AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kumara Shashti: ಇಂದು ಕುಮಾರ ಷಷ್ಠಿ; ನಾಗಾಂಶ ಮತ್ತು ಆಧ್ಯಾತ್ಮಿಕ ಮಹತ್ವ ತಿಳಿಯಿರಿ

ನಾಗಾಂಶವು ಜ್ಯೋತಿಷ್ಯದ ಪ್ರಮುಖ ಪರಿಕಲ್ಪನೆಯಾಗಿದ್ದು, ರಾಹು-ಕೇತುಗಳ ನಕ್ಷತ್ರ ಸ್ಥಿತಿಯಿಂದ ಉಂಟಾಗುವ ಕರ್ಮಬಂಧ ಮತ್ತು ಸರ್ಪದೋಷವನ್ನು ಸೂಚಿಸುತ್ತದೆ. ಇದು ಜೀವನದಲ್ಲಿ ಭಯ, ಮದುವೆ ವಿಳಂಬ, ಹಾಗೂ ಸಂಬಂಧ ಸಮಸ್ಯೆಗಳನ್ನು ತರಬಹುದು. ಕುಮಾರ ಷಷ್ಠಿಯಂದು ಸುಬ್ರಹ್ಮಣ್ಯ ಪೂಜೆ, ನಾಗಬನಕ್ಕೆ ಹಾಲಿನ ಅಭಿಷೇಕ ಮಾಡುವುದರಿಂದ ನಾಗಾಂಶದಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ದೊರೆತು ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ನಂಬಲಾಗಿದೆ.

Kumara Shashti: ಇಂದು ಕುಮಾರ ಷಷ್ಠಿ; ನಾಗಾಂಶ ಮತ್ತು ಆಧ್ಯಾತ್ಮಿಕ ಮಹತ್ವ ತಿಳಿಯಿರಿ
ಕುಮಾರ ಷಷ್ಠಿ
ಅಕ್ಷತಾ ವರ್ಕಾಡಿ
|

Updated on:Jan 24, 2026 | 10:33 AM

Share

ನಾಗಾಂಶ ಎಂಬುದು ಜ್ಯೋತಿಷ್ಯಶಾಸ್ತ್ರದಲ್ಲಿ ಬಳಸುವ ಒಂದು ವಿಶೇಷ ಪರಿಕಲ್ಪನೆ. ಜಾತಕದಲ್ಲಿ ರಾಹು ಅಥವಾ ಕೇತು ಗ್ರಹಗಳು ಇರುವ ನಕ್ಷತ್ರದ ಪಾದ (ಹಂತ) ಕ್ಕೆ ನಾಗಾಂಶ ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ, ರಾಹು–ಕೇತುಗಳ ನಕ್ಷತ್ರ ಸ್ಥಿತಿಯಿಂದ ವ್ಯಕ್ತಿಗೆ ಬರುವ ಕರ್ಮಬಂಧ, ಸರ್ಪದೋಷ ಅಥವಾ ಪೂರ್ವಜನ್ಮ ಸಂಬಂಧಿತ ಫಲಗಳನ್ನು ಸೂಚಿಸುವ ಅಂಶವೇ ನಾಗಾಂಶ.

ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯ ಜಾತಕದಲ್ಲಿ ರಾಹು ಅಥವಾ ಕೇತು ಆಶ್ಲೇಷಾ, ಜ್ಯೇಷ್ಠಾ ಅಥವಾ ರೇವತಿ ನಕ್ಷತ್ರಗಳ ನಿರ್ದಿಷ್ಟ ಪಾದಗಳಲ್ಲಿ ಇದ್ದರೆ ಅದನ್ನು ನಾಗಾಂಶ ಎಂದು ಗುರುತಿಸಲಾಗುತ್ತದೆ. ಈ ಸ್ಥಿತಿಯು ಇದ್ದರೆ ವ್ಯಕ್ತಿಯ ಜೀವನದಲ್ಲಿ ಅಜ್ಞಾತ ಭಯ, ವಿಳಂಬ, ಸಂಬಂಧ ಸಮಸ್ಯೆಗಳು, ವಿವಾಹ ವಿಳಂಬ, ಸಂತಾನ ಸಮಸ್ಯೆ ಅಥವಾ ಮಾನಸಿಕ ಅಶಾಂತಿ ಕಾಣಿಸಿಕೊಳ್ಳಬಹುದು ಎಂದು ನಂಬಲಾಗುತ್ತದೆ.

