AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kartika Amavasya 2025: ಅಮಾವಾಸ್ಯೆಯ ದಿನದಂದು ಮಾಡಬಾರದ 5 ಪ್ರಮುಖ ಕೆಲಸಗಳಿವು

ಇಂದು ಕಾರ್ತಿಕ ಮಾಸದ ಮಹಾಪರ್ವ ಅಮಾವಾಸ್ಯೆ. ಈ ಮಹತ್ವದ ದಿನದಂದು ಕೆಲವೊಂದು ಕೆಲಸಗಳನ್ನು ಮಾಡದಂತೆ ಜ್ಯೋತಿಷಿಗಳು ಸಲಹೆ ನೀಡುತ್ತಾರೆ. ಮಾಂಸಾಹಾರ ಸೇವನೆ, ದೂರ ಪ್ರಯಾಣ, ಹೊಸ ವಸ್ತುಗಳ ಖರೀದಿ ಮತ್ತು ಶುಭ ಕಾರ್ಯಗಳನ್ನು ಮಾಡುವುದರಿಂದ ನಕಾರಾತ್ಮಕ ಪರಿಣಾಮಗಳುಂಟಾಗಬಹುದು. ಶನಿ ದೋಷ ನಿವಾರಣೆಗೆ ಮತ್ತು ದುರದೃಷ್ಟ ತಪ್ಪಿಸಲು ಅಮಾವಾಸ್ಯೆಯಂದು ಈ ಕೆಲಸಗಳಿಂದ ದೂರವಿರಿ.

Kartika Amavasya 2025: ಅಮಾವಾಸ್ಯೆಯ ದಿನದಂದು ಮಾಡಬಾರದ 5 ಪ್ರಮುಖ ಕೆಲಸಗಳಿವು
ಕಾರ್ತಿಕ ಅಮಾವಾಸ್ಯೆ
ಅಕ್ಷತಾ ವರ್ಕಾಡಿ
|

Updated on: Nov 20, 2025 | 11:17 AM

Share

ಇಂದು(ನವೆಂಬರ್​​ 20) ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಕಾರ್ತಿಕ ಮಾಸ, ಶರದೃತು, ಕೃಷ್ಣಪಕ್ಷ ಮತ್ತು ಅಮಾವಾಸ್ಯಾ ತಿಥಿಯನ್ನು ಒಳಗೊಂಡಿದೆ. ಇದು ಮಹಾಪರ್ವ ದಿನವಾದ ಅಮಾವಾಸ್ಯೆಯಾಗಿದೆ. ಈ ಅಮಾವಾಸ್ಯೆಯೊಂದಿಗೆ ಕಾರ್ತಿಕ ಮಾಸವು ಇಂದಿಗೆ ಮುಕ್ತಾಯಗೊಳ್ಳುತ್ತಿದೆ. ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆಯ ಮಹತ್ವದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಇಂದು ಚಂದ್ರ ಸಂಪೂರ್ಣವಾಗಿ ಗೋಚರಿಸುವುದಿಲ್ಲ. ಬಹಳ ಮುಖ್ಯವಾದ ಅಮಾವಾಸ್ಯೆಯ ದಿನದಂದು ಕೆಲವು ಕೆಲಸಗಳನ್ನು ಮಾಡಬಾರದು ಎಂದು ವಿದ್ವಾಂಸರು ಹೇಳುತ್ತಾರೆ. ಆದಾಗ್ಯೂ, ಒಂದು ಪದ್ಧತಿಯಾಗಿ ಮಾತ್ರವಲ್ಲದೆ, ವಿಜ್ಞಾನವೂ ಇದು ನಿಜ ಎಂದು ಹೇಳುತ್ತದೆ.

