Horoscope Today 31 October: ಧನಿಷ್ಠಾ ನಕ್ಷತ್ರ ಇಂದು ಈ ರಾಶಿಗಳ ಮೇಲೆ ಪರಿಣಾಮ ಬೀರಲಿದೆ

Updated on: Oct 31, 2025 | 6:52 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 31 ಅಕ್ಟೋಬರ್ 2025ರ ಶುಕ್ರವಾರದ ದೈನಂದಿನ ರಾಶಿಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಧನಿಷ್ಠಾ ನಕ್ಷತ್ರದಲ್ಲಿ ಚಂದ್ರನ ಸಂಚಾರದ ಪ್ರಭಾವ, ರಾಹುವಿನ ಸಮಯ, ಶುಭಕಾಲ ಮತ್ತು ಪ್ರತಿ ರಾಶಿಯ ಆರ್ಥಿಕ, ವೃತ್ತಿ, ಆರೋಗ್ಯ ಹಾಗೂ ವೈಯಕ್ತಿಕ ಜೀವನದ ಮೇಲಿನ ಪರಿಣಾಮಗಳನ್ನು ವಿವರಿಸಿದ್ದಾರೆ.

ಅಕ್ಟೋಬರ್ 31 ಶುಕ್ರವಾರದ ದಿನ ಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ವಿಶ್ವಾವಸುನಾಮ ಸಂವತ್ಸರದ ಈ ದಿನ, ಧನಿಷ್ಠಾ ನಕ್ಷತ್ರದಲ್ಲಿ ಚಂದ್ರ ಸಂಚಾರ ಮಾಡುತ್ತಿದ್ದು, ಇದು ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಬೀರಲಿದೆ.

ಬೆಳಿಗ್ಗೆ 10:34 ರಿಂದ 12:02ರ ತನಕ ರಾಹುಕಾಲ ಇರಲಿದ್ದು, ಮಧ್ಯಾಹ್ನ 12:03 ರಿಂದ 01:30 ರ ತನಕ ಶುಭ ಕಾಲವಿರುತ್ತದೆ. ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭ ಫಲವಿರಲಿದ್ದು, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಮತ್ತು ಆಸ್ತಿ ಖರೀದಿ ಯೋಗವಿದೆ. ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಲಾಭ ಮತ್ತು ಅನಿರೀಕ್ಷಿತ ಪ್ರಯಾಣದ ಯೋಗವಿದೆ. ಮಿಥುನ ರಾಶಿಯವರಿಗೆ ಅಲ್ಪ ಆರ್ಥಿಕ ಲಾಭ, ವಾಹನ ಯೋಗ ಹಾಗೂ ಉದ್ಯೋಗದಲ್ಲಿ ಶುಭಫಲ ಕಂಡುಬರಲಿದೆ. ಈ ದಿನದಲ್ಲಿ ಕೆಲವು ರಾಶಿಗಳಿಗೆ ಉತ್ತಮ ಅವಕಾಶಗಳು ದೊರೆಯಲಿದ್ದರೆ, ಇನ್ನು ಕೆಲವರು ಸಣ್ಣಪುಟ್ಟ ಸವಾಲುಗಳನ್ನು ಎದುರಿಸಬೇಕಾಗಬಹುದು ಎಂದು ಗುರೂಜಿ ತಿಳಿಸಿದ್ದಾರೆ.