ನಂಬಿಕೆಗಳ ಪ್ರಕಾರ, ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ದೇವಾಲಯವಿದ್ದು, ಇಲ್ಲಿ ನರಸಿಂಹನ ಅವತಾರ ಪ್ರಕಟಗೊಂಡಿದೆ ಎಂದು ನಂಬಲಾಗಿದೆ. ಇಲ್ಲಿ ನರಸಿಂಹ ದೇವರ ದರ್ಶನವಾದ ಕಂಬ ಇಂದಿಗೂ ಇದೆ. ಭಗವಾನ್ ನರಸಿಂಹನು ಬನ್ಮಂಖಿಯ ಸಿಕ್ಲಿಗಢ ಧರಹರಾದಲ್ಲಿ ಹಿರಣ್ಯಕಶ್ಯಪುವನ್ನು ಕೊಂದನೆಂದು ನಂಬಲಾಗಿದೆ. ಪ್ರತಿ ವರ್ಷವೂ ಇಲ್ಲಿ ಹೋಲಿಕಾ ದಹನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇನ್ನೊಂದು ಕಥೆಯ ಪ್ರಕಾರ, ಭಗವಾನ್ ನರಸಿಂಹನ ಅವತಾರ ಸ್ಥಳವು ಉತ್ತರ ಪ್ರದೇಶದ ಪ್ರಸಿದ್ಧ ಹರದೋಯಿ ಜಿಲ್ಲೆಯಾಗಿದೆ. ಪೌರಾಣಿಕ ಕಾಲದಲ್ಲಿ, ಹಿರಣ್ಯಕಶಿಪು ಇಲ್ಲಿ ಆಳ್ವಿಕೆ ನಡೆಸುತ್ತಿದ್ದನು ಅಲ್ಲದೆ ತನ್ನ ನಗರದಲ್ಲಿ ವಿಷ್ಣುವಿನ ನಾಮವನ್ನು ಪಠಿಸಲು ಯಾರಿಗೂ ಅವಕಾಶ ನೀಡಲಿಲ್ಲ. ಅದಕ್ಕಾಗಿಯೇ ಈ ಸ್ಥಳಕ್ಕೆ ಮೊದಲು ಹರಿದ್ರೋಹಿ ಎಂದು ಕರೆಯಲಾಗುತ್ತಿತ್ತು. ಇದು ನರಸಿಂಹ ದೇವರ ದರ್ಶನವಾದ ಬಳಿಕ ಈ ಸ್ಥಳವು ಪ್ರಹ್ಲಾದ ಕುಂಡ ಎಂದು ಜನಪ್ರಿಯವಾಗಿದೆ.
ವೈಶಾಖ ಚತುರ್ದಶಿ ಎಂದು ಕರೆಯಲ್ಪಡುವ ಶುಕ್ಲ ಪಕ್ಷದ 14 ನೇ ದಿನದಂದು ಅಂದರೆ ಹಬ್ಬವನ್ನು ಮೇ 4 ರಂದು ಆಚರಿಸಲಾಗುತ್ತದೆ. ನರಸಿಂಹ ಜಯಂತಿಯನ್ನು ಆಚರಿಸುವ ಸಮಯ ಈ ಕೆಳಗಿನಂತಿದೆ:
ಚತುರ್ದಶಿ ತಿಥಿ ಆರಂಭ: ಮೇ 3, 2023 ರಂದು ಮಧ್ಯಾಹ್ನ 12:19
ಚತುರ್ದಶಿ ತಿಥಿ ಕೊನೆಗೊಳ್ಳುವುದು: ಮೇ 4, 2023 ರಂದು ಮಧ್ಯಾಹ್ನ 12:14 (ಕೆಲವು ಕಡೆಗಳಲ್ಲಿ ತಿಥಿ ಆರಂಭವಾಗುವ ಸಮಯ ಇಟ್ಟುಕೊಂಡು ಮೇ 3ರಂದು ಹಬ್ಬವನ್ನು ಆಚರಿಸುತ್ತಾರೆ.)
