Ghee tea: ತುಪ್ಪದ ಚಹಾ ಸೇವನೆ ಮಾಡುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
ಬೆಳಗ್ಗಿನ ಚಹಾಕ್ಕೆ ತುಪ್ಪ ಸೇರಿಸುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಇದು ಶಕ್ತಿಯನ್ನು ಹೆಚ್ಚಿಸುತ್ತದೆ, ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ಮುಟ್ಟಿನ ನೋವನ್ನು ನಿವಾರಿಸುತ್ತದೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ. ತುಪ್ಪದ ಚಹಾವು ದೀರ್ಘಕಾಲೀನ ಶಕ್ತಿಯನ್ನು ನೀಡುತ್ತದೆ, ಜೊತೆಗೆ ಸರಿಯಾದ ಜೀರ್ಣಕ್ರಿಯೆಯನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿದೆ.
ತುಪ್ಪದಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ನೀವು ಕೇಳಿರಬಹುದು. ಅದೆಲ್ಲದರ ಜೊತೆಗೆ, ನೀವು ಪ್ರತಿನಿತ್ಯ ಬೆಳಿಗ್ಗೆ ಸೇವನೆ ಮಾಡುವ ಪಾನೀಯಕ್ಕೆ ಒಂದು ಟೀ ಸ್ಪೂನ್ ತುಪ್ಪವನ್ನು ಸೇರಿಸುವುದರಿಂದ ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದರೆ ನೀವು ನಂಬುತ್ತೀರಾ? ಹೌದು. ಬೆಳಿಗ್ಗೆ ತುಪ್ಪ ಸೇವನೆ ಮಾಡುವುದು ಆರೋಗ್ಯ ತುಂಬಾ ಒಳ್ಳೆಯದು. ಹಾಗಾದರೆ ಅದನ್ನು ಯಾವ ರೀತಿಯಲ್ಲಿ ಸೇವನೆ ಮಾಡಬಹುದುದು ಎಂದು ಯೋಚಿಸುತ್ತಿದ್ದರೆ ಅದಕ್ಕೆ ಇಲ್ಲಿದೆ ಉತ್ತರ. ಪ್ರತಿನಿತ್ಯ ಬೆಳಿಗ್ಗೆ ತುಪ್ಪದ ಚಹಾವನ್ನು ಕುಡಿಯುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ಪಾನೀಯವು ತನ್ನದೇ ಆದ ಅನುಕೂಲ ಮತ್ತು ಅನಾನುಕೂಲಗಳನ್ನು ಹೊಂದಿದೆ. ಆದರೂ ಕೂಡ ತುಪ್ಪದ ಚಹಾ ಕುಡಿಯುವುದು ತಪ್ಪಲ್ಲ. ಈ ಹಿಂದೆ ತುಪ್ಪದ ಕಾಫಿ ಬಹಳ ಜನಪ್ರಿಯತೆ ಗಳಿಸಿದ್ದು ಕಾಫಿ ಬದಲಿಗೆ ನೀವು ಚಹಾ ಮಾಡಿ ಕುಡಿಯಬಹುದಾಗಿದೆ. ಅದಲ್ಲದೆ ಇದು ತೂಕ ಇಳಿಕೆಗೂ ಸಹ ಬಹಳ ಅನುಕೂಲಕಾರಿಯಾಗಿದೆ. ಜೊತೆಗೆ ಇದು ಆರೋಗ್ಯಕರ ಪಾನೀಯವಾಗಿ ಕಾರ್ಯ ನಿರ್ವಹಿಸುವುದಲ್ಲದೆ ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಪಾನೀಯವಾಗಿದೆ. ಹಾಗಾದರೆ ತುಪ್ಪದ ಚಹಾ ಕುಡಿಯುವುದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ.
