AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗ್ಗೆ ಎಷ್ಟು ಗಂಟೆಗೆ ಎದ್ದರೆ ಉತ್ತಮ? ಏಳುವ ಸಮಯ, ಕ್ರಮದಲ್ಲಿ ಇವು ನಿರ್ಣಯವಾಗಿರುತ್ತದೆ

ಯಾರಾದರೂ ಕೇಳಬಹುದು ಅಯ್ಯೋ ಏಳೋದ್ರಿಂದನೇ ಎಲ್ಲ ಸರಿಯಾಗೋದಾಗಿದ್ರೆ ಹೀಗೆ ಇರ್ತಿತ್ತಾ ಜಗತ್ತು. ಎಲ್ಲ ಬೇಗ ಎದ್ದು ಎಲ್ಲವನ್ನೂ ಸರಿ‌ಮಾಡುತ್ತಿದ್ದರು ಅಂತ. ಆದರೆ ಏಳುವ ಸಮಯ, ಕ್ರಮದಲ್ಲಿ ಇದೆಲ್ಲವೂ ನಿರ್ಣಯವಾಗಿರುತ್ತದೆ ಎಂಬ ಸತ್ಯವು ಗೊತ್ತಿಲ್ಲ.

ಬೆಳಗ್ಗೆ ಎಷ್ಟು ಗಂಟೆಗೆ ಎದ್ದರೆ ಉತ್ತಮ? ಏಳುವ ಸಮಯ, ಕ್ರಮದಲ್ಲಿ ಇವು ನಿರ್ಣಯವಾಗಿರುತ್ತದೆ
ಬೆಳಗ್ಗೆ ಏಳುವ ವಿಧಾನ (ಸಾಂದರ್ಭಿಕ ಚಿತ್ರ)
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi|

Updated on: Jul 07, 2023 | 6:30 AM

Share

ಯಾರಾದರೂ ಕೇಳಬಹುದು ಅಯ್ಯೋ ಏಳುವುದರಿಂದ ಎಲ್ಲ ಸರಿಯಾಗುವುದಿದ್ದರೆ ಹೀಗೆ ಇರುತ್ತಿತ್ತಾ ಜಗತ್ತು? ಎಲ್ಲರೂ ಬೇಗ ಎದ್ದು ಎಲ್ಲವನ್ನೂ ಸರಿ‌ಮಾಡುತ್ತಿದ್ದರು ಅಂತ. ಆದರೆ ಬೆಳಗ್ಗೆ ಏಳುವ ಸಮಯ (Wake up Time), ಕ್ರಮದಲ್ಲಿ ಇದೆಲ್ಲವೂ ನಿರ್ಣಯವಾಗಿರುತ್ತದೆ ಎಂಬ ಸತ್ಯವು ಗೊತ್ತಿಲ್ಲ. ಹಾಗಿದ್ದರೆ ಯಾವಾಗ ಏಳಬೇಕು? ಇಲ್ಲಿದೆ ನೋಡಿ ಮಾಹಿತಿ.

