AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mantrakshathe: ಹಿರಿಯರು ಆಶೀರ್ವದಿಸಿ ನೀಡುವ ಮಂತ್ರಾಕ್ಷತೆಯನ್ನು ಹೇಗೆ ಉಪಯೋಗಿಸಬೇಕು?

ಸುವರ್ಣ ಮಂತ್ರಾಕ್ಷತೆಯನ್ನು ಬರೀ ಕೈಯಲ್ಲಿ ತೆಗೆದುಕೊಳ್ಳಬಾರದು. ತೆಗೆದುಕೊಳ್ಳುವವರು ಪುರುಷರಾದರೆ ಶಲ್ಯದ ತುದಿಯಿಂದ ತೆಗೆದುಕೊಳ್ಳಬೇಕು. ಮಹಿಳೆಯರಾದರೆ ತಮ್ಮ ಸೀರೆಯ ಸೆರಗಿನ ತುದಿಯಿಂದ ತೆಗೆದುಕೊಳ್ಳಬೇಕು. ಹೆಂಗಸರ ಸೀರೆಯ ಸೆರಗಿನಲ್ಲಿ ಸದಾ ಲಕ್ಷ್ಮೀದೇವಿ ನೆಲೆಸಿರುತ್ತಾರಂತೆ. ಅದಕ್ಕೆ ನಮ್ಮ ಹಿರಿಯರು ಸೆರಗಿನಲ್ಲಿ ಯಾವಾಗಲೂ ಸ್ವಲ್ಪವಾದರೂ ಹಣವನ್ನು ಇಟ್ಟುಕೊಂಡಿರುತ್ತಿದ್ದರು.

Mantrakshathe: ಹಿರಿಯರು ಆಶೀರ್ವದಿಸಿ ನೀಡುವ ಮಂತ್ರಾಕ್ಷತೆಯನ್ನು ಹೇಗೆ ಉಪಯೋಗಿಸಬೇಕು?
ಹಿರಿಯರು ಆಶೀರ್ವದಿಸಿ ನೀಡುವ ಮಂತ್ರಾಕ್ಷತೆಯನ್ನು ಹೇಗೆ ಉಪಯೋಗಿಸಬೇಕು?
TV9 Web
| Edited By: |

Updated on: Mar 20, 2022 | 6:06 AM

Share

ಅಕ್ಷತೆಯಲ್ಲಿ ನಾಲ್ಕು ತರಹ ಇರುತ್ತದೆ. 1. ಅಕ್ಕಿಯಲ್ಲಿನ ಅಕ್ಷತೆ: ಪ್ರತಿದಿನ ಪೂಜೆಯಲ್ಲಿ, ವ್ರತಗಳಲ್ಲಿ, ಶುಭ ಕಾರ್ಯಗಳಲ್ಲಿ ಅಕ್ಕಿಯಲ್ಲಿ ಮಾಡಿದ ಅರಿಶಿನದ ಅಕ್ಷತೆ ಮತ್ತು ಕುಂಕುಮದ ಅಕ್ಷತೆ ಉಪಯೋಗಿಸುತ್ತೇವೆ. 2. ತಿಲಾಕ್ಷತೆ: ಹಿರಿಯರ ಕಾರ್ಯಗಳಲ್ಲಿ ಉಪಯೋಗಿಸುವ ಕರೀ ಎಳ್ಳು ಮತ್ತು ಯುವ ಅಕ್ಷತೆಗೆ ತಿಲಾಕ್ಷತೆ ಎಂದು ಹೆಸರು. 3. ಮಂತ್ರಾಕ್ಷತೆ: ಮಂತ್ರಿಸಿದ ಅಕ್ಷತೆಗೆ ಮಂತ್ರಾಕ್ಷತೆ ಎಂದು ಹೆಸರು (mantrakshathe).

ಈ ಮಂತ್ರಾಕ್ಷತೆಯಿಂದ: * ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ, ವಿದ್ಯಾಭಿವೃದ್ದಿ ಆಗುತ್ತದೆ. * ಸಕಲ ವ್ಯಾದಿಗಳು ರೋಗಗಳು ನಿವಾರಣೆಯಾಗುತ್ತದೆ. * ಪ್ರಯಾಣದಲ್ಲಿನ ತೊಂದರೆಗಳನ್ನು ನಿವಾರಿಸುತ್ತದೆ. * ಮನೆಯಲ್ಲಿನ ಸರ್ವದೋಷಗಳು ನಿವಾರಣೆಯಾಗಿ ಉತ್ತಮವಾದ ಅಭಿವೃದ್ಧಿ ಹೊಂದುತ್ತಾರೆ.

ಅಕ್ಷತೆ ಇಲ್ಲದೆ ಆಶೀರ್ವಾದ ಮಾಡಬಾರದು..! ಸಾಧು ಸನ್ಯಾಸಿಗಳ ಆಶ್ರಮ ಅಥವಾ ಮಠಗಳಿಗೆ ಹೋದಾಗ ಗುರುಗಳು (Guru Raksha) ನಿಮ್ಮನ್ನು ಮಾತನಾಡಿಸಿ, ವಿಚಾರಿಸಿ ನಿಮಗೆ ಫಲ ಮಂತ್ರಾಕ್ಷತೆಯನ್ನು ಕೊಡುತ್ತಾರೆ! ಹೀಗೆ ಗುರುಗಳು ಕೊಡುವ ಮಂತ್ರಾಕ್ಷತೆಗೆ ಸುವರ್ಣ ಮಂತ್ರಾಕ್ಷತೆ ಎಂದು ಹೆಸರು.

