ಹಿಂದೂ ಪುರಾಣಗಳಲ್ಲಿ ಕಾರ್ತಿಕ ಮಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕಾರ್ತಿಕ ಪೌರ್ಣಿಮೆಯ (Kartik Purnima) ಈ ದಿನದಂದು ವಿಶೇಷವಾಗಿ ಭಗವಾನ್ ವಿಷ್ಣು ಮತ್ತು ತುಳಸಿಯ ಪೂಜೆ ಕೈಗೊಳ್ಳುವುದು ಮಹತ್ವದ್ದಾಗಿದೆ. ಈ ದಿನ ಭಕ್ತಿಯಿಂದ ಪೂಜೆ ಮಾಡುವುದರಿಂದ ಸಕಲ ಸಮೃದ್ಧಿ ಜೊತೆಗೆ ನಿಮ್ಮ ಆರ್ಥಿಕ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಬಂದಿದೆ. ನಿಮ್ಮ ಆರ್ಥಿಕ ಕಷ್ಟ ನಿವಾರಣೆ ಜೊತೆಗೆ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ಕಂಡುಕೊಳ್ಳಲು ನೀವು ನಾಳೆ ಶುಕ್ರವಾರ (ನವೆಂಬರ್ 19)ರಂದು ಬಂದಿರುವ ಕಾರ್ತಿಕ ಮಾಸದ ದಿನದಂದು ಭಕ್ತಿಯಿಂದ ದೇವರ ಮೊರೆಹೋಗಬಹುದು.
ಕಾರ್ತಿಕ ಮಾಸದ ಪೌರ್ಣಿಮೆಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಈ ದಿನವನ್ನು ದೇವ್ ದೀಪಾವಳಿ ಎಂದೂ ಸಹ ಕರೆಯಲಾಗುತ್ತದೆ. ಈ ದಿನ ವಿಶೇಷವಾಗಿ ಪವಿತ್ರ ನದಿಯಲ್ಲಿ ಮಿಂದೇಳಬೇಕು. ಆರ್ಥಿಕ ಸಮಸ್ಯೆ ನಿವಾರಣೆಯಾಗಲು ಈ ದಿನ ಲಕ್ಷ್ಮಿ ದೇವಿಯ ಮೊರೆ ಹೋಗುತ್ತಾರೆ. ಜೊತೆಗೆ ಪವಿತ್ರ ನೀರಿನಲ್ಲಿ ಸ್ನಾನ ಮಾಡಿ ಉಪವಾಸ ಕೈಗೊಂಡು ಭಕ್ತಿಯಿಂದ ದೇವರ ಧ್ಯಾನದಲ್ಲಿ ತೊಡಗುತ್ತಾರೆ. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಗಳು ಪರಿಹಾರವಾಗುತ್ತವೆ ಎಂಬ ಆಚರಣೆ ಮೊದಲಿನಿಂದಲೂ ಬಂದಿರುವಂಥದ್ದು.
ಕಾರ್ತಿಕ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮ ಮಾಡಿಸುವುದು ಅತ್ಯಂತ ಶ್ರೇಷ್ಠ. ಈ ಹುಣ್ಣಿಮೆಯು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಈ ದಿನ ದಾನ ಮಾಡುವುದಿಂದ ನಿಮಗೆ ಸಕಲ ಸಂಪತ್ತು ಮನೆಯಲ್ಲಿ ಸಂತೋಷ ನೆಮ್ಮದಿ ವೃದ್ಧಿಯಾಗುತ್ತದೆ. ಜೊತೆಗೆ ನಿಮ್ಮೆಲ್ಲಾ ಸಂಕಷ್ಟಗಳಿಗೆ ಪರಿಹಾರ ಸಿಗುತ್ತದೆ. ಹೀಗಿರುವಾಗ ನೀವು ಈ ದಿನ ಯಾವ ರೀತಿ ಪೂಜೆಯಲ್ಲಿ ತೊಡಗಿಕೊಳ್ಳಬೇಕು? ಎಂಬುದು ಈ ಕೆಳಗಿನಂತಿದೆ ತಿಳಿಯಿರಿ.
ಕಾರ್ತಿಕ ಪೌರ್ಣಿಮೆಯ ದಿನದಂದು ಮನೆಯ ತುಂಬಾ ದೀಪ ಬೆಳಗುವ ಮೂಲಕ ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನದಂದು ಹಣತೆಯಲ್ಲಿ ದೀಪ ಬೆಳಗಿಸಿ ನೀರಿನಲ್ಲಿ ಬಿಡಬೇಕು. ಇದರಿಂದ ನಿಮ್ಮ ಜೀವನದಲ್ಲಿ ಸಮೃದ್ಧಿ ಉಂಟಾಗುತ್ತದೆ. ಈ ದಿನದಂದು ವಿಶೇಷವಾಗಿ ಶುದ್ಧ ಮನಸ್ಸಿನಿಂದ ದೀಪವನ್ನು ದಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಕಾರ್ತಿಕ ಪೌರ್ಣಿಮೆಯ ದಿನದಂದು ತುಳಸಿಗೆ ಪೂಜೆ ಮಾಡುತ್ತಾರೆ. ತುಳಸಿಯನ್ನು ಆರಾಧಿಸಿ ಆರತಿ ಬೆಳಗುವ ಮೂಲಕ ವಿಶೇಷ ಪೂಜೆ ಕೈಗೊಳ್ಳಲಾಗುತ್ತದೆ. ತುಳಸಿಯ ಮುಂದೆ ಸ್ವಚ್ಛಗೊಳಿಸಿ ಗಿಡಕ್ಕೆ ನೀರು ಹಾಕಿ ನಂತರ ರಂಗೋಲಿಯನ್ನಿಟ್ಟು ಆರತಿ ಬೆಳಗುವ ಮೂಲಕ ಪೂಜೆ ಕೈಗೊಳ್ಳಲಾಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಗಳು ನಿವಾರಣೆ ಆಗುತ್ತವೆ.
ಇದನ್ನೂ ಓದಿ:
ಕಾರ್ತಿಕ ಮಾಸ ವಿದ್ಯಾರ್ಥಿಗಳಿಗೆ ಅನುಕೂಲಕರ; ಈ 5 ದುರಭ್ಯಾಸ ಬಿಟ್ಟು, ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಖಚಿತ
Published On - 11:35 am, Thu, 18 November 21