ಹಿಂದೂ ಧರ್ಮದಲ್ಲಿ ಭಗವಾನ್ ಹನುಮಂತನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಹನುಮ ತನ್ನ ಭಕ್ತರ ಸಮಸ್ಯೆಗಳನ್ನು ಪರಿಹರಿಸಲು ಅವರ ಆಸೆಗಳನ್ನು ಪೂರೈಸಲು ಹೆಸರುವಾಸಿಯಾಗಿದ್ದಾನೆ. ಅದರಲ್ಲಿಯೂ ಆಂಜನೇಯನ ಹಲವು ದೇವಾಲಯಗಳು ತನ್ನ ಪವಾಡಗಳಿಗೆ ಹೆಸರುವಾಸಿಯಾಗಿದೆ. ಇದೇ ರೀತಿ ಛತ್ತೀಸ್‌ಗಢದ ಬಲೋಡ್ ಜಿಲ್ಲಾ ಕೇಂದ್ರದಿಂದ 15 ಕಿ. ಮೀ. ದೂರದಲ್ಲಿರುವ ಕಮ್ರೌಡ್ ಗ್ರಾಮದಲ್ಲಿರುವ ಹನುಮಂತನ ದೇವಾಲಯವು ಇದಕ್ಕೆ ಉದಾಹರಣೆಯಾಗಿದೆ. ಹನುಮ ಭಕ್ತರಿಗೆ ಇದೊಂದು ಪವಾಡಸದೃಶ ದೇವಾಲಯ ಎಂಬ ನಂಬಿಕೆಯಿದೆ. ಹಾಗಾದರೆ ಈ ದೇವಸ್ಥಾನದ ರಹಸ್ಯವೇನು? 400 ವರ್ಷಗಳ ಹಿಂದೆ 2 ಅಡಿ ಇದ್ದ ಹನುಮಂತನ ವಿಗ್ರಹ ಈಗ 12 ಅಡಿ ಏರಲು ಕಾರಣವೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಛತ್ತೀಸ್‌ಗಢದ ಕಮ್ರೌಡ್ ಗ್ರಾಮದಲ್ಲಿರುವ ಈ ದೇವಾಲಯದಲ್ಲಿ 400 ವರ್ಷಗಳಷ್ಟು ಹಳೆಯದಾದ ಹನುಮಂತನ ವಿಗ್ರಹವಿದೆ. ಜನರು ಇಲ್ಲಿರುವ ದೇವರನ್ನು ಪವಾಡ ಹನುಮಂತ ಎಂದು ಕರೆಯುತ್ತಾರೆ. ದೂರದ ಊರುಗಳಿಂದ ಜನರು ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಈ ದೇವಾಲಯ ಈಗ ಇಡೀ ಛತ್ತೀಸ್‌ಗಢದಲ್ಲಿ ಮಾತ್ರವಲ್ಲದೆ ಇತರ ಅನೇಕ ರಾಜ್ಯಗಳಲ್ಲಿಯೂ ಪ್ರಸಿದ್ಧವಾಗಿದೆ.
ಸುಮಾರು 400 ವರ್ಷಗಳ ಹಿಂದೆ ಕಮ್ರೌಡ್ ಗ್ರಾಮದ ಸುತ್ತ- ಮುತ್ತಲೂ ಸಾಕಷ್ಟು ಬರಗಾಲವಿತ್ತು. ಆ ಕಾರಣದಿಂದಾಗಿ ಅಲ್ಲಿನ ಜನ ತುಂಬಾ ಚಿಂತಿತರಾಗಿದ್ದರು. ಅದೇ ರೀತಿ ಒಂದು ದಿನ ಒಬ್ಬ ರೈತ ತನ್ನ ಹೊಲವನ್ನು ಉಳುಮೆ ಮಾಡುತ್ತಿದ್ದಾಗ ಅವನ ನೇಗಿಲಿಗೆ ಏನೋ ಸಿಲುಕಿಕೊಂಡಿತು. ಬಹಳ ಪ್ರಯತ್ನ ಪಟ್ಟು ನೇಗಿಲನ್ನು ಹೊರತೆಗೆದಾಗ, ಹನುಮಂತನ ವಿಗ್ರಹ ಆ ಸ್ಥಳದಲ್ಲಿ ಕಂಡುಬಂತು. ವಿಗ್ರಹವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ರೈತ, ಅದನ್ನು ಅಲ್ಲಿಯೇ ಸ್ಥಾಪನೆ ಮಾಡಿದ. ಅಂದಿನಿಂದ ಈ ವಿಗ್ರಹವನ್ನು ಭೂಫೋಡ್ ಹನುಮಾನ್ ಜಿ ಎಂದು ಕರೆಯಲಾಗುತ್ತದೆ.
