಉತ್ತರಗಳನ್ನು ನೀಡುತ್ತಾರೆ. ನಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ವಿಷ್ಣು ದೇವ ಹೇಳಿದ ಅಷ್ಟೂ ಉತ್ತರಗಳು ದಾರಿದೀಪವಾಗಿವೆ. ಯಾರೇ ಆಗಲಿ ಸತ್ಯ ಹೇಳುತ್ತಿದ್ದಾರಾ? ಅಥವಾ ಸುಳ್ಳು ಹೇಳುತ್ತದ್ದಾರಾ ಎಂಬುದನ್ನು ತಿಳಿಯುವುದು ಹೇಗೆ ಎಂಬುದನ್ನು ಗರುಡ ಪುರಾಣದಲ್ಲಿ ಹೀಗೆ ಹೇಳಲಾಗಿದೆ.

ಆಂಗಿಕ ಭಾಷೆ (Body Language) ನೀವು ಯಾರೊಂದಿಗಾದರೂ ಮಾತನಾಡುತ್ತಿದ್ದರೆ ಅವರು ನಿಮ್ಮ ಮಾತಿನ ಮೇಲೆ ಗಂಭೀರತೆ ತೋರುತ್ತಿದ್ದಾರಾ ಅಥವಾ ನಿರ್ಲಕ್ಷ್ಯ ತೋರಿಸುತ್ತಿದ್ದಾರಾ ಎಂಬುದನ್ನು ಅವರ ಆಂಗಿಕ ಭಾಷೆ ಅಂದರೆ Body Language ಮೂಲಕ ತಿಳಿದುಕೊಳ್ಳಿ. ಅವರು ಅನ್ಯಮನಸ್ಕರಾಗಿದ್ದರೆ ನಿಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ. ಮತ್ತು ನಿಮ್ಮೊಂದಿಗೆ ಸುಳ್ಳು ಸುಳ್ಳೇ ಸಂಭಾಷಣೆ ನಡೆಸುತ್ತಿದ್ದಾರೆ ಎಂದರ್ಥ. ಭುಜಗಳನ್ನು ಕೆಳಗೆ ಹಾಕಿ, ಕುಗ್ಗಿದ ಮನಸ್ಸಿನೊಂದಿಗೆ ಮಾತನಾಡುತ್ತಿದ್ದರೆ, ಕೈ ಕಂಪಿಸುತ್ತಿದ್ದರೆ, ಮಾತು ತೊದಲುತ್ತಿದ್ದರೆ ಆ ವ್ಯಕ್ತಿ ಸುಳ್ಳು ಹೇಳುತ್ತಿದ್ದಾರೆ ಎಂದು ನೈಜವಾಗಿ ತಿಳಿಯಬಹುದು.

ದೈಹಿಕ ಗತಿಯಲ್ಲಿ ತೀವ್ರತರ ಬದಲಾವಣೆ ಯಾರೇ ಆಗಲಿ ಸುಳ್ಳು ಪಲುಕುತ್ತಿದಾರೆ ಎಂತಾದರೆ ಶಾರೀಕವಾಗಿ ಅವರಲ್ಲಿ ಸಾಕಷ್ಟು ಬದಲಾವಣೆಗಳನ್ನು ಗುರುತಿಸಬಹುದು. ಗಲಿಬಿಲಿಗೊಂಡು ಆತಂಕದಿಂದ ಮಾತನಾಡತೊಡಗಿದರೆ ಅಲ್ಲಿ ಸುಳ್ಳು ಸೃಷ್ಟಿಯಾಗುತ್ತಿದೆ ಎಂದು ಅರ್ಥೈಸಬಹುದು. ತತ್ತರಿಸುತ್ತಾ ಜಲ್ದೀ ಜಲ್ದೀ ಬಾಯಿಗೆ ಬಂದಂತೆ ಮಾತನಾಡತೊಡಗಿದರೆ, ಅಥವಾ ವೇಗವೇಗವಾಗಿ ಕೆಲಸಗಳನ್ನು ಮಾಡತೊಡಗಿದರೆ ಖಂಡಿತಾ ಅವರು ಸುಳ್ಳುಗಳ ಸರಮಾಲೆ ಪೋಣಿಸುತ್ತಿದ್ದಾರೆ ಎಂದೇ ಅರ್ಥ. ಅವರ ಅಂಗಿಕ ಭಾವನೆಗಳಿಂದಲೇ ಸುಳ್ಳುಗಳ ಪ್ರಮಾಣ ಅರಿಯಬಹುದು.

