Griha Pravesh Puja: ಹೊಸ ಮನೆಗೆ ಹೋಗುವ ಮೊದಲು ಗೃಹಪ್ರವೇಶ ಮಾಡುವುದು ಏಕೆ? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 23, 2024 | 2:26 PM

ಹಿಂದೂ ಧರ್ಮದಲ್ಲಿ ಹೊಸ ಮನೆಯನ್ನು ನಿರ್ಮಿಸಿದ ನಂತರ, ಅದನ್ನು ಪ್ರವೇಶಿಸುವ ಮೊದಲು ಗೃಹ ಪ್ರವೇಶ ಮಾಡುವ ಸಂಪ್ರದಾಯವಿದೆ. ಅಷ್ಟಕ್ಕೂ, ಗೃಹ ಪ್ರವೇಶವನ್ನು ಏಕೆ ಮಾಡಲಾಗುತ್ತದೆ? ಇದರ ಹಿಂದಿನ ಧಾರ್ಮಿಕ ಕಾರಣದ ಬಗ್ಗೆ ನಿಮಗೆ ತಿಳಿದಿದೆಯೇ? ಜ್ಯೋತಿಷಿ ಅರುಣೇಶ್ ಕುಮಾರ್ ಶರ್ಮಾ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.

Griha Pravesh Puja: ಹೊಸ ಮನೆಗೆ ಹೋಗುವ ಮೊದಲು ಗೃಹಪ್ರವೇಶ ಮಾಡುವುದು ಏಕೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ನಿಮ್ಮ ಹೊಸ ಮನೆಗೆ ಕಾಲಿಟ್ಟಾಗ, ಅದೃಷ್ಟ ಮತ್ತು ಸಮೃದ್ಧಿಯನ್ನು ತರಲು ಗೃಹ ಪ್ರವೇಶ ನಡೆಸಲಾಗುತ್ತದೆ, ಇದು ಹಿಂದೂ ಧರ್ಮದಲ್ಲಿ ಕಂಡು ಬರುವ ಪ್ರಮುಖ ಆಚರಣೆಯಾಗಿದೆ. ಸುತ್ತಮುತ್ತಲಿನ ಪರಿಸರವನ್ನು ಶುದ್ಧೀಕರಿಸಲು ಮತ್ತು ಮನೆಯಲ್ಲಿರುವ ಜನರನ್ನು ನಕಾರಾತ್ಮಕ ಶಕ್ತಿಯಿಂದ ರಕ್ಷಿಸಲು ಈ ಆಚರಣೆ ರೂಢಿಯಲ್ಲಿದೆ. ಹಾಗಾಗಿ ಮನೆ ಪ್ರವೇಶಕ್ಕಾಗಿಯೇ ಶುಭ ದಿನಾಂಕ ಮತ್ತು ಸಮಯವನ್ನು ನಿರ್ಧರಿಸಿ ಅದರ ಅನುಸಾರವಾಗಿ ಪೂಜೆಯನ್ನು ಮಾಡಿಸಲಾಗುತ್ತದೆ. ಸಾಂಪ್ರದಾಯಿಕವಾಗಿ, ಹೊಸ ಮನೆಗೆ ಸ್ಥಳಾಂತರಗೊಳ್ಳುವುದರ ಸಂಕೇತವಾಗಿ ಗೃಹ ಪ್ರವೇಶ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಆದರೆ ಮನೆ ಪ್ರವೇಶ ಮಾಡುವಾಗ ಹಿಂದೂ ಧರ್ಮದಲ್ಲಿ ಕೆಲವು ನಿಯಮಗಳನ್ನು ಅನುಸರಿಸಲಾಗುತ್ತದೆ. ಇದನ್ನು ತಪ್ಪದೆಯೇ ಪಾಲಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ, ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಬಹುದಾಗಿದೆ. ಅಷ್ಟಕ್ಕೂ, ಗೃಹ ಪ್ರವೇಶವನ್ನು ಏಕೆ ಮಾಡಲಾಗುತ್ತದೆ? ಅದರ ಧಾರ್ಮಿಕ ನಂಬಿಕೆ ಏನು? ಈ ಬಗ್ಗೆ ಜ್ಯೋತಿಷಿ ಅರುಣೇಶ್ ಕುಮಾರ್ ಶರ್ಮಾ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಈ ವಿಷಯದ ವಿವರವಾದ ಮಾಹಿತಿ ಇಲ್ಲಿದೆ.

ಗೃಹ ಪ್ರವೇಶವನ್ನು ಏಕೆ ಮಾಡಲಾಗುತ್ತದೆ?

