ಮನೆಯಲ್ಲಿ ‘ಕಾಮಧೇನು ವಿಗ್ರಹ’ ಇಡುವುದು ಉತ್ತಮವೇ? ಬಸವರಾಜ ಗುರೂಜಿ ನೀಡಿರುವ ಮಾಹಿತಿ ಇಲ್ಲಿದೆ
ಮನೆಯಲ್ಲಿ ಕಾಮಧೇನು ವಿಗ್ರಹ ಇಡುವುದರಿಂದ ಅದೃಷ್ಟ, ಸುಖ, ಶಾಂತಿ ಮತ್ತು ಸಮೃದ್ಧಿಯ ಸಂಕೇತ ಎಂದು ಬಸವರಾಜ ಗುರೂಜಿಯವರು ಹೇಳುತ್ತಾರೆ. ಇದು ವಾಸ್ತು ದೋಷಗಳನ್ನು ನಿವಾರಿಸಿ ನಿಮ್ಮ ಮನೆಯೊಳಗೆ ನಕಾರತ್ಮ ಶಕ್ತಿ ಬರದಂತೆ ತಡೆಯುತ್ತದೆ. ಆದರೆ, ಯಾವುದೇ ವಿಗ್ರಹವನ್ನು ಮನೆಗೆ ತುವ ಮೊದಲು ವಾಸ್ತು ತಜ್ಞರನ್ನು ಸಂಪರ್ಕಿಸುವುದು ಮುಖ್ಯ.

ಸಾಕಷ್ಟು ಜನರು ಮನೆಯ ಅಂದ ಹೆಚ್ಚಿಸಲು ಅಥವಾ ವಾಸ್ತು ಪ್ರಕಾರ ಕೆಲವು ವಿಗ್ರಹ, ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಯಾವುದೇ ವಸ್ತುಗಳನ್ನು ಮನೆಗೆ ತಂದು ಇಡುವ ಮೊದಲು ವಾಸ್ತು ತಜ್ಞರನ್ನು ಸಂಪರ್ಕಿಸುವುದು ಅಗತ್ಯ. ಯಾಕೆಂದರೆ ಕೆಲವು ವಸ್ತುಗಳು ನಿಮ್ಮ ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಇದರಿಂದಾಗಿ ಮನೆಯ ಸದಸ್ಯರ ನಡುವೆ ಮನಸ್ತಾವ, ಗೊಂದಲ ಹಾಗೂ ಜಗಳಕ್ಕೆ ಕಾರಣವಾಗಬಹುದು.
ಇಂದು ಮನೆಯಲ್ಲಿ ‘ಕಾಮಧೇನು ವಿಗ್ರಹ’ ಇಡುವುದು ಉತ್ತಮವೇ? ಎಂಬುದರ ಕುರಿತು ಬಸವರಾಜ ಗುರೂಜಿಯವರು ಮಾಹಿತಿ ನೀಡಿದ್ದಾರೆ. ಕೆಲವರು ಮನೆಯ ಅಂದ ಹೆಚ್ಚಿಸಲು ಶೋ ಪೀಸ್ ಆಗಿ ‘ಕಾಮಧೇನು ವಿಗ್ರಹ’ ವನ್ನು ಮನೆಯಲ್ಲಿ ತಂದಿರುತ್ತಾರೆ. ಆದರೆ ವಾಸ್ತು ಪ್ರಕಾರ ‘ಕಾಮಧೇನು ವಿಗ್ರಹ’ ಮನೆಯಲ್ಲಿ ಇಟ್ಟುಕೊಳ್ಳುವುದು ಅದೃಷ್ಟ, ಸುಖ, ಶಾಂತಿ ಮತ್ತು ಸಮೃದ್ಧಿಯ ಸಂಕೇತ ಎಂದು ಬಸವರಾಜ ಗುರೂಜಿಯುವರು ಸಲಹೆ ನೀಡುತ್ತಾರೆ. ಆದ್ದರಿಂದ ನಿಮ್ಮ ಮನೆಗೆ ಒಂದು ಸಣ್ಣ ಕಾಮಧೇನುವಿನ ವಿಗ್ರಹವನ್ನು ತಂದಿಟ್ಟುಕೊಳ್ಳಿ. ಇದು ನಿಮ್ಮ ಮನೆಯಲ್ಲಿ ವಾಸ್ತು ದೋಷಗಳನ್ನು ನಿವಾರಿಸಿ ಕುಟುಂಬದ ಸದಸ್ಯರ ನಡುವೆ ಪ್ರೀತಿ, ಪ್ರೇಮ ಮತ್ತು ಬಾಂಧವ್ಯವನ್ನು ಬೆಳೆಸುತ್ತದೆ. ಒಟ್ಟಾರೆಯಾಗಿ, ಹಸು ಮತ್ತು ಕರುವಿನ ವಿಗ್ರಹವು ಮನೆಗೆ ಸಂತೋಷ ಸಮೃದ್ಧಿ ತರುತ್ತದೆ ಎಂದು ನಂಬಲಾಗಿದೆ.
ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ಶಿವಪೂಜೆಯಲ್ಲಿ ಕೇದಿಗೆ ಹೂ ಬಳಸದಿರಲು ಕಾರಣವೇನು? ಪುರಾಣ ಕಥೆ ಇಲ್ಲಿದೆ
ಕಾಮಧೇನುವಿನ ವಿಗ್ರಹ ಮಾತ್ರವಲ್ಲದೇ ನೀವು ಫೋಟೋಗಳನ್ನು ಕೂಡ ತಂದು ಇಟ್ಟುಕೊಳ್ಳಬಹುದು. ಆದರೆ ಅದನ್ನು ಯಾವ ಮೂಲೆಯಲ್ಲಿ ಇಡಬೇಕು ಎಂಬುದನ್ನೂ ಕೂಡ ತಿಳಿದುಕೊಳ್ಳುವುದು ಅವಶ್ಯಕ. ನಿಮ್ಮ ಮನೆಯ ದೇವರ ಕೋಣೆಯ ಈಶಾನ್ಯ ಭಾಗದಲ್ಲಿ ಕಾಮಧೇನು ಮೂರ್ತಿಯನ್ನು ಇಟ್ಟು ಮಾಡಿ ಪೂಜೆ ಮಾಡಿ. ಇದು ನಿಮ್ಮ ಮನೆಯೊಳಗೆ ನಕಾರತ್ಮ ಶಕ್ತಿ ಬರದಂತೆ ತಡೆಯುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:41 am, Wed, 19 February 25




