Guru Purnima 2025: ಇಂದು ಗುರು ಪೂರ್ಣಿಮಾ, ಈ ದಿನ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

ವೈದಿಕ ಪಂಚಾಂಗದ ಪ್ರಕಾರ, ಜುಲೈ 10 ರಂದು ಅಂದರೆ ನಾಳೆ ಗುರು ಪೂರ್ಣಿಮೆ ಹಬ್ಬ. ಈ ದಿನ ಗುರು-ಶಿಷ್ಯರ ಬಂಧಕ್ಕೆ ಸಂಕೇತ. ಇದರ ಜೊತೆಗೆ, ಈ ದಿನ ಲಕ್ಷ್ಮಿ ದೇವಿಯ ಪೂಜೆಗೆ ಸಹ ವಿಶೇಷವಾಗಿದೆ. ಆದ್ದರಿಂದ ಈ ಶುಭ ದಿನದಂದು ಯಾವ ಕೆಲಸಗಳನ್ನು ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಈ ದಿನ ಶುಭ ಕಾರ್ಯಗಳನ್ನು ಮಾಡಿ, ನಕಾರಾತ್ಮಕತೆಯಿಂದ ದೂರವಿರಿ.

Guru Purnima 2025: ಇಂದು ಗುರು ಪೂರ್ಣಿಮಾ, ಈ ದಿನ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
Guru Purnima
Edited By:

Updated on: Jul 10, 2025 | 9:15 AM

ವೈದಿಕ ಕ್ಯಾಲೆಂಡರ್ ಪ್ರಕಾರ, ಆಷಾಢ ಮಾಸದ ಹುಣ್ಣಿಮೆಯಂದು ಅಂದರೆ ಈ ವರ್ಷ ಜುಲೈ 10 ರಂದು ಗುರು ಪೂರ್ಣಿಮೆ ಹಬ್ಬ ಬಂದಿದೆ. ಈ ಹಬ್ಬವು ಗುರು ಮತ್ತು ಶಿಷ್ಯರ ನಡುವಿನ ಪವಿತ್ರ ಸಂಬಂಧದ ಸಂಕೇತವಾಗಿದೆ. ಮಹರ್ಷಿ ವೇದವ್ಯಾಸರು ಆಷಾಢ ಮಾಸದ ಹುಣ್ಣಿಮೆಯಂದು ಜನಿಸಿದ್ದರಿಂದ ಆ ದಿನವನ್ನು ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮಾ ಎಂದು ಪ್ರತೀ ವರ್ಷ ಆಚರಿಸಲಾಗುತ್ತದೆ. ಇದರ ಜೊತೆಗೆ, ಈ ದಿನ ಲಕ್ಷ್ಮಿ ದೇವಿಯ ಪೂಜೆಗೆ ಸಹ ವಿಶೇಷವಾಗಿದೆ. ಆದ್ದರಿಂದ ಈ ಶುಭ ದಿನದಂದು ಯಾವ ಕೆಲಸಗಳನ್ನು ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕೂದಲು ಮತ್ತು ಉಗುರು ಕತ್ತರಿಸಬೇಡಿ:

ಹುಣ್ಣಿಮೆಯ ದಿನದಂದು ಕೂದಲು ಮತ್ತು ಉಗುರುಗಳನ್ನು ಕತ್ತರಿಸಬಾರದು ಮತ್ತು ಈ ದಿನ ಕಪ್ಪು ಬಟ್ಟೆ ಅಥವಾ ಹರಿದ ಬಟ್ಟೆಗಳನ್ನು ಧರಿಸಬಾರದು. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಅಲ್ಲದೆ, ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗುತ್ತೀರಿ ಎಂದು ಹೇಳಲಾಗುತ್ತದೆ.

ಮಾಂಸಹಾರ ಸೇವಿಸಬೇಡಿ:

ಗುರು ಪೂರ್ಣಿಮೆಯ ದಿನದಂದು ಮಾಂಸಾಹಾರ, ಮಾಂಸ, ಮದ್ಯ, ಈರುಳ್ಳಿ, ಬೆಳ್ಳುಳ್ಳಿ ಇತ್ಯಾದಿಗಳನ್ನು ಸೇವಿಸಬಾರದು. ಈ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ. ಪೂರ್ಣಿಮೆಯಂದು ಮಾತ್ರವಲ್ಲದೆ ಇತರ ದಿನಗಳಲ್ಲಿಯೂ ಯಾವುದೇ ರೀತಿಯ ಹಿಂಸೆಯಿಂದ ದೂರವಿರಿ.

ಸುಳ್ಳು ಹೇಳಬೇಡಿ:

ಆಷಾಢ ಮಾಸದ ಹುಣ್ಣಿಮೆಯಂದು ಜಗಳವಾಡುವುದು, ಸುಳ್ಳು ಹೇಳುವುದು ಅಥವಾ ಯಾರಿಗಾದರೂ ಹಾನಿ ಮಾಡುವುದು ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ, ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಮತ್ತು ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಸಿಕ್ಕಿ ಹಾಕಿಕೊಳ್ಳುವ ಪ್ರಸಂಗಗಳಿಗೆ ಕಾರಣವಾಗಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:02 pm, Wed, 9 July 25