Holi 2024: ಹೋಳಿ ಹಬ್ಬದ ದಿನ ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಈ ಬಣ್ಣ ಬಳಸಿ, ಅದೃಷ್ಟ ಬದಲಾಗುತ್ತೆ

ಜ್ಯೋತಿಷ್ಯದ ಪ್ರಕಾರ, ಹೋಳಿಯ ಬಣ್ಣಗಳು ನಮ್ಮ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಜೊತೆಗೆ ಇವು ಸಂತೋಷ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ರಾಶಿಯ ಆಧಾರದ ಮೇಲೆ ಹೋಳಿ ಬಣ್ಣಗಳನ್ನು ಆಯ್ಕೆ ಮಾಡಿದರೆ, ಅದು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಈ ರೀತಿ ಬಳಸುವುದರಿಂದ ಜಾತಕದಲ್ಲಿರುವ ಗ್ರಹಗಳ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂದು ನಂಬಲಾಗಿದೆ

Holi 2024: ಹೋಳಿ ಹಬ್ಬದ ದಿನ ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಈ ಬಣ್ಣ ಬಳಸಿ, ಅದೃಷ್ಟ ಬದಲಾಗುತ್ತೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 23, 2024 | 3:44 PM

ದೇಶಾದ್ಯಂತ ಬಣ್ಣಗಳ ಹಬ್ಬವನ್ನು ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಅಂದರೆ ಮಾ. 25 ರಂದು ಆಚರಿಸಲಾಗುತ್ತದೆ. ಹೋಳಿ ಹಬ್ಬವನ್ನು ವಿವಿಧ ಬಣ್ಣಗಳೊಂದಿಗೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಹೋಳಿಯ ಬಣ್ಣಗಳು ನಮ್ಮ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಜೊತೆಗೆ ಇವು ಸಂತೋಷ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ರಾಶಿಯ ಆಧಾರದ ಮೇಲೆ ಹೋಳಿ ಬಣ್ಣಗಳನ್ನು ಆಯ್ಕೆ ಮಾಡಿದರೆ, ಅದು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಈ ರೀತಿ ಬಳಸುವುದರಿಂದ ಜಾತಕದಲ್ಲಿರುವ ಗ್ರಹಗಳ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂದು ನಂಬಲಾಗಿದೆ. ಜ್ಯೋತಿಷಿ ಪಂಡಿತ್ ವರುಣ್ ಪಾಂಡೆ ಅವರು ಹೇಳುವ ಪ್ರಕಾರ ಹೋಳಿ ಹಬ್ಬದ ದಿನ ನಿಮ್ಮ ರಾಶಿ ಚಿಹ್ನೆಗೆ ಅನುಗುಣವಾಗಿ ಬಣ್ಣಗಳನ್ನು ಬಳಸಿದರೆ, ನಿಮ್ಮ ಹೋಳಿ ಹಬ್ಬ ಶುಭವಾಗಿರುತ್ತದೆ ಮತ್ತು ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಅಶುಭ ಪರಿಣಾಮ ಉಂಟಾಗುವುದಿಲ್ಲ ಎಂದು ಹೇಳುತ್ತಾರೆ.

ಮೇಷ ರಾಶಿ

ಮೇಷ ರಾಶಿಯು ಮೊದಲ ರಾಶಿಯಾಗಿದ್ದು ಮಂಗಳ ಗ್ರಹ ಇದಕ್ಕೆ ಅಧಿಪತಿ, ಆದ್ದರಿಂದ ಮಂಗಳನ ಸಂತೋಷಕ್ಕಾಗಿ, ಈ ರಾಶಿಯ ಜನರು ಗುಲಾಬಿ ಬಣ್ಣದೊಂದಿಗೆ ಹೋಳಿ ಆಡಬೇಕು, ಇದು ದೀರ್ಘಾಯುಷ್ಯ ಮತ್ತು ಆರೋಗ್ಯವನ್ನು ನೀಡುತ್ತದೆ.

