ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಸಂಭ್ರಮವನ್ನು ಮನೆಯಲ್ಲಿ ಆಚರಣೆ ಮಾಡುವುದು ಹೇಗೆ?
ಐದು ನೂರು ವರ್ಷಗಳ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಗುವ ಕಾಲ ಬಂದಿದೆ. ಅಯೋಧ್ಯೆಯ ಆ ಸಂಭ್ರಮವನ್ನು ನಾವು ಟಿವಿ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಬಹುದಾಗಿದ್ದು ಅಲ್ಲಿಯ ಆ ಸ್ವರ್ಣ ಘಳಿಗೆಗೆ ನಾವೆಲ್ಲರೂ ಸಾಕ್ಷಿಯಾಗಬಹುದಾಗಿದೆ. ಇನ್ನು ಇದೆಲ್ಲದರ ಜೊತೆಗೆ ರಾಮನ ಅನುಗ್ರಹ ಪಡೆಯಲು ಮನೆಯಲ್ಲಿಯೇ ಕುಳಿತು ಕೆಲವು ಆಚರಣೆಗಳನ್ನು ಮಾಡಬಹುದಾಗಿದೆ. ಈ ಮೂಲಕ ಪ್ರಭು ಶ್ರೀ ರಾಮನ ಪ್ರತಿಷ್ಠಾ ಮಹೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಣೆ ಮಾಡಿ ರಾಮ ಲಲ್ಲಾನ ಅನುಗ್ರಹ ಪಡೆಯೋಣ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ, ಪ್ರಾಣ ಪ್ರತಿಷ್ಠೆಗೆ ಭರದಿಂದ ಸಿದ್ದತೆಗಳು ನಡೆಯುತ್ತಿದ್ದು ಐದು ನೂರು ವರ್ಷಗಳ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಗುವ ಕಾಲ ಬಂದಿದೆ. ಅಯೋಧ್ಯೆಯ ಆ ಸಂಭ್ರಮವನ್ನು ನಾವು ಟಿವಿ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಬಹುದಾಗಿದ್ದು ಅಲ್ಲಿಯ ಆ ಸ್ವರ್ಣ ಘಳಿಗೆಗೆ ನಾವೆಲ್ಲರೂ ಸಾಕ್ಷಿಯಾಗಬಹುದಾಗಿದೆ. ಇನ್ನು ಇದೆಲ್ಲದರ ಜೊತೆಗೆ ರಾಮನ ಅನುಗ್ರಹ ಪಡೆಯಲು ಮನೆಯಲ್ಲಿಯೇ ಕುಳಿತು ಕೆಲವು ಆಚರಣೆಗಳನ್ನು ಮಾಡಬಹುದಾಗಿದೆ. ಈ ಮೂಲಕ ಪ್ರಭು ಶ್ರೀ ರಾಮನ ಪ್ರತಿಷ್ಠಾ ಮಹೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಣೆ ಮಾಡಿ ರಾಮ ಲಲ್ಲಾನ ಅನುಗ್ರಹ ಪಡೆಯೋಣ.
ಮನೆಯಲ್ಲಿ ಹೇಗೆ ಆಚರಣೆ ಮಾಡಬಹುದು?
ರಾಮ ತನ್ನ ಪೀಠದಲ್ಲಿ ವಿರಾಜಮಾನವಾಗಲು ಇನ್ನೇನು ಕೆಲವು ದಿನಗಳಿದ್ದು ಇಂದಿನಿಂದಲೇ ಮನೆಯ ಸ್ವಚ್ಛತೆಯಲ್ಲಿ ತೊಡಗೋಣ. ಹಬ್ಬ ಹರಿದಿನಗಳಲ್ಲಿ ಮನೆಯನ್ನು ಒಪ್ಪವಾಗಿಡುವ ಹಾಗೆಯೇ ಅಂದಿನ ಸಂಭ್ರಮಕ್ಕೆ ಸಿದ್ದತೆ ಮಾಡಿಕೊಳ್ಳೋಣ. ಮನೆಯ ಸಿಂಗಾರಕ್ಕೆ ತಳಿರು ತೋರಣಗಳನ್ನು ಕಟ್ಟುವ ಮೂಲಕ ರಾಮನ ಬರುವಿಕೆಯನ್ನು ವಿಜ್ರಂಭಿಸೋಣ. ಮುನೆಯ ಮುಂದೆ ಜಾಗ ಇರುವವರು, ಆ ದಿನ ಅಂಗಳ ತೊಳೆದು ರಂಗೋಲಿ ಹಾಕಿ ಸ್ವಾಗತಕ್ಕೆ ತಯಾರಿ ಮಾಡಿಕೊಳ್ಳೋಣ. ಏಕೆಂದರೆ ರಾಮ ಅಯೋಧ್ಯೆಗೆ ಮಾತ್ರವಲ್ಲ ಪ್ರತಿ ಮನೆ ಮನೆಗೂ ಬರುತ್ತಿದ್ದಾನೆ. ಆ ಸಂಭ್ರಮ ಪ್ರತಿ ಮನೆಯಲ್ಲಿಯೂ ಕಾಣಬೇಕು.
