Holi 2024: ಹೋಳಿ ಹಬ್ಬದ ದಿನ ಈ ವಸ್ತುಗಳನ್ನು ದಾನ ಮಾಡಬೇಡಿ, ಕಷ್ಟ ತಪ್ಪಿದ್ದಲ್ಲ!

| Updated By: ಅಕ್ಷತಾ ವರ್ಕಾಡಿ

Updated on: Mar 24, 2024 | 1:03 PM

ಈ ಬಾರಿ ವರ್ಷದ ಮೊದಲ ಚಂದ್ರ ಗ್ರಹಣವು ಹೋಳಿಯ ದಿನ ಬಂದಿದೆ. ಹಿಂದೂ ಧರ್ಮದ ಪ್ರಕಾರ, ಗ್ರಹಣದ ಬೆಳಿಗ್ಗೆ ನದಿಯಲ್ಲಿ ಸ್ನಾನ ಮಾಡಿ ನಂತರ, ದಾನ ಮಾಡಬೇಕು ಎಂದು ಹೇಳಲಾಗುತ್ತದೆ. ಆದರೆ, ಹೋಳಿ ದಿನ ದಾನ ಮಾಡುವಾಗ ಕೆಲವು ವಸ್ತುಗಳನ್ನು ತಪ್ಪಿಸಬೇಕಾಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ದಾನ ಮಾಡಬಾರದು? ಎಂಬುದನ್ನು ತಿಳಿದುಕೊಳ್ಳಿ.

Holi 2024: ಹೋಳಿ ಹಬ್ಬದ ದಿನ ಈ ವಸ್ತುಗಳನ್ನು ದಾನ ಮಾಡಬೇಡಿ, ಕಷ್ಟ ತಪ್ಪಿದ್ದಲ್ಲ!
Holi 2024
Follow us on

ಹಿಂದೂ ಧರ್ಮದಲ್ಲಿ ಹೋಳಿ ಹಬ್ಬವನ್ನು ಪ್ರತಿವರ್ಷ ದೇಶ ಮತ್ತು ವಿದೇಶಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದರಲ್ಲಿಯೂ ಈ ಹಬ್ಬದಂದು ದಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಏಕೆಂದರೆ ಈ ದಿನ ದಾನ ಮಾಡುವುದರಿಂದ ಸಂತೋಷ ಮತ್ತು ಅದೃಷ್ಟ ಒಲಿದು ಬರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಬಾರಿ ವರ್ಷದ ಮೊದಲ ಚಂದ್ರ ಗ್ರಹಣವೂ ಹೋಳಿಯ ದಿನ ಬಂದಿದೆ. ಹಿಂದೂ ಧರ್ಮದ ಪ್ರಕಾರ, ಗ್ರಹಣದ ಬೆಳಿಗ್ಗೆ ನದಿಯಲ್ಲಿ ಸ್ನಾನ ಮಾಡಿ ನಂತರ, ದಾನ ಮಾಡಬೇಕು ಎಂದು ಹೇಳಲಾಗುತ್ತದೆ. ಆದರೆ, ಹೋಳಿ ದಿನ ದಾನ ಮಾಡುವಾಗ ಕೆಲವು ವಸ್ತುಗಳನ್ನು ತಪ್ಪಿಸಬೇಕಾಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ದಾನ ಮಾಡಬಾರದು? ಎಂಬುದನ್ನು ತಿಳಿದುಕೊಳ್ಳಿ.

ಹೋಳಿ ಹಬ್ಬದಂದು ಬಟ್ಟೆಗಳನ್ನು ದಾನ ಮಾಡಬೇಡಿ

ವಾಸ್ತವವಾಗಿ, ಬಟ್ಟೆಗಳನ್ನು ದಾನ ಮಾಡಲು ಹೇಳಲಾಗುತ್ತದೆ. ಆದರೆ ಜ್ಯೋತಿಷ್ಯದ ಪ್ರಕಾರ, ಹೋಳಿ ದಿನದಂದು ಬಟ್ಟೆಗಳನ್ನು ದಾನ ಮಾಡುವುದನ್ನು ನಿಷೇಧಿಸಲಾಗಿದೆ. ಈ ದಿನ ಬಟ್ಟೆಗಳನ್ನು ದಾನ ಮಾಡುವುದರಿಂದ ಮನೆಯಿಂದ ಸಂತೋಷ, ಸಮೃದ್ಧಿ ಮಾಯವಾಗುತ್ತದೆ ಮತ್ತು ವ್ಯಕ್ತಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತದೆ.

ಹಣವನ್ನು ದಾನ ಮಾಡಬೇಡಿ:

ಹೋಳಿ ಹಬ್ಬದ ದಿನ ಹಣವನ್ನು ದಾನ ಮಾಡಬಾರದು ಎಂದು ಹೇಳಲಾಗುತ್ತದೆ. ಈ ದಿನ ಹಣವನ್ನು ದಾನ ಮಾಡುವುದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಕುಂಠಿತವಾಗುತ್ತದೆ. ಅಲ್ಲದೆ, ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗಬಹುದು. ಜೊತೆಗೆ ಈ ದಿನದಂದು ಚಿನ್ನದ ಆಭರಣಗಳನ್ನು ದಾನ ಮಾಡಬಾರದು.

