Death: ಸತ್ತವರ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಏನಾಗುತ್ತೆ? ಏಕೆ ಮೃತರ ಬಟ್ಟೆ ಧರಿಸಬಾರದು?

| Updated By: ಆಯೇಷಾ ಬಾನು

Updated on: Sep 29, 2021 | 7:09 AM

ಜ್ಯೋತಿಷ್ಯದ ಪ್ರಕಾರ, ಮೃತರ ಬಟ್ಟೆ ಧರಿಸುವುದರಿಂದ ಅವರ ನೆನಪುಗಳು ಕಾಡುತ್ತಿರುತ್ತವೆ. ನಮ್ಮ ಪ್ರೀತಿ ಪಾತ್ರರು ಸತ್ತಾಗ ಅವರು ಹಾಕುತ್ತಿದ್ದ ಬಟ್ಟೆಗಳು ಅವರು ನಮ್ಮ ಕಣ್ಣ ಮುಂದೆಯೇ ಇರುವಂತೆ ಭಾಸವಾಗುತ್ತೆ. ಅವರ ನೆನಪುಗಳಿಂದ ದೂರವಾಗಲು ಸಾಧ್ಯವಾಗುವುದಿಲ್ಲ.

Death: ಸತ್ತವರ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಏನಾಗುತ್ತೆ? ಏಕೆ ಮೃತರ ಬಟ್ಟೆ ಧರಿಸಬಾರದು?
ಪ್ರಾತಿನಿಧಿಕ ಚಿತ್ರ
Follow us on

ಹುಟ್ಟಿದ ಮನುಷ್ಯ ಒಂದಲ್ಲಾ ಒಂದು ದಿನ ಸಾಯಲೇ ಬೇಕು. ಆದ್ರೆ ಹಿಂದೂ ಧರ್ಮದಲ್ಲಿ ಸತ್ತ ಮೇಲೆ ಅನುಸರಿಸಬೇಕಾದ ಕ್ರಮಗಳು ಹೆಚ್ಚು. ಪ್ರತಿಯೊಂದು ಕ್ರಿಯೆಯನ್ನು ಶಾಸ್ತ್ರಬದ್ಧವಾಗಿ ನೆರವೇರಿಸಬೇಕು. ಇಲ್ಲದಿದ್ದರೆ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂಬ ಹಲವು ಮಾತುಗಳಿವೆ. ಅದರಂತೆ ಮೃತರ ಬಟ್ಟೆಗಳನ್ನು ಧರಿಸಬಾರದು ಎಂದು ಹೇಳುತ್ತಾರೆ. ಇದನ್ನು ನಮ್ಮ ಹಿರಿಯರು ಹೇಳುತ್ತಿರುತ್ತಾರೆ. ಹಾಗಾದ್ರೆ ಏಕೆ ಮೃತರ ಬಟ್ಟೆಯನ್ನು ಧರಿಸಬಾರದು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ಜ್ಯೋತಿಷ್ಯದ ಪ್ರಕಾರ, ಮೃತರ ಬಟ್ಟೆ ಧರಿಸುವುದರಿಂದ ಅವರ ನೆನಪುಗಳು ಕಾಡುತ್ತಿರುತ್ತವೆ. ನಮ್ಮ ಪ್ರೀತಿ ಪಾತ್ರರು ಸತ್ತಾಗ ಅವರು ಹಾಕುತ್ತಿದ್ದ ಬಟ್ಟೆಗಳು ಅವರು ನಮ್ಮ ಕಣ್ಣ ಮುಂದೆಯೇ ಇರುವಂತೆ ಭಾಸವಾಗುತ್ತೆ. ಅವರ ನೆನಪುಗಳಿಂದ ದೂರವಾಗಲು ಸಾಧ್ಯವಾಗುವುದಿಲ್ಲ. ಮೃತರ ಮಸ್ತುಗಳನ್ನು ನಾವು ಬಳಸಿದರೆ ಅದು ನಮ್ಮನ್ನು ಮಾನಸಿಕವಾಗಿ ಕುಗ್ಗಿಸಿಬಿಡುತ್ತದೆ. ದುಃಖದ ಕ್ಷಣಗಳನ್ನು ಮರೆಯಲು ಬಿಡಲ್ಲ. ಹೀಗಾಗಿ ಮೃತರ ಬಟ್ಟೆಗಳನ್ನು ದಾನ ಮಾಡಬೇಕು. ಇದರಿಂದ ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ. ಮೃತರ ಬಟ್ಟೆಗಳನ್ನು ತೊಟ್ಟವರ ಮುಖದಲ್ಲಿ ಮೂಡುವ ಸಂತೋಷ ಮೃತರಿಗೆ ಖುಷಿಯನ್ನು ನೀಡುತ್ತದೆ.

ಸಾವಿನ ನಂತರವೂ ಆತ್ಮಕ್ಕೆ ಜೀವನವಿರುತ್ತದೆ. ಸಾವು ಅಂತ್ಯವಲ್ಲ ಅದು ಆತ್ಮದ ಹೊಸ ಆರಂಭವಾಗಿರುತ್ತದೆ. ಮುಕ್ತಿ ಪಡೆದ ಆತ್ಮದ ಪ್ರಯಾಣಕ್ಕೆ ಅಡ್ಡಿಪಡಿಸದಿರಲು ಪ್ರಯತ್ನಿಸಬೇಕು. ಅಂದರೆ ಮೃತರು ಬಳಸಿದ ವಸ್ತುಗಳು ಅಥವಾ ಬಟ್ಟೆಗಳನ್ನು ನಾವು ಇಟ್ಟುಕೊಂಡರೆ ಅದರಿಂದ ನಾವು ಸಂಕಟ ಅನುಭವಿಸಿದರೆ ಮೃತರು ಕೂಡ ದುಃಖಿಸುತ್ತಾರೆ.

ಅನೇಕ ಮನೆಗಳಲ್ಲಿ ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದರೆ ಅವರಿಗೆ ಇಷ್ಟವಾದ ವಸ್ತುಗಳನ್ನು ಅವರ ನೆನಪಿಗಾಗಿ ಮನೆಯಲ್ಲೇ ಇಟ್ಟುಕೊಳ್ಳುತ್ತಾರೆ. ಈ ರೀತಿ ಮಾಡುವುದು ಅವರ ಆತ್ಮದ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಲಾಗುತ್ತೆ.

ಇದನ್ನೂ ಓದಿ: Holy Ganga Bath: ಗಂಗಾ ಸ್ನಾನ ಮಾಡುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತಾ? ಶಿವ-ಪಾರ್ವತಿ ನಡುವಿನ ಈ ಪ್ರಸಂಗ ನೀಡುತ್ತೆ ಇದಕ್ಕೆ ಉತ್ತರ