ದೀಪದ ಬೆಳಕಿನಲ್ಲಿ ಮನೆ ಕಂಗೊಳಿಸಲಿ;
ಮನೆಯಲ್ಲಿ ರಾಮನ ಮೂರ್ತಿ ಅಥವಾ ಫೋಟೋ ಇಟ್ಟು ಪೂಜೆ ಮಾಡುವವರು ದೇವರ ಮನೆಯನ್ನು ಸ್ವಚ್ಛ ಮಾಡಿ, ರಾಮನಿಗೆ ಪ್ರೀಯವಾದ ತುಳಸಿ ಮತ್ತು ಬಿಳಿ ಹೂವುಗಳಿಂದ ದೇವರನ್ನು ಅಲಂಕಾರ ಮಾಡಿ. ಇನ್ನು ತುಪ್ಪದ ದೀಪ ಹಚ್ಚಿ, ಧೂಪದ್ರವ್ಯದ ಬೆಳಕಿನಲ್ಲಿ ಮನೆ ಕಂಗೊಳಿಸುವಂತೆ ಮಾಡಿ. ನೈವೇದ್ಯಕ್ಕೆ ಪಂಚಾಮೃತವನ್ನು ಅರ್ಪಿಸಬಹುದು ಅಥವಾ ನಿಮ್ಮ ಅಗತ್ಯಕ್ಕೆ ತಕ್ಕಂತೆ ಪ್ರಸಾದಗಳನ್ನು ಮಾಡಿ ಹಂಚಬಹುದು. ಎಲ್ಲಕ್ಕಿಂತ ಪಂಚಾಮೃತ ಶ್ರೇಷ್ಠವಾಗಿರುವುದರಿಂದ ನೈವೇದ್ಯಕ್ಕೆ ಅದನ್ನೇ ಇಡಬಹುದು. ಇನ್ನು ಬಿಡುವಿನ ಸಮಯದಲ್ಲಿ ರಾಮ ರಕ್ಷಾ ಸ್ತೋತ್ರವನ್ನು ಪಠಣ ಮಾಡಿ. ಇಲ್ಲವಾದಲ್ಲಿ ರಾಮನ ಸರಳವಾದ ಮಂತ್ರವನ್ನು ಪಠಿಸಿ. ನಿಮ್ಮ ಜೊತೆಯಲ್ಲಿ ಮನೆಯವರೂ ಕೂಡ ರಾಮನ ಸ್ತೋತ್ರ ಪಠಣ ಹಾಗೂ ಭಜನೆ ಮಾಡುವುದಕ್ಕೆ ಪ್ರೇರೇಪಿಸಿ. ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ರಾಮನ ಕಥೆ ಹೇಳುವ ಮೂಲಕ ಅವರಿಗೂ ರಾಮನ ಚರಿತ್ರೆಯ ಪರಿಚಯ ಮಾಡಿಕೊಡಿ.
ಇದನ್ನೂ ಓದಿ: ಕೂರ್ಮ ದ್ವಾದಶಿಯನ್ನು ಯಾವಾಗ ಆಚರಿಸಲಾಗುತ್ತದೆ? ಈ ದಿನದ ಆಚರಣೆ ಹೇಗೆ?
ಮನೆಯ ಬಳಿ ದೇವಸ್ಥಾನ ಇರುವವರು ಅಲ್ಲಿಗೆ ಹೋಗಿ ರಾಮನ ಪ್ರತಿಷ್ಠೆಯ ಸಂಭ್ರಮವನ್ನು ಆಚರಣೆ ಮಾಡಿ ಈಗಾಗಲೇ ಸರಕಾರದ ಕೆಲವು ನಿಯಮಾವಳಿ ಬಿಡುಗಡೆ ಮಾಡಿದ್ದೂ ಅದೇ ರೀತಿಯಲ್ಲಿ ನೀವು ಆಚರಣೆ ಮಾಡಬಹುದು. ಏನೇ ಇರಲಿ ಶತಮಾನಗಳಿಂದ ಮಾಡಿಕೊಂಡು ಬಂದ ಹೋರಾಟಕ್ಕೆ ಪ್ರತಿಫಲ ಸಿಗುತ್ತಿದೆ. ರಾಮ ತನ್ನ ಮೂಲ ಸ್ಥಾನಕ್ಕೆ ಮರಳುವ ಮೂಲಕ ನಮ್ಮೆಲ್ಲರ ಆಸೆ ನೆರೆವೇರುತ್ತಿದೆ ಹಾಗಾಗಿ ನಿಮಗೆ ಬೇಕಾದ ರೀತಿಯಲ್ಲಿ ಮತ್ತು ದೇವರ ಅನುಗ್ರಹ ನಿಮ್ಮ ಕುಟುಂಬದ ಮೇಲಿರುವಂತೆ ಪೂಜೆ- ಪುನಸ್ಕಾರಗಳನ್ನು ಮಾಡುವ ಮೂಲಕ ಆಚರಿಸಿ. ರಾಮನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ.
ಸೂಚನೆ: ಮೇಲೆ ಹೇಳಿರುವುದು ನಿಮ್ಮ ಅಗತ್ಯಕ್ಕೆ ಬಿಟ್ಟಿದ್ದಾಗಿರುವುದರಿಂದ. ಆಚರಣೆಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