ಅರುಣೋಯದಲ್ಲಿ ಏಳಬೇಕು. ಅಂದರೆ ಸೂರ್ಯೋದಯಕ್ಕಿಂತ ಎರಡು ಮುಹೂರ್ತಗಳ ಮೊದಲು. ಒಂದು ಮುಹೂರ್ತ ಎಂದರೆ ಈಗಿನ ಗಂಟೆಯ ಪ್ರಕಾರ ನಲವತ್ತೆಂಟು ನಿಮಿಷಗಳ ಅವಧಿ. ಅಂದರೆ 96 ನಿಮಿಷಗಳು.‌ ಸೂರ್ಯೋದಯಕ್ಕಿಂತ ಒಂದೂವರೆ ತಾಸು ಮೊದಲು ಏಳಬೇಕು. ಆರು ಗಂಟೆಗೆ ಸೂರ್ಯೋದಯವಾದರೆ ಅದಕ್ಕಿಂತ ಒಂದೂವರೆ ತಾಸು ಎಂದರೆ ನಾಲ್ಕೂವರೆಗೆ ಏಳಬೇಕು.‌ ಇದನ್ನು ಬ್ರಾಹ್ಮೀ ಮುಹೂರ್ತ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಸಹಜವಾಗಿ ಎಚ್ಚರಗೊಂಡು ಎದ್ದರೆ ಉತ್ತಮ.‌ ಅದಿಲ್ಲದೇ ಹೋದರೆ ಅಲರಾಮ್ ಇಟ್ಟುಕೊಂಡು ಎಚ್ಚರಗೊಳ್ಳಲೂಬಹುದು.‌ ಇದು ಮಧ್ಯಮ. ಒಟ್ಟಿನಲ್ಲಿ ಆ ಸಮಯಕ್ಕೆ ಏಳಬೇಕು ಎನ್ನುವುದು ಕ್ರಮ. ಇದು ದೇವರು ಮನುಷ್ಯರಿಗೆ ನಿರ್ಮಿಸಿಕೊಡುವ ದಿವ್ಯ ಕಾಲ.

ಹಾಗಿದ್ದರೆ ಏಳುವುದು ಹೇಗೆ?

ಎಚ್ಚರವಾದ ಮೇಲೆ ಹೇಗೆ ಎದ್ದರೇನು ಅಲ್ವಾ? ಅದಕ್ಕೂ ನಿಯಮ ಬೇಕಾ? ಇದೆಲ್ಲ ವರ್ಕ್ ಆಗತ್ತಾ? ಸುಮ್ಮನೇ ಇಂತಹದ್ದನ್ನೆಲ್ಲಾ ಏಕೆ ಹೇಳುತ್ತಾರೆ ಎಂದೆಲ್ಲ ಕೇಳಬಹುದು. ಆದರೆ ಏಳುವುದಕ್ಕೂ ನಿಯಮವಿದೆ. ನೀವು ರಾತ್ರಿ ನಿದ್ರೆಯಲ್ಲಿ ಹೇಗೆ ಬೇಕಾದರೂ ಮಲಗಿ‌. ಆದರೆ ನೀವು ಏಳುವಾಗ ಬಲ ಮಗ್ಗುಲಾಗಿಯೇ ಏಳಬೇಕು. ಯಾಕೆ ಹಾಗೆ? ಎಡಮಗ್ಗುಲಲ್ಲಿ ಎದ್ದರೆ ಎಡಪಂಥೀಯರಾಗುತ್ತೇವಾ? ಬಲಪಂಥದವರು ಮಾತ್ರ ಬಲ ಭಾಗಕ್ಕೆ ಏಳಬೇಕಾ? ಎಂದೆಲ್ಲ ಪ್ರಶ್ನೆಗಳು ಬರಬಹುದು‌. ಅಷ್ಟು ಮಾತ್ರ ಸಾಕಾ ಎಂದರೆ, ಹಾಗೆ ಮಾಡಲು ಒಂದು ಕಾರಣವಿರುತ್ತದೆ. ಉಸಿರಾಟವು ಇದಕ್ಕೆ ಮೂಲ‌ ಕಾರಣವಾಗಿರುತ್ತದೆ.

ಇದನ್ನೂ ಓದಿ: ಏಕೆ‌ ಏಳಬೇಕು ಬೇಗ? ತಡವಾದರೆ ಆಗುವುದೇನೀಗ?

