AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maha Shivratri 2024: ಶಿವನಿಗೆ ರುದ್ರಾಕ್ಷಿ ಬಹಳ ಇಷ್ಟವಾಗಲು ಕಾರಣವೇನು? ಇದರ ಹಿಂದಿದೆ ಸ್ವಾರಸ್ಯಕರ ಕಥೆ!

ಮಹರ್ಷಿ ವೇದವ್ಯಾಸರು ಬರೆದ ಶಿವ ಪುರಾಣದಲ್ಲಿ ರುದ್ರಾಕ್ಷಿ ಮಹತ್ವವನ್ನು ಸಂಪೂರ್ಣವಾಗಿ ವಿವರಿಸಲಾಗಿದ್ದು ಶಿವರಾತ್ರಿ ಹಬ್ಬದ ಸಮಯದಲ್ಲಿ ರುದ್ರಾಕ್ಷಿ ಧಾರಣೆ ಮಾಡಲು ಅಥವಾ ರುದ್ರಾಕ್ಷಿ ಮಹತ್ವವನ್ನು ತಿಳಿಯಲು ಬಯಸುವವರಿಗೆ ಇದು ಸರಿಯಾದ ಸಮಯವಾಗಿದೆ. ರುದ್ರಾಕ್ಷಿಯನ್ನು ಶಿವ ಇಷ್ಟಪಡಲು ಕಾರಣವೇನು? ಶಿವ ಭಕ್ತರು ಯಾಕಾಗಿ ರುದ್ರಾಕ್ಷಿ ಮಾಲೆಯನ್ನು ಧರಿಸುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Maha Shivratri 2024: ಶಿವನಿಗೆ ರುದ್ರಾಕ್ಷಿ ಬಹಳ ಇಷ್ಟವಾಗಲು ಕಾರಣವೇನು? ಇದರ ಹಿಂದಿದೆ ಸ್ವಾರಸ್ಯಕರ ಕಥೆ!
ಪ್ರೀತಿ ಭಟ್​, ಗುಣವಂತೆ
| Edited By: |

Updated on: Mar 06, 2024 | 5:33 PM

Share

ಮಹಾ ಶಿವರಾತ್ರಿ ಹಿಂದೂಗಳಿಗೆ ವಿಶೇಷ ಹಬ್ಬ. ಈ ವರ್ಷ ಶಿವರಾತ್ರಿಯನ್ನು ಮಾರ್ಚ್ 8 ರಂದು ಪ್ರತಿ ವರ್ಷದಂತೆ ವೈಭವದಿಂದ ಆಚರಿಸಲಾಗುತ್ತದೆ. ಈ ದಿನ, ಶಿವನಿಗೆ ಪ್ರೀಯವಾದ ವಸ್ತುಗಳನ್ನು ಅರ್ಪಿಸುವುದು ರೂಢಿಯಲ್ಲಿದೆ. ಅದರಲ್ಲಿಯೂ ಬಿಲ್ವ ಪತ್ರೆಯ ಜೊತೆಗೆ ರುದ್ರಾಕ್ಷಿಯು ಕೂಡ ಶಿವನಿಗೆ ತುಂಬಾ ಇಷ್ಟ. ಇದನ್ನು ದೇವರಿಗೆ ಅರ್ಪಣೆ ಮಾಡಿ ಧರಿಸುವುದರಿಂದ ಭಕ್ತರಿಗೆ ಶಿವನ ಆಶೀರ್ವಾದ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ. ಜೊತೆಗೆ ಮಹರ್ಷಿ ವೇದವ್ಯಾಸರು ಬರೆದ ಶಿವ ಪುರಾಣದಲ್ಲಿ ರುದ್ರಾಕ್ಷಿ ಮಹತ್ವವನ್ನು ಸಂಪೂರ್ಣವಾಗಿ ವಿವರಿಸಲಾಗಿದ್ದು ಶಿವರಾತ್ರಿ ಹಬ್ಬದ ಸಮಯದಲ್ಲಿ ರುದ್ರಾಕ್ಷಿ ಧಾರಣೆ ಮಾಡಲು ಅಥವಾ ರುದ್ರಾಕ್ಷಿ ಮಹತ್ವವನ್ನು ತಿಳಿಯಲು ಬಯಸುವವರಿಗೆ ಇದು ಸರಿಯಾದ ಸಮಯವಾಗಿದೆ. ರುದ್ರಾಕ್ಷಿಯನ್ನು ಶಿವ ಇಷ್ಟಪಡಲು ಕಾರಣವೇನು? ಶಿವ ಭಕ್ತರು ಯಾಕಾಗಿ ರುದ್ರಾಕ್ಷಿ ಮಾಲೆಯನ್ನು ಧರಿಸುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಶಿವನು ರುದ್ರಾಕ್ಷಿಯನ್ನು ಏಕೆ ಇಷ್ಟಪಡುತ್ತಾನೆ?

ಕೆಲವು ದಂತ ಕಥೆಗಳ ಪ್ರಕಾರ ತಾಯಿ ಸತಿಯಿಂದ ಬೇರ್ಪಡುವುದನ್ನು ಸಹಿಸಲು ಶಿವನಿಗೆ ಸಾಧ್ಯವಾಗದಿದ್ದಾಗ, ಅವನ ಕಣ್ಣುಗಳಿಂದ ಕಣ್ಣೀರಿನ ಪ್ರವಾಹವೇ ಹರಿಯುತ್ತದೆ. ಆ ಸಂದರ್ಭದಲ್ಲಿ ಒಂದು ಮರ ಹುಟ್ಟಿಕೊಳ್ಳುತ್ತದೆ. ರುದ್ರನ ಕಣ್ಣಿನಿಂದ ಹೊರಹೊಮ್ಮಿದ ಅಕ್ಷದಿಂದ ತಯಾರಾದ ಮರಕ್ಕೆ ರುದ್ರಾಕ್ಷ ಎಂಬ ಹೆಸರು ಬಂತು. ಹಾಗಾಗಿ ರುದ್ರಾಕ್ಷಿ ಶಿವನಿಗೆ, ಸತಿಯ ನೆನಪನ್ನು ತರುವುದರಿಂದ ಶಂಕರನಿಗೆ ಪ್ರಿಯ ಎನ್ನಲಾಗುತ್ತದೆ.

