Pitru Paksha 2021: ಪಿತೃಪಕ್ಷದಲ್ಲಿ ಪುರುಷರು ಗಡ್ಡ ಮತ್ತು ಕ್ಷೌರವನ್ನು ಮಾಡಿಸಿಕೊಂಡರೆ ಈ ಸಮಸ್ಯೆ ಹೆಗಲೇರುತ್ತೆ

| Updated By: ಆಯೇಷಾ ಬಾನು

Updated on: Sep 23, 2021 | 7:41 AM

ಪಿತೃ ಪಕ್ಷ 2021: ಪಿತೃ ಪಕ್ಷದಲ್ಲಿ ತಮ್ಮ ಪೂರ್ವಜರ ಶ್ರಾದ್ಧ ಕರ್ಮಗಳನ್ನು ಅನುಸರಿಸುವ ಪುರುಷರು ತಮ್ಮ ಗಡ್ಡ ಮತ್ತು ಕೂದಲುಗಳನ್ನು ಕತ್ತರಿಸಬಾರದು. ಏಕೆಂದರೆ ಇದು ಶೋಕಾಚರಣೆಯ ಮತ್ತು ತಪಸ್ಸಿನ ಸಮಯ ಎಂದು ನಂಬಲಾಗಿದೆ.

Pitru Paksha 2021: ಪಿತೃಪಕ್ಷದಲ್ಲಿ ಪುರುಷರು ಗಡ್ಡ ಮತ್ತು ಕ್ಷೌರವನ್ನು ಮಾಡಿಸಿಕೊಂಡರೆ ಈ ಸಮಸ್ಯೆ ಹೆಗಲೇರುತ್ತೆ
ಸಾಂದರ್ಭಿಕ ಚಿತ್ರ
Follow us on

ಭಾದ್ರಪದ ಮಾಸದ ಹುಣ್ಣಿಮೆಯ ದಿನದಿಂದ (ಪೂರ್ಣಿಮಾ ತಿಥಿ) ಆರಂಭವಾಗಿ ಹದಿನೈದು ದಿನಗಳ ಕಾಲ ಪಿತೃ ಪಕ್ಷ ಮಾಡಲಾಗುತ್ತೆ. ಈ ಅವಧಿಯಲ್ಲಿ ಮೃತಪಟ್ಟ ಕುಟುಂಬದ ಸದಸ್ಯರು/ಪೂರ್ವಜರ ಆತ್ಮಕ್ಕೆ ಶಾಂತಿ ನೀಡಲು ಶ್ರಾದ್ಧ, ತರ್ಪಣವನ್ನು ಅರ್ಪಿಸಲಾಗುತ್ತೆ. ಆದ್ದರಿಂದ ಪುರುಷರು ಅಗಲಿದ ತಮ್ಮವರ ಆತ್ಮಗಳನ್ನು ಮೆಚ್ಚಿಸಲು ಶ್ರಾದ್ಧ ಮತ್ತು ತರ್ಪಣ ಆಚರಣೆಗಳನ್ನು ಮಾಡುತ್ತಾರೆ. ಪಿತೃ ಪಕ್ಷದಲ್ಲಿ ತಮ್ಮ ಪೂರ್ವಜರ ಶ್ರಾದ್ಧ ಕರ್ಮಗಳನ್ನು ಅನುಸರಿಸುವ ಪುರುಷರು ತಮ್ಮ ಗಡ್ಡ ಮತ್ತು ಕೂದಲುಗಳನ್ನು ಕತ್ತರಿಸಬಾರದು. ಏಕೆ ಎಂಬುವುದನ್ನು ತಿಳಿಯಲು ಆರ್ಟಿಕಲ್ ಓದಿ.

ಪಿತೃ ಪಕ್ಷದ ಅವಧಿಯಲ್ಲಿ ಸತ್ತವರ ಅತೃಪ್ತ ಆತ್ಮಗಳು ತಮ್ಮ ಕುಟುಂಬ ಸದಸ್ಯರನ್ನು ನೋಡಲು ಭೂಮಿಗೆ ಮರಳುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಪೂರ್ವಜರ ಆತ್ಮಕ್ಕೆ ಮೋಕ್ಷವನ್ನು ನೀಡಲು ಪಿಂಡ ದಾನವನ್ನು ಮಾಡುತ್ತಾರೆ. ಕಾಗೆಗಳಿಗೆ ಆಹಾರವನ್ನು ನೀಡುತ್ತಾರೆ. ಜನರು ನೀಡಿದ ಆಹಾರವನ್ನು ಕಾಗೆಗಳು ಸ್ವೀಕರಿಸಿದರೆ ಪೂರ್ವಜರು ಸಂತುಷ್ಟರಾಗಿದ್ದಾರೆ ಎಂದು ಎರ್ಥ. ಕಾಗೆಗಳು ಆಹಾರವನ್ನು ಸೇವಿಸದಿದ್ದರೆ. ಮೃತರು ಅಸಮಾಧಾನರಾಗಿದ್ದಾರೆ ಎಂದು ಅರ್ಥ. ಏಕೆಂದರೆ ಕಾಗೆಗಳು ಪೂರ್ವಜರನ್ನು ಪ್ರತಿನಿಧಿಸುತ್ತವೆ.