ವೃಷಭ ರಾಶಿ

ಶುಕ್ರನು ವೃಷಭ ರಾಶಿಯ ಅಧಿಪತಿ, ಆದ್ದರಿಂದ ಶುಕ್ರನನ್ನು ಮೆಚ್ಚಿಸಲು, ಈ ರಾಶಿಯವರು ಬಿಳಿ ಬಣ್ಣದ ಬಟ್ಟೆಗಳನ್ನು ಅಥವಾ ತಿಳಿ ಹಳದಿ ಬಣ್ಣವನ್ನು ಬಳಸಬೇಕು, ಇದು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ.

ಮಿಥುನ ರಾಶಿ

ಮಿಥುನ ರಾಶಿಯ ಅಧಿಪತಿ ಬುಧ, ಆದ್ದರಿಂದ ಬುಧನನ್ನು ಮೆಚ್ಚಿಸಲು, ಈ ರಾಶಿಯವರು ಜನರು ಹೋಳಿ ಸಮಯದಲ್ಲಿ ಹಸಿರು ಬಣ್ಣವನ್ನು ಬಳಸಬೇಕು. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಯಾವಾಗಲೂ ನೆಲೆಸಿರುತ್ತದೆ ಮತ್ತು ವ್ಯಾಪಾರ ವ್ಯವಹಾರಗಳಲ್ಲಿ ಹಣಕಾಸಿನ ಕೊರತೆ ಕಂಡು ಬರುವುದಿಲ್ಲ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯ ಅಧಿಪತಿ ಚಂದ್ರ, ಹಾಗಾಗಿ ಇವರು ಬಿಳಿ ಬಣ್ಣದ ಬಟ್ಟೆ ಅಥವಾ ಗುಲಾಬಿ ಬಣ್ಣವನ್ನು ಬಳಸಬೇಕು, ಇದು ಮಾನಸಿಕ ಶಾಂತಿಯನ್ನು ನೀಡುತ್ತದೆ ಮತ್ತು ಎಲ್ಲಾ ರೀತಿಯ ಕಾಯಿಲೆಗಳನ್ನು ಗುಣಪಡಿಸುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯ ಅಧಿಪತಿ ಸೂರ್ಯ, ಆದ್ದರಿಂದ ಸೂರ್ಯನನ್ನು ಮೆಚ್ಚಿಸಲು ಈ ರಾಶಿಯವರು ಹೋಳಿ ಆಚರಣೆಯಲ್ಲಿ ಕೆಂಪು ಬಣ್ಣವನ್ನು ಬಳಸಿ ಇದು ಸಂಪತ್ತಿನ ಜೊತೆಗೆ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರು ಹೋಳಿ ಹಬ್ಬದಲ್ಲಿ ಹಸಿರು ಬಣ್ಣವನ್ನು ಬಳಸಬೇಕು, ಇದು ಈ ರಾಶಿಯವರ ಬುದ್ಧಿವಂತಿಕೆಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ವ್ಯವಹಾರದಲ್ಲಿ ಯಾವುದೇ ರೀತಿಯ ತೊಂದರೆ ಬರದಂತೆ ಕಾಪಾಡುತ್ತದೆ.

ತುಲಾ ರಾಶಿ

ಶುಕ್ರನು ತುಲಾ ರಾಶಿಯ ಅಧಿಪತಿ, ಆದ್ದರಿಂದ ಶುಕ್ರನನ್ನು ಮೆಚ್ಚಿಸುವುದಕ್ಕಾಗಿ, ಈ ರಾಶಿಯ ಜನರು ಬಿಳಿ ಬಣ್ಣದ ಬಟ್ಟೆ ಅಥವಾ ತಿಳಿ ಹಳದಿ ಬಣ್ಣವನ್ನು ಬಳಸಿ. ಇದು ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯ ಮತ್ತು ಸೌಲಭ್ಯಗಳನ್ನು ಹೆಚ್ಚಿಸುತ್ತದೆ.

