
ನಮ್ಮ ಜೀವನದಲ್ಲಿ ಮನೆ ಎಂಬುದು ಕೇವಲ ವಾಸಿಸುವ ಸ್ಥಳವಲ್ಲ, ಅದು ನೆಮ್ಮದಿ ಮತ್ತು ಧನಾತ್ಮಕ ಶಕ್ತಿಯ ಕೇಂದ್ರ. ಹೀಗಾಗಿ, ಗೃಹ ನಿರ್ಮಾಣ ಮತ್ತು ಮನೆಯ ವಿನ್ಯಾಸದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ವಾಸ್ತು ತತ್ವಗಳನ್ನು ಸರಿಯಾಗಿ ಅನುಸರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಆದರೆ, ಅರಿವಿಲ್ಲದೇ ಮಾಡುವ ಸಣ್ಣಪುಟ್ಟ ವಾಸ್ತು ತಪ್ಪುಗಳು ಕುಟುಂಬದ ಸದಸ್ಯರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮವನ್ನು ಬೀರಬಹುದು.
ಸಾಮಾನ್ಯವಾಗಿ ಮಾರ್ಡನ್ ಮನೆಗಳ ನಿರ್ಮಾಣದಲ್ಲಿ ಜಾಗದ ಕೊರತೆಯಿಂದಾಗಿ ಅಡುಗೆಮನೆ ಮತ್ತು ಸ್ನಾನಗೃಹಗಳನ್ನು (Bathroom) ಅಕ್ಕಪಕ್ಕದಲ್ಲೇ ನಿರ್ಮಿಸುವುದನ್ನು ಕಾಣಬಹುದು. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಈ ರೀತಿ ಅಡುಗೆಮನೆ ಮತ್ತು ಬಾತ್‌ರೂಮ್‌ಗಳು ಒಂದಕ್ಕೊಂದು ತಾಕಿಕೊಂಡಿರುವುದು ದೊಡ್ಡ ವಾಸ್ತು ದೋಷವೆಂದು ಪರಿಗಣಿಸಲಾಗುತ್ತದೆ. ಅಡುಗೆಮನೆಯು ‘ಅಗ್ನಿ’ ತತ್ವವನ್ನು ಪ್ರತಿನಿಧಿಸಿದರೆ, ಸ್ನಾನಗೃಹವು ‘ಜಲ’ ಮತ್ತು ತ್ಯಾಜ್ಯ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಇವೆರಡೂ ಪರಸ್ಪರ ವಿರುದ್ಧ ಶಕ್ತಿಗಳಾಗಿರುವುದರಿಂದ, ಈ ವಿನ್ಯಾಸವು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ
ಒಂದು ವೇಳೆ ನಿಮ್ಮ ಮನೆಯಲ್ಲಿ ಈಗಾಗಲೇ ಅಡುಗೆಮನೆ ಹಾಗೂ ಸ್ನಾನಗೃಹಗಳು ಅಕ್ಕಪಕ್ಕದಲ್ಲೇ ಇದ್ದು, ಅವುಗಳನ್ನು ತಕ್ಷಣವೇ ಕೆಡವಿ ಬದಲಾಯಿಸಲು ಸಾಧ್ಯವಾಗದಿದ್ದರೆ ಚಿಂತಿಸಬೇಕಾಗಿಲ್ಲ. ಕೆಲವು ಸರಳ ಹಾಗೂ ಪರಿಣಾಮಕಾರಿ ಪರಿಹಾರಗಳ ಮೂಲಕ ಈ ದೋಷದ ಪ್ರಭಾವವನ್ನು ಕಡಿಮೆ ಮಾಡಬಹುದು.
ನಿಮ್ಮ ಮನೆಯ ವಾಸ್ತು ದೋಷಗಳನ್ನು ಸಕಾಲದಲ್ಲಿ ಗುರುತಿಸಿ ಈ ರೀತಿಯ ಸರಳ ಪರಿಹಾರಗಳನ್ನು ಅಳವಡಿಸಿಕೊಳ್ಳುವುದರಿಂದ, ಮನೆಯಲ್ಲಿ ಮತ್ತೆ ಧನಾತ್ಮಕ ಶಕ್ತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸುವಂತೆ ಮಾಡಬಹುದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:31 am, Thu, 23 July 26