ನೀವು ಸಾಮಾನ್ಯವಾಗಿ ‘ಮನಸ್ಸು’ ಎಂದು ಯೋಚಿಸುವುದು ಶುದ್ಧ ಬುದ್ಧಿಶಕ್ತಿಯೇ ಸರಿ. ಅಲ್ಲಿ ಹೃದಯಕ್ಕೆ ಸ್ಥಾನ ಇರುವುದಿಲ್ಲ! ಜನ ಸಾಮಾನ್ಯವಾಗಿ ಹೇಳುತ್ತಿರುತ್ತಾರೆ ಪ್ರಮುಖ ವಿಷಯಗಳಲ್ಲಿ ತಮ್ಮ ತಲೆ (Mind) ತಮ್ಮನ್ನು ಒಂದು ದಿಕ್ಕಿನಲ್ಲಿ ಕರೆದೊಯ್ದರೆ, ಅವರ ಹೃದಯವು ಇನ್ನೊಂದು ದಿಕ್ಕಿಗೆ ಎಳೆದೊಯ್ಯುತ್ತಿರುತ್ತದೆ ಎಂದು. ಯೋಗದಲ್ಲಿ, ನಾವು ಸ್ಥಾಪಿಸುವ ಮೂಲಭೂತ ಆಧಾರವೆಂದರೆ: ನೀವು ಏಕಾಂಗ ಜೀವಿಯೇ ಸರಿ. ತಲೆ (head) ಮತ್ತು ಹೃದಯದ (heart) ಬೇರ್ಪಡಿಕೆ ಇಲ್ಲಿ ಸಾಧ್ಯವಿಲ್ಲ; ನೀವು ಸಂಪೂರ್ಣವಾಗಿ ಅಖಂಡವಾಗಿ ಒಬ್ಬರೇ ಆಗಿರುತ್ತೀರಿ- ಎನ್ನುತ್ತದೆ ಯೋಗ (Yoga – Spiritual).
ತಲೆ ಮತ್ತು ಹೃದಯ ಎಂದು ಯಾವುದನ್ನು ಕರೆಯಲ್ಪಡುತ್ತೆ ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳೋಣ. ನೀವು ಸಾಮಾನ್ಯವಾಗಿ ನಿಮ್ಮ ಆಲೋಚನೆಗಳನ್ನು ತಲೆಗೆ (ಮನಸ್ಸು-ಮೆದುಳು) ಮತ್ತು ನಿಮ್ಮ ಭಾವನೆಗಳನ್ನು ಹೃದಯಕ್ಕೆ ನಿಯೋಜಿಸುತ್ತೀರಿ. ಆದರೆ ನೀವು ಇದನ್ನು ಎಚ್ಚರಿಕೆಯಿಂದ, ಸಂಪೂರ್ಣ ಪ್ರಾಮಾಣಿಕತೆಯಿಂದ ನೋಡಿದರೆ, ನೀವು ಯೋಚಿಸುವ ರೀತಿಯೇ ನಿಮ್ಮ ಭಾವನೆ ಎಂದು ನೀವು ತಿಳಿದುಕೊಳ್ಳುತ್ತೀರಿ. ಆದರೆ ನೀವು ಏನನ್ನು ಅನುಭವಿಸುತ್ತೀರಿ ಅದು ನಿಮ್ಮ ಯೋಚಿಸುವ ರೀತಿಯ ಫಲವಾಗಿರುತ್ತದೆ ಎಂಬುದಂತೂ ನಿಜ.
