AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಆಯುರ್ವೇದ ಸಲಹೆಯಿಂದ ಮಗು ಹಾಸಿಗೆ ಒದ್ದೆ ಮಾಡುವುದನ್ನು ತಡೆಯಬಹುದು!

ಹೆಚ್ಚಿನ ಮಕ್ಕಳು ರಾತ್ರಿ ಮಲಗುವಾಗ ಹಾಸಿಗೆ ಒದ್ದೆ ಮಾಡುತ್ತಾರೆ. 5 ವರ್ಷಕ್ಕಿಂತ ಮೊದಲು ಮಕ್ಕಳು ಈ ರೀತಿ ಮಾಡುವುದು ಸಹಜ. ಆದರೆ ನಂತರವೂ ಈ ರೀತಿಯ ಸಮಸ್ಯೆ ಕಂಡುಬಂದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಈ ರೀತಿಯಾಗುವುದಕ್ಕೆ ಆರೋಗ್ಯ ಸಮಸ್ಯೆಯು ಕಾರಣವಾಗಿರಬಹುದು. ಹಾಗಾಗಿ ಪೋಷಕರು, ಈ ರೀತಿ ಆಗುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಈ ಸ್ಟೋರಿ ಮೂಲಕ ಈ ರೀತಿ ಸಮಸ್ಯೆಗೆ ಕಾರಣವೇನು, ಇದನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ಈ ಆಯುರ್ವೇದ ಸಲಹೆಯಿಂದ ಮಗು ಹಾಸಿಗೆ ಒದ್ದೆ ಮಾಡುವುದನ್ನು ತಡೆಯಬಹುದು!
Bedwetting
ಪ್ರೀತಿ ಭಟ್​, ಗುಣವಂತೆ
|

Updated on: Dec 18, 2025 | 4:50 PM

Share

ರಾತ್ರಿ ಸಮಯದಲ್ಲಿ ಮಗು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ಸಾಮಾನ್ಯವಾಗಿ ಯಾರೂ ಕೂಡ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಅದರಲ್ಲಿಯೂ ಕೆಲವು ತಾಯಂದಿರು ಇದನ್ನು ನಿರ್ಲಕ್ಷಿಸುತ್ತಾರೆ. ಆದರೆ ಈ ರೀತಿ ಮಾಡುವುದು ಸರಿಯಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಮಗುವಿಗೆ 5 ವರ್ಷ ಆದ ಮೇಲೂ ಬೆಡ್ ವೆಟ್ಟಿಂಗ್ (Bedwetting) ಸಮಸ್ಯೆ ಮುಂದುವರಿದರೆ, ಅದು ಸಹಜವಲ್ಲ ಬದಲಾಗಿ ಆರೋಗ್ಯ ಸಮಸ್ಯೆಯಾಗಿರಬಹುದು. ಹಾಗಾಗಿ ಪೋಷಕರು, ಈ ರೀತಿ ಆಗುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಈ ಸ್ಟೋರಿ ಮೂಲಕ ಈ ರೀತಿ ಸಮಸ್ಯೆಗೆ ಕಾರಣವೇನು, ಇದನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ಮಕ್ಕಳು ಬೆಡ್ ವೆಟ್ಟಿಂಗ್ ಮಾಡುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ಮಗುವಿನ ಮೂತ್ರಕೋಶ ಸರಿಯಾಗಿ ಕಾರ್ಯನಿರ್ವಹಿಸದಿರುವುದು ಅಥವಾ ಮೂತ್ರ ನಿಯಂತ್ರಣದ ಕೊರತೆ ಈ ಸಮಸ್ಯೆಗೆ ಕಾರಣವಾಗಿರಬಹುದು. ಏಕೆಂದರೆ ಮೂತ್ರಕೋಶವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲದಿದ್ದರೆ, ಅದು ಮೂತ್ರವನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗಬಹುದು. ಜೊತೆಗೆ ಮಗು ಆಳವಾದ ನಿದ್ರೆಯಲ್ಲಿದ್ದರೆ, ಮೂತ್ರಕೋಶ ತುಂಬಿದೆ ಎಂಬ ಸಂಕೇತ ಅವರ ಮೆದುಳನ್ನು ತಲುಪದಿರಬಹುದು. ಅಷ್ಟೇ ಅಲ್ಲ, ಮೂತ್ರನಾಳಗಳ ಹಿಗ್ಗುವಿಕೆಯಿಂದ ಕೆಲವು ಮಕ್ಕಳು ಮೂತ್ರನಾಳದ ಸೋಂಕಿನಿಂದ (UTI) ಬಳಲುತ್ತಿದ್ದು ಪೋಷಕರು ಅದನ್ನು ಗುರುತಿಸಲು ವಿಫಲರಾಗಿರಬಹುದು. ಕೆಲವೊಮ್ಮೆ ಈ ರೀತಿಯ ಸಮಸ್ಯೆ ಆನುವಂಶಿಕವಾಗಿ ಬಂದಿರುತ್ತದೆ. ಪೋಷಕರಿಗೆ ಈಗಾಗಲೇ ಈ ಸಮಸ್ಯೆ ಇದ್ದರೆ, ಮಗುವಿನಲ್ಲಿಯೂ ಕಂಡುಬರಬಹುದು. ಇವುಗಳ ಹೊರತಾಗಿ ಕೆಲವೊಮ್ಮೆ, ಮಗುವಿನ ಮಾನಸಿಕ ಆರೋಗ್ಯ ಸಮಸ್ಯೆಗಳು ಕೂಡ ಈ ಸಮಸ್ಯೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ದೇಹದಲ್ಲಿ ಮೂತ್ರವರ್ಧಕ ಹಾರ್ಮೋನ್ ಮಟ್ಟ ಕಡಿಮೆಯಾಗುವುದು ಸಹ ರಾತ್ರಿಯಲ್ಲಿ ಮೂತ್ರ ವಿಸರ್ಜನೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಹೊಟ್ಟೆ ಮತ್ತು ಕರುಳನ್ನು ಪರೀಕ್ಷಿಸಲು ಮಾತ್ರೆಯಂತಹ ವಿಭಿನ್ನ ಸಾಧನವನ್ನು ಕಂಡುಹಿಡಿದ ವಿಜ್ಞಾನಿಗಳು