ಇವುಗಳಲ್ಲದೆ, ಪಿತೃ ಪಕ್ಷದಲ್ಲಿ ತಮ್ಮ ಪೂರ್ವಜರ ಶ್ರಾದ್ಧ ಕರ್ಮಗಳನ್ನು ಅನುಸರಿಸುವ ಪುರುಷರು ತಮ್ಮ ಗಡ್ಡ ಮತ್ತು ಕೂದಲುಗಳನ್ನು ಕತ್ತರಿಸಬಾರದು. ಏಕೆಂದರೆ ಇದು ಶೋಕಾಚರಣೆಯ ಮತ್ತು ತಪಸ್ಸಿನ ಸಮಯ ಎಂದು ನಂಬಲಾಗಿದೆ. ಪಿತೃಪಕ್ಷದಲ್ಲಿ ಪಿತೃಗಳನ್ನು ಪೂಜಿಸುವ ಪುರುಷರು ಗಡ್ಡ ಮತ್ತು ಕ್ಷೌರವನ್ನು ಮಾಡಿಸಿಕೊಳ್ಳುವುದರಿಂದ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಪಿತೃ ಪಕ್ಷ ಮುಗಿಯುವವರೆಗೂ ಯಾವುದೇ ಶುಭ ಕಾರ್ಯಕ್ರಮಗಳು ಅಥವಾ ಕಾರ್ಯಗಳನ್ನು ಕೈಗೊಳ್ಳಲಾಗುವುದಿಲ್ಲ. ಉದಾಹರಣೆಗೆ, ಜನರು ಹೊಸ ಬಟ್ಟೆ ಅಥವಾ ಹೊಸ ವಸ್ತುಗಳನ್ನು, ಚಿನ್ನ ಅಥವಾ ಯಾವುದೇ ಬೆಲೆಬಾಳುವ ಆಭರಣಗಳನ್ನು ಖರೀದಿಸುವುದಿಲ್ಲ. ಹಾಗೂ ಕೆಟ್ಟ ಅಭ್ಯಾಸಗಳು, ಅಮಲು ಪದಾರ್ಥಗಳು, ಪ್ರತೀಕಾರದ ಆಹಾರಗಳಿಂದ ದೂರವಿರ ಬೇಕು. ಮದ್ಯ-ಮಾಂಸಾಹಾರಿ, ಬೆಳ್ಳುಳ್ಳಿ-ಈರುಳ್ಳಿಯನ್ನು ಪಿತೃ ಪಕ್ಷದಲ್ಲಿ ಎಂದಿಗೂ ಸೇವಿಸಬಾರದು. ಸೋರೆಕಾಯಿ, ಸೌತೆಕಾಯಿ, ಸಾಸಿವೆ ಸೊಪ್ಪು ಮತ್ತು ಜೀರಿಗೆಯನ್ನು ತಿನ್ನಬಾರದು.

ಹೀಗೆ, ಪ್ರಾರ್ಥನೆ ಮತ್ತು ಆಚರಣೆಗಳನ್ನು ಮಾಡುವ ಮೂಲಕ, ಜನರು ನೊಂದ ಆತ್ಮಗಳಿಗೆ ಶಾಂತಿ ನೀಡುವ ಕಾರ್ಯ ಮಾಡುತ್ತಾರೆ. ಪಿತೃ ದೋಷದಿಂದ (ಪೂರ್ವಜರ ಶಾಪ) ತಮ್ಮನ್ನು ನಿವಾರಿಸಲು ಪಿತೃ ಪಕ್ಷ ಸಹಾಯ ಮಾಡಬೇಕು.

ಇದನ್ನೂ ಓದಿ:
Pitru Paksha 2021: ಪಿತೃಪಕ್ಷದ ಮಹತ್ವವೇನು? ಅದನ್ನು ಅರ್ಥಪೂರ್ಣವಾಗಿ ಆಚರಿಸೋದು ಹೇಗೆ?

Pitru Paksha 2021: ಪಿತೃ ಪಕ್ಷದ ವೇಳೆ ಪೂರ್ವಜರಿಗೆ ಗೌರವ ಸಲ್ಲಿಸುವುದೇಕೆ?