God Shani in female form: ಶನಿ ದೇವ ಸ್ತ್ರೀ ರೂಪದಲ್ಲಿ ಇರುವ ಆಂಜನೇಯಸ್ವಾಮಿ ದೇವಾಲಯ ಎಲ್ಲಿದೆ? ಏನಿದರ ವಿಶೇಷ

ಗುಜರಾತ್‌ನ ಸಾರಂಗಪುರದಲ್ಲಿ ಹನುಮಂತನ ಅಪರೂಪದ ದೇವಾಲಯವಿದೆ. ಇದರ ಹೆಸರು ಕಷ್ಟಭಂಜನ ಹನುಮಾನ್ ದೇವಾಲಯ. ಈ ದೇವಾಲಯದಲ್ಲಿ ಹನುಮಂತನು ಚಿನ್ನದ ಸಿಂಹಾಸನದ ಮೇಲೆ ಕುಳಿತಿರುವುದನ್ನು ಕಾಣಬಹುದು. ಇದಲ್ಲದೆ, ಶನಿದೇವನು ಆಂಜನೇಯ ಸ್ವಾಮಿಯ ಪಾದಗಳ ಕೆಳಗೆ ಕಾಣಿಸಿಕೊಳ್ಳುತ್ತಾನೆ. ಇಂತಹ ಅಪರೂಪದ ದೃಶ್ಯ ಜಗತ್ತಿನ ಬೇರೆಲ್ಲೂ ಕಾಣಸಿಗುವುದಿಲ್ಲ.

God Shani in female form: ಶನಿ ದೇವ ಸ್ತ್ರೀ ರೂಪದಲ್ಲಿ ಇರುವ ಆಂಜನೇಯಸ್ವಾಮಿ ದೇವಾಲಯ ಎಲ್ಲಿದೆ? ಏನಿದರ ವಿಶೇಷ
ಶನಿ ದೇವ ಸ್ತ್ರೀ ರೂಪದಲ್ಲಿ ಇರುವ ಆಂಜನೇಯಸ್ವಾಮಿ ದೇವಾಲಯ ಎಲ್ಲಿದೆ?
Edited By:

Updated on: Sep 17, 2024 | 4:06 AM

ಶನಿ ಮಹಾತ್ಮನ ಆರಾಧನೆ: ಹಿಂದೂ ಧರ್ಮದಲ್ಲಿ ಶನಿ ದೇವನನ್ನು ಅತ್ಯಂತ ಕೋಪದ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಶನಿದೇವನ ದೃಷ್ಟಿ ಯಾರ ಮೇಲಾದರೂ ಬಿದ್ದರೆ ಅವನ ಜೀವನ ಸಮಸ್ಯೆಗಳಿಂದ ಸುತ್ತುವರಿಯುತ್ತದೆ ಎಂದು ಹೇಳಲಾಗುತ್ತದೆ. ಆದರೆ ಶನಿದೇವನನ್ನು ಮನಃಪೂರ್ವಕವಾಗಿ ಪೂಜಿಸುವುದರಿಂದ ಅದರ ಫಲಗಳು ದೊರೆಯುತ್ತವೆ ಮತ್ತು ಶನಿ ದೋಷಗಳು ನಿವಾರಣೆಯಾಗುತ್ತವೆ. ವಾಸ್ತವವಾಗಿ, ದೇಶಾದ್ಯಂತ ಶನಿದೇವನ ಅನೇಕ ದೇವಾಲಯಗಳಿವೆ. ಆದರೆ ಇಲ್ಲೊಂದು ವಿಶೇಷವಾದ ಶನಿದೇವನ ದೇವಾಲಯವಿದೆ. ಇಲ್ಲಿ ಶನಿ ಮಹಾತ್ಮ ಸ್ತ್ರೀ ರೂಪದಲ್ಲಿ ಕುಳಿತಿದ್ದಾನೆ. ಅದು ಯಾವ ದೇವಸ್ಥಾನ, ಎಲ್ಲಿದೆ ಎಂಬ ಮಾಹಿತಿ ಇಲ್ಲಿದೆ.

ಸ್ತ್ರೀ ರೂಪದ ಶನಿ ಮಹಾತ್ಮನ ದೇವಸ್ಥಾನ ಎಲ್ಲಿದೆ:
ಗುಜರಾತ್‌ನ ಭಾವನಗರ ಬಳಿಯ ಸಾರಂಗಪುರದಲ್ಲಿ ಹನುಮಂತನ ಅಪರೂಪದ ದೇವಾಲಯವಿದೆ. ಈ ದೇವಾಲಯದ ಹೆಸರು ಕಷ್ಟಭಂಜನ ಹನುಮಾನ್ ದೇವಾಲಯ. ಈ ದೇವಾಲಯವು ತನ್ನ ವೈಭವ ಮತ್ತು ಪೌರಾಣಿಕ ಕಥೆಗಳಿಗೆ ಹೆಸರುವಾಸಿಯಾಗಿದೆ. ಈ ದೇವಾಲಯದಲ್ಲಿ ಹನುಮಂತನು ಚಿನ್ನದ ಸಿಂಹಾಸನದ ಮೇಲೆ ಕುಳಿತಿರುವುದನ್ನು ಕಾಣಬಹುದು. ಇದಲ್ಲದೆ, ಶನಿದೇವನು ಆಂಜನೇಯ ಸ್ವಾಮಿಯ ಪಾದಗಳ ಕೆಳಗೆ ಕಾಣಿಸಿಕೊಳ್ಳುತ್ತಾನೆ. ಇಂತಹ ಅಪರೂಪದ ದೃಶ್ಯ ಜಗತ್ತಿನ ಬೇರೆಲ್ಲೂ ಕಾಣಸಿಗುವುದಿಲ್ಲ. ಆದ್ದರಿಂದ ಈ ದೇವಾಲಯವು ಹಲವು ವಿಶೇಷಗಳನ್ನು ಹೊಂದಿದೆ. ಈ ಸ್ಥಳದಲ್ಲಿ ಹನುಮಂತನನ್ನು ಮಹಾ ರಾಜಾಧಿರಾಜ ಎಂದೂ ಕರೆಯುತ್ತಾರೆ. ಇಲ್ಲಿ ಆಂಜನೇಯ ಸ್ವಾಮಿಯ ವಿಗ್ರಹದ ಬಳಿ ವಾನರ ಸೇನೆಯನ್ನೂ ಕಾಣಬಹುದು. ಇದಲ್ಲದೆ, ಶನಿ ದೇವನು ಹನುಮಂತ ಸ್ನ್ವಾಮಿಯ ಪಾದದ ಬಳಿ ಸ್ತ್ರೀ ರೂಪದಲ್ಲಿ ಕುಳಿತಿರುವುದನ್ನು ಕಾಣಬಹುದು.


