ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ರೀತಿ ಮಾಡಿ
ಚಳಿಗಾಲದಲ್ಲಿ ಕೆಲವರಿಗೆ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಜೊತೆಗೆ ಶೀತ, ಜ್ವರ ಮತ್ತು ಕೆಮ್ಮಿನಂತಹ ಸಮಸ್ಯೆಗಳು ಬರಬಹುದು ಇಂತಹ ಸಂದರ್ಭಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳುವುದು ಬಹಳ ಮುಖ್ಯ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಸೋಂಕುಗಳು ಕಂಡು ಬರುತ್ತಿರುವುದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕೆ ನೀವು ಹೋಮಿಯೋಪತಿ ಔಷಧಗಳ ಮೊರೆ ಹೋಗಬಹುದು.ಹಾಗಾದರೆ ರೋಗನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳುವುದು ತಿಳಿದುಕೊಳ್ಳಿ.
ಚಳಿಗಾಲದಲ್ಲಿ ಜನರ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದು ಸಾಮಾನ್ಯ. ಇದರಿಂದ ಜನರಲ್ಲಿ ಆಗಾಗ ಶೀತ, ಗಂಟಲು ನೋವು ಮತ್ತು ಜ್ವರದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಜೊತೆಗೆ ದೇಹ ರೋಗಗಳಿಂದ ನಿಮ್ಮನ್ನು ರಕ್ಷಿಸಲು ವಿಫಲವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳುವುದು ಬಹಳ ಮುಖ್ಯ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಸೋಂಕುಗಳು ಕಂಡು ಬರುತ್ತಿರುವುದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕೆ ನೀವು ಹೋಮಿಯೋಪತಿ ಔಷಧಗಳ ಮೊರೆ ಹೋಗಬಹುದು ಇದು ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ವಿಧಾನವಾಗಿದೆ. ಹಾಗಾದರೆ ಹೋಮಿಯೋಪತಿ ವಿಧಾನಗಳೊಂದಿಗೆ ರೋಗನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಆದರೆ ಅದಕ್ಕೂ ಮೊದಲು, ಹೋಮಿಯೋಪತಿ ಎಂದರೇನು? ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೋಮಿಯೋಪತಿ ಎನ್ನುವಂತದ್ದು ಒಂದು ಪ್ರಾಚೀನ ವೈದ್ಯಕೀಯ ವ್ಯವಸ್ಥೆಯಾಗಿದೆ. ಇದರಲ್ಲಿ ನೈಸರ್ಗಿಕ ಮೂಲಗಳಿಂದ ಔಷಧಿಗಳನ್ನು ತಯಾರಿಸಲಾಗುತ್ತದೆ. ಶೀತ, ಗಂಟಲು ನೋವು, ಚರ್ಮ ರೋಗಗಳು ಸೇರಿದಂತೆ ಅನೇಕ ರೋಗಗಳ ಚಿಕಿತ್ಸೆಯಲ್ಲಿ ಹೋಮಿಯೋಪತಿಯನ್ನು ಬಳಸಲಾಗುತ್ತದೆ. ಹೋಮಿಯೋಪತಿ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರೋಗಗಳಿಗೆ ಸರಿಯಾದ ಕಾರಣ ತಿಳಿದು ಅದರ ಮೇಲೆ ಕೆಲಸ ಮಾಡುತ್ತದೆ. ಹಾಗಾದರೆ ಹೋಮಿಯೋಪತಿ ಮೂಲಕ ರೋಗನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ ತಜ್ಞರು ನೀಡಿದ ಮಾಹಿತಿ ಇಲ್ಲಿದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ವಿಧಾನಗಳನ್ನು ಅನುಸರಿಸಿ