ವೃಶ್ಚಿಕ ರಾಶಿ

ಮಂಗಳನು ವೃಶ್ಚಿಕ ರಾಶಿಯ ಅಧಿಪತಿ, ಆದ್ದರಿಂದ ಈ ರಾಶಿಚಕ್ರದ ಜನರು ಕುಂಕುಮ ಬಣ್ಣದ ಜೊತೆ ಹೋಳಿ ಆಡಬೇಕು, ಇದು ನಿಮ್ಮ ಶತ್ರುಗಳನ್ನು ಅಪಜಯಗೊಳಿಸುತ್ತದೆ ಮತ್ತು ಎಲ್ಲಾ ರೀತಿಯಲ್ಲೂ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ಇದನ್ನೂ ಓದಿ: ಗರುಡ ಪುರಾಣದ ಪ್ರಕಾರ ಮೋಕ್ಷವನ್ನು ಪಡೆಯಲು ಬಯಸುವ ಜನರು ಈ ಕೆಲಸಗಳನ್ನು ಮಾಡಬೇಕು

ಧನು ರಾಶಿ

ಧನು ರಾಶಿಯ ಅಧಿಪತಿ ಗುರು, ಆದ್ದರಿಂದ ಗುರುವನ್ನು ಮೆಚ್ಚಿಸಲು, ಧನು ರಾಶಿಯ ಜನರು ಹಳದಿ ಬಣ್ಣವನ್ನು ಹೋಳಿ ಹಬ್ಬದಲ್ಲಿ ಬಳಸಿ. ಇದು ಸಂಪತ್ತನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಆರೋಗ್ಯವನ್ನು ನೀಡುತ್ತದೆ.

ಮಕರ ರಾಶಿ

ಮಕರ ರಾಶಿಯ ಅಧಿಪತಿ ಶನಿ, ಈ ರಾಶಿಯವರು ನೀಲಿ ಬಣ್ಣವನ್ನು ಬಳಸಬೇಕು. ಇದು ಶನಿ ದೇವನಿಂದ ಉಂಟಾಗುವ ಎಲ್ಲಾ ರೀತಿಯ ರೋಗಗಳಿಂದ ಪರಿಹಾರವನ್ನು ಮತ್ತು ನೋವಿನಿಂದ ಶಾಂತಿಯನ್ನು ನೀಡುತ್ತದೆ.

ಕುಂಭ ರಾಶಿ

ಶನಿಯು ಕುಂಭ ರಾಶಿಯ ಅಧಿಪತಿಯೂ ಆಗಿರುವುದರಿಂದ ಕುಂಭ ರಾಶಿಯ ಜನರು ಶನಿಯ ಮಿತ್ರ ಗ್ರಹವಾದ ಬುಧನಿಗೆ ಪ್ರೀಯವಾದ ಹಸಿರು ಬಣ್ಣವನ್ನು ಬಳಸಬೇಕು. ಇದನ್ನು ಮಾಡುವುದರಿಂದ ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ ಮತ್ತು ದೀರ್ಘಾಯುಷ್ಯ, ಆರೋಗ್ಯ ಲಾಭವೂ ಸಿಗುತ್ತದೆ.

ಮೀನ ರಾಶಿ

ಮೀನ ರಾಶಿಯ ಆಳುವ ಗ್ರಹ ಗುರು, ಆದ್ದರಿಂದ ಮೀನ ರಾಶಿಯ ಜನರು ಹಳದಿ ಬಣ್ಣವನ್ನು ಬಳಸಬೇಕು. ಗುರು ಗ್ರಹದ ಉತ್ತಮ ಪ್ರಭಾವದಿಂದಾಗಿ, ಸಂಪತ್ತು ಹೆಚ್ಚಾಗುತ್ತದೆ ಮತ್ತು ಗುರುವಿನ ಕೃಪೆಯಿಂದ ದೀರ್ಘಾಯುಷ್ಯ, ಆರೋಗ್ಯ ಮತ್ತು ಸಮೃದ್ಧಿಯನ್ನು ಪಡೆಯಬಹುದಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:41 pm, Sat, 23 March 24

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?