Vijaya Ekadashi 2024: ಸಂಪತ್ತು, ಸಮೃದ್ಧಿ ದುಪ್ಪಟ್ಟಾಗಬೇಕಾ? ಏಕಾದಶಿಯ ದಿನ ಹೀಗೆ ಮಾಡಿ
ವಿಜಯ ಏಕಾದಶಿಯಂದು ಉಪವಾಸ ಮಾಡುವುದರ ಜೊತೆಗೆ ದಾನಕ್ಕೂ ಹೆಚ್ಚಿನ ಮಹತ್ವವಿದೆ. ಈ ಬಾರಿಯ ಏಕಾದಶಿಯಂದು, ಚಿನ್ನ, ಭೂಮಿ, ಆಹಾರ, ಹಸುಗಳನ್ನು ದಾನ ಮಾಡುವುದರಿಂದ ಒಬ್ಬ ವ್ಯಕ್ತಿ ಜೀವನದಲ್ಲಿ ಎಲ್ಲಾ ರೀತಿಯ ಸುಖ, ಸಮೃದ್ಧಿ, ಸಂಪತ್ತನ್ನು ಪಡೆಯುತ್ತಾನೆ. ಜೊತೆಗೆ ಹಿಂದೆ ಮಾಡಿದ ಎಲ್ಲಾ ಪಾಪಗಳಿಗೆ ಪರಿಹಾರ ಸಿಗುತ್ತದೆ. ಹಾಗಾದರೆ ವಿಜಯ ಏಕಾದಶಿ ದಿನದಂದು ಏನನ್ನು ದಾನ ಮಾಡಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಸನಾತನ ಧರ್ಮದಲ್ಲಿ ಏಕಾದಶಿ ಉಪವಾಸಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ಉಪವಾಸವನ್ನು ಎರಡು ಅವಧಿಯಲ್ಲಿ ಆಚರಣೆ ಮಾಡಲಾಗುತ್ತದೆ. ಅಂದರೆ ಪ್ರತೀ ತಿಂಗಳ ಕೃಷ್ಣ ಮತ್ತು ಶುಕ್ಲ ಪಕ್ಷದಲ್ಲಿ. ಹಾಗಾಗಿ ಪ್ರತಿ ಏಕಾದಶಿಯು ತನ್ನದೇ ಆದ ವಿಭಿನ್ನ ಹೆಸರನ್ನು ಮತ್ತು ಮಹತ್ವವನ್ನು ಹೊಂದಿದೆ. ಅದೇ ರೀತಿಯಲ್ಲಿ ಪ್ರತಿ ವರ್ಷ ಮಾಘ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸುವ ಏಕಾದಶಿಯನ್ನು ವಿಜಯ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಬಾರಿಯ ಏಕಾದಶಿಯನ್ನು ಮಾರ್ಚ್ 6, ಬುಧವಾರ ದಂದು ಆಚರಣೆ ಮಾಡಲಾಗುತ್ತದೆ. ಈ ದಿನ, ವಿಷ್ಣುವಿನೊಂದಿಗೆ ಅವನ ಅವತಾರವಾದ ಶ್ರೀ ರಾಮನನ್ನು ಪೂಜಿಸುವ ಸಂಪ್ರದಾಯವೂ ಇದೆ. ಇದಲ್ಲದೆ, ವಿಜಯ ಏಕಾದಶಿ ದಿನದಂದು ದಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ ಎನ್ನಲಾಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ದಾನ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
ಈ ಬಾರಿಯ ವಿಜಯ ಏಕಾದಶಿಯಂದು, ಚಿನ್ನ, ಭೂಮಿ, ಆಹಾರ, ಹಸುಗಳನ್ನು ದಾನ ಮಾಡುವುದರಿಂದ ಒಬ್ಬ ವ್ಯಕ್ತಿ ಜೀವನದಲ್ಲಿ ಎಲ್ಲಾ ರೀತಿಯ ಸುಖ, ಸಮೃದ್ಧಿ, ಸಂಪತ್ತನ್ನು ಪಡೆಯುತ್ತಾನೆ. ಅದಲ್ಲದೆ ಹಿಂದೂ ಧರ್ಮದಲ್ಲಿ, ದಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು ಆ ಸಮಯದಲ್ಲಿ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ಅದು ತುಂಬಾ ಪ್ರಯೋಜನಕಾರಿ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಏಕಾದಶಿಯಂದು ಉಪವಾಸ ಮಾಡುವುದರಿಂದ ವ್ಯಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಜಯಗಳಿಸುತ್ತಾನೆ. ಜೊತೆಗೆ ಹಿಂದೆ ಮಾಡಿದ ಎಲ್ಲಾ ಪಾಪಗಳಿಗೆ ಪರಿಹಾರ ಸಿಗುತ್ತದೆ. ಹಾಗಾದರೆ ವಿಜಯ ಏಕಾದಶಿ ದಿನದಂದು ಏನನ್ನು ದಾನ ಮಾಡಬೇಕು? ತಿಳಿಯಿರಿ.