ಹಣ್ಣಾದರೆ ಪ್ರಸಾದವಾಗಿ ತಿನ್ನಬಹುದು, ಆದರೆ ಸುವರ್ಣ ಮಂತ್ರಾಕ್ಷತೆ ಏನು ಮಾಡಬೇಕು..? ಇಲ್ಲಿದೆ ಮಾಹಿತಿ. ಸುವರ್ಣ ಮಂತ್ರಾಕ್ಷತೆಯನ್ನು ಬರೀ ಕೈಯಲ್ಲಿ ತೆಗೆದುಕೊಳ್ಳಬಾರದು. ತೆಗೆದುಕೊಳ್ಳುವವರು ಪುರುಷರಾದರೆ ಶಲ್ಯದ ತುದಿಯಿಂದ ತೆಗೆದುಕೊಳ್ಳಬೇಕು. ಮಹಿಳೆಯರಾದರೆ ತಮ್ಮ ಸೀರೆಯ ಸೆರಗಿನ ತುದಿಯಿಂದ ತೆಗೆದುಕೊಳ್ಳಬೇಕು. ಹೆಂಗಸರ ಸೀರೆಯ ಸೆರಗಿನಲ್ಲಿ ಸದಾ ಲಕ್ಷ್ಮೀದೇವಿ ನೆಲೆಸಿರುತ್ತಾರಂತೆ. ಅದಕ್ಕೆ ನಮ್ಮ ಹಿರಿಯರು ಸೆರಗಿನಲ್ಲಿ ಯಾವಾಗಲೂ ಸ್ವಲ್ಪವಾದರೂ ಹಣವನ್ನು ಇಟ್ಟುಕೊಂಡಿರುತ್ತಿದ್ದರು.

  1. ಸುವರ್ಣ ಮಂತ್ರಾಕ್ಷತೆಯನ್ನು ಹಣದ ಪೆಟ್ಟಿಗೆಯಲ್ಲಿ ಇಟ್ಟು ಪ್ರತಿದಿನ ಗುರುಗಳ ಪ್ರಾರ್ಥನೆ ಮಾಡಿ ಪೂಜಿಸಿದರೆ ಮನೆಯಲ್ಲಿನ ಸರ್ವದಾರಿದ್ರ್ಯಗಳೂ ನಿವಾರಣೆಯಾಗುತ್ತವೆ.
  2. ವ್ಯಾಪಾರ-ವ್ಯವಹಾರ ಮಾಡುವ ಜಾಗದಲ್ಲಿ ಇಟ್ಟು ಪೂಜಿಸಿದರೆ ಅಧಿಕ ಲಾಭವಾಗಿ ಅಭಿವೃದ್ಧಿ ಆಗುತ್ತದೆ.
  3. ಸುವರ್ಣ ಮಂತ್ರಾಕ್ಷತೆಯನ್ನು ದೇವರ ಮನೆಯಲ್ಲಿ ಪ್ರತಿದಿನ ಇಟ್ಟು ಪೂಜಿಸುತ್ತಿದ್ದರೆ ಆ ಮನೆಯ ಮೇಲೆ ಯಾವುದೇ ದುಷ್ಟಮಂತ್ರಗಳು, ಮಾಟ ಮಂತ್ರಗಳು ಕೆಲಸ ಮಾಡುವುದಿಲ್ಲ.
  4. ಸುವರ್ಣ ಮಂತ್ರಾಕ್ಷತೆ ಪೂಜೆ ಮಾಡಿ ಗುರುಗಳ ಪ್ರಾರ್ಥನೆ ಮಾಡಿ ಗುರುಚರಿತ್ರೆ ಪಾರಾಯಣ ಮಾಡಿದರೆ, ಜಾತಕದಲ್ಲಿನ ಗುರು ಗ್ರಹದ ನೀಚತ್ವ ದೋಷ, ಗುರು ಶಾಪ ಪೂರ್ಣ ನಿವಾರಣೆಯಾಗಿ ಜಾತಕಸ್ಥರು ಜೀವನದಲ್ಲಿ ಉತ್ತಮವಾದ ನೆಲೆ ಕಂಡುಕೊಳ್ಳುತ್ತಾರೆ.
  5. ಪ್ರತಿದಿನ ಪೂಜೆ ಮಾಡುವಾಗ ಸುವರ್ಣ ಮಂತ್ರಾಕ್ಷತೆಗೆ ಪೂಜೆ ಮಾಡಿದರೆ ಲಕ್ಷ್ಮೀ ದೇವಿಯ ಪೂರ್ಣ ಅನುಗ್ರಹವಾಗಿ ಸಮಸ್ತ ಸಾಲದ ಭಾದೆ ನಿವಾರಣೆಯಾಗುತ್ತದೆ.
  6. ಸುವರ್ಣ ಮಂತ್ರಾಕ್ಷತೆಯನ್ನು ಬೆಳ್ಳಿಯ ತಾಯತದಲ್ಲಿಟ್ಟು, ಶಾಸ್ತ್ರೋಕ್ತವಾಗಿ ಧರಿಸಿದರೆ ಸಕಲ ಕಾರ್ಯ ದಿಗ್ವಿಜಯವಾಗಿ, ಮನೋಸಂಕಲ್ಪ ನೆರವೇರುತ್ತದೆ.
  7. ಮನೆ ಕಟ್ಟುವಾಗ ಸುವರ್ಣ ಮಂತ್ರಾಕ್ಷತೆ ಪೂಜೆ ಮಾಡಿ, ಗುರುಗಳ ಪ್ರಾರ್ಥನೆ ಮಾಡಿ ಪೂಜಿಸಿದರೆ ಮನೆಯ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತದೆ. (ವಾಟ್ಸಪ್​ ಸಂದೇಶ)