ಕುಮಾರ ಷಷ್ಠಿಯಂದು ನಾಗ ಪೂಜೆ:

ದೇಹದಲ್ಲಿರುವ ನಾಗಾಂಶವನ್ನು ಜಾಗೃತಗೊಳಿಸಲು ಸುಬ್ರಹ್ಮಣ್ಯ ಪೂಜೆಯು ಸಹಕಾರಿಯಾಗಿದೆ. ನಾಲಿಗೆ, ಹಣೆಯ ಭಾಗ ಮತ್ತು ಬೆನ್ನುಮೂಳೆಯಲ್ಲಿ ನಾಗಾಂಶವು ಇರುತ್ತದೆ ಎಂದು ನಂಬಲಾಗಿದೆ. ಸುಬ್ರಹ್ಮಣ್ಯ ಪೂಜೆಯಿಂದ ನಾಲಿಗೆ ಶುದ್ಧಿಯಾದಾಗ ವಾಕ್‌ಶಕ್ತಿ ವೃದ್ಧಿಸುತ್ತದೆ. ಹಣೆಯಲ್ಲಿರುವ ನಾಗಾಂಶ ಜಾಗೃತವಾದಾಗ ಜನರಿಂದ ಯಾವುದೇ ತೊಂದರೆಯಾಗುವುದಿಲ್ಲ. ಬೆನ್ನುಮೂಳೆಯಲ್ಲಿರುವ ಸಪ್ತಚಕ್ರಗಳು ಜಾಗೃತಗೊಂಡಾಗ ವ್ಯಕ್ತಿಯು ಉನ್ನತ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ಕುಮಾರ ಷಷ್ಠಿಯಂದು ಮನೆಯಲ್ಲಿ ಸಣ್ಣ ಸುಬ್ರಹ್ಮಣ್ಯ ವಿಗ್ರಹವಿದ್ದರೆ ಅದಕ್ಕೆ ಅಭಿಷೇಕ ಮಾಡಬಹುದು. ಪುಟ್ಟ ಮಕ್ಕಳಿಗೆ ಹುತ್ತದ ಮೃತ್ತಿಕೆಯನ್ನು ಹಣೆಗೆ ಹಚ್ಚುವುದರಿಂದ ಸಾಕಷ್ಟು ಶುಭವಾಗುತ್ತದೆ. ಜಗತ್ ಸರ್ವಂ ದೈವಾಧೀನಂ ಎಂಬ ಮಾತಿನಂತೆ, ಎಲ್ಲವೂ ದೇವರ ಅಧೀನದಲ್ಲಿರುವುದರಿಂದ ಶ್ರದ್ಧಾಭಕ್ತಿಗಳಿಂದ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಈ ಪೂಜೆಯನ್ನು ಮಾಡುವುದು ಅತ್ಯಂತ ಫಲಪ್ರದ. ನಾಗಬನ, ನಾಗಬಿಲ, ನಾಗಮೂರ್ತಿ, ನಾಗಬಿಂಬಗಳಿಗೆ ಹಾಲಿನ ಅಭಿಷೇಕ ಮಾಡುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಕುಮಾರ ಷಷ್ಠಿಯು ಕಷ್ಟಗಳಿಂದ ಮುಕ್ತಿ ಪಡೆಯಲು ಮತ್ತು ಆಸೆಗಳನ್ನು ಈಡೇರಿಸಿಕೊಳ್ಳಲು ಭಗವಂತನ ಮೊರೆ ಹೋಗುವ ಪವಿತ್ರ ದಿನಗಳಲ್ಲಿ ಒಂದಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:33 am, Sat, 24 January 26