ಚಾಣಕ್ಯನ ರಣನೀತಿ: ಶತ್ರುವಿನ ಮೇಲೆ ವಿಜಯ ಸಾಧಿಸಲು ಆಚಾರ್ಯ ಚಾಣಕ್ಯ ಹೇಳಿದಂತೆ ಈ 3 ನಿಯಮ ಪಾಲಿಸಬೇಕು
ಒಂದು ವೇಳೆ ಯಾರೇ ಆಗಲಿ ತಮ್ಮ ಶತ್ರುಗಳ ಶಕ್ತಿ ಸಾಮರ್ಥ್ಯಗಳ ಕಡಿಮೆ ತುಲನೆ ಮಾಡಿದರೆ ಅದು ದೊಡ್ಡ ತಪ್ಪಾದೀತು. ಹಾಗೆ ಮಾಡಿದರೆ ಯುದ್ಧ ಆರಂಭಕ್ಕೂ ಮುನ್ನವೇ ಸೋಲು ಕಾಣುವಂತೆ ಆಗುತ್ತೆ.
ಆಚಾರ್ಯ ಚಾಣಕ್ಯರ (Acharaya Chanakya) ನೀತಿಶಾಸ್ತ್ರದ ಪ್ರಕಾರ ಯಾವುದೇ ವ್ಯಕ್ತಿ ತನ್ನ ವಿರೋಧಿಯ ಮೇಲೆ ಜಯ ಸಾಧಿಸಬೇಕು ಅಂದರೆ ಈ ಕೆಳಗೆ ಉಲ್ಲೇಖಿಸಿರುವ ಮಾತುಗಳನ್ನು ಚಾಚೂ ತಪ್ಪದೆ ಪರಿಪಾಲಿಸಬೇಕು. ಆಚಾರ್ಯ ಚಾಣಕ್ಯ ಒಬ್ಬ ಕುಶಲ ರಣತಂತ್ರಗಾರ. ಆತ ಸುವಿಖ್ಯಾತ ಅರ್ಥಶಾಸ್ತ್ರಜ್ಞನೂ ಹೌದು. ಚಾಣಕ್ಯನ ಜೀವನದಲ್ಲಿ ಶಿಕ್ಷಣಕ್ಕೆ, ಕಲಿಕೆಗೆ ಭಾರೀ ಮಹತ್ವವಿದೆ. ಚಾಣಕ್ಯ ಚಿಕ್ಕ ವಯಸ್ಸಿನಲ್ಲಿಯೇ ವೇದಗಳು ಮತ್ತು ಗ್ರಂಥ ಶಅಸ್ತ್ರಗಳ ಬಗ್ಗೆ ಅಪಾರ ತಿಳಿವಳಿಕೆ ಬೆಳೆಸಿಕೊಂಡಿದ್ದ. ಚಾಣಕ್ಯ ತನ್ನ ಕೂಟ ನೀತಿ ಮತ್ತು ರಣನೀತಿಯಿಂದಾಗಿ ತನ್ನ ದೊಡ್ಡ ದೊಡ್ಡ ಶತ್ರುಗಳನ್ನೂ ಸಹ ಪರಾಜಯಗೊಳಿಸಿದ್ದ. ಅದರಿಂದ ಬಾಲ ಚಾಣಕ್ಯ ಸಾಮ್ರಾಟನಾಗಿ ಪರಿವರ್ತನೆಗೊಂಡ. ಇದನ್ನು ಚಾಣಕ್ಯ ತನ್ನ ಅನೇಕ ಪುಸ್ತಕಗಳು ಮತ್ತು ಗ್ರಂಥಗಳಲ್ಲಿ ಬರೆದಿಟ್ಟಿದ್ದಾನೆ.
ಬಾಲ ಚಾಣಕ್ಯ ಮುಂದೆ ದೊಡ್ಡವನಾಗಿ ತಕ್ಷಶಿಲಾದಲ್ಲಿ ತನ್ನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ. ಆ ಮಾರ್ಗದರ್ಶನ ಗಳನ್ನೊಳಗೊಂಡ ನೀತಿ ಕತೆಗಳು, ಗ್ರಂಥಗಳು ಇಂದಿಗೂ ಪ್ರಚಲಿತವಾಗಿವೆ. ಯಾವುದೇ ವ್ಯಕ್ತಿಯ ಚಾಣಕ್ಯನ ಈ ನೀತಿಗಳನ್ನು ಚಾಚೂತಪ್ಪದೆ ಪಾಲನೆ ಮಾಡಿದ್ದೇ ಆದರೆ ಅಂತಹವರಿಗೆ ಅವರ ಜೀವನದಲ್ಲಿ ಸದಾ ಸಫಲತೆ ಎಂಬುದು ಕಟ್ಟಿಟ್ಟಬುತ್ತಿ ಆಗಿರುತ್ತದೆ. ಒಂದು ವೇಳೆ ಯಾರೇ ಆಗಲಿ ತಮ್ಮ ಶತ್ರುಗಳನ್ನು ಸೋಲಿಸಬೇಕು ಎಂದರೆ ಚಾಣಕ್ಯನ ಈ ಮಾತುಗಳನ್ನು ಪಾಲಿಸಿದರೆ ಸಾಕು.