- ತ್ರಾಣವನ್ನು ಹೆಚ್ಚಿಸುತ್ತದೆ : ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿದ್ದು ಇದು ನಿಮ್ಮ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಪೂರೈಸುತ್ತದೆ. ಬೆಳಿಗ್ಗೆ ತುಪ್ಪದ ಚಹಾವನ್ನು ಸೇವಿಸುವ ಮೂಲಕ ನೀವು ದಿನವಿಡೀ ಅಗತ್ಯವಿರುವ ಶಕ್ತಿಯನ್ನು ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ತುಪ್ಪದಲ್ಲಿರುವ ಕೊಬ್ಬಿನ ಅಂಶವನ್ನು ದೇಹವು ವೇಗವಾಗಿ ಹೀರಿಕೊಳ್ಳುತ್ತದೆ, ಸಕ್ಕರೆ ಮಟ್ಟವನ್ನು ಕಡಿಮೆ ಮಾಡದೆಯೇ ನಿಮ್ಮ ಸ್ನಾಯು ಮತ್ತು ಮೆದುಳಿಗೆ ಶಕ್ತಿಯನ್ನು ಪೂರೈಸುತ್ತದೆ.
- ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ : ತುಪ್ಪದಲ್ಲಿ ಕಂಡು ಬರುವ ಬ್ಯೂಟಿರೇಟ್ ಎನ್ನುವ ಕೊಬ್ಬಿನಾಮ್ಲವು, ಕರುಳಿನ ಒಳಪದರವನ್ನು ರಕ್ಷಿಸುವ ಮೂಲಕ ಉರಿಯೂತವನ್ನು ಕಡಿಮೆ ಮಾಡಿ ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಅದಲ್ಲದೆ ತುಪ್ಪದ ಚಹಾ ಮಾಡಲು ನೀವು ಹಾಲನ್ನು ಕೂಡ ಬಳಕೆ ಮಾಡಬಹುದು. ಹಾಲು ಮತ್ತು ತುಪ್ಪ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತವೆ.
- ತೂಕ ನಷ್ಟಕ್ಕೆ ಸಹಕಾರಿ: ತುಪ್ಪ ಅಥವಾ ಇತರ ಆರೋಗ್ಯಕರ ಕೊಬ್ಬುಗಳನ್ನು ಸೇವನೆ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು. ತುಪ್ಪದ ಚಹಾವು ಹೊಟ್ಟೆ ತುಂಬಿದ ಭಾವನೆಯನ್ನು ನೀಡುವುದರಿಂದ, ಇದು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಇದರಿಂದ ದೇಹದಲ್ಲಿರುವ ಅನಗತ್ಯ ಕೊಬ್ಬು ಪರಿಣಾಮಕಾರಿಯಾಗಿ ಕಡಿಮೆಯಾಗುತ್ತದೆ.
- ಮುಟ್ಟಿನ ನೋವನ್ನು ನಿವಾರಿಸುತ್ತದೆ : ತುಪ್ಪದಲ್ಲಿ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿದ್ದು ಮುಟ್ಟಿನ ಸಮಯದಲ್ಲಿ ಕಂಡು ಬರುವ ನೋವು, ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಇದು ಮುಟ್ಟಿನ ನೋವನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಈ ರೀತಿ ನಿಮ್ಮ ಚಹಾ ಅಥವಾ ಊಟಕ್ಕೆ ಒಂದು ಟೀಸ್ಪೂನ್ ತುಪ್ಪವನ್ನು ಸೇರಿಸುವ ಮೂಲಕ ನಿಯಮಿತ ಋತುಚಕ್ರವನ್ನು ಸಾಧಿಸಬಹುದು.
- ಮಾನಸಿಕ ತೀಕ್ಷ್ಣತೆಯನ್ನು ಸುಧಾರಿಸುತ್ತದೆ: ತುಪ್ಪದ ಕೊಬ್ಬಿನಾಮ್ಲಗಳು ಮೆದುಳಿನ ಕೋಶಗಳನ್ನು ಪೋಷಿಸುವ ಮೂಲಕ ಅರಿವಿನ ಕಾರ್ಯ ಮತ್ತು ಮಾನಸಿಕ ಸ್ಪಷ್ಟತೆಯನ್ನು ಉತ್ತೇಜಿಸುತ್ತವೆ. ಹಾಗಾಗಿ ತುಪ್ಪದ ಚಹಾವು ನಿಮ್ಮ ಬೆಳಗಿನ ದಿನಚರಿಗೆ ಉತ್ತಮ ಸೇರ್ಪಡೆಯಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