ಜನರ ಮೇಲೆ ಶನಿದೇವನ ಕ್ರೋಧ ಹೆಚ್ಚಾಗುತ್ತಿದ್ದ ಕಾಲವೊಂದಿತ್ತು. ಅವನ ಕೋಪವನ್ನು ಎದುರಿಸುವುದು ಕಷ್ಟವಾಯಿತು. ಇಂತಹ ಪರಿಸ್ಥಿತಿಯಲ್ಲಿ ಭಕ್ತರು ಆಂಜನೇಯ ಸ್ವಾಮಿಯ ಸಹಾಯವನ್ನು ಕೋರಿದರು. ಅವರ ಕೋರಿಕೆಯನ್ನು ಕೇಳಿದ ದೇವರು ಕೂಡ ಶನಿದೇವನಿಗೆ ಶಿಕ್ಷೆ ಕೊಡಬೇಕೆಂದು ನಿರ್ಧರಿಸಿದನು. ಈ ವಿಷಯ ತಿಳಿದ ತಕ್ಷಣ ಶನಿದೇವನು ಹೆದರಿ ಹನುಮಂತನ ಕೋಪದಿಂದ ಪಾರಾಗಲು ಸ್ತ್ರೀಯ ರೂಪವನ್ನು ತಳೆದನು. ಇಲಲಿ ಗಮನಿಸಿಬೇಕಾದ ವಿಷಯವೆಂದರೆ ಆಂಜನೇಯ ಸ್ವಾಮಿಯು ಬಾಲ ಬ್ರಹ್ಮಚಾರಿ ಮತ್ತು ಅವನು ಎಂದಿಗೂ ಯಾವುದೇ ಮಹಿಳೆಯ ಮೇಲೆ ಕೈ ಎತ್ತುವುದಿಲ್ಲ.

ಸ್ತ್ರೀ ರೂಪದ ಶನಿ ಮಹಾತ್ಮನ ದೇವಸ್ಥಾನ

ಶನಿಯ ದೋಷಗಳು ದೂರವಾಗುತ್ತವೆ
ಅಂತಹ ಪರಿಸ್ಥಿತಿಯಲ್ಲಿ, ಆಂಜನೇಯ ಸ್ವಾಮಿ ಬಂದಾಗ, ಶನಿ ದೇವನು ಮಹಿಳೆಯ ರೂಪವನ್ನು ಧರಿಸಿಕೊಂಡು ಆಂಜನೇಯ ಸ್ವಾಮಿಯ ಪಾದದ ಬಳಿ ಕುಳಿತನು. ಹೀಗೆ ಮಾಡಿದ ಮೇಲೆ ಆಂಜನೇಯ ಸ್ವಾಮಿಯು ಶನಿ ದೇವನನ್ನು ಕ್ಷಮಿಸಿದರು. ಆಂಜನೇಯ ಸ್ವಾಮಿಯಿಂದ ಕ್ಷಮೆಯನ್ನು ಪಡೆದ ನಂತರ, ಶನಿದೇವನು ತನ್ನ ಭಕ್ತರಿಗೆ ಶನಿ ದೋಷದಿಂದ ಬಾಧಿಸುವುದಿಲ್ಲ ಎಂದು ಆಂಜನೇಯಸ್ವಾಮಿಗೆ ಭರವಸೆ ನೀಡಿದನು. ಅಂದಿನಿಂದ, ಆಂಜನೇಯ ಸ್ವಾಮಿ ಜೊತೆಗೆ, ಶನಿ ದೇವನನ್ನು ಸಹ ಈ ಸ್ಥಳದಲ್ಲಿ ಪೂಜಿಸಲಾಗುತ್ತದೆ. ಹೀಗೆ ಮಾಡುವುದರಿಂದ ಶನಿದೋಷವೂ ನಿವಾರಣೆಯಾಗುತ್ತದೆ ಮತ್ತು ವ್ಯಕ್ತಿಯ ಜೀವನದಲ್ಲಿನ ಅಡೆತಡೆಗಳು ಕೂಡ ಕಡಿಮೆಯಾಗುತ್ತವೆ. ಈ ದೇವಾಲಯವು ತುಂಬಾ ಪ್ರಯೋಜನಕಾರಿಯಾಗಿದ್ದರೂ, ಅವರ ಜಾತಕದಲ್ಲಿ ಶನಿ ದೋಷವಿರುವ ಜನರಿಗೆ ಇದು ಹೆಚ್ಚು ಮಂಗಳಕರವಾಗಿದೆ.