Guru Nanak Jayanti 2021: ಗುರು ನಾನಕ್​ ಜಯಂತಿ ಯಾವಾಗ? ಈ ಪವಿತ್ರ ದಿನದಂದು ಸಿಖ್ ಧರ್ಮದ ಆದಿ ಗುರು ಬಗ್ಗೆ ತಿಳಿಯೋಣ

| Updated By: ಸಾಧು ಶ್ರೀನಾಥ್​

Updated on: Nov 16, 2021 | 7:21 AM

ಗುರು ನಾನಕ್ ದೇವ್​ ಅವರು ಮೂರ್ತಿ ಪೂಜೆಯನ್ನು ನಿರರ್ಥಕ ಎಂದು ಬೋಧಿಸಿದರು. ಗುರು ನಾನಕ್ ದೇವ್​ ರೂಢಿಗತ ಪದ್ಧತಿಗಳು ಮತ್ತು ಕುಸಂಸ್ಕಾರಗಳನ್ನು ಕಟುವಾಗಿ ವಿರೋಧಿಸಿದರು. ಸಿಖ್​ ಧರ್ಮಕ್ಕೆ ಗುರು ನಾನಕ್ ದೇವ್​ ಅವರ ಇಂತಹ ಮಹತ್ವದ ಬೋಧನೆಗಳೇ ಅಡಿಪಾಯ ಹಾಕಿವೆ.

Guru Nanak Jayanti 2021: ಗುರು ನಾನಕ್​ ಜಯಂತಿ ಯಾವಾಗ? ಈ ಪವಿತ್ರ ದಿನದಂದು ಸಿಖ್ ಧರ್ಮದ ಆದಿ ಗುರು ಬಗ್ಗೆ ತಿಳಿಯೋಣ
ಗುರು ನಾನಕ್​ ಜಯಂತಿ ಯಾವಾಗ? ಈ ಪವಿತ್ರ ದಿನದಂದು ಸಿಖ್ ಧರ್ಮದ ಆದಿ ಗುರು ಬಗ್ಗೆ ತಿಳಿಯೋಣ
Follow us on

ಸಿಖ್​ ಧರ್ಮದ ಪ್ರಮುಖ ಗುರು ಗುರು ನಾನಕ್​ ದೇವ್. ಧರ್ಮ ಸಂಸ್ಥಾಪನೆಗಾಗಿ ಅವರ ಕೊಡುಗೆ ಅಪಾರವಾಗಿದೆ. ಗುರು ನಾನಕ್​ ಜಯಂತಿಯಂದು (Guru Nanak Jayanti 2021) ಸಿಖ್ಖರು ಬೆಳಗ್ಗೆಯೇ ಪ್ರಭಾತ್​ ಪೇರಿ ನಡೆಸುತ್ತಾರೆ. ಗುರುದ್ವಾರಕ್ಕೆ ತೆರಳಿ ಶಿರ ಬಾಗಿ ನಮಸ್ಕರಿಸುತ್ತಾರೆ. ಅಲ್ಲಿ ಗುರು ನಾನಕ್​ ದೇವರ ಜಪ, ಭಜನೆ ಮಾಡುತ್ತಾರೆ. ಕೀರ್ತನೆಗಳನ್ನು ಹಾಡುತ್ತಾರೆ. ಸಿಖ್ಖರಿಗೆ ಗುರು ನಾನಕ್​ ಜಯಂತಿ ಅತ್ಯಂತ ಮಹತ್ವದ ಹಬ್ಬವಾಗಿದೆ. ಈ ವರ್ಷ ನವೆಂಬರ್​ 19ರಂದು (ಇದೇ ಶುಕ್ರವಾರ) ಭಕ್ತ ಭಾವದಿಂದ ಆಚರಿಸುತ್ತಾರೆ. ಸಿಖ್ಖರು ಅತ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬ ಇದಾಗಿದೆ. ಕಾರ್ತಿಕ ಮಾಸದಲ್ಲಿ ಅಮಾವಾಸ್ಯೆಯ ದಿನ ದೀಪಾವಳಿ ಆಚರಿಸುತ್ತಾರೆ. ಸರಿಯಾಗಿ 15 ದಿನಕ್ಕೆ ಅಂದರೆ ಕಾರ್ತಿಕ ಹುಣ್ಣಿಮೆಯ ದಿನ (Kartik Purnima) ಸಿಖ್ಖರು ಗುರು ನಾನಕ್​ ಜಯಂತಿಯನ್ನು ಆಚರಿಸುತ್ತಾರೆ. ದೀಪಾವಳಿಯಷ್ಟೇ ಸಂಭ್ರಮದಿಂದ ಈ ಹಬ್ಬ ಆಚರಿಸುತ್ತಾರೆ. ತಿಂಗಳು ಮುಂಚೆಯೇ ಸಿಖ್ಖರು ಗುರು ನಾನಕ್​ ಜಯಂತಿ ಆಚರಣೆಗೆ ಸಿದ್ಧತೆ ನಡೆಸುತ್ತಾರೆ.

