
ಸ್ವಪ್ನ ಶಾಸ್ತ್ರವು ಕನಸುಗಳ ಅರ್ಥವನ್ನು ವಿವರಿಸುವ ಪ್ರಾಚೀನ ಭಾರತೀಯ ಶಾಸ್ತ್ರವಾಗಿದ್ದು, ಕನಸುಗಳು ವ್ಯಕ್ತಿಯ ಭವಿಷ್ಯದಲ್ಲಿ ಸಂಭವಿಸಬಹುದಾದ ಶುಭ–ಅಶುಭ ಘಟನೆಗಳ ಸೂಚನೆಗಳಾಗಿರುತ್ತವೆ ಎಂಬ ನಂಬಿಕೆ ಇದೆ. ಈ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಾಣಿಸುವ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಅರ್ಥವಿದೆ. ಅದರಂತೆ, ಕನಸಿನಲ್ಲಿ ಮಂಗಳ ಸೂತ್ರವನ್ನು (ತಾಳಿ) ನೋಡುವುದು ಅತ್ಯಂತ ಶುಭ ಸಂಕೇತವೆಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.
ಕನಸಿನಲ್ಲಿ ಮಂಗಳ ಸೂತ್ರವನ್ನು ನೋಡುವುದು ಪತಿಯ ದೀರ್ಘಾಯುಷ್ಯ, ಕುಟುಂಬದಲ್ಲಿ ನೆಮ್ಮದಿ ಹಾಗೂ ದಾಂಪತ್ಯ ಜೀವನದ ಸಂತೋಷವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಮಂಗಳ ಸೂತ್ರವು ವಿವಾಹಿತ ಮಹಿಳೆಯ ಜೀವನದಲ್ಲಿ ಪವಿತ್ರತೆಯ ಹಾಗೂ ಸುಖಸಮೃದ್ಧಿಯ ಸಂಕೇತವಾಗಿರುವುದರಿಂದ, ಅದನ್ನು ಕನಸಿನಲ್ಲಿ ಕಾಣುವುದು ಉತ್ತಮ ಫಲಿತಾಂಶಗಳನ್ನು ತರುತ್ತದೆ ಎಂದು ಸ್ವಪ್ನ ಶಾಸ್ತ್ರ ವಿವರಿಸುತ್ತದೆ.
ಆದರೆ, ಕನಸಿನಲ್ಲಿ ಮಂಗಳ ಸೂತ್ರ ಮುರಿದಂತೆ ಕಾಣಿಸಿದರೆ ಅದನ್ನು ಅಶುಭ ಸೂಚನೆ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ವಿವಾಹಿತ ಮಹಿಳೆಯರು ತಮ್ಮ ಕನಸಿನಲ್ಲಿ ತಾಳಿ ಮುರಿದು ಹೋದಂತೆ ಕಂಡರೆ ಅದು ಪತಿಯ ಜೀವನದಲ್ಲಿ ನಡೆಯುತ್ತಿರುವ ತೊಂದರೆಗಳ ಸಂಕೇತವಾಗಿರಬಹುದು ಎಂದು ಜ್ಯೋತಿಷ್ಯ ತಜ್ಞರು ಎಚ್ಚರಿಸುತ್ತಾರೆ. ಈ ರೀತಿಯ ಕನಸು ಗಂಡನ ಆರೋಗ್ಯ, ಉದ್ಯೋಗ ಅಥವಾ ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳ ಸೂಚನೆಯಾಗಿರಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು!
ತಜ್ಞರ ಅಭಿಪ್ರಾಯದಂತೆ, ಇಂತಹ ಅಶುಭ ಕನಸು ಕಂಡ ಮಹಿಳೆಯರು ಭಯಪಡದೇ ಶಾಂತವಾಗಿ ಶಿವನನ್ನು ಪೂಜಿಸಬೇಕು. ಪತಿಯ ದೀರ್ಘಾಯುಷ್ಯ ಹಾಗೂ ಸಂಕಷ್ಟ ನಿವಾರಣೆಗೆ ಸಂಬಂಧಿಸಿದ ಪೂಜೆ, ವ್ರತ ಮತ್ತು ಪ್ರಾರ್ಥನೆಗಳನ್ನು ಮಾಡುವುದರಿಂದ ನಕಾರಾತ್ಮಕ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ. ಜೊತೆಗೆ ಮನಸ್ಸಿನಲ್ಲಿ ಧೈರ್ಯ ಮತ್ತು ಸಕಾರಾತ್ಮಕತೆ ಉಳಿಸಿಕೊಂಡು ದೇವರ ಅನುಗ್ರಹವನ್ನು ಬೇಡಿಕೊಳ್ಳುವುದು ಒಳಿತೆಂದು ವಿದ್ವಾಂಸರು ಸಲಹೆ ನೀಡುತ್ತಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