Pitru Paksha 2021: ಪಿತೃ ಪಕ್ಷದ ವೇಳೆ ಪೂರ್ವಜರಿಗೆ ಗೌರವ ಸಲ್ಲಿಸುವುದೇಕೆ?

ಪಿತೃ ಪಕ್ಷ 2021: ಪಿತೃ ಪಕ್ಷದ ಸಮಯದಲ್ಲಿ 15 ದಿನಗಳ ಕಾಲ ಪೂರ್ವಜರು ತಮ್ಮ ಕುಟುಂಬದೊಂದಿಗೆ ಇರಲು ಭೂಮಿಗೆ ಬರುತ್ತಾರೆ ಎಂಬ ನಂಬಿಕೆಗಳಿವೆ. ಹೀಗಾಗಿ ಈ ಸಮಯಲ್ಲಿ ಪೂರ್ವಜರನ್ನು ಸಂತೋಷಪಡಿಸುವಂತಹ ಕೆಲಸ ಮಾಡಬೇಕು.

Pitru Paksha 2021: ಪಿತೃ ಪಕ್ಷದ ವೇಳೆ ಪೂರ್ವಜರಿಗೆ ಗೌರವ ಸಲ್ಲಿಸುವುದೇಕೆ?
ಪಿತೃಪಕ್ಷ
Follow us
TV9 Web
| Updated By: ಆಯೇಷಾ ಬಾನು

Updated on: Sep 20, 2021 | 2:57 PM

ಭಾದ್ರಪದ ತಿಂಗಳ ಹುಣ್ಣಿಮೆ ಅಂದರೆ ಪಿತೃ ಪಕ್ಷ ಆರಂಭ. ಹಿಂದೂ ಸಂಪ್ರದಾಯದಲ್ಲಿ ಪಿತೃ ಪಕ್ಷವನ್ನು ಬಹಳ ಮುಖ್ಯವೆಂದು ಹೇಳಲಾಗುತ್ತೆ. ಪ್ರತಿ ವರ್ಷ 15 ದಿನಗಳ ಕಾಲ ಪೂರ್ವಜರಿಗೆ ಗೌರವ ಸಲ್ಲಿಸಲಾಗುತ್ತೆ. ಈ 15 ದಿನಗಳ ಅವಧಿಯನ್ನು ಪಿತೃ ಪಕ್ಷ ಅಥವಾ ಚಾತುರ್ಮಾಸದ ಶ್ರಾದ್ಧ ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯು ಸತ್ತ ನಂತರ ಅವನ ಆತ್ಮವು ಅಲೆದಾಡುತ್ತಲಿರುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಅವರ ಆತ್ಮಗಳ ಶಾಂತಿಗಾಗಿ ಪಿಂಡ ದಾನ, ತರ್ಪಣ, ಶ್ರಾದ್ಧವನ್ನು ಮಾಡುತ್ತಾರೆ. ಈ ರೀತಿ ಪೂರ್ವಜನ ಆರ್ಶೀವಾದ ಪಡೆಯಬಹುದು ಎನ್ನುತ್ತಾರೆ.

ಪಿತೃ ಪಕ್ಷದ ಸಮಯದಲ್ಲಿ 15 ದಿನಗಳ ಕಾಲ ಪೂರ್ವಜರು ತಮ್ಮ ಕುಟುಂಬದೊಂದಿಗೆ ಇರಲು ಭೂಮಿಗೆ ಬರುತ್ತಾರೆ ಎಂಬ ನಂಬಿಕೆಗಳಿವೆ. ಹೀಗಾಗಿ ಈ ಸಮಯಲ್ಲಿ ಪೂರ್ವಜರನ್ನು ಸಂತೋಷಪಡಿಸುವಂತಹ ಕೆಲಸ ಮಾಡಬೇಕು.

ಪಿತೃ ಪಕ್ಷ ಯಾವಾಗ ಈ ವರ್ಷ, ಪಿತೃ ಪಕ್ಷವು ಸೆಪ್ಟೆಂಬರ್ 20 ರಂದು ಆರಂಭವಾಗಿ ಅಕ್ಟೋಬರ್ 6 ರಂದು ಕೊನೆಗೊಳ್ಳುತ್ತದೆ. ಪಿತೃ ಪಕ್ಷದ ಕೊನೆಯ ದಿನವೆಂದರೆ ಸರ್ವ ಪಿತೃ ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆ. ಈ ಅವಧಿಯಲ್ಲಿ ಅತ್ಯಂತ ಮಹತ್ವದ ದಿನವೆಂದು ಪರಿಗಣಿಸಲಾಗಿದೆ.

ಶ್ರಾದ್ಧದ ಅರ್ಥ ಈ ಪದವನ್ನು ಎರಡು ಸಂಸ್ಕೃತ ಪದಗಳಿಂದ ತೆಗೆದುಕೊಳ್ಳಲಾಗಿದೆ. “ಸತ್” (ಸತ್ಯ) ಮತ್ತು “ಆಧಾರ್” (ಆಧಾರ). ಆದ್ದರಿಂದ, ಶ್ರಾದ್ಧವು ಅತ್ಯಂತ “ಶ್ರಾದ್ಧ” ಮತ್ತು ಭಕ್ತಿಯಿಂದ ಮಾಡಿದ ಕಾಣಿಕೆಯನ್ನು ಸೂಚಿಸುತ್ತದೆ.

ಪಿತೃ ಪಕ್ಷ ಮಹತ್ವ ಪಿತೃ ಪಕ್ಷವು ಚಂದ್ರನ ಚಕ್ರದ ಕ್ಷೀಣಿಸುವಿಕೆಯ ಆರಂಭವನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ, ಸತ್ತವರಿಗೆ ಗೌರವ ಸಲ್ಲಿಸಲು ವಿವಿಧ ಆಚರಣೆಗಳನ್ನು ಮಾಡಲಾಗುತ್ತೆ. ಮೊದಲೇ ಹೇಳಿದಂತೆ, ಸಾವಿನಲ್ಲಿ ಶಾಂತಿ ಕಂಡುಕೊಳ್ಳದವರ ಆತ್ಮವು ತಮ್ಮ ಕುಟುಂಬದ ಸದಸ್ಯರನ್ನು ಪರೀಕ್ಷಿಸಲು ಭೂಮಿಯ ಸುತ್ತ ಅಲೆದಾಡುತ್ತದೆ ಎಂದು ನಂಬಲಾಗಿದೆ. ಅವರು ಮೋಕ್ಷವನ್ನು ಪಡೆಯಲು ಮತ್ತು ಅವರಿಗೆ ಶಾಂತಿ ನೆಮ್ಮದಿ ನೀಡಲು ಜನರು ಪಿಂಡದಾನವನ್ನು ಮಾಡುತ್ತಾರೆ. ಜ್ಯೋತಿಷ್ಯದ ಪ್ರಕಾರ, ಪಿತೃ ದೋಷದಿಂದ ಬಳಲುತ್ತಿರುವ ಜನರು (ಪಿತೃಗಳ ಶಾಪ) ಶ್ರಾದ್ಧ ಆಚರಣೆಗಳನ್ನು ಮಾಡಬೇಕು. ಮತ್ತು ಕಾಗೆಗೆ ಆಹಾರವನ್ನು ನೀಡಬೇಕು.

ಇದನ್ನೂ ಓದಿ: Pitru Paksha 2021: ಪಿತೃಪಕ್ಷದ ಮಹತ್ವವೇನು? ಅದನ್ನು ಅರ್ಥಪೂರ್ಣವಾಗಿ ಆಚರಿಸೋದು ಹೇಗೆ?

Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್