ಮಾಂಸಾಹಾರ ಸೇವನೆ:

ಅಮವಾಸ್ಯೆಯ ದಿನದಂದು ಮಾಂಸಾಹಾರ ಸೇವಿಸಬಾರದು. ಇದನ್ನು ಶಾಸ್ತ್ರದಲ್ಲೂ ಸ್ಪಷ್ಟವಾಗಿ ಹೇಳಲಾಗಿದೆ. ಏಕೆಂದರೆ ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ, ಮತ್ತು ಈ ದಿನ ಸಸ್ಯಾಹಾರ ಅಥವಾ ಶುದ್ಧ ಮತ್ತು ಸಾತ್ವಿಕ ಆಹಾರವನ್ನು ಸೇವಿಸುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಈ ದಿನ ಮಾಂಸಾಹಾರ ಸೇವನೆಯು ಜಾತಕದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು ಮತ್ತು ಶನಿಗ್ರಹದ ದುಷ್ಪರಿಣಾಮಗಳನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ.

ದೂರ ಪ್ರಯಾಣ:

ಅಮಾವಾಸ್ಯೆಯಂದು ದೂರ ಪ್ರಯಾಣ ಮಾಡದಂತೆ ಹಿರಿಯರು ಸಲಹೆ ನೀಡುತ್ತಾರೆ. ಏಕೆಂದರೆ ಅಮಾವಾಸ್ಯೆಯ ದಿನ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತವೆ ಮತ್ತು ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ ಎಂದು ನಂಬಲಾಗಿದೆ. ವಿಶೇಷವಾಗಿ ಅಮಾವಾಸ್ಯೆಯ ರಾತ್ರಿ ಪ್ರಯಾಣವನ್ನು ಮಾಡದಂತೆ ಸೂಚಿಸಲಾಗುತ್ತದೆ.

ಇದನ್ನೂ ಓದಿ: ಮಹಿಳೆಯರು ಶವ ಯಾತ್ರೆಯಲ್ಲಿ ಭಾಗವಹಿಸಬಹುದೇ? ವೈಜ್ಞಾನಿಕ ದೃಷ್ಟಿಕೋನ ಇಲ್ಲಿದೆ

ಹೊಸ ವಸ್ತು ಖರೀದಿ:

ಅಮಾವಾಸ್ಯೆಯಂದು ಹೊಸ ಬಟ್ಟೆ ಮತ್ತು ಹೊಸ ವಾಹನಗಳನ್ನು ಖರೀದಿಸುವುದು ಶುಭವಲ್ಲ ಎಂದು ಹೇಳಲಾಗುತ್ತದೆ. ಅಲ್ಲದೆ, ಅಮಾವಾಸ್ಯೆಯಂದು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಾರದು. ಅಮಾವಾಸ್ಯೆಯಂದು ಹೊಸ ವಸ್ತುಗಳನ್ನು, ವಿಶೇಷವಾಗಿ ವಾಹನ, ಬಟ್ಟೆಗಳು, ಎಣ್ಣೆ, ಪೂಜಾ ಸಾಮಗ್ರಿಗಳು ಮತ್ತು ಪೊರಕೆಗಳನ್ನು ಖರೀದಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಉಗುರು, ಕೂದಲು ಕತ್ತರಿಸುವುದು ಕೂಡ ಅಶುಭ.

ಶುಭ ಕಾರ್ಯ:

ಅಮವಾಸ್ಯೆಯಂದು ಯಾವುದೇ ಶುಭ ಕಾರ್ಯಗಳು ನಡೆಸುವಂತಿಲ್ಲ. ಇದಲ್ಲದೆ, ಈ ದಿನದಂದು ನಿರ್ಮಾಣ ಕಾರ್ಯಗಳನ್ನು ಕೈಗೊಂಡರೆ ವ್ಯರ್ಥ ಖರ್ಚಿನಿಂದಾಗಿ ಆರ್ಥಿಕ ತೊಂದರೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. ಮದುವೆ, ಗೃಹಪ್ರವೇಶ ಮುಂತಾದ ಯಾವುದೇ ದೊಡ್ಡ ಶುಭ ಕಾರ್ಯಗಳನ್ನು ಸಾಮಾನ್ಯವಾಗಿ ಮಾಡುವುದಿಲ್ಲ, ಏಕೆಂದರೆ ಇದು ಪಿತೃಗಳಿಗೆ ಶ್ರಾದ್ಧ ಮತ್ತು ಇತರ ಪೂಜೆಗಳನ್ನು ಮಾಡಲು ಮೀಸಲಾದ ದಿನವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