Holi 2024: 350 ವರ್ಷಗಳಿಂದ ಇಲ್ಲಿನ ಜನರು ಹೋಳಿ ಹಬ್ಬ ಆಚರಿಸಿಲ್ಲ! ಇದರ ಹಿಂದಿರುವ ಕಥೆಯೇನು?
ಬಣ್ಣಗಳ ಹಬ್ಬ ಹೋಳಿಯನ್ನು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಆಚರಿಸಲಾಗುತ್ತದೆ. ಆದರೆ ಉತ್ತರಾಖಂಡದಲ್ಲಿ ಹೋಳಿ ಆಡದಿರುವ ಮೂರು ಹಳ್ಳಿಗಳಿವೆ ಎಂದರೆ ನೀವು ನಂಬುತ್ತೀರಾ? ಇದು ನಿಮಗೆ ಆಶ್ಚರ್ಯ ಎನಿಸಿದರೂ ಸತ್ಯ. ಹೋಳಿಯನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಆದರೆ ಈ ಮೂರು ಹಳ್ಳಿಗಳಲ್ಲಿ ಹೋಳಿಯ ಬಣ್ಣಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಬಣ್ಣಗಳ ಹಬ್ಬವಾದ ಹೋಳಿಯನ್ನು ದೇಶಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಬಣ್ಣಗಳ ಹಬ್ಬ ಹೋಳಿಯನ್ನು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಆಚರಿಸಲಾಗುತ್ತದೆ. ಆದರೆ ಉತ್ತರಾಖಂಡದಲ್ಲಿ ಹೋಳಿ ಆಡದಿರುವ ಮೂರು ಹಳ್ಳಿಗಳಿವೆ ಎಂದರೆ ನೀವು ನಂಬುತ್ತೀರಾ? ಇದು ನಿಮಗೆ ಆಶ್ಚರ್ಯ ಎನಿಸಿದರೂ ಸತ್ಯ. ಹೋಳಿಯನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಆದರೆ ಉತ್ತರಾಖಂಡದಲ್ಲಿರುವ ಈ ಮೂರು ಹಳ್ಳಿಗಳಲ್ಲಿ ಹೋಳಿಯ ಬಣ್ಣಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಈ ಹಳ್ಳಿಗಳಲ್ಲಿ ಹೋಳಿ ಹಬ್ಬ ಆಚರಿಸುವುದಿಲ್ಲ ಏಕೆ?
ರುದ್ರಪ್ರಯಾಗ್ ಜಿಲ್ಲೆಯಲ್ಲಿ ಕ್ವಿಲಿ, ಕುರ್ಜಾನ್ ಮತ್ತು ಜೊಂಡ್ಲಾ ಎಂಬ ಮೂರು ಹಳ್ಳಿಗಳಿವೆ, ಈ ಪ್ರದೇಶದಲ್ಲಿ ಇಲ್ಲಿಯವರೆಗೆ ಹೋಳಿ ಹಬ್ಬವನ್ನು ಆಚರಿಸುವ ಧೈರ್ಯ ಮಾಡಿಲ್ಲ. ಇಲ್ಲಿ ಹೋಳಿ ಆಚರಿಸದಿರಲು ಇಲ್ಲಿರುವ ಗ್ರಾಮ ದೇವರು ಕಾರಣ ಎಂದು ಹೇಳಲಾಗುತ್ತದೆ. ಏಕೆಂದರೆ ಇಲ್ಲಿನ ಜನರ ನಂಬಿಕೆಯ ಪ್ರಕಾರ ಈ ಮೂರು ಹಳ್ಳಿಗಳಲ್ಲಿ ಹೋಳಿ ಹಬ್ಬವನ್ನು ಆಚರಣೆ ಮಾಡುವುದು ಅಶುಭವೆಂದು ಮತ್ತು ಅವರು ನಂಬಿರುವ ದೇವರು ಕೋಪಗೊಳ್ಳುತ್ತಾನೆ ಎಂಬ ನಂಬಿಕೆ ಇದೆ. ಈ ಹಳ್ಳಿಯಲ್ಲಿ ಯಾರಾದರೂ ಹೋಳಿ ಆಚರಿಸಿದರೆ ಅಲ್ಲಿನ ಜನ ಮತ್ತು ಪ್ರಾಣಿಗಳಿಗೆ ವಿಚಿತ್ರ ರೋಗ ಹರಡುತ್ತದೆ ಮತ್ತು ಅಕಾಲಿಕವಾಗಿ ಮರಣ ಹೊಂದುತ್ತಾರೆ ಎಂದು ಹೇಳಲಾಗುತ್ತದೆ. ಅನೇಕ ವರ್ಷಗಳ ಹಿಂದೆ ಗ್ರಾಮಸ್ಥರು ಹೋಳಿ ಆಚರಿಸಲು ಪ್ರಯತ್ನಿಸಿದ್ದರು, ಆದರೆ ಒಂದು ರೀತಿಯ ರೋಗ ಗ್ರಾಮದಲ್ಲಿ ಹರಡಿ ಜನರು ಸಾವನ್ನಪ್ಪಿದರು ಎಂದು ಹೇಳಲಾಗುತ್ತದೆ. ಹಾಗಾಗಿ ಇಲ್ಲಿನ ಜನ ಹೋಳಿ ಹಬ್ಬವನ್ನು ಆಚರಣೆ ಮಾಡಲು ಹೆದರುತ್ತಾರೆ.
