ಥಿಯೇಟರ್ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಎಲ್ಲರೂ ಕಣ್ತುಂಬಿಕೊಳ್ಳುತ್ತಿದ್ದಾರೆ. ಅವರ ಪತ್ನಿಗೆ ಈ ಸಿನಿಮಾ ಸಾಕಷ್ಟು ಇಷ್ಟ ಆಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಈಗ ದರ್ಶನ್ ಅವರ ತಾಯಿ ಈ ಚಿತ್ರವನ್ನು ನೋಡಿದರು ಮತ್ತು ಸಂತಸ ಹೊರಹಾಕಿದರು. ಆ ಬಗ್ಗೆ ಇಲ್ಲಿದೆ ವಿವರ.
ದರ್ಶನ್ ಅವರು ಜೈಲಿನಲ್ಲಿ ಇರುವಾಗಲೇ ‘ಡೆವಿಲ್’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದ ಮೊದಲ ದಿನ ಮೊದಲ ಶೋನ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ವೀಕ್ಷಣೆ ಮಾಡಿದ್ದರು. ಸಿನಿಮಾ ರಿಲೀಸ್ ಆದ ಒಂದು ವಾರದ ಬಳಿಕ ಮೀನಾ ತೂಗುದೀಪ್ ಅವರು ಸಿನಿಮಾ ನೋಡಿದ್ದಾರೆ. ಮೈಸೂರಿನ ಡಿಆರ್ಸಿ ಚಿತ್ರಮಂದಿರದಲ್ಲಿ ‘ಡೆವಿಲ್’ ವೀಕ್ಷಿಸಿದರು. ಅಭಿಮಾನಿಗಳು, ಸ್ನೇಹಿತರ ಜೊತೆ ಸಿನಿಮಾ ನೋಡಿದ್ದು ವಿಶೇಷ. ಸಿನಿಮಾ ನೋಡಿದ ಬಳಿಕ ಅವರು ಖುಷಿಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 19, 2025 02:19 PM