ಭಾವ ಭಂಗಿಮಗಳು ಬೇರೆ ಬೇರೆಯಾಗುತ್ತವೆ: ಹೌದು ಸುಳ್ಳು ಹೇಳುವವರ ಭಾವ ಬೇರೆ ಅದರ ಭಂಗಿಗಳು ಬೇರೆ ಬೇರೆಯಾಗುತ್ತವೆ. ನಾನಾ ಚೇಷ್ಟೆಗಳನ್ನು ಮಾಡುತ್ತಾ ಮನದಾಸೆಗಳನ್ನು ಮುಂದಿಡುತ್ತಾರೆ. ಸುಳ್ಳು ಹೇಳುವ ಮಂದಿಯ ಭಾವ ಭಂಗಿಗಳು ಬೇರೆ ಬೇರೆಯಾಗುತ್ತವೆ.

ಕೆಲವರು ಮಾತನಾಡುವಾಗ ಕೈ ಕಾಲುಗಳನ್ನು ಅದರಿಸುವುದು ಸಾಮಾನ್ಯ. ಆದರೆ ಕೆಲವರು ಕಾಲುಗಳನ್ನು ಒಂದರ ಮೇಲೊಂದು ಹಾಕಿಕೊಂಡು ಕ್ರಾಸ್​ ಲೆಗ್​ ಮಾಡಿಕೊಂಡು ಕುಳಿತುಬಿಡುತ್ತಾರೆ. ಅದೇ ಇವರು ಸುಳ್ಳುಗಳನ್ನು ಹೇಳುವಾಗ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಗಂಭೀರ ವದನರಾಗಿರುತ್ತಾರೆ. ಅವರಲ್ಲೇನೋ ಗಡಬಡ ಆಗುತ್ತಿದೆ ಎಂದು ಅರ್ಥೈಸಿಕೊಳ್ಳಬೇಕು.

ಕಣ್ಣುಗಳು ಅತ್ಯಂತ ಪ್ರಭಾವೀ… ಹೌದು, ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ವ್ಯಕ್ತಿ ನಿಜಕ್ಕೂ ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಅದಕ್ಕೆ ಸತ್ಯ-ಸುಳ್ಳುಗಳನ್ನು ಕಣ್ಣಿನಿಂದಲೇ ಪರಾಮರ್ಷಿಸಬಹುದು. ಕಣ್ಣೋಟ ಬದಲಿಸುವುದು, ಬೇರೆಲ್ಲೋ ಕಣ್ಣು ಹಾಯಿಸವುದು, ಕಣ್ಮುಚ್ಚಿಕೊಳ್ಳುವುದು ಸುಳ್ಳು ಹೇಳುವವರು ಅಂಗಿಕ ಭಾಷೆಯಾದೀತು. ಅಲ್ಲಿ ಇಲ್ಲಿ ಎಲ್ಲೆಲ್ಲೋ ನೋಡುತ್ತಾ ಮಾತನಾಡುತ್ತಿದ್ದಾರೆ ಎಂದರೆ ಸುಳ್ಳು ಹೇಳುತ್ತಿದ್ದಾರೆ ಎಂದು ಅಂದಾಜಿಸಬಹುದು.

(garuda purana tells us as any person lying or not how to identify it by body language)

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