ಮತ್ತೊಂದು ಕಥೆಯ ಪ್ರಕಾರ, ಶಿವನು ಸತಿಯಿಂದ ಪ್ರತ್ಯೇಕವಾಗಿದ್ದಾಗ, ಅವನ ಕಣ್ಣಿನಿಂದ ಬಿದ್ದ ಹನಿಗಳಿಂದ ಒಬ್ಬ ರಾಕ್ಷಸ ಹುಟ್ಟಿಕೊಂಡ. ಅವನು, ಶಿವ ದುಃಖದಲ್ಲಿ ಇರುವುದನ್ನು ನೋಡಿ ಕೋಪದಿಂದ ಇಡೀ ಬ್ರಹ್ಮಾಂಡವನ್ನು ನಾಶಮಾಡಲು ಮುಂದಾದ, ನಂತರ ದೇವತೆಗಳು ಶಿವನನ್ನು ಪ್ರಾರ್ಥಿಸಿ, ವಿನಂತಿಸಿದ ಬಳಿಕ ಭಗವಾನ್ ಶಂಕರನು ಆ ರಾಕ್ಷಸನನ್ನು ಕೊಂದನು. ಆದರೆ ಆ ರಾಕ್ಷಸ ಶಿವನ ಮಹಾನ್ ಭಕ್ತನಾಗಿದ್ದರಿಂದ ಮತ್ತು ಅವನು ಸಾಯುವಾಗ ಯಾವುದೇ ಕಾರಣಕ್ಕೂ ನಿಮ್ಮಿಂದ ದೂರವಿರಲು ಬಯಸುವುದಿಲ್ಲ ಎಂದು ಹೇಳಿದ್ದಕ್ಕಾಗಿ ಶಿವನು, ರಾಕ್ಷಸ ಬಿದ್ದ ಸ್ಥಳದಲ್ಲಿ ಒಂದು ಮರ ಬೆಳೆಯುವಂತೆ ಮಾಡುತ್ತಾನೆ. ಆ ಮರದ ಹಣ್ಣನ್ನು ಅಂದರೆ ರುದ್ರಾಕ್ಷಿಯನ್ನು ಆಭರಣದಂತೆ ಧರಿಸಲು ಪ್ರಾರಂಭಿಸುತ್ತಾನೆ. ಆದ್ದರಿಂದ, ರುದ್ರಾಕ್ಷಿಯನ್ನು ಧರಿಸುವ ಅಥವಾ ಅದರ ಮಾಲೆಯಿಂದ ಶಿವನ ಜಪವನ್ನು ಮಾಡುವ ಭಕ್ತನ ಪ್ರತಿಯೊಂದು ಆಸೆಯೂ ಈಡೇರುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಸಂಪತ್ತು, ಸಮೃದ್ಧಿ ದುಪ್ಪಟ್ಟಾಗಬೇಕಾ? ಏಕಾದಶಿಯ ದಿನ ಹೀಗೆ ಮಾಡಿ

ರುದ್ರಾಕ್ಷಿಯ ಮಹತ್ವವೇನು?

ರುದ್ರಾಕ್ಷಿಯಲ್ಲಿ ಶಿವನು ವಾಸಿಸುತ್ತಾನೆ ಎಂದು ನಂಬಲಾಗಿದೆ, ಆದ್ದರಿಂದ ಕುತ್ತಿಗೆಗೆ ರುದ್ರಾಕ್ಷಿ ಜಪಮಾಲೆಯನ್ನು ಧರಿಸುವ ಭಕ್ತನು ಶಿವನ ವಿಶೇಷ ಆಶೀರ್ವಾದವನ್ನು ಪಡೆಯುತ್ತಾನೆ ಜೊತೆಗೆ ನಿಯಮಿತವಾಗಿ ರುದ್ರಾಕ್ಷಿಯನ್ನು ಪೂಜಿಸುವ ಭಕ್ತನು ಲಕ್ಷಾಂತರ ಸದ್ಗುಣಗಳ ಒಡೆಯನಾಗುತ್ತಾನೆ. ಅಲ್ಲದೆ ತಿಳಿದೋ ತಿಳಿಯದೆಯೋ ತನ್ನ ಜೀವನದಲ್ಲಿ ಮಾಡಿದ ಎಲ್ಲಾ ಪಾಪಗಳಿಂದ ಮುಕ್ತಿ ಹೊಂದಿ ಪುಣ್ಯ ಫಲಗಳನ್ನು ಪಡೆಯುತ್ತಾನೆ. ಇನ್ನು, ಸಾಮಾನ್ಯವಾಗಿ ರುದ್ರಾಕ್ಷಿಯು ಒಂದು ಮುಖಿಯಿಂದ ಹದಿನಾಲ್ಕು ಮುಖಿಯವರೆಗೆ ಇರುವುದನ್ನು ನಾವು ಕಾಣಬಹುದಾಗಿದೆ. ಈ ವಿಭಿನ್ನ ರುದ್ರಾಕ್ಷಿಗಳು ತಮ್ಮದೇ ಆದ ವಿಭಿನ್ನ ಮಹತ್ವವನ್ನು ಕೂಡ ಹೊಂದಿರುತ್ತವೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್