ಒಂದು ವೇಳೆ ಯಾರೇ ಆಗಲಿ ತಮ್ಮ ಶತ್ರುಗಳ ಶಕ್ತಿ ಸಾಮರ್ಥ್ಯಗಳ ಕಡಿಮೆ ತುಲನೆ ಮಾಡಿದರೆ ಅದು ದೊಡ್ಡ ತಪ್ಪಾದೀತು. ಹಾಗೆ ಮಾಡಿದರೆ ಯುದ್ಧ ಆರಂಭಕ್ಕೂ ಮುನ್ನವೇ ಸೋಲು ಕಾಣುವಂತೆ ಆಗುತ್ತೆ.
ಶತ್ರುವಿನ ಪ್ರತಿ ಚಲನವಲನದ ಮೇಲೂ ಕಣ್ಣಿಟ್ಟಿರಬೇಕು:
ಆಚಾರ್ಯ ಚಾಣಕ್ಯ ಹೇಳುವಂತೆ ಯಾವುದೇ ವ್ಯಕ್ತಿ ಸಮರದಲ್ಲಿ ಜಯ ಸಾಧಿಸಬೇಕು ಅಂತಾದರೆ ತನ್ನ ವಿರೋಧಿಯ ಬಲ ಮತ್ತು ಬಲಹೀನತೆ ಎರಡನ್ನೂ ಚೆನ್ನಾಗಿ ಅರಿತಿರಬೇಕು. ತನ್ನ ವಿರೋಧಿ ಪಾಳಯದ ಮೇಲೆ ಇಟ್ಟಿರುವ ಕಣ್ಣನ್ನು ಆಚೀಚೆ ಮಾಡಬಾರದು. ಶತ್ರುವಿನ ಮೇಲೆ ಪಕ್ಕಾ ನಿಗಾ ಇಟ್ಟಿರಬೇಕು. ಸ್ವಲ್ಪವೇ ಉದಾಸೀನತೆ ತೋರಿದರೂ ಅಪಜಯ ಎಂಬುದು ಖಚಿತವಾಗುತ್ತದೆ. ಶತ್ರು ಪ್ರತ್ತೇಕ, ವಿಶಿಷ್ಟ ಗತಿವಿಧಿಗಳನ್ನೂ ಚೆನ್ನಾಗಿ ಅರಿತಿರಬೇಕು. ಆಗಲೇ ಸಮರದಲ್ಲಿ ವಿಜಯ ಸಾಧಿಸಬಹುದು.
ಶತ್ರು ಬಲಶಾಲಿ ಆಗಿರುತ್ತಾನೆ:
ಆಚಾರ್ಯ ಚಾಣಕ್ಯ ಏನು ಹೇಳುತ್ತಾನೆ ಅಂದರೆ ನಿಮ್ಮ ಶತ್ರು ಬಲಶಾಲಿಯಾಗಿದ್ದರೆ ಆತನನ್ನು ಬುದ್ಧಿಕೌಶಲ್ಯದಿಂದ ಕೆಡವಬೇಕು. ಒಂದು ವೇಳೆ ಶತ್ರು ನಿಮಗಿಂತ ಬಲಶಾಲಿಯೇ ಆಗಿದ್ದರೆ ಆ ವೇಳೆ ಬಚ್ಚಿಟ್ಟುಕೊಳ್ಳುವುದು ಕ್ಷೇಮ. ಬಳಿಕ, ಸಮಯ ನೋಡಿಕೊಂಡು ತಕ್ಕ ಉತ್ತರ ನೀಡಬೇಕು. ಇದರಿಂದ ಪ್ರತಿಸ್ಪರ್ಧಿಯನ್ನು ಬಲಹೀನನ್ನಾಗಿ ಮಾಡಿಬಿಡಬಹುದು. ತಮ್ಮ ಶುಭ ಚಿಂತಕರ ಜೊತೆ ಚರ್ಚಿಸಿ, ಪ್ರಹಾರ ನಡೆಸಬೇಕು.
ಶತ್ರು ಪಾಳಯ ಬಲಹೀನ ಎಂದು ಎಣಿಸಬಾರದು: ಶತ್ರುವನ್ನು ಬಲಹೀನ ಎಂದು ಪರಿಗಣಿಸಬಾರದು. ಅಂತಹ ತಪ್ಪನ್ನು ಮಾಡಲೇಬೇಡಿ. ಬಹುತೇಕ ಜನರು ತಮ್ಮ ಶತ್ರುವನ್ನು ಕ್ಷೀನನೆಂದು ಪರಿಗಣಿಸಿ, ಅಪಾಯವನ್ನು ತಂದಿಟ್ಟುಕೊಳ್ಳುತ್ತಾರೆ. ಶತ್ರುವನ್ನು ಬಲಹೀನ ಎಂದು ಪರಿಗಣಿಸುವುದೇ ಮಹಾಪರಾಧವಾದೀತು ಎನ್ನುತ್ತಾನೆ ಆಚಾರ್ಯ ಚಾಣಕ್ಯ. ನಿಮ್ಮ ಶತ್ರುವಿನ ಬಗೆಗಿನ ಪ್ರತಿಯೊಂದು ಮಾಹಿತಿಯೂ ನಿಮಗೆ ತಿಳಿದಿರಬೇಕು. ಹಾಗಾದರೆ ಮಾತ್ರವೇ ತನ್ನ ಶತ್ರುವಿನ ಮೇಲೆ ಯಾರೇ ಆಗಲಿ ವಿಜಯ ಸಾಧಿಸಬಹುದು.
(chanakya niti follow these 3 Teachings of Acharya Chanakya to overpower your Enemy)