ಮುಖ್ಯವಾಗಿ ಗೃಹ ಪ್ರವೇಶದ ಪೂಜೆಯು ದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ಪ್ರಕ್ರಿಯೆ ಯಾಗಿದೆ. ಜನರು ಹೊಸ ಮನೆಯನ್ನು ಖರೀದಿಸುವಾಗ ಅಥವಾ ಮನೆಯನ್ನು ನಿರ್ಮಿಸಿದ ನಂತರ, ಅದನ್ನು ಪ್ರವೇಶಿಸುವ ಮೊದಲು ಮನೆಯನ್ನು ಪೂಜಿಸುವುದು ಅವಶ್ಯಕ. ಹಿಂದೂಗಳಲ್ಲಿ, ಒಬ್ಬ ವ್ಯಕ್ತಿಯು ಹೊಸ ಮನೆಯನ್ನು ನಿರ್ಮಿಸಿದಾಗ ಅಥವಾ ಖರೀದಿಸಿದಾಗ, ಅದರಲ್ಲಿ ವಾಸಿಸುವ ಮೊದಲು ದೇವರನ್ನು ಮನೆಗೆ ಆಹ್ವಾನಿಸಲಾಗುತ್ತದೆ. ಒಂದು ರೀತಿಯಲ್ಲಿ ದೇವರಿಗೆ ಆಮಂತ್ರಣವನ್ನು ಕಳುಹಿಸಲು ಗೃಹ ಪ್ರವೇಶ ಪೂಜೆಯನ್ನು ನಡೆಸಲಾಗುತ್ತದೆ. ಈ ದಿನ ನಡೆಸುವ ಪೂಜೆಯಲ್ಲಿ ಹವನ, ಸಾಮಾನ್ಯ ಪೂಜೆ, ಕಲಶ ಸ್ಥಾಪನೆ, ಸುಂದರಕಾಂಡ ಇತ್ಯಾದಿಗಳನ್ನು ಮಾಡಬಹುದು.

ಗೃಹ ಪ್ರವೇಶವು ಹಳೆಯ ಮನೆಯಲ್ಲಿಯೂ ನಡೆಯುತ್ತದೆ;

ಗೃಹ ಪ್ರವೇಶ ಪೂಜೆಯನ್ನು ಹೊಸ ಮನೆಯಲ್ಲಿ ಮಾತ್ರವಲ್ಲದೆ ಹಳೆಯ ಮನೆಯಲ್ಲಿಯೂ ನಡೆಸಲಾಗುತ್ತದೆ. ಒಬ್ಬ ವ್ಯಕ್ತಿ ಅನೇಕ ಬಾರಿ ತನ್ನ ಹಳೆಯ ಮನೆಯನ್ನು ನವೀಕರಿಸಿದ ಸಂದರ್ಭದಲ್ಲಿ ಗೃಹ ಪ್ರವೇಶದ ಪೂಜೆಯನ್ನು ನಡೆಸಬಹುದು. ಕೆಲವರು ಆ ಸಮಯದಲ್ಲಿ ಕಥೆ, ಗಣಹೋಮ ಮಾಡಿಸುತ್ತಾರೆ. ದೊಡ್ಡ ಪ್ರಮಾಣದಲ್ಲಿ ಮನೆಯನ್ನು ನವೀಕರಿಸಿದ್ದಲ್ಲಿ ಗೃಹ ಪ್ರವೇಶ ಮಾಡುವುದು ಉತ್ತಮ, ಅಥವಾ ಹಳೆಯ ಮನೆಯನ್ನು ಖರೀದಿಸಿ ಅದರಲ್ಲಿ ಆ ವ್ಯಕ್ತಿ ವಾಸಿಸುವ ಮೊದಲು ಅಂತಹ ಪರಿಸ್ಥಿತಿಯಲ್ಲಿ ಅಂದರೆ ಆ ಮನೆಯಲ್ಲಿಯೇ ಉಳಿದುಕೊಳ್ಳುವ ಮೊದಲು ಗೃಹ ಪ್ರವೇಶವನ್ನು ಮಾಡುವುದು ಬಹಳ ಮುಖ್ಯ. ಹಿಂದೆ ಆ ಮನೆ ಯಾರದ್ದೇ ಆಗಿರಲಿ ನಿಮ್ಮದಾದ ಬಳಿಕ ಅದಕ್ಕೆ ವಿಧಿ ವಿಧಾನಗಳ ಮೂಲಕ ಪ್ರವೇಶದ ಪೂಜೆ ನಡೆಯಬೇಕು. ಇದು ಮನೆಗೂ ಹಾಗೂ ಕುಟುಂಬಕ್ಕೂ ಒಳ್ಳೆಯದು.

ಇದನ್ನೂ ಓದಿ: ಈ ಮಂತ್ರ ಪಠಿಸಿದರೆ ಮಕ್ಕಳು ಅಧ್ಯಯನದಲ್ಲಿ ಏಕಾಗ್ರತೆ ಪಡೆಯುವುದು ನಿಶ್ಚಿತ

ಹೊಸ ಮನೆಯಲ್ಲಿ ಗೃಹ ಪ್ರವೇಶವು ಅವಶ್ಯಕ ಏಕೆ?

ಗೃಹ ಪ್ರವೇಶ ಮಾಡುವಾಗ ನಡೆಸುವ ಪೂಜೆಯಲ್ಲಿ ವಾಸ್ತು ಶಾಂತಿ ಹವನವನ್ನು ಸಹ ನಡೆಸಲಾಗುತ್ತದೆ. ಈ ಹವನವನ್ನು ಮಾಡುವ ಮೂಲಕ, ಗ್ರಹಗಳ ಹಾನಿಕಾರಕ ಮತ್ತು ನಕಾರಾತ್ಮಕ ಶಕ್ತಿಯಿಂದ ಮುಕ್ತಿಗೊಳಿಸಿ ಆ ಮೂಲಕ ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಮನೆ ಖರೀದಿಸಿದ ಬಳಿಕ ಕುಟುಂಬದ ಎಲ್ಲರೂ ಆ ಹೊಸದಾದ ಮನೆಗೆ ಹೋಗುವ ಮೊದಲು ಮನೆಗೆ ಪೂಜೆ ಮಾಡಲಾಗುತ್ತದೆ. ಈ ಅವಧಿಯಲ್ಲಿ, ಗಣೇಶ, ವಿಷ್ಣು ಮತ್ತು ಲಕ್ಷ್ಮೀ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