ದೆಹಲಿಯ ಹೋಮಿಯೋಪತಿಯ ಡಾ. ಅಜಯ್ ಕುಮಾರ್ ಗುಪ್ತಾ ಅವರು ಹೇಳುವ ಪ್ರಕಾರ, ರೋಗಗಳಿಂದ ರಕ್ಷಣೆ ಪಡೆಯಲು ಜೊತೆಗೆ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೋಮಿಯೋಪತಿಯಲ್ಲಿ ಲಭ್ಯವಿರುವ ಎಚಿನೇಸಿಯಾ ಮತ್ತು ಕ್ಯಾಲ್ಕೇರಿಯಾ ಕಾರ್ಬೊನಿಕಾ ಔಷಧಿಯನ್ನು ಬಳಸಬಹುದು. ಇವು ಪದೇ ಪದೇ ಕಂಡು ಬರುವ ಶೀತ ಮತ್ತು ವೈರಲ್ ಸೋಂಕುಗಳಿಂದ ರಕ್ಷಿಸುತ್ತದೆ. ರಂಜಕದ ಔಷಧವು ಗಂಟಲು ಸಮಸ್ಯೆಗಳು ಮತ್ತು ಸೋಂಕುಗಳಿಂದ ಪರಿಹಾರ ನೀಡಲು ಸಹಾಯ ಮಾಡುತ್ತದೆ. ಇದಲ್ಲದೆ, ಸಿಲಿಸಿಯಾ ಔಷಧಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅದಲ್ಲದೆ ಹೋಮಿಯೋಪತಿ ನಿಮ್ಮನ್ನು ಕೇವಲ ಔಷಧಿಗಳ ಮೇಲೆ ಅವಲಂಬಿತರನ್ನಾಗಿ ಮಾಡುವುದಿಲ್ಲ. ಸರಿಯಾದ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಇದು ನಿಮಗೆ ಸಲಹೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಔಷಧಗಳ ಸೇವನೆ ಮಾಡುವುದರ ಜೊತೆಗೆ, ನೀವು ಸಾಕಷ್ಟು ನಿದ್ರೆ ಮಾಡುವುದು, ಪೌಷ್ಟಿಕವಾಗಿರುವ ಆಹಾರವನ್ನು ಸೇವಿಸುವುದು ಸಹ ಮುಖ್ಯವಾಗುತ್ತದೆ. ಅದಲ್ಲದೆ ನೀವು ನಿದ್ರೆ ಮಾಡುವ ಮತ್ತು ಎಚ್ಚರಗೊಳ್ಳುವ ಸಮಯ ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ಸರಿಯಾಗಿ ನಿದ್ರೆ ಮಾಡಿ. ಆಹಾರದಲ್ಲಿ ಜಂಕ್ ಫುಡ್ ಸೇವಿಸುವುದನ್ನು ಆದಷ್ಟು ತಪ್ಪಿಸಿ.
ಇದನ್ನೂ ಓದಿ: ತುಪ್ಪದ ಚಹಾ ಸೇವನೆ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
ಈ ವಿಷಯಗಳನ್ನು ನೆನಪಿನಲ್ಲಿಡಿ
-ವೈದ್ಯರ ಸಲಹೆಯಿಲ್ಲದೆ ಯಾವುದೇ ರೀತಿಯ ಔಷಧಿಗಳನ್ನು ತೆಗೆದುಕೊಳ್ಳಬೇಡಿ.
-ಬೆಚ್ಚಗಿನ ಬಟ್ಟೆಗಳನ್ನು ಧರಿಸಿ, ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ.
-ಚಳಿಗಾಲದಲ್ಲಿ ತಂಪಾದ ಆಹಾರ ಸೇವನೆ ಮಾಡುವುದನ್ನು ತಪ್ಪಿಸಿ.
-ತಾಜಾ ಹಣ್ಣು, ತರಕಾರಿ, ಬೀಜಗಳು ಮತ್ತು ವಿಟಮಿನ್ ಸಿ ಸಮೃದ್ಧ ಆಹಾರಗಳನ್ನು ಸೇವನೆ ಮಾಡಿ.
-ಲಘು ವ್ಯಾಯಾಮ ಅಥವಾ ಯೋಗವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