ನೀವು ಸಾಮಾನ್ಯವಾಗಿ ‘ಮನಸ್ಸು’ ಎಂದು ಯೋಚಿಸುವುದು ಬುದ್ಧಿ. ಆದರೆ, ವಾಸ್ತವವಾಗಿ, ಮನಸ್ಸು ಅನೇಕ ಆಯಾಮಗಳನ್ನು ಹೊಂದಿದೆ: ಒಂದು ಅದು ತಾರ್ಕಿಕ ಅಂಶವಾಗಿದೆ. ಮತ್ತು ಇನ್ನೊಂದು, ಆಳವಾದ ಭಾವನಾತ್ಮಕ ಅಂಶವಾಗಿದೆ. ಮನಸ್ಸಿನ ಆಳವಾದ ಆಯಾಮವನ್ನು ಸಾಂಪ್ರದಾಯಿಕವಾಗಿ ಹೃದಯ ಎಂದು ಕರೆಯಲಾಗುತ್ತದೆ. ಆದರೆ ಯೋಗದಲ್ಲಿ, ಈ ಭಾವನಾತ್ಮಕ ಮನಸ್ಸನ್ನು ಮಾನಸ ಎಂದು ಕರೆಯಲಾಗುತ್ತದೆ. ಮಾನಸ್ ಎನ್ನುವುದು ನೆನಪಿನ ಸಂಕೀರ್ಣ ಸಂಯೋಜನೆಯಾಗಿದ್ದು ಅದು ನಿರ್ದಿಷ್ಟ ರೀತಿಯಲ್ಲಿ ಭಾವನೆಗಳನ್ನು ರೂಪಿಸುತ್ತದೆ. ಆದ್ದರಿಂದ, ನೀವು ಭಾವಿಸುವ ರೀತಿ ಮತ್ತು ನೀವು ಯೋಚಿಸುವ ರೀತಿ ಎರಡೂ ಮನಸ್ಸುಗಳೇ ಆಗಿವೆ.
ನೀವು ಆಲೋಚಿಸುವ ರೀತಿ ನಿಮಗೆ ಏನು ಅನಿಸುತ್ತದೋ ಅದಾಗಿರುತ್ತದೆ. ಆದರೆ ನಿಮ್ಮ ಅನುಭವದಲ್ಲಿ ಆಲೋಚನೆಗಳು ಮತ್ತು ಭಾವನೆಗಳು ವಿಭಿನ್ನವಾಗಿರುತ್ತವೆ. ಯಾಕೆ ಹೀಗೆ? ಏಕೆಂದರೆ ಆಲೋಚನೆಗೆ ಅದರ ಬಗ್ಗೆ ಒಂದು ನಿರ್ದಿಷ್ಟ ಚುರುಕುತನವಿದೆ. ಉದಾಹರಣೆಗೆ, ಇಂದು ನೀವು ತುಂಬಾ ಅದ್ಭುತ ವ್ಯಕ್ತಿ ಎಂದು ಯಾರನ್ನಾದರೂ ಭಾವಿಸಿದರೆ, ನೀವು ಆ ವ್ಯಕ್ತಿ ಬಗ್ಗೆ ಬೆಚ್ಚಗಿನ ಭಾವನೆಗಳನ್ನು ಹೊಂದುತ್ತೀರಿ. ಅದೇ ಇದ್ದಕ್ಕಿದ್ದಂತೆ, ಅವನು ನಿಮಗೆ ಇಷ್ಟವಿಲ್ಲದ ಕೆಲಸವನ್ನು ಮಾಡುತ್ತಾನೆ ಎಂತಾದರೆ, ನಿಮ್ಮ ಆಲೋಚನೆಯು ಅವನು ಭಯಾನಕ ಎಂದು ಹೇಳುತ್ತದೆ. ಆದರೆ ಗಮನಿಸಿ, ನಿಮ್ಮ ಭಾವನೆಯು ತಕ್ಷಣವೇ ಇದರಿಂದ ಬದಲಾಗಿ ಬಿಡುವುದಿಲ್ಲ. ಅದು ಹೋರಾಟ ಮಾಡುತ್ತದೆ. ಈಗ ಸಿಹಿಯಾಗಿದ್ದರೆ ಮುಂದಿನ ಕ್ಷಣವೇ ಅದು ಕಹಿಯಾಗಲಾರದು.
