ಮದ್ಯಪ್ರಿಯರೇ… ಬಿಯರ್ ಕುಡಿಯೋಕೆ ಈ ಟೈಮ್ ದಿ ಬೆಸ್ಟ್ ಅಂತೆ!
ಒತ್ತಡ ಆಯಾಸದಿಂದ ಮುಕ್ತಿ ಪಡೆಯಲು ಕೆಲವರು ಬಿಯರ್ ಕುಡಿಯುತ್ತಾರೆ. ಆದರೆ ಇದನ್ನು ಕುಡಿಯುವ ಸಮಯ ಕೂಡ ಮುಖ್ಯವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ... ಹೌದು, ಇದರಿಂದ ಪ್ರಯೋಜನ ಪಡೆಯಲು ನೀವು ಯಾವ ಸಮಯದಲ್ಲಿ ಸೇವನೆ ಮಾಡುತ್ತೀರಿ ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಹಾಗಾದರೆ ಬಿಯರ್ ಕುಡಿಯಲು ಸರಿಯಾದ ಸಮಯ ಯಾವುದು, ಬೆಳಿಗ್ಗೆ ಅಥವಾ ರಾತ್ರಿ ಯಾವಾಗ ಕುಡಿಯಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಇತ್ತೀಚಿನ ದಿನಗಳಲ್ಲಿ, ಜನರಲ್ಲಿ ಒತ್ತಡ, ಆಯಾಸದಂತಹ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇದನ್ನು ನಿವಾರಿಸಲು, ಕೆಲವರು ಬಿಯರ್ (Beer) ಮೊರೆ ಹೋಗುತ್ತಾರೆ. ಕೋಲ್ಡ್ ಬಿಯರ್ ನಿಮಿಷಗಳಲ್ಲಿ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಹಲವರ ನಂಬಿಕೆ. ಆದರೆ ಇದನ್ನು ಕುಡಿಯುವ ಸಮಯ ಕೂಡ ಮುಖ್ಯವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ… ಹೌದು, ಇದರಿಂದ ಪ್ರಯೋಜನ ಪಡೆಯಲು ನೀವು ಯಾವ ಸಮಯದಲ್ಲಿ ಸೇವನೆ ಮಾಡುತ್ತೀರಿ ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಹಾಗಾದರೆ ಬಿಯರ್ ಕುಡಿಯಲು ಸರಿಯಾದ ಸಮಯ ಯಾವುದು, ಬೆಳಿಗ್ಗೆ ಅಥವಾ ರಾತ್ರಿ ಯಾವಾಗ ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳಿ.
ಬಿಯರ್ ಕುಡಿಯಲು ಸರಿಯಾದ ಸಮಯ ಯಾವುದು?
ಬೆಳಿಗ್ಗೆ ಬಿಯರ್ ಕುಡಿಯುವುದು ಸಾಮಾನ್ಯವಾಗಿ ಸೂಕ್ತವಲ್ಲ ಏಕೆಂದರೆ ಬೆಳಿಗ್ಗೆ ದೇಹವು ಡಿಟಾಕ್ಸ್ ಮೋಡ್‌ನಲ್ಲಿರುತ್ತದೆ. ಜೀರ್ಣಕ್ರಿಯೆ ಖಾಲಿ ಹೊಟ್ಟೆಯಲ್ಲಿ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಆಲ್ಕೋಹಾಲ್ ಸೇವಿಸುವುದರಿಂದ ಅದು ಬೇಗನೆ ಹೀರಲ್ಪಡುತ್ತದೆ. ಅಷ್ಟೇ ಅಲ್ಲ, ರಕ್ತದಲ್ಲಿನ ಸಕ್ಕರೆ ಮಟ್ಟಗಳು ಕಡಿಮೆಯಾಗಬಹುದು. ಕೆಲವರಲ್ಲಿ ಆಲಸ್ಯ, ತಲೆತಿರುಗುವಿಕೆ ಅಥವಾ ದಣಿದ ಅನುಭವವಾಗಬಹುದು ಇದಲ್ಲದೆ, ಈ ಅಭ್ಯಾಸವು ಕ್ರಮೇಣ ನಿಮ್ಮನ್ನು ವ್ಯಸನಿಯನ್ನಾಗಿ ಮಾಡಬಹುದು.
ರಾತ್ರಿ ಬಿಯರ್ ಕುಡಿಯುವುದು ಒಳ್ಳೆಯದೇ?
ಬೆಳಿಗ್ಗೆಗಿಂತ ರಾತ್ರಿ ಬಿಯರ್ ಕುಡಿಯುವುದು ಉತ್ತಮ. ಏಕೆಂದರೆ ದೇಹವು ದಿನವಿಡೀ ಸಕ್ರಿಯವಾಗಿದ್ದು ಸಂಜೆಯ ಹೊತ್ತಿಗೆ ಜೀರ್ಣಾಂಗ ವ್ಯವಸ್ಥೆ ಕೂಡ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಆದರೆ, ರಾತ್ರಿ ಬಿಯರ್ ಕುಡಿಯುವಾಗ ಒಂದು ಮಿತಿಯಲ್ಲಿ ಕುಡಿಯಬೇಕು. ಮಲಗುವ ಮುನ್ನ ಬಿಯರ್ ಕುಡಿಯುವುದರಿಂದ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕು ಎಂದು ಅನಿಸುತ್ತದೆ ಇದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಅಷ್ಟೇಅಲ್ಲ, ಮರುದಿನದ ಹ್ಯಾಂಗೊವರ್‌ಗೆ ಕಾರಣವಾಗಬಹುದು. ಹಾಗಾಗಿ ರಾತ್ರಿಯಲ್ಲಿ ಬಿಯರ್ ಕುಡಿಯುವಾಗ, ಅದನ್ನು ಸೀಮಿತ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ನಾಲಿಗೆಗೆ ರುಚಿಕರ ಮಾತ್ರವಲ್ಲ, ಹಾಟ್ ಚಾಕೊಲೇಟ್ ಕುಡಿಯುವುದರಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ!
ಸರಿಯಾದ ಸಮಯ ಯಾವುದು?
ಆರೋಗ್ಯ ತಜ್ಞರ ಪ್ರಕಾರ, ಬಿಯರ್ ಸೇರಿದಂತೆ ಮದ್ಯಪಾನಕ್ಕೆ ಬೆಳಿಗ್ಗೆ ಒಳ್ಳೆಯ ಸಮಯವಲ್ಲ. ಪ್ರತಿದಿನ ಬಿಯರ್ ಕುಡಿಯಬಾರದು ವಾರಕ್ಕೆ ಒಮ್ಮೆ ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಆಗಲೂ, ರಾತ್ರಿಯಲ್ಲಿ ಸರಿಯಾದ ಆಹಾರದೊಂದಿಗೆ ಕುಡಿಯುವುದು ಸುರಕ್ಷಿತವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಮಿತವಾಗಿ ಮಾತ್ರ ಮದ್ಯಪಾನ ಮಾಡಿ. ಅದನ್ನು ದೈನಂದಿನ ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
