AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kurma Dwadashi 2024: ಕೂರ್ಮ ದ್ವಾದಶಿಯನ್ನು ಯಾವಾಗ ಆಚರಿಸಲಾಗುತ್ತದೆ? ಈ ದಿನದ ಆಚರಣೆ ಹೇಗೆ?

ವಿಷ್ಣುವಿನ ಎರಡನೇ ಅವತಾರಕ್ಕೆ ಸಮರ್ಪಿತವಾದ ಆಚರಣೆಯೇ ಕೂರ್ಮ ದ್ವಾದಶಿ. ವಿಷ್ಣು ಭಕ್ತರು ಶ್ರದ್ಧಾ ಭಕ್ತಿಯಿಂದ ಈ ದಿನವನ್ನು ಆಚರಿಸುತ್ತಾರೆ. ಸಂಸ್ಕೃತದಲ್ಲಿ ಕೂರ್ಮ ಎಂದರೆ ಆಮೆ ಎಂದರ್ಥ. ಹಾಗಾಗಿ ಈ ದ್ವಾದಶಿಯು ಕೂರ್ಮ ಅವತಾರದಲ್ಲಿರುವ ಭಗವಾನ್ ವಿಷ್ಣುವಿನ ಆರಾಧನೆಯನ್ನು ಸೂಚಿಸುತ್ತದೆ. ಪಂಚಾಂಗದ ಪ್ರಕಾರ, ಪುಷ್ಯ ಮಾಸದ ಶುಕ್ಲ ಪಕ್ಷದ 12ನೇ ದಿನದಂದು ಅಂದರೆ ಈ ಬಾರಿ 2024ರ ಜ. 22 ರಂದು ಕೂರ್ಮ ದ್ವಾದಶಿಯನ್ನು ಆಚರಣೆ ಮಾಡಲಾಗುತ್ತದೆ. ಇದರ ಮಹತ್ವ, ಆಚರಣೆಯ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Kurma Dwadashi 2024: ಕೂರ್ಮ ದ್ವಾದಶಿಯನ್ನು ಯಾವಾಗ ಆಚರಿಸಲಾಗುತ್ತದೆ? ಈ ದಿನದ ಆಚರಣೆ ಹೇಗೆ?
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jan 19, 2024 | 5:11 PM

Share

ವಿಷ್ಣುವಿನ ಎರಡನೇ ಅವತಾರಕ್ಕೆ ಸಮರ್ಪಿತವಾದ ಆಚರಣೆಯೇ ಕೂರ್ಮ ದ್ವಾದಶಿ. ವಿಷ್ಣು ಭಕ್ತರು ಶ್ರದ್ಧಾ ಭಕ್ತಿಯಿಂದ ಈ ದಿನವನ್ನು ಆಚರಿಸುತ್ತಾರೆ. ಸಂಸ್ಕೃತದಲ್ಲಿ ಕೂರ್ಮ ಎಂದರೆ ಆಮೆ ಎಂದರ್ಥ. ಹಾಗಾಗಿ ಈ ದ್ವಾದಶಿಯು ಕೂರ್ಮ ಅವತಾರದಲ್ಲಿರುವ ಭಗವಾನ್ ವಿಷ್ಣುವಿನ ಆರಾಧನೆಯನ್ನು ಸೂಚಿಸುತ್ತದೆ. ಪಂಚಾಂಗದ ಪ್ರಕಾರ, ಪುಷ್ಯ ಮಾಸದ ಶುಕ್ಲ ಪಕ್ಷದ 12ನೇ ದಿನದಂದು ಅಂದರೆ ಈ ಬಾರಿ 2024ರ ಜ. 22 ರಂದು ಕೂರ್ಮ ದ್ವಾದಶಿಯನ್ನು ಆಚರಣೆ ಮಾಡಲಾಗುತ್ತದೆ. ಇದರ ಮಹತ್ವ, ಆಚರಣೆಯ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೂರ್ಮ ದ್ವಾದಶಿಯ ಮಹತ್ವವೇನು?