ನಿಮ್ಮ ಭಾವಗಳ ಬಲವನ್ನು ಅವಲಂಬಿಸಿ, ಬಹುಶಃ ಇದು ಮೂರು ದಿನಗಳು ಅಥವಾ ಮೂರು ವರ್ಷಗಳನ್ನೇ ತೆಗೆದುಕೊಳ್ಳುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಅದು ವಾಪಸಾಗುತ್ತದೆ. ತಲೆ ಮತ್ತು ಹೃದಯದ ನಡುವೆ ಈ ಸಂಘರ್ಷವನ್ನು ಸೃಷ್ಟಿಸುವ ಅಗತ್ಯವಿಲ್ಲ. ಭಾವನೆಯು ಆಲೋಚನೆಯ ರಸಭರಿತವಾದ ಒಂದು ಭಾಗವಾಗಿದೆ. ನೀವು ಅದರ ಮಾಧುರ್ಯವನ್ನು ಆನಂದಿಸಬಹುದು, ಆದರೆ ಅದು ಸಂಪೂರ್ಣವಾಗಿ ಸ್ಥಿರವಾಗಿಲ್ಲ. ಅದರ ತೀವ್ರತೆಯು ಸಾಮಾನ್ಯವಾಗಿ ಆಲೋಚನೆಗಿಂತ ಗಣನೀಯವಾಗಿ ಹೆಚ್ಚಾಗಿರುತ್ತದೆ. ಆಲೋಚನೆ ಮತ್ತು ಭಾವನೆಗಳು ವಿಭಿನ್ನವಾಗಿವೆ ಎಂದು ತೋರುತ್ತದೆ. ಆದರೆ ಅವು ಕಬ್ಬು ಮತ್ತು ಅದರ ರಸಕ್ಕಿಂತ ಹೆಚ್ಚು ಪ್ರತ್ಯೇಕವಾಗಿಲ್ಲ.
ಹೆಚ್ಚಿನ ಜನರ ಅನುಭವಗಳಲ್ಲಿ ಆಲೋಚನೆಯು ಭಾವನೆಯಷ್ಟು ತೀವ್ರವಾಗಿರುವುದಿಲ್ಲ. ಆದರೆ ನೀವು ಸಾಕಷ್ಟು ತೀವ್ರವಾದ ಆಲೋಚನೆಯನ್ನು ಹುಟ್ಟುಹಾಕಿದರೆ, ಅದು ನಿಮ್ಮನ್ನು ಮುಳುಗಿಸಬಹುದು. ಶೇ. 5 ರಿಂದ 10 ಜನರು ಮಾತ್ರ ಭಾವನೆಯ ಅಗತ್ಯವಿಲ್ಲದಂತಹ ತೀವ್ರವಾದ ಆಲೋಚನೆಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಬಹುದು. 90 ಪ್ರತಿಶತದಷ್ಟು ಜನ ಮಾತ್ರ ತೀವ್ರವಾದ ಭಾವನೆಗಳನ್ನು ಹೊಂದಿರಬಹುದು. ಆದರೆ ಕೆಲವರ ಆಲೋಚನೆಗಳು ತುಂಬಾ ಆಳವಾಗಿರುತ್ತವೆ. ಅವರು ಬಹಳ ಆಳವಾದ ಚಿಂತಕರು.
ಈ ವಿಚಾರವಾಗಿ ನಿಮ್ಮೊಳಗೆ ಧ್ರುವೀಯತೆಯನ್ನು ಸೃಷ್ಟಿಸದಿರುವುದು ಉತ್ತಮ. ಆಲೋಚನೆ ಮತ್ತು ಭಾವನೆ ಬೇರೆ ಅಲ್ಲ. ಒಂದು ಒಣಗಿದೆ, ಇನ್ನೊಂದು ರಸಭರಿತವಾಗಿದೆ. ಎರಡನ್ನೂ ಆನಂದಿಸಿ… ಅಷ್ಟೇ.