ಸಾಸಿವೆ ಎಣ್ಣೆಯನ್ನು ದಾನ ಮಾಡಬೇಡಿ:

ಹೋಳಿ ಹಬ್ಬದ ದಿನ ಸಾಸಿವೆ ಎಣ್ಣೆಯನ್ನು ದಾನದ ರೂಪದಲ್ಲಿ ಕೊಡಬೇಡಿ. ಏಕೆಂದರೆ ಇದರಿಂದ ಶನಿ ದೇವನ ಕೋಪಕ್ಕೆ ಗುರಿಯಾಗುತ್ತೀರಿ ಹಾಗಾಗಿ ಈ ದಿನ ಎಣ್ಣೆಯನ್ನು ದಾನ ಮಾಡಬೇಡಿ.

ಗಾಜಿನ ವಸ್ತುಗಳನ್ನು ದಾನ ಮಾಡುವುದನ್ನು ತಪ್ಪಿಸಿ:

ಹೋಳಿ ದಿನದಂದು ಗಾಜಿನ ವಸ್ತುಗಳನ್ನು ಮತ್ತೊಬ್ಬರಿಗೆ ದಾನವಾಗಿ ನೀಡಬಾರದು. ಇದರಿಂದ ಮನೆಯಲ್ಲಿ ಸಮಸ್ಯೆಗಳು ಉಂಟಾಗಬಹುದು ಮತ್ತು ಕುಟುಂಬದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.

ಬಿಳಿ ವಸ್ತುಗಳನ್ನು ದಾನ ಮಾಡಬೇಡಿ:

ಹೋಳಿ ದಿನದಂದು ಹಾಲು, ಮೊಸರು ಮತ್ತು ಸಕ್ಕರೆಯಂತಹ ಬಿಳಿ ಬಣ್ಣವಿರುವ ವಸ್ತುಗಳನ್ನು ದಾನ ಮಾಡುವುದನ್ನು ತಪ್ಪಿಸಬೇಕು. ಜ್ಯೋತಿಷ್ಯದ ಪ್ರಕಾರ, ಈ ದಿನ ಬಿಳಿ ವಸ್ತುಗಳನ್ನು ದಾನ ಮಾಡುವುದರಿಂದ ಜಾತಕದಲ್ಲಿ ಶುಕ್ರನ ಸ್ಥಾನ ದುರ್ಬಲಗೊಳ್ಳುತ್ತದೆ, ಇದರಿಂದಾಗಿ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಇದನ್ನೂ ಓದಿ: ಪ್ರದಕ್ಷಿಣೆ ಹಾಕುವಾಗ ಈ ವಿಷಯ ನೆನಪಿನಲ್ಲಿದ್ದರೆ ಜೀವನದಲ್ಲಿ ಯಾವುದೇ ಅಪಾಯ ಬರುವುದಿಲ್ಲ

ಮೇಕಪ್ ವಸ್ತುಗಳನ್ನು ದಾನ ಮಾಡಬೇಡಿ:

ವಿವಾಹಿತ ಮಹಿಳೆಯರು ತಮ್ಮ ಮೇಕಪ್ ವಸ್ತುಗಳನ್ನು ದಾನ ಮಾಡಬಾರದು ಎಂದು ನಂಬಲಾಗಿದೆ. ಇದು ಅಶುಭ ಫಲಿತಾಂಶಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಹೋಳಿ ದಿನದಂದು ಕುಂಕುಮ, ಬಳೆಗಳು, ಬಿಂದಿ ಇತ್ಯಾದಿ ವಸ್ತುಗಳನ್ನು ದಾನ ಮಾಡುವುದನ್ನು ತಪ್ಪಿಸಿ.

ಯಾವ ವಸ್ತುಗಳನ್ನು ದಾನ ಮಾಡಬೇಕು?

ಹಬ್ಬದ ಪೂಜೆ ಮುಗಿದ ಬಳಿಕ ಅಥವಾ ಚಂದ್ರ ಗ್ರಹಣದ ನಂತರ, ನೀವು ವಿಶೇಷವಾಗಿ ಧಾನ್ಯಗಳು, ಆಹಾರ, ಹಣ್ಣುಗಳು, ಸಿಹಿತಿಂಡಿಗಳು ಇತ್ಯಾದಿ ವಸ್ತುಗಳನ್ನು ಯಾರಿಗಾದರೂ ದಾನ ಮಾಡಬಹುದು. ಹೋಳಿ ದಿನದಂದು ಈ ವಸ್ತುಗಳನ್ನು ದಾನ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಸಂತೋಷ, ಸಮೃದ್ಧಿಯನ್ನು ಪಡೆಯುತ್ತಾನೆ ಎಂಬ ನಂಬಿಕೆ ಇದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