AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Christmas 2021: ಕ್ರಿಸ್ ಮಸ್ ಹಬ್ಬಕ್ಕೆ ಕ್ರಿಸ್ ಮಸ್ ಟ್ರೀ ಮಹತ್ವವೇನು? ಇಲ್ಲಿದೆ ಮಾಹಿತಿ

ಕ್ರಿಸ್ ಮಸ್  ಹಬ್ಬದ ಆಚರಣೆಯ ವೇಳೆ ಬಳಸುವ ಕ್ರಿಸ್ ಮಸ್ ಟ್ರೀ ತನ್ನದೇ ಆದ ಮಹತ್ವ ಹಾಗೂ ವೈಶಿಷ್ಟ್ಯವನ್ನು ಹೊಂದಿದೆ. ಯೇಸು ಕ್ರಿಸ್ತನ ಜನನದ ವೇಳೆ ಒಂದು ವಿಶಿಷ್ಟ ಶೈಲಿಯ ಮರವನ್ನು ಶಿಂಗರಿಸಲಾಗಿತ್ತು. ಬಳಿಕ ಈ ಮರಕ್ಕೆ ಕ್ರಿಸ್ ಮಸ್  ಟ್ರೀ ಎಂದೇ ಹೆಸರಿಸಲಾಯಿತು ಎನ್ನಲಾಗುತ್ತದೆ.

Christmas 2021: ಕ್ರಿಸ್ ಮಸ್ ಹಬ್ಬಕ್ಕೆ ಕ್ರಿಸ್ ಮಸ್ ಟ್ರೀ ಮಹತ್ವವೇನು? ಇಲ್ಲಿದೆ ಮಾಹಿತಿ
ಕ್ರಿಸ್ ಮಸ್ ಟ್ರೀ
TV9 Web
| Edited By: |

Updated on: Dec 25, 2021 | 5:40 AM

Share

ವಿಶ್ವಾದ್ಯಂತ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತೆ. ಕ್ರೈಸ್ತ ಧರ್ಮದ ಪ್ರಕಾರ ಈ ದಿನ ಯೇಸು ಕ್ರಿಸ್ತನ ಜನನ ದಿನವಾಗಿದೆ. ಕ್ರೈಸ್ತ ಸಮುದಾಯದ ಜನ ಕ್ರಿಸ್ಮಸ್ ಆಚರಿಸುವ ಮೂಲಕ ಪ್ರಭು ಯೇಸುವಿನ ಜನ್ಮದಿನವನ್ನು ಸಂತೋಷದಿಂದ ಆಚರಿಸುತ್ತಾರೆ. ಪ್ರತಿ ವರ್ಷ ಡಿಸೆಂಬರ್ 25ರಂದು ಯೇಸು ಕ್ರಿಸ್ತನ ಜನ್ಮದಿನವನ್ನು ಆಚರಿಸಲಾಗುತ್ತೆ.

ಪ್ರಭು ಯೇಸು ಕ್ರಿಸ್ತನ ಜನನ ಕ್ರಿಶ್ಚಿಯನ್ನರ ಪವಿತ್ರ ಗ್ರಂಥ ಬೈಬಲ್‌ ಪ್ರಕಾರ, ಯೇಸು ಕ್ರಿಸ್ತನು ಕ್ರಿ.ಪೂ 4 ರಲ್ಲಿ ಇಸ್ರೇಲಿಯಾದ ಬೆತ್ಲೆಹೆಮ್ ನಗರದಲ್ಲಿ ಜನಿಸಿದನು. ಯೇಸು ಮೊದಲಿನಿಂದಲೂ ಯಹೂದಿ ಧರ್ಮಕ್ಕೆ ಸೇರಿದವನೆಂಬ ನಂಬಿಕೆಯಿದೆ. ಅವನ ತಂದೆಯ ಹೆಸರು ಜೋಸೆಫ್ ಮತ್ತು ತಾಯಿಯ ಹೆಸರು ಮೇರಿ. ದೇವರ ಸಮ್ಮತಿಯನ್ನು ಪಡೆದ ನಂತರ ಜೋಸೆಫ್ ಮೇರಿಯನ್ನು ವಿವಾಹವಾದನು. ನಂತರ ಅವರಿಗೆ ಯೇಸು ಜನಿಸಿದ. ಜೀಸಸ್ ಮತ್ತು ಅವರ ತಂದೆ ವೃತ್ತಿಯಲ್ಲಿ ಬಡಗಿಗಳಾಗಿದ್ದರು ಎಂದು ಕಥೆಯು ಹೇಳುತ್ತದೆ. ಬಾಲ್ಯದಿಂದಲೂ ಅವರು ತಮ್ಮ ತಂದೆಯ ಕೆಲಸದಲ್ಲಿ ಸಹಾಯ ಮಾಡುತ್ತಿದ್ದನು. 30 ನೇ ವಯಸ್ಸಿಗೆ, ಯೇಸು ಸಮಾಜದ ಕಲ್ಯಾಣಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದನು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಿ ಬೋಧನೆಯನ್ನು ಮಾಡಲು ಆರಂಭಿಸಿದರು. ಆದ್ರೆ ಯೇಸು ಹಾಗೆ ಮಾಡುವುದು ಯಹೂದಿಗಳ ಮೂಲಭೂತವಾದಿಗಳಿಗೆ ಇಷ್ಟವಾಗಲಿಲ್ಲ ಮತ್ತು ಅವರು ಯೇಸುವನ್ನು ವಿರೋಧಿಸಲು ಪ್ರಾರಂಭಿಸಿದರು.