ನರಸಿಂಹ ಜಯಂತಿಯ ಉದ್ದೇಶ ಅಧರ್ಮವನ್ನು ತಿರಸ್ಕರಿಸಿ ಧರ್ಮವನ್ನು ಅನುಸರಿಸುವುದಾಗಿದೆ. ಈ ದಿನದಂದು, ಉಪವಾಸವನ್ನು ಅನುಸರಿಸುವ ಮತ್ತು ಭಗವಂತನಿಗೆ ಪ್ರಾಮಾಣಿಕವಾಗಿ ಪ್ರಾರ್ಥನೆ ಸಲ್ಲಿಸುವವರಿಗೆ ಅವರ ಇಷ್ಟಾರ್ಥಗಳು ಈಡೇರುತ್ತವೆ. ಈ ದಿನ ಬೆಳಗ್ಗೆ ಬೇಗನೇ ಬ್ರಹ್ಮ ಮುಹೂರ್ತದಲ್ಲಿ ಎದ್ದು ಮನೆಯನ್ನು ಸ್ವಚ್ಛಗೊಳಿಸಬೇಕು. ಮನೆಯಲ್ಲಿಯೇ ನರಸಿಂಹ ದೇವರ ಫೋಟೋ ಅಥವಾ ವಿಗ್ರಹಗಳಿಗೆ ಪೂಜೆ ಮಾಡಬಹುದು. ಇಲ್ಲವಾದಲ್ಲಿ ಹತ್ತಿರದ ನರಸಿಂಹ ದೇವಾಲಯಗಳಿಗೆ ಭೇಟಿ ನೀಡಬಹುದು. ನರಸಿಂಹ ಜಯಂತಿ ದಿನದಂದು ಉಪವಾಸ ವ್ರತವನ್ನು ಆಚರಿಸುವ ವ್ಯಕ್ತಿಯು ತನ್ನೆಲ್ಲಾ ಲೌಕಿಕ ದುಃಖಗಳಿಂದ ಮುಕ್ತನಾಗಿ ಆರ್ಥಿಕ ಸ್ಥಿತಿಯಲ್ಲಿ ಏರುಗತಿ ಹೊಂದುತ್ತಾನೆ ಎನ್ನುವ ನಂಬಿಕೆಯಿದೆ.
ನಿಮಗೆ ತಿಳಿದಿರುವ ಯಾವುದಾದರೂ ವಿಷ್ಣುವಿನ ಮಂತ್ರವನ್ನು ಜಪಿಸಬಹುದು. ಇಲ್ಲವಾದಲ್ಲಿ ಕೆಳಗೆ ನೀಡಿರುವ ಮಂತ್ರವನ್ನು ಪಠಿಸಬಹುದು.
– ‘ಓಂ ಶ್ರೀ ಲಕ್ಷ್ಮೀನರಸಿಂಹಾಯ ನಮಃ’
– ‘ಓಂ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ|
ನರಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ||’
– ನರಸಿಂಹ ಬೀಜ ಮಂತ್ರ: ‘ಶ್ರೌಂ’ ಅಥವಾ ಕ್ಷ್ರೌಂ
– ‘ಧ್ಯಾಯೇ ನರಸಿಂಹಂ ತರುಣಾರ್ಕನೇತ್ರಂ ಸೀತಾಂಬುಜಾತಂ ಜ್ವಲಿತಾಗ್ರಿವಕ್ತ್ರಂ|’
ಅನಾದಿಮಧ್ಯಾಂತಮಜಂ ಪುರಾಣಂ ಪರಾತ್ಪರೇಶಂ ಜಗತಾಂ ನಿಧಾನಂ||’
– ‘ನೃಮ ನೃಮ ನೃಮ ನರ ಸಿಂಹಾಯ ನಮಃ|
ಮತ್ತಷ್ಟು ಅಧ್ಯಾತ್ಮ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