ದಿನದಲ್ಲಿ ಬರುವ ಸಂಧಿಗಳು ಎಷ್ಟು? ಅದರಿಂದ ನಮಗಾಗುವ ಪ್ರಯೋಜನ ತಿಳಿಯಿರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 07, 2023 | 9:41 PM

ಪ್ರತಿದಿನವೂ ಒಳ್ಳೆಯ ಕಾಲವೇ. ಆದರೆ ಆ ದಿನದಲ್ಲಿಯೂ ಶ್ರೇಷ್ಠವಾದ ಕಾಲ ಎಂದು ಕರೆಯುತ್ತಾರೆ. ಪ್ರಾತಃಸಂಧ್ಯಾ, ಮಧ್ಯಾಹ್ನಸಂಧ್ಯಾ, ಸಾಯಂಸಂಧ್ಯಾ ಮತ್ತು ರಾತ್ರಿಸಂಧ್ಯಾ ಎಂದು ದಿನದಲ್ಲಿ ನಾಲ್ಕು ಸಂಧ್ಯಾಕಾಲಗಳು ಇವೆ. ಅವುಗಳ ಮಹತ್ವ ತಿಳಿಯಿರಿ.

ದಿನದಲ್ಲಿ ಬರುವ ಸಂಧಿಗಳು ಎಷ್ಟು? ಅದರಿಂದ ನಮಗಾಗುವ ಪ್ರಯೋಜನ ತಿಳಿಯಿರಿ
ಪ್ರಾತಿನಿಧಿಕ ಚಿತ್ರ
Follow us on

ಪ್ರತಿದಿನವೂ ಒಳ್ಳೆಯ ಕಾಲವೇ. ಆದರೆ ಆ ದಿನದಲ್ಲಿಯೂ ಶ್ರೇಷ್ಠವಾದ ಕಾಲ ಎಂದು ಕರೆಯುತ್ತಾರೆ. ದಿನದಲ್ಲಿ ನಾಲ್ಕು ಸಂಧ್ಯಾಕಾಲ (sandhyakal) ಗಳು ಇವೆ. ಪ್ರಾತಃಸಂಧ್ಯಾ, ಮಧ್ಯಾಹ್ನಸಂಧ್ಯಾ, ಸಾಯಂಸಂಧ್ಯಾ ಮತ್ತು ರಾತ್ರಿಸಂಧ್ಯಾ ಎಂಬುದಾಗಿ. ಇವುಗಳಲ್ಲಿ ಹಗಲಿನ ಮೂರು ಸಂಧ್ಯೆಗಳು ಪ್ರಶಸ್ತವಾದುದ್ದು. ಇಲ್ಲಿ ದೇವತೋಪಾಸನೆ ಮುಖ್ಯವಾಗಿತ್ತದೆ. ಇದನ್ನು ಪರಿಶುದ್ಧ ಕಾಲವೆಂದೂ ಆತ್ಮೋನ್ನತಿಯನ್ನು ಬಯಸುವವರು ಇದನ್ನು ಸದುಪಯೋಗ ಮಾಡಿಕೊಳ್ಳುವರು.

ಕಾಲದ ವಿಶೇಷವಾದ ಸಂಧ್ಯೆಯನ್ನು ಪ್ರಾಚೀನ ಭಾರತದ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅದರ ಮಹತ್ತ್ವವನ್ನೂ ಮನಗಂಡಿದ್ದಾರೆ.

ಇದನ್ನೂ ಓದಿ: ಬೆಳಗ್ಗೆ ಎಷ್ಟು ಗಂಟೆಗೆ ಎದ್ದರೆ ಉತ್ತಮ? ಏಳುವ ಸಮಯ, ಕ್ರಮದಲ್ಲಿ ಇವು ನಿರ್ಣಯವಾಗಿರುತ್ತದೆ

ಬೆಳಗಿನ ಸಂಧ್ಯೆ ಹೇಗಿರುತ್ತದೆ?

ನಕ್ಷತ್ರಗಳು ಇರಬಾರದು ಮತ್ತು ಸೂರ್ಯೋದಯವಾಗಿರಬಾರದು. ಅಂತಹ ಸಂಧ್ಯೆಯಯನ್ನು ಪ್ರಾತಃಸಂಧ್ಯೆ ಎನ್ನುವರು.

ವಿಶ್ವಾಮಿತ್ರರು ಇದನ್ನು ಹೀಗೆ ಹೇಳುತ್ತಾರೆ
ಉತ್ತಮಾ ತಾರಕೋಪೇತಾ

ಮಧ್ಯಮಾ ಲುಪ್ತತಾರಕಾ |

ಅಧಮಾ ಸೂರ್ಯಸಹಿತಾ

ಪ್ರಾತಃಸಂಧ್ಯಾ ತ್ರಿಧಾಸ್ಮೃತಾ ||

ತಾರೆಗಳು ಇರುವುದು ಉತ್ತಮ, ತಾರೆಗಳು‌ ಲುಪ್ತವಾದರೆ ಮಧ್ಯಮ, ಸೂರ್ಯಸಹಿತವಾದರೆ ಅಧಮ ಎಂಬುದಾಗಿ ಪ್ರಾತಃಕಾಲದ ಸಂಧ್ಯೆಯನ್ನು ಮೂರು ವಿಭಾಗ ಮಾಡಿದ್ದಾರೆ.