ನಂತರ ಒಂದು ದಿನ ಯೇಸುವನ್ನು ರೋಮನ್ ಗವರ್ನರ್ ಮುಂದೆ ಹಾಜರುಪಡಿಸಲಾಯಿತು ಮತ್ತು ಅವರು ಶಿಲುಬೆಗೇರಿಸುವ ಶಿಕ್ಷೆ ವಿಧಿಸಿದರು. ಶುಭ ಶುಕ್ರವಾರದಂದು ಯೇಸುವನ್ನು ಶಿಲುಬೆಗೇರಿಸಲಾಯಿತು. ಶಿಲುಬೆಗೇರಿಸಿದ ಮೂರು ದಿನಗಳ ನಂತರ, ಪವಾಡದಿಂದ ಪುನರುತ್ಥಾನಗೊಂಡರು ಮತ್ತು ನಂತರ ಅವರು ಕ್ರಿಶ್ಚಿಯನ್ ಧರ್ಮವನ್ನು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ.

ಕ್ರಿಸ್ ಮಸ್ ಮೊದಲು ಆಚರಿಸಿದೆಲ್ಲೆ? ಪವಾಡ ಪುರುಷನಾಗಿದ್ದ ಯೇಸು ಕ್ರಿಸ್ತನ ಜನ್ಮ ದಿನದ ಪ್ರಯುಕ್ತ ಕ್ರಿಸ್ಮಸ್ ಆಚರಿಸಲಾಗುತ್ತೆ. 4ನೇ ಶತಮಾನದ ಮಧ್ಯಭಾಗದಲ್ಲಿ ಪಾಶ್ಚಿಮಾತ್ಯ ದೇಶಗಳು ಡಿಸೆಂಬರ್ 25ರಂದು ಕ್ರಿಸ್ಮಸ್ ದಿನವನ್ನು ಆಚರಿಸಲು ಆರಂಭಿಸಿದವು ಎಂದು ಹೇಳಲಾಗುತ್ತೆ. ಕ್ರಿಸ್ತಪೂರ್ವ 336 ರಲ್ಲಿ, ರೋಮ್‌ನ ಮೊದಲ ಕ್ರಿಶ್ಚಿಯನ್ ಚಕ್ರವರ್ತಿಯ ಅವಧಿಯಲ್ಲಿ, ಕ್ರಿಸ್‌ಮಸ್ ಮೊದಲ ಬಾರಿಗೆ ಡಿಸೆಂಬರ್ 25 ರಂದು ಆಚರಿಸಲಾಯಿತು, ಕೆಲವು ವರ್ಷಗಳ ನಂತರ ಪೋಪ್ ಜೂಲಿಯಸ್ ಯೇಸುಕ್ರಿಸ್ತನ ಜನ್ಮದಿನವನ್ನು ಡಿಸೆಂಬರ್ 25 ರಂದು ಆಚರಿಸಬೇಕೆಂದು ಅಧಿಕೃತವಾಗಿ ಘೋಷಿಸಿದರು. ಅಂದಿನಿಂದ, ಪಾಶ್ಚಿಮಾತ್ಯ ದೇಶದಲ್ಲಿ ಕ್ರಿಸ್‌ಮಸ್‌ನ್ನು ರಜಾದಿನವಾಗಿ ಆಚರಿಸಲಾಗುತ್ತದೆ.

ಕ್ರಿಸ್ ಮಸ್  ಟ್ರೀ ವಾಡಿಕೆ ಆರಂಭವಾಗಿದ್ದು ಹೇಗೆ? ಕ್ರಿಸ್ ಮಸ್  ಹಬ್ಬದ ಆಚರಣೆಯ ವೇಳೆ ಬಳಸುವ ಕ್ರಿಸ್ ಮಸ್ ಟ್ರೀ ತನ್ನದೇ ಆದ ಮಹತ್ವ ಹಾಗೂ ವೈಶಿಷ್ಟ್ಯವನ್ನು ಹೊಂದಿದೆ. ಯೇಸು ಕ್ರಿಸ್ತನ ಜನನದ ವೇಳೆ ಒಂದು ವಿಶಿಷ್ಟ ಶೈಲಿಯ ಮರವನ್ನು ಶಿಂಗರಿಸಲಾಗಿತ್ತು. ಬಳಿಕ ಈ ಮರಕ್ಕೆ ಕ್ರಿಸ್ ಮಸ್  ಟ್ರೀ ಎಂದೇ ಹೆಸರಿಸಲಾಯಿತು ಎನ್ನಲಾಗುತ್ತದೆ. ಕ್ರಿಸ್ಮಸ್ ಹಬ್ಬದ ವೇಳೆ ಈ ಮರವನ್ನು ಚಾಕ್ಲೆಟ್ಸ್, ಚಿಕ್ಕ ಚಿಕ್ಕ ಗಿಫ್ಟ್ಸ್, ಹೊಳೆಯುತ್ತಿರುವ ನಕ್ಷತ್ರಗಳು ಹಾಗೂ ಬಣ್ಣ ಬಣ್ಣದ ದೀಪಗಳ ಮೂಲಕ ಅಲಂಕರಿಸಲಾಗುತ್ತೆ.

ಇದನ್ನೂ ಓದಿ: Christmas 2021: ಜಗತ್ತಿನ ವಿವಿಧ ದೇಶಗಳಲ್ಲಿ ಕ್ರಿಸ್​ಮಸ್​ಗೆ ತಯಾರಿಸುವ ತಿಂಡಿಗಳು ಯಾವುದೆಂದು ಗೊತ್ತಾ? ಇಲ್ಲಿದೆ ಮಾಹಿತಿ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