ಸಿಖ್ಖರು ಗುರು ನಾನಕ್​ ಜಯಂತಿಯಯನ್ನು ಬೆಳಕಿನ ಹಬ್ಬ ಎಂದೂ ಕರೆಯುತ್ತಾರೆ. ಅಂದು ಮನೆಯ ಮುಂದೆ ದೀಪಗಳನ್ನು ಹಚ್ಚುತ್ತಾರೆ. ಗುರು ನಾನಕ್ ಹುಟ್ಟಿದ್ದು ಇದೇ ದಿನ.

ಗುರು ನಾನಕ್ ಜಯಂತಿಯ ಇತಿಹಾಸ
ಸಿಖ್​ ಧರ್ಮದ ಮೊದಲು ಮತ್ತು ಪ್ರಮುಖ ಗುರುವೇ ಗುರು ನಾನಕ್. ಗುರು ನಾನಕ್ ದೇವ್​ ಜನ್ಮವೆತ್ತಿದ್ದು 1469ರಲ್ಲಿ. ಕಾರ್ತಿಕ ಹುಣ್ಣಿಮೆಯ ದಿನ ಪಂಜಾಬ್​​ನಲ್ಲಿ ಇಂದಿನ ಪಾಕಿಸ್ತಾನದಲ್ಲಿ ರಾವಿ ನದಿ ಕಿನಾರೆಯಲ್ಲಿ ಇರುವ ತಳವಂಡಿ ಎಂಬ ಗ್ರಾಮದಲ್ಲಿ ಗುರು ನಾನಕ್ ಹುಟ್ಟಿದ್ದು.

ಗುರುದ್ವಾರ ನನಕಾನ ಸಾಹಿಬ್ (Gurdwara Nankana Sahib) ದರ್ಶನಕ್ಕೆ ದೇಶ ವಿದೇಶಗಳಿಂದ ಅನೇಕ ಜನರು ಪಾಕಿಸ್ತಾನಕ್ಕೆ ತೆರಳುತ್ತಾರೆ. ಸಿಖ್​ ಸಾಮ್ರಾಜ್ಯದ ರಾಜ ರಣಜೀತ್​ ಸಿಂಹ (Maharaja Ranjit Singh) gಉರುದ್ವಾರದ ಬಳಿ ಈ ನನಕಾನ ಸಾಹಿಬ್ ಅನ್ನು ರಚಿಸಿದರು.

ಗುರು ನಾನಕ್ ಯಾರು?
ಗುರು ನಾನಕ್ ದೇವ್​ ಅವರು ಮೂರ್ತಿ ಪೂಜೆಯನ್ನು ನಿರರ್ಥಕ ಎಂದು ಬೋಧಿಸಿದರು. ಗುರು ನಾನಕ್ ದೇವ್​ ರೂಢಿಗತ ಪದ್ಧತಿಗಳು ಮತ್ತು ಕುಸಂಸ್ಕಾರಗಳನ್ನು ಕಟುವಾಗಿ ವಿರೋಧಿಸಿದರು. ಸಿಖ್​ ಧರ್ಮಕ್ಕೆ ಗುರು ನಾನಕ್ ದೇವ್​ ಅವರ ಇಂತಹ ಮಹತ್ವದ ಬೋಧನೆಗಳೇ ಅಡಿಪಾಯ ಹಾಕಿವೆ. ಹಾಗಾಗಿಯೇ ಗುರು ನಾನಕ್​ ಅವರನ್ನು ಸಿಖ್​ ಧರ್ಮದ ಆದಿ ಗುರು ಎಂದು ಕರೆಯುತ್ತಾರೆ.

ಲಡಾಖ್ ಮತ್ತು ಟಿಬೆಟ್ ಪ್ರಾಂತ್ಯಗಳಲ್ಲಿ ಗುರು ನಾನಕ್ ಅವರನ್ನು ನಾನಕ್​ ಲಾಮಾ ಎಂದೂ ಸಂಬೋಧಿಸುತ್ತಾರೆ. ಗುರು ನಾನಕ್ ಅವರು 1539 ರ ಡಿಸೆಂಬರ್ 22 ರಂದು ಕೊನೆಯುಸಿರೆಳೆದರು. ಗುರು ನಾನಕ್ ಅವರು ಸಾವಿಗೂ ಮುನ್ನ ತಮ್ಮ ಶಿಷ್ಯ ನಹನಾ ಭಾಯ್​ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದ್ದರು. ಮುಂದೆ ಅವರು ಗುರು ಅಂಗದ್​ ದೇವ್​ ಹೆಸರಿನಲ್ಲಿ ಪ್ರಚಲಿತರಾದರು. ಅಂಗದ್​ ದೇವ್​ ಸಹ ತಮ್ಮ ಗುರುವಿನ ಹಾಗೆ ತಮ್ಮ ಜೀವನವನ್ನು ಮಾನವ ಕಲ್ಯಾಣದಲ್ಲಿ ತೊಡಗಿಸಿಕೊಂಡರು.

(guru nanak jayanti in kannada guru nanak jayanti date and history of guru nanak jayanti)