ನಮಗೆ ಆಕಾಶದ ಬಗ್ಗೆ ಪರಿಚಯವಿಲ್ಲ. ನಮ್ಮ ಗುರಿಯೂ ಎತ್ತರಕ್ಕೆ ಇಲ್ಲ, ನೋಟವೂ ಎತ್ತರದ್ದನ್ನು ನೋಡದು. ಹಾಗಾಗಿ ಖಗೋಲ ವಿಷಯದಲ್ಲಿ ದೊಡ್ಡ ಗೋಲವೇ ನಮ್ಮ ತಲೆಯಲ್ಲಿ ಇದೆ. ಆಕಾಶದಲ್ಲಿ ನಕ್ಷತ್ರ, ಸೂರ್ಯ ಇವರೆಲ್ಲರೂ ಇಲ್ಲದೇ ಇರುವ ಸಮಯವೊಂದು ಇರುತ್ತದೆ. ಸೂರ್ಯನಿದ್ದಾಗ ನಕ್ಷತ್ರಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಇವು ಯಾವುದೂ ಇರದೇ ಇರುವ ಸ್ಥಿತಿಯು ಸಂಧ್ಯೆ.

ಸಂಜೆಯ ಸಂಧ್ಯೆ ಹೇಗಿರುತ್ತದೆ?

ಸೂರ್ಯನು ಅಸ್ತನಾಗಿರುತ್ತಾನೆ ಮತ್ತು ನಕ್ಷತ್ರಗಳು ಉದಯವಾಗಿರುವುದಿಲ್ಲ. ಇದು ಸಾಯಂ ಸಂಧ್ಯೆ.

ಉತ್ತಮಾ ಸೂರ್ಯಸಹಿತಾ

ಮಧ್ಯಮಾ ಲುಪ್ತಸೂರ್ಯಕಾ |

ಅಧಮಾ ಅಧಮಾ ತಾರಕೋಪೇತಾ

ಸಾಯಂ ಸಂಧ್ಯಾ ತ್ರಿಧಾ ಸ್ಮೃತಾ ||

ಸೂರ್ಯಸಹಿತವಾದ ಸಂಧ್ಯೆಯು ಉತ್ತಮ, ಸೂರ್ಯಾಸ್ತವಾದ ಸಂಧ್ಯೆಯು ಮಧ್ಯಮ ಮತ್ತು ತಾರೋದಯವಾದ ಸಂಧ್ಯೆಯು ಅಧಮ ಎಂದು.

ಇದನ್ನೂ ಓದಿ: ಏಕೆ‌ ಏಳಬೇಕು ಬೇಗ? ತಡವಾದರೆ ಆಗುವುದೇನೀಗ?

ಮತ್ತೆರಡು ಸಂಧ್ಯೆಗಳು ಹಗಲಿನ‌ ಮಧ್ಯಭಾಗ ಮತ್ತು ರಾತ್ರಿಯ ಮಧ್ಯಭಾಗವಾಗಿರುತ್ತದೆ.‌

ಈ ಸಂಧ್ಯೆಯನ್ನು ಸೃಷ್ಟಿ ಮಾಡುವಾಗ ಮನುಷ್ಯರ ಕಲ್ಯಾಣಕ್ಕೆ ಆಗಲಿ ಎಂದು ಬ್ರಹ್ಮ ಸೃಷ್ಟಿಸಿದ. ಮನುಷ್ಯನು ಹಗಲಿರುಳು ಒಂದಲ್ಲ‌ ಒಂದು ಪಾಪಕೃತ್ಯದಲ್ಲಿ ತೊಡಗಿರುತ್ತಾನೆ. ಅದನ್ನು ಸರಿ ಮಾಡಿಕೊಳ್ಳುವ ಈ ಸಂಧ್ಯಾಕಾಲಗಳು, ಅದರಲ್ಲಿಯೂ ಬೆಳಗ್ಗೆ ಮತ್ತು ಸಂಜೆಯ ಸಂಧ್ಯೆಗಳು ಹೆಚ್ಚು ಪ್ರಶಸ್ತವಾದದ್ದಾಗಿರುತ್ತದೆ.

ದಿನದ ದೋಷಗಳನ್ನು ನಾಶಮಾಡುವ ಈ ಕಾಲಗಳು ದೇವರೇ ನಿರ್ಮಿಸಿಕೊಟ್ಟ ಮೆಟ್ಟಿಲು. ಹತ್ತಬೇಕು ಮೆಟ್ಟಿಲನ್ನು ದೇವಲೋಕ ಮುಟ್ಟಲು; ನಮಗಾಗಿ ದೇವನಿರುವನಲ್ಲಿ ಹಿಡಿದು ಅಮೃತದ ತುಂಬಿದ ಬಟ್ಟಲು.

ಮತ್ತಷ್ಟು ಆಧ್ಯಾತ್ಮ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:37 pm, Fri, 7 July 23