ಮೊದಲು ಹನುಮಂತನಿಗಾಗಿ ಒಂದು ಸಣ್ಣ ಆಲಯವನ್ನು ನಿರ್ಮಿಸಲಾಯಿತು, ಆದರೆ ವಿಗ್ರಹದ ಎತ್ತರ ಕ್ರಮೇಣ ಹೆಚ್ಚಾಗಲು ಪ್ರಾರಂಭಿಸಿತು. ಇದರಿಂದಾಗಿ ದೇವಾಲಯದ ಮೇಲ್ಛಾವಣಿ ಕುಸಿಯಿತು. ಇದು 3 ರಿಂದ 4 ಬಾರಿ ನಡೆಯಿತು. ಈಗಲೂ ಈ ವಿಗ್ರಹ ನಿರಂತರವಾಗಿ ಬೆಳೆಯುತ್ತಲೇ ಇದೆ. ಪ್ರಸ್ತುತ ಇಲ್ಲಿಯ ಹನುಮಂತ 12 ಅಡಿ ಬೆಳೆದಿದ್ದಾನೆ. ಕೇವಲ 2 ಅಡಿ ಇದ್ದ ಮೂರ್ತಿ ನಿಧಾನವಾಗಿ ಬೆಳೆದು ನಿಂತಿದೆ. ಆದ್ದರಿಂದ, ಈ ವಿಗ್ರಹ ಪತ್ತೆಯಾದ ಸ್ಥಳದಲ್ಲಿಯೇ ಭಕ್ತರು ಮತ್ತು ದಾನಿಗಳ ಸಹಾಯದಿಂದ ಭವ್ಯವಾದ ದೇವಾಲಯ ನಿರ್ಮಿಸಲಾಗಿದೆ.
ಇದನ್ನೂ ಓದಿ: ರಾತ್ರಿಯಲ್ಲಿ ಅರಳಿ ಮರದಲ್ಲಿ ಪ್ರೇತಾತ್ಮಗಳು ವಾಸಿಸುತ್ತವೆಯೇ? ಸತ್ಯವೇನು?
ಈ ದೇವಾಲಯವು ಪವಾಡ ಸದೃಶ ಹನುಮಾನ್ ದೇವಾಲಯ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ ಮತ್ತು ದೂರದ ಪ್ರದೇಶಗಳಿಂದ ಜನರು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಈ ದೇವಾಲಯದಲ್ಲಿ ನೀವು ಅಂದುಕೊಂಡ ಆಸೆ ಈಡೇರುತ್ತದೆ. ಆದ್ದರಿಂದ ದೂರದ ಸ್ಥಳಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಈ ದೇವಾಲಯದ ಅಂಗಳದಲ್ಲಿ ಭವ್ಯವಾದ ಶಿವಲಿಂಗವಿದೆ. ಹೊರಭಾಗದ ಒಂದು ಬದಿಯಲ್ಲಿ ಶನಿ ದೇವ, ಇನ್ನೊಂದು ಬದಿಯಲ್ಲಿ ಮಾತೆ ಕಾಳಿಯ ಭವ್ಯವಾದ ಬೃಹತ್ ಪ್ರತಿಮೆ ಇದೆ, ಇದು ಜನರ ಆಕರ್ಷಣೆಯ ಕೇಂದ್ರವಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