
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಜಾತಕವನ್ನು ಆಧಾರಿಸಿ ಆತನ ಜೀವನದ ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನು ಹೇಳಬಹುದು. ಅದೇ ರೀತಿ ನಿಮ್ಮ ಜೀವನದಲ್ಲಿ ಕೆಲವೊಂದು ಘಟನೆಗಳು ಪದೇ ಪದೇ ಮರುಳಿಸುತ್ತಿದ್ದರೆ, ಆದ್ದರಿಂದಲೂ ಕೂಡ ಶುಭ ಮತ್ತು ಅಶುಭ ಘಟನೆಗಳ ಮುನ್ಸೂಚನೆಯನ್ನು ತಿಳಿಯಬಹುದು ಎಂದು ಜ್ಯೋತಿಷಿಗಳು ಸೂಚಿಸುತ್ತಾರೆ. ಆದ್ದರಿಂದ ಒಳ್ಳೆಯ ದಿನ ಪ್ರಾರಂಭವಾಗುವ ಮುನ್ನ ಯಾವ ರೀತಿಯ ಲಕ್ಷಣಗಳು ಕಂಡು ಬರುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಯಾವತ್ತೂ ಬಾರದೇ ಇರುವ ಹಸುಗಳು ಇತ್ತೀಚಿನ ದಿನಗಳಲ್ಲಿ ನಿಮ್ಮ ಮನೆಗೆ ಹಸುಗಳು ಪದೇ ಪದೇ ಬರುತ್ತಿದ್ದರೆ, ಅದು ಶುಭ ಕಾಲದ ಸಂಕೇತ. ಅಂದರೆ ದೇವರುಗಳ ಆಶೀರ್ವಾದ ನಿಮ್ಮ ಮೇಲಿದೆ ಮತ್ತು ನಿಮಗೆ ಶುಭ ಕಾಲಗಳು ಪ್ರಾರಂಭವಾಗಲಿವೆ ಎಂದರ್ಥವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ.
ಜ್ಯೋತಿಷ್ಯದ ಪ್ರಕಾರ, ನೀವು ಕನಸಿನಲ್ಲಿ ಮಂತ್ರ, ಗಂಟೆ ಅಥವಾ ಶಂಖವನ್ನು ಕೇಳಿದರೆ, ಅದನ್ನು ಶುಭ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಕನಸಿನಲ್ಲಿ ಶಂಖ ಅಥವಾ ಗಂಟೆಯನ್ನು ಕೇಳುವುದು ಒಳ್ಳೆಯ ದಿನಗಳ ಆರಂಭವನ್ನು ಸೂಚಿಸುತ್ತದೆ.
ನಿಮ್ಮ ಅಂಗೈ ಪದೇ ಪದೇ ತುರಿಕೆ ಕಂಡುಬಂದರೆ, ಅದು ಮುಂಬರುವ ಒಳ್ಳೆಯ ದಿನಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಂಗೈ ತುರಿಕೆ ನಿಮ್ಮ ಕೆಟ್ಟ ಸಮಯಗಳು ಕೊನೆಗೊಳ್ಳಲಿವೆ ಎಂದು ಸೂಚಿಸುತ್ತದೆ.
ಇದನ್ನೂ ಓದಿ: ಸಂಖ್ಯೆ 7ರ ಹಿಂದಿನ ರಹಸ್ಯಗಳು; ಇದು ಶುಭವೋ, ಅಶುಭವೋ?
ಸನಾತನ ಧರ್ಮದ ಪ್ರಕಾರ, ಕಪ್ಪು ಇರುವೆಗಳ ಹಿಂಡು ಇದ್ದಕ್ಕಿದ್ದಂತೆ ನಿಮ್ಮ ಮನೆಗೆ ಪ್ರವೇಶಿಸಿದರೆ, ಅದು ಲಕ್ಷ್ಮಿ ದೇವಿಯ ಆಶೀರ್ವಾದದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಕಪ್ಪು ಇರುವೆಗಳ ಹಠಾತ್ ಆಗಮನವು ನಿಮಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ ಎಂದು ಸೂಚಿಸುತ್ತದೆ.
ಜ್ಯೋತಿಷ್ಯದ ಪ್ರಕಾರ, ನೀವು ಕನಸಿನಲ್ಲಿ ಪದೇ ಪದೇ ಪೊರಕೆ ಕಾಣಿಸಿಕೊಂಡರೆ, ಅದು ಮುಂಬರುವ ಒಳ್ಳೆಯ ದಿನಗಳ ಸೂಚನೆಯಾಗಿರಬಹುದು. ಬೆಳಿಗ್ಗೆ ಅಥವಾ ಮನೆಯಿಂದ ಹೊರಡುವಾಗ ಪೊರಕೆಯನ್ನು ನೋಡುವುದು ಲಕ್ಷ್ಮಿ ದೇವಿಯ ಆಶೀರ್ವಾದದ ಸಂಕೇತವಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:16 am, Thu, 19 June 25