ಮಕ್ಕಳು ಬೆಡ್ ವೆಟ್ಟಿಂಗ್ ಮಾಡುವುದನ್ನು ತಡೆಯಲು ಏನು ಮಾಡಬೇಕು?

ನಿಮ್ಮ ಮಗು ಕೂಡ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಈ ರೀತಿಯ ಆಯುರ್ವೇದದಲ್ಲಿ ತಿಳಿಸಿರುವ ಗಿಡಮೂಲಿಕೆ ಔಷಧಿಗಳನ್ನು ಟ್ರೈ ಮಾಡಬಹುದು. ಈ ಮನೆಮದ್ದು ತಯಾರಿಸಲು, 50 ಗ್ರಾಂ ಕಪ್ಪು ಎಳ್ಳು, 25 ಗ್ರಾಂ ಓಂ ಕಾಳು (ಕ್ಯಾರಮ್ ಬೀಜಗಳು) ಮತ್ತು 100 ಗ್ರಾಂ ಬೆಲ್ಲವನ್ನು ಹಾಕಿ ಮಿಶ್ರಣ ಮಾಡಿ. ಕಪ್ಪು ಎಳ್ಳು ಮತ್ತು ಓಂ ಕಾಳನ್ನು ಪುಡಿಮಾಡಿ. ಬೆಲ್ಲವನ್ನು ಮೆತ್ತಗೆ ಮಾಡಿ ಎರಡೂ ಪದಾರ್ಥಗಳನ್ನು ಬೆರೆಸಿ ಮಾತ್ರೆಗಳನ್ನು ತಯಾರಿಸಿ. ಪ್ರತಿದಿನ ನಿಮ್ಮ ಮಗುವಿಗೆ ಈ ಎರಡು ಮಾತ್ರೆಗಳನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಲು ಕೊಡಿ. ಇದರ ಪರಿಣಾಮ ನಿಮಗೆ ತಿಳಿಯುತ್ತದೆ. ಅಥವಾ ಅರ್ಧ ಚಮಚ ಆಮ್ಲಾ ಪುಡಿಯನ್ನು ಎರಡು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಬೆಳಿಗ್ಗೆ ಮತ್ತು ಸಂಜೆ ನಿಮ್ಮ ಮಗುವಿಗೆ ನೀಡಿ. ಇದರ ಜೊತೆಗೆ ನಿಮ್ಮ ಮಗುವಿಗೆ ಮೂತ್ರ ವಿಸರ್ಜಿಸಲು ಸರಿಯಾದ ತರಬೇತಿ ನೀಡಿ. ನಿಯಮಿತವಾಗಿ ಮೂತ್ರ ವಿಸರ್ಜಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಹೇಳಿ ಕೊಡಿ. ಮಲಗುವ ಮುನ್ನ ಮೂತ್ರ ವಿಸರ್ಜನೇ ಮಾಡಿ ಬಳಿಕ ಮಲಗುವ ರೂಢಿ ಬೆಳೆಸಿಕೊಳ್ಳಲು ಸಹಾಯ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