ಹಿಂದೂ ಧರ್ಮದಲ್ಲಿ ಕೂರ್ಮ ದ್ವಾದಶಿಗೆ ಬಹಳ ಮಹತ್ವವಿದೆ. ಸಮುದ್ರ ಮಥನದ ಸಮಯದಲ್ಲಿ ಈ ದಿನವೇ ವಿಷ್ಣು ಪರಮಾತ್ಮನು ಕೂರ್ಮಾವತಾರವನ್ನು ತಾಳಿದ್ದಾಗಿ ಪುರಾಣಗಳು ಹೇಳುತ್ತವೆ. ದೇವದಾನವರು ಮಂದರ ಪರ್ವತವನ್ನು ಬಳಸಿ ಸಮುದ್ರ ಮಥನದಲ್ಲಿ ತೊಡಗಿದಾಗ ವಿಷ್ಣು ಕೂರ್ಮಾವತಾರವನ್ನು ತಳೆದು ದೇವತೆಗಳಿಗೆ ಅಮೃತವನ್ನು ಉಣಿಸಿದ್ದನು. ಹೀಗಾಗಿ, ಕೂರ್ಮ ದ್ವಾದಶಿಯನ್ನು ಭಗವಾನ್ ವಿಷ್ಣುವಿಗೆ ಸಮರ್ಪಿಸಲಾಗಿದೆ. ಕೆಲವು ಕಡೆಗಳಲ್ಲಿ ಈ ದಿನ ಆಮೆಯನ್ನು ಪೂಜಿಸುವ ನಿಯಮವಿದೆ. ಈ ವ್ರತವನ್ನು ಆಚರಣೆ ಮಾಡುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುವುದರ ಜೊತೆಗೆ ಮಾಡಿದ ಎಲ್ಲಾ ಪಾಪಗಳು ಪರಿಹಾರವಾಗುತ್ತವೆ ಎಂಬುದು ಆಸ್ತಿಕರ ನಂಬಿಕೆ.

ಕೂರ್ಮ ದ್ವಾದಶಿಯಂದು ಆಮೆಯನ್ನು ಮನೆಗೆ ತರುವುದರಿಂದ ಸಿಗುವ ಪ್ರಯೋಜನಗಳೇನು?

ಕೆಲವು ಕಡೆಗಳಲ್ಲಿ ಕೂರ್ಮ ದ್ವಾದಶಿಯಂದು ಆಮೆಯ ಮೂರ್ತಿ ಅಥವಾ ಉಂಗುರವನ್ನು ಮನೆಗೆ ತರುವ ಸಂಪ್ರದಾಯವಿದೆ. ಇದು ಮನೆಗೆ ಲಕ್ಷ್ಮೀ ದೇವಿಯ ಅನುಗ್ರಹ ನೀಡುತ್ತದೆ ಮತ್ತು ಆರ್ಥಿಕ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ. ಆಮೆಯನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಹಾಗೂ ತಾಳ್ಮೆ ಮತ್ತು ಸ್ಥಿರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಮನೆಯಲ್ಲಿ ಆಮೆಯ ಪ್ರತಿರೂಪವಾದ ಪದಕ, ಉಂಗುರ, ಪ್ರತಿಮೆ ಇಟ್ಟುಕೊಳ್ಳುವುದು ಒಬ್ಬ ವ್ಯಕ್ತಿಗೆ ತಾಳ್ಮೆ ಮತ್ತು ಸ್ಥಿರತೆಯ ಜೊತೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ಕೂಡ ನೀಡುತ್ತದೆ ಎಂದು ನಂಬಲಾಗಿದೆ.

ಕೂರ್ಮ ದ್ವಾದಶಿಯ ಆಚರಣೆಗಳು ಹೇಗಿರಬೇಕು?

-ಈ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ.

-ಬಳಿಕ ಭಕ್ತಿಯಿಂದ ವಿಷ್ಣು ದೇವರಿಗೆ ಪೂಜೆ ಸಲ್ಲಿಸಿ. ಕೆಲವರು ವಿಷ್ಣುವಿನ ಜೊತೆಯಲ್ಲಿ ಲಕ್ಷ್ಮೀಯನ್ನು ಪೂಜಿಸುತ್ತಾರೆ.

-ತುಳಸಿ ಎಲೆಗಳು ಮತ್ತು ಹೂವುಗಳನ್ನು ಅರ್ಪಿಸಿ.

-ಇನ್ನು ತುಪ್ಪದ ದೀಪ ಹಚ್ಚಿ, ಬಳಿಕ ಧೂಪದ್ರವ್ಯ ಸೇರಿಸಿ ಆರತಿ ಬೆಳಗಿ.

-ನೈವೇದ್ಯಕ್ಕೆ ಪಂಚಾಮೃತವನ್ನು ಅರ್ಪಿಸಿ.

-ವಿಷ್ಣು ಸಹಸ್ತ್ರನಾಮ ಮತ್ತು ನಾರಾಯಣ ಸ್ತೋತ್ರವನ್ನು ಪಠಿಸಿ.

ಈ ದಿನ ಯಾವ ಮಂತ್ರ ಪಠಣ ಮಾಡಬೇಕು?

– ಓಂ ನಮೋ ಭಗವತೇ ವಾಸುದೇವಯೇ – ಅಚ್ಯುತಂ ಕೇಶವಂ ಕೃಷ್ಣ ದಾಮೋದರಂ ರಾಮ್ ನಾರಾಯಣಂ ಜಾನಕಿ ವಲ್ಲಭಂ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