ವಿಜಯ ಏಕಾದಶಿಯಂದು ಈ ವಸ್ತುಗಳನ್ನು ದಾನ ಮಾಡಿ;
- ವಿಜಯ ಏಕಾದಯಂದು ದಾನ ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಈ ದಿನ ನೀವು ಅಗತ್ಯ ಇರುವವರಿಗೆ ಸಿಹಿತಿಂಡಿ, ಹಣ್ಣು, ಬಟ್ಟೆ, ಪುಸ್ತಕ ಇತ್ಯಾದಿಗಳನ್ನು ದಾನ ಮಾಡಬಹುದು. ಇನ್ನು ಈ ದಿನ ಹಣವನ್ನು ಕೂಡ ದಾನ ಮಾಡಬಹುದು.
- ವಿಜಯ ಏಕಾದಶಿ ದಿನದಂದು ಆಹಾರವನ್ನು ದಾನ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿರುತ್ತದೆ ಮತ್ತು ಮನೆಯಲ್ಲಿ ಆಹಾರದ ಕೊರತೆ ಬರುವುದಿಲ್ಲ.
- ಈ ದಿನ ಬಟ್ಟೆಗಳನ್ನು ದಾನ ಮಾಡುವುದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ ಮತ್ತು ಅದೃಷ್ಟ ಬದಲಾಗುತ್ತದೆ.
- ಇದಲ್ಲದೆ, ಹೂಗಳ ದಾನವು ಕುಟುಂಬದಲ್ಲಿ ಸಂತೋಷ ಮತ್ತು ಮನೆಯಲ್ಲಿ ಶಾಂತಿ ಇರಲು ಸಹಾಯ ಮಾಡುತ್ತದೆ ಜೊತೆಗೆ ಕೌಟುಂಬಿಕ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ.
- ಈ ಏಕಾದಶಿಯ ಸಮಯದಲ್ಲಿ ಹಣವನ್ನು ದಾನ ಮಾಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಹಣಕಾಸಿನ ಬಿಕ್ಕಟ್ಟು ಉಂಟಾಗುವುದಿಲ್ಲ.
ಇದನ್ನೂ ಓದಿ: ಕೌಟಿಲ್ಯ ಶಾಸ್ತ್ರದ ಪ್ರಕಾರ ಮಹಿಳೆಯರ ಚಿತ್ತ ಪುರುಷರ ಈ 4 ಅಭ್ಯಾಸಗಳತ್ತ! ಯಾವುವು ಆ ಗುಣಗಳು?
ದಾನ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ!
ಯಾವುದೇ ರೀತಿಯ ಒತ್ತಡಕ್ಕೆ ಮಣಿದು ದಾನ ನೀಡಬಾರದು. ದಾನವನ್ನು ಎಂದಿಗೂ ಅನರ್ಹ ವ್ಯಕ್ತಿಗೆ ನೀಡಬಾರದು. ದಾನ ಮಾಡಿದ ವಸ್ತುಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಮಾಂಸ, ಮದ್ಯ ಮುಂತಾದ ವಸ್ತುಗಳನ್ನು ದಾನವಾಗಿ ನೀಡಬಾರದು ಏಕೆಂದರೆ ಇದರಿಂದ ಪ್ರಯೋಜನದ ಬದಲು ಹಾನಿಯಾಗುತ್ತದೆ. ದಾನ ಮಾಡುವಾಗ, “ಈ ವಸ್ತುಗಳನ್ನು ದೇವರು ನನಗೆ ನೀಡಿದ್ದಾನೆ. ಹಾಗಾಗಿ ನಾನು ಈ ಸೇವೆಯನ್ನು ಮಾಡುತ್ತಿದ್ದೇನೆ” ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನೀವು ದಾನ ಮಾಡಿದರೆ ನಿಮ್ಮ ಸಂಪತ್ತು, ಸಮೃದ್ಧಿ ದುಪ್ಪಟ್ಟಾಗುತ್ತದೆ ಜೊತೆಗೆ ವಿಷ್ಣುವಿನ ಆಶೀರ್ವಾದವೂ ಲಭಿಸುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