Daily Devotional: ಗೃಹಪ್ರವೇಶದ ಸಮಯದಲ್ಲಿ ದೇವರ ಹಳೆಯ ಹರಿದ ಫೋಟೋ ಮತ್ತು ವಿಗ್ರಹಗಳನ್ನು ಏನು ಮಾಡಬೇಕು?
ಹೊಸ ಮನೆಗೆ ಗೃಹಪ್ರವೇಶದ ಸಮಯದಲ್ಲಿ ದೇವರ ಹಳೆಯ ಫೋಟೋ ಮತ್ತು ವಿಗ್ರಹಗಳನ್ನು ಏನು ಮಾಡಬೇಕು ಎಂಬುದರ ಬಗ್ಗೆ ಡಾ. ಬಸವರಾಜ್ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ ನೀರಿಗೆ ಬಿಸಾಕುವುದು ಅಥವಾ ಅಶ್ವತ್ಥ ಕಟ್ಟೆಯಲ್ಲಿ ಇಡುವುದು ತಪ್ಪು. ಆದ್ದರಿಂದ ಕನಿಷ್ಠ ಆರು ತಿಂಗಳ ಕಾಲ ದೇವರ ಮನೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ. ನಂತರ ವಿಪ್ರರಿಗೆ ದಾನ ಮಾಡುವುದು ಸೂಕ್ತ.

ಹೊಸ ಮನೆಯ ಗೃಹಪ್ರವೇಶದ ಸಮಯವು ಸಂತೋಷದ ಸಮಯ. ಆದರೆ, ಹಳೆಯ ಮನೆಯಿಂದ ಹೊಸ ಮನೆಗೆ ವಸ್ತುಗಳನ್ನು ಸ್ಥಳಾಂತರಿಸುವಾಗ, ಹಳೆಯ ಫೋಟೋಗಳು ಮತ್ತು ವಿಗ್ರಹಗಳನ್ನು ಹೇಗೆ ನಿರ್ವಹಿಸಬೇಕು ಎಂಬುದು ಅನೇಕರಲ್ಲಿ ಪ್ರಮುಖ ಪ್ರಶ್ನೆಯಾಗಿದೆ. ಕೆಲವರು ಈ ವಸ್ತುಗಳನ್ನು ಅಶ್ವತ್ಥ ಮರದ ಬುಡದಲ್ಲಿ ಅಥವಾ ನೀರಿನಲ್ಲಿ ಬಿಡುವುದು ಒಳ್ಳೆಯದು ಎಂದು ನಂಬುತ್ತಾರೆ. ಆದರೆ ಇದು ಸರಿಯಲ್ಲ. ಆದ್ದರಿಂದ ಈ ಹಳೆಯ ಫೋಟೋಗಳನ್ನು ಏನು ಮಾಡಬೇಕು ಎಂಬುದಕ್ಕೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.
ಗುರೂಜಿ ಹೇಳುವಂತೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿಂದ, ಹಳೆಯ ಫೋಟೋಗಳು ಮತ್ತು ವಿಗ್ರಹಗಳು ಹಿಂದಿನ ಶಕ್ತಿಗಳನ್ನು ಹೊಂದಿರುತ್ತವೆ. ಹೊಸ ಮನೆಯಲ್ಲಿ ಈ ಶಕ್ತಿಗಳು ಹೊಂದಿಕೊಳ್ಳದೇ ಇರಬಹುದು. ಹೀಗಾಗಿ, ಕನಿಷ್ಠ ಆರು ತಿಂಗಳಿಂದ ಒಂದು ವರ್ಷದವರೆಗೆ ಈ ವಸ್ತುಗಳನ್ನು ದೇವರ ಮನೆಯಲ್ಲಿ ಇಡುವುದು ಉತ್ತಮ. ಇದರಿಂದ ಆ ಶಕ್ತಿಗಳು ಹೊಸ ಮನೆಗೆ ಸಮರ್ಪಕವಾಗಿ ವರ್ಗಾವಣೆಯಾಗುತ್ತವೆ ಮತ್ತು ಕುಟುಂಬಕ್ಕೆ ಒಳ್ಳೆಯದು ಆಗುತ್ತದೆ. ಇದನ್ನು ಒಂದು ಬೀಜವನ್ನು ಭೂಮಿಗೆ ಹಾಕಿದರೆ ಅದು ಹೊಸ ಗಿಡವನ್ನು ಉತ್ಪಾದಿಸುವುದಕ್ಕೆ ಹೋಲಿಸಬಹುದು. ಹಳೆಯ ವಸ್ತುಗಳು ಹಿಂದಿನ ಸ್ಮೃತಿಗಳನ್ನು ಮತ್ತು ಶಕ್ತಿಯನ್ನು ಹೊಂದಿರುತ್ತವೆ ಎಂದು ಹೇಳಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ಹಳೆಯದ್ದು ಬಿಸಾಕಿ ಹೊಸ ಪರ್ಸ್ ತೆಗೆದುಕೊಳ್ಳುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ
ಆರು ತಿಂಗಳು ಅಥವಾ ಒಂದು ವರ್ಷದ ನಂತರ, ಈ ಫೋಟೋಗಳು ಮತ್ತು ವಿಗ್ರಹಗಳನ್ನು ಒಬ್ಬ ವಿಪ್ರರಿಗೆ ಅಥವಾ ದೇವಸ್ಥಾನಕ್ಕೆ ದಾನ ಮಾಡುವುದು ಸೂಕ್ತ. ಇದರಿಂದ ಅವುಗಳನ್ನು ಪೂಜ್ಯ ರೀತಿಯಲ್ಲಿ ವಿಲೇವಾರಿ ಮಾಡಬಹುದು ಮತ್ತು ಕುಟುಂಬದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಈ ವಿಧಾನವು ನಮ್ಮ ಸಂಪ್ರದಾಯಗಳನ್ನು ಗೌರವಿಸುವುದು ಮತ್ತು ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುವುದಕ್ಕೆ ಸಹಾಯ ಮಾಡುತ್ತದೆ. ಹೊಸ ಮನೆಗೆ ಗೃಹಪ್ರವೇಶದ ಸಮಯದಲ್ಲಿ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ಗುರೂಜಿ ಎಚ್ಚರಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 am, Tue, 16 September 25