ಹೋಳಿ ಏಕೆ ಆಡಬಾರದು?
ರುದ್ರಪ್ರಯಾಗದಲ್ಲಿರುವ ಈ ಮೂರು ಗ್ರಾಮದ ಜನರು ಹೋಳಿಯ ಉತ್ಸಾಹ ಮತ್ತು ಜಂಜಾಟದಿಂದ ಬಹಳ ದೂರವಿದ್ದಾರೆ. ಇಲ್ಲಿನ ಜನರು ಹೋಳಿ ಆಡುವುದಿಲ್ಲ ಅಥವಾ ಪರಸ್ಪರ ಬಣ್ಣ ಹಚ್ಚುವುದಿಲ್ಲ. ಏಕೆಂದರೆ 350 ವರ್ಷಗಳ ಹಿಂದೆ ಇಲ್ಲಿ ಹೋಳಿ ಆಡಲು ಪ್ರಯತ್ನಿಸಿದಾಗ ಜನರು ವಿವಿಧ ರೋಗಗಳಿಂದ ಅಕಾಲಿಕ ಮರಣ ಹೊಂದಿದರು. ಈ ರೀತಿಯ ಘಟನೆಗಳು ಹಲವು ಬಾರಿ ನಡೆದ ಬಳಿಕ ಯಾರೂ ಕೂಡ ಹೋಳಿ ಹಬ್ಬ ಆಚರಿಸಲು ಧೈರ್ಯ ಮಾಡಲಿಲ್ಲ. ಇಲ್ಲಿನ ಮೂರು ಹಳ್ಳಿಗಳ ರಕ್ಷಕ ದೇವತೆಗೆ ಹೋಳಿಯ ಬಣ್ಣಗಳು ಇಷ್ಟವಾಗುವುದಿಲ್ಲ ಅದಕ್ಕಾಗಿಯೇ ಹಬ್ಬವನ್ನು ಆಚರಿಸುವುದಿಲ್ಲ ಎಂದು ಜನರು ಹೇಳುತ್ತಾರೆ.
ಇದನ್ನೂ ಓದಿ: ಹೋಳಿ ಹಬ್ಬದಂದು ಈ 5 ವಸ್ತುಗಳನ್ನು ಮನೆಗೆ ತನ್ನಿ, ಅದೃಷ್ಟವೇ ಬದಲಾಗುತ್ತೆ!
ವರ್ಷಗಳ ಹಿಂದೆ ಗ್ರಾಮದಲ್ಲಿ ಹೋಳಿ ಹಬ್ಬವನ್ನು ಆಚರಣೆ ಮಾಡಿದಾಗ ಕಾಯಿಲೆಗಳಿಂದ ಜನರು ಸಾಯಲು ಪ್ರಾರಂಭಿಸಿದರು. ಅಲ್ಲದೆ ಈ ಸಮಸ್ಯೆಯನ್ನು ಬಗೆಹರಿಸಲು ಇಲ್ಲಿನ ಜನರು ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಕೂಡ ಯಾವುದೇ ರೀತಿಯ ಫಲ ನೀಡಿಲ್ಲ ಎನ್ನಲಾಗುತ್ತದೆ. ಇನ್ನು ಈ ಮೂರು ಗ್ರಾಮಗಳನ್ನು ಹೊರತುಪಡಿಸಿ ಇಲ್ಲಿರುವ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೋಳಿಯನ್ನು ಬಹಳ ಆಡಂಭರದಿಂದ ಆಚರಣೆ ಮಾಡಲಾಗುತ್ತದೆ. ಆ ಮೂರು ಹಳ್ಳಿಗಳಲ್ಲಿ ಹಬ್ಬ ಆಚರಣೆ ಮಾಡುವುದು ಅಥವಾ ಮಾಡದಿರುವುದು ಆ ಭಾಗದ ಜನರ ನಂಬಿಕೆಗೆ ಬಿಟ್ಟ ವಿಚಾರವಾದ್ದರಿಂದ ಆ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಲು ಸಾಧ್ಯವಿಲ್ಲ ಎಂದು ಅಕ್ಕಪಕ್ಕದ ಹಳ್ಳಿಯಲ್ಲಿ ವಾಸಿಸುವ ಜನರು ಹೇಳುತ್ತಾರೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