ಎಲ್ಲರಿಗೂ ಮೂಗು ಎರಡೇ ಇರುವುದು. ಆದರೆ ಈ ಎರಡೂ ಮೂಗಿನಲ್ಲಿ ಒಂದೇ ಸಮನೆ, ಒಂದೇ ಸಮಾನವಾಗಿ ಉಸಿರಾಡುವುದಿಲ್ಲ. ಹೆಚ್ಚು ಕಾಲ ಉಸಿರಾಡುವುದು ಯಾವುದಾದರೂ ಒಂದು ಮೂಗಿನಲ್ಲಿ ಮಾತ್ರ. ಒಂದಾದ ಅನಂತರ ಒಂದರಲ್ಲಿ ನಮ್ಮ ಉಸಿರಾಟವಿರಲಿದೆ. ಬೆಳಗಿನ ಹೊತ್ತಿನಲ್ಲಿ ಏಳುವಾಗ ಎಡ ಮೂಗಿನಿಂದ ಉಸಿರಾಟವಾಗಬೇಕು ಎನ್ನುವುದು ನಮ್ಮ ಅಪೂರ್ವ ವಿಜ್ಞಾನಿಗಳಾದ ಋಷಿಗಳು ಕಂಡುಕೊಂಡ ಸತ್ಯ. ಏಕೆಂದರೆ ಅದು ನಾವು ಮುಂದೆ ಮಾಡಲಿರುವ ಕರ್ಮಕ್ಕೆ ಪೂರಕವಾದ ಮನಸ್ಸನ್ನು ಕಲ್ಪಿಸಿಕೊಡಲಿದೆ.

ಎಡ ಮೂಗಿನಿಂದ ಉಸಿರಾಡುವಾಗ ಮಾಡಬೇಕಾದ ಕೆಲಸ, ಬಲ ಮೂಗಿನಲ್ಲಿ ಮಾಡಬೇಕಾದ ಕೆಲಸಗಳು ಇರುತ್ತವೆ. ಸೌಮ್ಯವಾದ ಕೆಲಸವನ್ನು ಎಡ ಮೂಗಿನಲ್ಲಿ ಉಸಿರಾಡುವಾಗ, ಉಗ್ರವಾದ ಕೆಲಸವನ್ನು ಮಾಡಲು ಬಲ ಮೂಗಿನಿಂದ ಉಸಿರಾಡಬೇಕಾಗುತ್ತದೆ. ಬೆಳಗ್ಗೆ ಎದ್ದು ಯಾವ ಸಾಹಸ ಕಾರ್ಯಕ್ಕೂ ಹೋಗಬೇಕಿಲ್ಲ. ಹಾಗಾಗಿ ಬಲ ಮಗ್ಗುಲಾದಾಗ ಉಸಿರಾಟವು ಎಡ ಮೂಗಿನಿಂದ ಆಗುವ ಕಾರಣ ಈ ಕ್ರಮವನ್ನು ಪ್ರಾಚೀನ ಕಾಲದಲ್ಲಿ ತಂದರು. ಬಲಕ್ಕೆ ಹೊರಳಿದಾಗ ಉಸಿರಾಟವು ಎಡಕ್ಕೆ ಬದಲಾಗುತ್ತದೆ ಎಂಬುದು ನಿತ್ಯ ಸತ್ಯದ ವಿಚಾರ.

ಹೀಗೆ ವೈಜ್ಞಾನಿಕ ಹಿನ್ನೆಲೆಯು ಭಾರತೀಯರ ವಿಶೇಷತೆಗಳಲ್ಲಿ ಒಂದು. ಇಲ್ಲಿನ ಆಚರಣೆಗಳಿಗೆ ಸಕಾರಾತ್ಮಕ ದೃಷ್ಟಿಕೋನವು ಇರುತ್ತದೆ. ಆ ದೃಷ್ಟಿಯಿಂದ ನೋಡಿದಾಗ ಅವರು ಕಂಡಿದ್ದನ್ನು ನಾವೂ ಕಣಬೇಕಷ್ಟೇ. ಅದಿಲ್ಲವಾದರೆ ಎಲ್ಲವೂ ವ್ಯತ್ಯಾಸವಾಗಿ ಕಾಣಬಹುದು. ಅಥವಾ ಕಾಣಬೇಕಾದದ್ದು ಕಾಣದೆಯೇ ಹೋಗಬಹುದು.

ಆಧ್ಯಾತ್ಮದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್